Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಮಣಿಪುರದಲ್ಲಿ ಮತ್ತೆ ರಕ್ತಪಾತ: ಉಖ್ರುಲ್‌ನಲ್ಲಿ ಹೊಂಚುದಾಳಿ, ಇಬ್ಬರ ಸಾವು; ಇಂಫಾಲದಲ್ಲಿ ಪ್ರತಿಭಟನೆಯ ಕಿಚ್ಚು

19/04/2026 6:41 PM

ಲೆನ್ಸ್‌ಕಾರ್ಟ್ ‘ಡ್ರೆಸ್ ಕೋಡ್’ ವಿವಾದ: ಸಾರ್ವಜನಿಕರ ಆಕ್ರೋಶಕ್ಕೆ ಮಣಿದು ಕ್ಷಮೆಯಾಚಿಸಿದ ಸಿಇಒ ಪಿಯುಷ್ ಬನ್ಸಾಲ್; ಹೊಸ ಮಾರ್ಗಸೂಚಿ ಪ್ರಕಟ

19/04/2026 6:35 PM

ಮರಣಕ್ಕೂ ಮುನ್ನ ಮಾನವನ ಕನಸ್ಸಿನಲ್ಲಿ ಏನಾಗುತ್ತದೆ? ಸಂಶೋಧನೆಯಿಂದ ಬಯಲಾಯ್ತು ಅಚ್ಚರಿಯ ಸತ್ಯ!

19/04/2026 6:28 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG BREAKING: ಯೋಗೇಶ್ ಗೌಡ ಕೊಲೆ ಪ್ರಕರಣ: ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ದೋಷಿ, ಕೋರ್ಟ್ ಮಹತ್ವದ ತೀರ್ಪು
KARNATAKA

BIG BREAKING: ಯೋಗೇಶ್ ಗೌಡ ಕೊಲೆ ಪ್ರಕರಣ: ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ದೋಷಿ, ಕೋರ್ಟ್ ಮಹತ್ವದ ತೀರ್ಪು

By kannadanewsnow0915/04/2026 5:34 PM

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಧಾರವಾಡ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದ ಅಂತಿಮ ತೀರ್ಪನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಇಂದು (ಏಪ್ರಿಲ್ 15) ಪ್ರಕಟಿಸಿದೆ. ಪ್ರಕಟಿತ ತೀರ್ಪಿನಲ್ಲಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಅಪರಾಧಿ ಎಂಬುದಾಗಿ ಘೋಷಿಸಿದೆ. ಹೀಗಾಗಿ ಶಾಸಕ ವಿನಯ್ ಕುಲಕರ್ಣಿಗೆ ಜೈಲೇ ಗತಿಯಾದಂತೆ ಆಗಿದೆ.

ನ್ಯಾಯಾಲಯದ ಇಂದಿನ ನಡಾವಳಿ:

ಬೆಳಿಗ್ಗೆಯಿಂದಲೇ ನ್ಯಾಯಾಲಯದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಪ್ರಕರಣದ ಪ್ರಮುಖ ಆರೋಪಿ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ ಒಟ್ಟು 21 ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾಗಿದ್ದರು. ನ್ಯಾಯಾಧೀಶರು ಆರಂಭದಲ್ಲಿ ಆರೋಪಿಗಳ ಹಾಜರಾತಿಯನ್ನು ದಾಖಲಿಸಿಕೊಂಡು, ದಾಖಲೆಗಳ ಅಂತಿಮ ಪರಿಶೀಲನೆಗಾಗಿ ತೀರ್ಪನ್ನು ಮಧ್ಯಾಹ್ನ 3 ಗಂಟೆಗೆ ಮುಂದೂಡಿದ್ದರು. ಅದರಂತೆ ಈಗ ಅಂತಿಮ ಆದೇಶ ಹೊರಬಿದ್ದಿದೆ.

ಪ್ರಕರಣದ ಹಿನ್ನೆಲೆ:

  • ಘಟನೆ: ಜೂನ್ 2016ರಲ್ಲಿ ಧಾರವಾಡದಲ್ಲಿ ಯೋಗೇಶ್ ಗೌಡ ಅವರ ಭೀಕರ ಹತ್ಯೆಯಾಗಿತ್ತು.

  • ಆರೋಪ: ಈ ಕೊಲೆಯ ಹಿಂದೆ ಅಂದಿನ ಸಚಿವ, ಹಾಲಿ ಶಾಸಕ ವಿನಯ್ ಕುಲಕರ್ಣಿ ಅವರ ಒಳಸಂಚು ಇದೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು.

  • ತನಿಖೆ: ಆರಂಭದಲ್ಲಿ ಸ್ಥಳೀಯ ಪೊಲೀಸರು ತನಿಖೆ ನಡೆಸಿ ಆರು ಜನರನ್ನು ಬಂಧಿಸಿದ್ದರು. ಆದರೆ, ಮೃತರ ಕುಟುಂಬದ ಒತ್ತಾಯದ ಮೇರೆಗೆ 2019ರಲ್ಲಿ ರಾಜ್ಯ ಸರ್ಕಾರ ಪ್ರಕರಣವನ್ನು ಸಿಬಿಐಗೆ (CBI) ಹಸ್ತಾಂತರಿಸಿತ್ತು.

  • ಬಂಧನ: ತನಿಖೆ ಚುರುಕುಗೊಳಿಸಿದ್ದ ಸಿಬಿಐ ಅಧಿಕಾರಿಗಳು ವಿನಯ್ ಕುಲಕರ್ಣಿ ಅವರನ್ನು ಬಂಧಿಸಿ ವಿಚಾರಣೆ ನಡೆಸಿದ್ದರು. ಈ ಪ್ರಕರಣದಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳು ಸೇರಿದಂತೆ ಒಟ್ಟು 21 ಮಂದಿ ಆರೋಪಿಗಳ ಪಟ್ಟಿಯಲ್ಲಿದ್ದರು.

ಸತತ 10 ವರ್ಷಗಳ ಕಾನೂನು ಹೋರಾಟ:

2016ರಿಂದ ಆರಂಭವಾದ ಈ ಕಾನೂನು ಸಮರವು ಹಲವು ತಿರುವುಗಳನ್ನು ಪಡೆದುಕೊಂಡಿತ್ತು. ಸರ್ಕಾರದ ಪರ ವಕೀಲರು ಮತ್ತು ಆರೋಪಿಗಳ ಪರ ವಕೀಲರು ಸಲ್ಲಿಸಿದ್ದ ಸುದೀರ್ಘ ಲಿಖಿತ ವಾದಗಳನ್ನು ಆಲಿಸಿದ್ದ ನ್ಯಾಯಾಲಯವು, ಏಪ್ರಿಲ್ 9 ರಂದು ತೀರ್ಪನ್ನು ಇಂದಿಗೆ ಕಾಯ್ದಿರಿಸಿತ್ತು.

ದಶಕದ ಕಾಲ ನಡೆದ ಈ ವಿಚಾರಣೆಯ ಅಂತ್ಯವು ಉತ್ತರ ಕರ್ನಾಟಕದ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿತ್ತು. ಇದೀಗ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯವು ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಅಪರಾಧಿ ಎಂಬುದಾಗಿ ಮಹತ್ವದ ತೀರ್ಪು ನೀಡಿದೆ.

ಯೋಗೀಶ್ ಗೌಡ ಕೇಸ್ ದಾಖಲಾಗಿದ್ದ ಆರೋಪಿಗಳ ಲೀಸ್ಟ್ ಹೀಗಿದೆ…

ಎ1 ಬಸವರಾಜ ಮುತ್ತಗಿ

ಎ2 ವಿಕ್ರಮ ಬಳ್ಳಾರಿ

ಎ3 ಕೀರ್ತಿಕುಮಾರ ಬೆಳ್ಳಟ್ಟಿ

ಎ4 ಸಂದೀಪ ಸವದತ್ತಿ

ಎ5 ವಿನಾಯಕ ಕಟಗಿ

ಎ6 ಮಹಾಬಳೇಶ್ವರ ಹೊಂಗಲ

ಎ7 ಸಂತೋಷ್ ಸವದತ್ತಿ

8 ದಿನೇಶ

ಎ9 ಅಶ್ವತ್ಥ್

ಎ10 ಸುನೀಲ್

ಎ11 ನಜೀರ್ ಅಹಮದ್

ಎ12 ಶಾನವಾಜ್

ಎ13 ನೂತನ್

ಎ14 ಹರ್ಷಿತ್

ಎ15 ವಿನಯ್ ಕುಲಕರ್ಣಿ

ಎ16 ಚಂದ್ರಶೇಖರ ಇಂಡಿ

ಎ17 ಶಿವಾನಂದ ಬಿರಾದಾರ

ಎ18 ವಿಕಾಸ್ ಕಲಬುರ್ಗಿ

ಎ19 ಚನ್ನಕೇಶವ ಟಿಂಗರಿಕರ

ಎ20 ವಾಸುದೇವ ನಾಯ್ಕ್

ಎ21 ಸೋಮಶೇಖರ ನ್ಯಾಮಗೌಡ

ಇಬ್ಬರನ್ನು ಹೊರತುಪಡಿಸಿ ಇತರೆ ಆರೋಪಿಗಳಿಗೆ ಶಿಕ್ಷೆ ಪ್ರಕಟ

21 ಆರೋಪಿಗಳ ಪೈಕಿ ಇಬ್ಬರು ಮಾಫಿ ಸಾಕ್ಷಿಯಾಗಿದ್ದರು. ಎ1 ಬಸವರಾಜ ಮುತ್ತಗಿ ಅವರು ಮಾಫಿ ಸಾಕ್ಷಿಯಾಗಿ ಹೇಳಿಕೆ ನೀಡಿದ್ದರು. ಎ17 ಶಿವಾನಂದ ಅವರು ಕೂಡ ಮಾಫಿ ಸಾಕ್ಷಿಯಾದ ಬಳಿಕಪೂ ಪ್ರತಿಕೂಲ ಹೇಳಿಕೆ ನೀಡಿದ್ದರು. ಹೀಗಾಗಿ ಮತ್ತೆ ಎ17 ಆರೋಪಿಯನ್ನಾಗಿಸುವಂತೆ ಸಿಬಿಐ ಅರ್ಜಿ ಸಲ್ಲಿಸಿತ್ತು. ಈ ಇಬ್ಬರನ್ನು ಹೊರತುಪಡಿಸಿ ಉಳಿದವರ ಮೇಲಿನ ಆರೋಪಿಗಳ ಸಂಬಂಧ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯವು ಮಹತ್ವದ ತೀರ್ಪು ಪ್ರಕಟಿಸಿದೆ.

Share. Facebook Twitter LinkedIn WhatsApp Email

Related Posts

BREAKING: ಕಾವೇರಿ ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 6 ಮಂದಿ ದುರ್ಮರಣ

19/04/2026 5:55 PM1 Min Read

ಕಾಂಗ್ರೆಸ್ ಸದಾ ಮಹಿಳಾ ಶಕ್ತಿಯ ಪರ: ಪ್ರಧಾನಿ ವಿರುದ್ಧ ಗುಡುಗಿದ ಮಲ್ಲಿಕಾರ್ಜುನ ಖರ್ಗೆ

19/04/2026 5:40 PM2 Mins Read

ಡಿಎಂಕೆ ಸ್ವಾರ್ಥಕ್ಕೆ ದಕ್ಷಿಣ ರಾಜ್ಯಗಳ ಹಿತ ಬಲಿ: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಆರೋಪ

19/04/2026 5:24 PM3 Mins Read
Recent News

ಮಣಿಪುರದಲ್ಲಿ ಮತ್ತೆ ರಕ್ತಪಾತ: ಉಖ್ರುಲ್‌ನಲ್ಲಿ ಹೊಂಚುದಾಳಿ, ಇಬ್ಬರ ಸಾವು; ಇಂಫಾಲದಲ್ಲಿ ಪ್ರತಿಭಟನೆಯ ಕಿಚ್ಚು

19/04/2026 6:41 PM

ಲೆನ್ಸ್‌ಕಾರ್ಟ್ ‘ಡ್ರೆಸ್ ಕೋಡ್’ ವಿವಾದ: ಸಾರ್ವಜನಿಕರ ಆಕ್ರೋಶಕ್ಕೆ ಮಣಿದು ಕ್ಷಮೆಯಾಚಿಸಿದ ಸಿಇಒ ಪಿಯುಷ್ ಬನ್ಸಾಲ್; ಹೊಸ ಮಾರ್ಗಸೂಚಿ ಪ್ರಕಟ

19/04/2026 6:35 PM

ಮರಣಕ್ಕೂ ಮುನ್ನ ಮಾನವನ ಕನಸ್ಸಿನಲ್ಲಿ ಏನಾಗುತ್ತದೆ? ಸಂಶೋಧನೆಯಿಂದ ಬಯಲಾಯ್ತು ಅಚ್ಚರಿಯ ಸತ್ಯ!

19/04/2026 6:28 PM

​’ಇನ್ಮುಂದೆ ನಾನು ಒಳ್ಳೆಯವನಲ್ಲ!’: ಇರಾನ್‌ಗೆ ಟ್ರಂಪ್ ಖಡಕ್ ವಾರ್ನಿಂಗ್; ಮಾತುಕತೆಗಾಗಿ ನಾಳೆ ಪಾಕಿಸ್ತಾನಕ್ಕೆ ಅಮೆರಿಕ ಉನ್ನತ ತಂಡ

19/04/2026 6:18 PM
State News
KARNATAKA

BREAKING: ಕಾವೇರಿ ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 6 ಮಂದಿ ದುರ್ಮರಣ

By kannadanewsnow0919/04/2026 5:55 PM KARNATAKA 1 Min Read

ಮೈಸೂರು: ಜಿಲ್ಲೆಯ ಕೃಷ್ಣರಾಜ ನಗರದ (ಕೆ.ಆರ್. ನಗರ) ಪ್ರಸಿದ್ಧ ಆರ್ಕೇಶ್ವರ ದೇವಸ್ಥಾನದ ಸಮೀಪವಿರುವ ಕಾವೇರಿ ನದಿಯಲ್ಲಿ ಮುಳುಗಿ ಒಂದೇ ಕುಟುಂಬದ…

ಕಾಂಗ್ರೆಸ್ ಸದಾ ಮಹಿಳಾ ಶಕ್ತಿಯ ಪರ: ಪ್ರಧಾನಿ ವಿರುದ್ಧ ಗುಡುಗಿದ ಮಲ್ಲಿಕಾರ್ಜುನ ಖರ್ಗೆ

19/04/2026 5:40 PM

ಡಿಎಂಕೆ ಸ್ವಾರ್ಥಕ್ಕೆ ದಕ್ಷಿಣ ರಾಜ್ಯಗಳ ಹಿತ ಬಲಿ: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಆರೋಪ

19/04/2026 5:24 PM

ಚಿರತೆಯಿಂದ ವೃದ್ಧ ಅತ್ತೆ ಕಾಪಾಡಿದ ಸೊಸೆಗೆ ಕಿತ್ತೂರು ರಾಣಿ ಚನ್ನಮ್ಮ ಸಾಹಸ ಪ್ರಶಸ್ತಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

19/04/2026 4:51 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.