Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ರಾಜ್ಯದಲ್ಲಿ 1ನೇ ತರಗತಿ ವಯೋಮಿತಿ ಸಡಿಲಿಕೆ 2026-27ಕ್ಕೆ ಮಾತ್ರ ಸೀಮಿತ : ಪೋಷಕರಿಗೆ ಶಿಕ್ಷಣ ಇಲಾಖೆ ಮಾಹಿತಿ

15/04/2026 6:00 AM

ಇಂದು ಆದಿಚುಂಚನಗಿರಿಗೆ `ಪ್ರಧಾನಿ ಮೋದಿ’ ಭೇಟಿ : ಭೈರವೈಕ್ಯ ಮಂದಿರ ಲೋಕಾರ್ಪಣೆ

15/04/2026 5:54 AM

BIG NEWS: ರಾಜ್ಯದಲ್ಲಿ ಇನ್ಮುಂದೆ `SSLC’ ಪರೀಕ್ಷೆಗೆ 625ರ ಬದಲಿಗೆ 525 ಅಂಕ : ಪಾಸ್ ಆಗಲು 173 ಮಾರ್ಕ್ಸ್ ಕಡ್ಡಾಯ.!

15/04/2026 5:44 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಇಂದು ಆದಿಚುಂಚನಗಿರಿಗೆ `ಪ್ರಧಾನಿ ಮೋದಿ’ ಭೇಟಿ : ಭೈರವೈಕ್ಯ ಮಂದಿರ ಲೋಕಾರ್ಪಣೆ
KARNATAKA

ಇಂದು ಆದಿಚುಂಚನಗಿರಿಗೆ `ಪ್ರಧಾನಿ ಮೋದಿ’ ಭೇಟಿ : ಭೈರವೈಕ್ಯ ಮಂದಿರ ಲೋಕಾರ್ಪಣೆ

By kannadanewsnow5715/04/2026 5:54 AM

ಮಂಡ್ಯ : ಸುಮಾರು 1500 ವರ್ಷಗಳ ಸುದೀರ್ಘ ಇತಿಹಾಸವಿರುವ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಆದಿಚುಂಚನಗಿರಿಯಲ್ಲಿ ಇಂದು ಸಂಭ್ರಮದ ವಾತಾವರಣ ಮನೆಮಾಡಿದೆ. ಇಂದು ಬೆಳಿಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕ್ಷೇತ್ರಕ್ಕೆ ಭೇಟಿ ನೀಡಲಿದ್ದು, ಹೊಸದಾಗಿ ನಿರ್ಮಿಸಲಾಗಿರುವ ‘ಶ್ರೀಗುರು ಭೈರವೈಕ್ಯ ಮಂದಿರ’ವನ್ನು ಲೋಕಾರ್ಪಣೆ ಮಾಡಲಿದ್ದಾರೆ.

ಕಾರ್ಯಕ್ರಮದ ವಿವರ:

ಪ್ರಧಾನಿ ಮೋದಿ ಅವರು ಬೆಳಿಗ್ಗೆ 10.55ಕ್ಕೆ ಆದಿಚುಂಚನಗಿರಿ ಕ್ಷೇತ್ರದ ತಪೋವನದ ಆವರಣದಲ್ಲಿರುವ ಹೆಲಿಪ್ಯಾಡ್‌ಗೆ ಬಂದಿಳಿಯಲಿದ್ದಾರೆ.ಬೆಳಿಗ್ಗೆ 11.30ಕ್ಕೆ ಡಾ. ಬಾಲಗಂಗಾಧರನಾಥ ಸ್ವಾಮೀಜಿಗಳ ಸ್ಮರಣಾರ್ಥ ನಿರ್ಮಿಸಲಾದ ಭೈರವೈಕ್ಯ ಮಂದಿರವನ್ನು ಉದ್ಘಾಟಿಸಲಿದ್ದಾರೆ.

ಮಂದಿರ ಉದ್ಘಾಟನೆ ನಂತರ ಅವರು ಶ್ರೀಗಳ ಪಾದುಕೆಗಳಿಗೆ ನಮಸ್ಕರಿಸಿ, ಧ್ಯಾನ ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸಲಿದ್ದಾರೆ. ಬಳಿಕ ಕಾಲಭೈರವೇಶ್ವರ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ, ನಂತರ ಕ್ರೀಡಾಂಗಣದಲ್ಲಿ ನಡೆಯುವ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಮಂದಿರದ ವಿಶೇಷತೆಗಳೇನು?

ನಿರ್ಮಾಣ ವೆಚ್ಚ: ಸುಮಾರು 100 ಕೋಟಿ ರೂಪಾಯಿಗಳಿಗೂ ಅಧಿಕ ವೆಚ್ಚದಲ್ಲಿ ಈ ಭವ್ಯ ಮಂದಿರವನ್ನು ನಿರ್ಮಿಸಲಾಗಿದೆ.

ವಾಸ್ತುಶೈಲಿ: ಒಡಿಶಾದ ಕೊನಾರ್ಕ್ ಸೂರ್ಯ ದೇಗುಲದ ಮಾದರಿಯಲ್ಲಿ ಈ ಮಂದಿರವನ್ನು ರೂಪಿಸಲಾಗಿದೆ. ಇದು ಹೊಯ್ಸಳ, ಚೋಳ, ಚಾಲುಕ್ಯ ಮತ್ತು ಗಂಗ ವಾಸ್ತುಶಿಲ್ಪದ ಸುಂದರ ಮಿಶ್ರಣವಾಗಿದೆ.

ವಿಸ್ತೀರ್ಣ: ಮಂಗಳ ಮಂಟಪದ ಮೇಲೆ 26,250 ಚದರ ಅಡಿ ವಿಸ್ತೀರ್ಣದಲ್ಲಿ ಈ ಮಂದಿರ ತಲೆಎತ್ತಿದೆ. ಇದು ಉತ್ತರ-ದಕ್ಷಿಣವಾಗಿ 175 ಅಡಿ ಹಾಗೂ ಪೂರ್ವ-ಪಶ್ಚಿಮವಾಗಿ 150 ಅಡಿ ಉದ್ದವಿದೆ.

ವಿಶಿಷ್ಟ ಕಲೆ: ಸಂಪೂರ್ಣವಾಗಿ ಕೆಂಪು ಮತ್ತು ವಿವಿಧ ಗ್ರಾನೈಟ್ ಶಿಲೆಗಳಿಂದ ನಿರ್ಮಿಸಲಾದ ಈ ಮಂದಿರದಲ್ಲಿ 26 ಕಂಬಗಳಿವೆ. ಮಂದಿರದ ಒಳಭಾಗದಲ್ಲಿ ಚಿನ್ನ ಮತ್ತು ಬೆಳ್ಳಿಯ ಕವಚದ ಹೊದಿಕೆಗಳನ್ನು ಬಳಸಲಾಗಿದೆ.

ಸಂಕಲ್ಪ: 2013ರಲ್ಲಿ ಲಿಂಗೈಕ್ಯರಾದ ಡಾ. ಬಾಲಗಂಗಾಧರನಾಥ ಶ್ರೀಗಳ ಸ್ಮರಣಾರ್ಥ ಈ ಮಂದಿರ ನಿರ್ಮಿಸಲಾಗಿದ್ದು, 2016ರಲ್ಲಿ ಇದರ ಶಂಕುಸ್ಥಾಪನೆ ನೆರವೇರಿತ್ತು. ಸುಮಾರು 250ಕ್ಕೂ ಹೆಚ್ಚು ನುರಿತ ಶಿಲ್ಪಿಗಳು ಕಳೆದ 10 ವರ್ಷಗಳಿಂದ ಈ ಮಂದಿರದ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.

ಪ್ರಧಾನಿಗಳ ಭೇಟಿಯ ಹಿನ್ನೆಲೆಯಲ್ಲಿ ಎಸ್‌ಪಿಜಿ (SPG) ಪಡೆ ಹಾಗೂ ಜಿಲ್ಲಾಡಳಿತ ಬಿಗಿ ಭದ್ರತೆಯನ್ನು ಕೈಗೊಂಡಿದೆ. ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಸಿದ್ಧತೆಗಳನ್ನು ಪರಿಶೀಲಿಸಿದ್ದಾರೆ.

Prime Minister Modi to visit Adichunchanagiri today: Bhairavaikya temple inaugurated
Share. Facebook Twitter LinkedIn WhatsApp Email

Related Posts

BIG NEWS : ರಾಜ್ಯದಲ್ಲಿ 1ನೇ ತರಗತಿ ವಯೋಮಿತಿ ಸಡಿಲಿಕೆ 2026-27ಕ್ಕೆ ಮಾತ್ರ ಸೀಮಿತ : ಪೋಷಕರಿಗೆ ಶಿಕ್ಷಣ ಇಲಾಖೆ ಮಾಹಿತಿ

15/04/2026 6:00 AM1 Min Read

BIG NEWS: ರಾಜ್ಯದಲ್ಲಿ ಇನ್ಮುಂದೆ `SSLC’ ಪರೀಕ್ಷೆಗೆ 625ರ ಬದಲಿಗೆ 525 ಅಂಕ : ಪಾಸ್ ಆಗಲು 173 ಮಾರ್ಕ್ಸ್ ಕಡ್ಡಾಯ.!

15/04/2026 5:44 AM1 Min Read

ಅಂಬೇಡ್ಕರ್ ಜಯಂತಿ ಪ್ರತಿ ಕೇರಿಗಳಲ್ಲಿಯೂ ಆಚರಣೆಯಾಗಲಿ: ಸಾಗರ ನಗರಸಭೆ ಪೌರಾಯುಕ್ತ ಎಚ್.ಕೆ. ನಾಗಪ್ಪ

14/04/2026 10:15 PM1 Min Read
Recent News

BIG NEWS : ರಾಜ್ಯದಲ್ಲಿ 1ನೇ ತರಗತಿ ವಯೋಮಿತಿ ಸಡಿಲಿಕೆ 2026-27ಕ್ಕೆ ಮಾತ್ರ ಸೀಮಿತ : ಪೋಷಕರಿಗೆ ಶಿಕ್ಷಣ ಇಲಾಖೆ ಮಾಹಿತಿ

15/04/2026 6:00 AM

ಇಂದು ಆದಿಚುಂಚನಗಿರಿಗೆ `ಪ್ರಧಾನಿ ಮೋದಿ’ ಭೇಟಿ : ಭೈರವೈಕ್ಯ ಮಂದಿರ ಲೋಕಾರ್ಪಣೆ

15/04/2026 5:54 AM

BIG NEWS: ರಾಜ್ಯದಲ್ಲಿ ಇನ್ಮುಂದೆ `SSLC’ ಪರೀಕ್ಷೆಗೆ 625ರ ಬದಲಿಗೆ 525 ಅಂಕ : ಪಾಸ್ ಆಗಲು 173 ಮಾರ್ಕ್ಸ್ ಕಡ್ಡಾಯ.!

15/04/2026 5:44 AM

ಅಂಬೇಡ್ಕರ್ ಜಯಂತಿ ಪ್ರತಿ ಕೇರಿಗಳಲ್ಲಿಯೂ ಆಚರಣೆಯಾಗಲಿ: ಸಾಗರ ನಗರಸಭೆ ಪೌರಾಯುಕ್ತ ಎಚ್.ಕೆ. ನಾಗಪ್ಪ

14/04/2026 10:15 PM
State News
KARNATAKA

BIG NEWS : ರಾಜ್ಯದಲ್ಲಿ 1ನೇ ತರಗತಿ ವಯೋಮಿತಿ ಸಡಿಲಿಕೆ 2026-27ಕ್ಕೆ ಮಾತ್ರ ಸೀಮಿತ : ಪೋಷಕರಿಗೆ ಶಿಕ್ಷಣ ಇಲಾಖೆ ಮಾಹಿತಿ

By kannadanewsnow5715/04/2026 6:00 AM KARNATAKA 1 Min Read

ಬೆಂಗಳೂರು: ರಾಜ್ಯದಲ್ಲಿ ಒಂದನೇ ತರಗತಿ ದಾಖಲಾತಿಗೆ ಸಂಬಂಧಿಸಿದಂತೆ ಸರ್ಕಾರ ನೀಡಿರುವ 60 ದಿನಗಳ ವಯೋಮಿತಿ ಸಡಿಲಿಕೆಯು ಕೇವಲ 2026-27ನೇ ಶೈಕ್ಷಣಿಕ…

ಇಂದು ಆದಿಚುಂಚನಗಿರಿಗೆ `ಪ್ರಧಾನಿ ಮೋದಿ’ ಭೇಟಿ : ಭೈರವೈಕ್ಯ ಮಂದಿರ ಲೋಕಾರ್ಪಣೆ

15/04/2026 5:54 AM

BIG NEWS: ರಾಜ್ಯದಲ್ಲಿ ಇನ್ಮುಂದೆ `SSLC’ ಪರೀಕ್ಷೆಗೆ 625ರ ಬದಲಿಗೆ 525 ಅಂಕ : ಪಾಸ್ ಆಗಲು 173 ಮಾರ್ಕ್ಸ್ ಕಡ್ಡಾಯ.!

15/04/2026 5:44 AM

ಅಂಬೇಡ್ಕರ್ ಜಯಂತಿ ಪ್ರತಿ ಕೇರಿಗಳಲ್ಲಿಯೂ ಆಚರಣೆಯಾಗಲಿ: ಸಾಗರ ನಗರಸಭೆ ಪೌರಾಯುಕ್ತ ಎಚ್.ಕೆ. ನಾಗಪ್ಪ

14/04/2026 10:15 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.