Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ರಾಜ್ಯ ಸರ್ಕಾರದಿಂದ 2026ನೇ ಸಾಲಿನ `ಡಾ. ಬಿ.ಆರ್. ಅಂಬೇಡ್ಕರ್ ಪ್ರಶಸ್ತಿ’ ಘೋಷಣೆ : ಐವರು ಸಾಧಕರಿಗೆ ಗೌರವ

12/04/2026 6:17 AM

ರಾಜ್ಯ ಸರ್ಕಾರಿ ಶಾಲಾ `ಶಿಕ್ಷಕರ ವರ್ಗಾವಣೆ’ ನಿಯಮಕ್ಕೆ ಮಹತ್ವದ ತಿದ್ದುಪಡಿ : ಸರ್ಕಾರದಿಂದ ಮಹತ್ವದ ಆದೇಶ

12/04/2026 6:09 AM

ಹುಬ್ಬಳ್ಳಿ ಬೆನ್ನಲ್ಲೇ ಕೊಪ್ಪಳದಲ್ಲೂ ‘ಲವ್ ಜಿಹಾದ್’ ಆರೋಪ: ನಗ್ನ ಚಿತ್ರ ಬಳಸಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಯುವಕನ ಅರೆಸ್ಟ್.!

12/04/2026 6:03 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯ ಸರ್ಕಾರಿ ಶಾಲಾ `ಶಿಕ್ಷಕರ ವರ್ಗಾವಣೆ’ ನಿಯಮಕ್ಕೆ ಮಹತ್ವದ ತಿದ್ದುಪಡಿ : ಸರ್ಕಾರದಿಂದ ಮಹತ್ವದ ಆದೇಶ
KARNATAKA

ರಾಜ್ಯ ಸರ್ಕಾರಿ ಶಾಲಾ `ಶಿಕ್ಷಕರ ವರ್ಗಾವಣೆ’ ನಿಯಮಕ್ಕೆ ಮಹತ್ವದ ತಿದ್ದುಪಡಿ : ಸರ್ಕಾರದಿಂದ ಮಹತ್ವದ ಆದೇಶ

By kannadanewsnow5712/04/2026 6:09 AM

ಬೆಂಗಳೂರು: ರಾಜ್ಯದ ಸರ್ಕಾರಿ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯಲ್ಲಿ ಪ್ರಮುಖ ಬದಲಾವಣೆಗಳನ್ನು ತರುವ ನಿಟ್ಟಿನಲ್ಲಿ ‘ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) (ತಿದ್ದುಪಡಿ) ಅಧಿನಿಯಮ, 2026’ ಕ್ಕೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ. ಈ ಹೊಸ ತಿದ್ದುಪಡಿಯು ತಕ್ಷಣದಿಂದಲೇ ಜಾರಿಗೆ ಬರುವಂತೆ ಸರ್ಕಾರ ಆದೇಶ ಹೊರಡಿಸಿದೆ.

1. ನಿರ್ಣಾಯಕ ಹುದ್ದೆಗಳ ವರ್ಗೀಕರಣ:

ವರ್ಗಾವಣೆ ಪ್ರಕ್ರಿಯೆಗಾಗಿ ಬೋಧಕ ಹುದ್ದೆಗಳನ್ನು ಮೂರು ಪ್ರವರ್ಗಗಳಾಗಿ ವಿಂಗಡಿಸಲಾಗಿದೆ:
ಪ್ರವರ್ಗ 1: ಕರ್ನಾಟಕ ಪಬ್ಲಿಕ್ ಶಾಲೆಗಳು, ಆದರ್ಶ ವಿದ್ಯಾಲಯಗಳು ಮತ್ತು ಪಿಎಂ ಶ್ರೀ ಶಾಲೆಗಳು (ಮುಖ್ಯೋಪಾಧ್ಯಾಯರು ಮತ್ತು ಉಪ-ಪ್ರಾಂಶುಪಾಲರನ್ನು ಹೊರತುಪಡಿಸಿ).

ಪ್ರವರ್ಗ 2: 250 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿರುವ ಶಾಲೆಗಳು ಮತ್ತು ಸರ್ಕಾರಿ ಪದವಿಪೂರ್ವ ಕಾಲೇಜುಗಳು.

ಪ್ರವರ್ಗ 3: ಪ್ರೌಢಶಾಲಾ ಮುಖ್ಯೋಪಾಧ್ಯಾಯರು ಅಥವಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರು.

2. ಕನಿಷ್ಠ ಮತ್ತು ಗರಿಷ್ಠ ಸೇವಾ ಅವಧಿ:

ಕೌನ್ಸಿಲಿಂಗ್ ಮೂಲಕ ವರ್ಗಾವಣೆ: ನಿಗದಿತ ಹುದ್ದೆಗಳ ವರ್ಗಾವಣೆಯನ್ನು ಕೌನ್ಸಿಲಿಂಗ್ ಮೂಲಕವೇ ನಡೆಸಲಾಗುವುದು. ಇದಕ್ಕೆ ಆಯಾ ಶಾಲೆ ಅಥವಾ ಕಾಲೇಜಿನಲ್ಲಿ ಕನಿಷ್ಠ 12 ವರ್ಷಗಳ ನಿರಂತರ ಸೇವೆಯನ್ನು ಸಲ್ಲಿಸಿರಬೇಕು.

ಅನುಸೂಚಿ-1 ರ ಕ್ರಮ ಸಂಖ್ಯೆ III ರಲ್ಲಿನ ಹುದ್ದೆಗಳಲ್ಲಿ ಗರಿಷ್ಠ ಸೇವಾ ಅವಧಿಯನ್ನು 3 ವರ್ಷಗಳಿಗೆ ಸೀಮಿತಗೊಳಿಸಲಾಗಿದೆ.

3. ಕೋರಿಕೆ ವರ್ಗಾವಣೆಗೆ ಹೊಸ ನಿಯಮ:

ಶಿಕ್ಷಕರು ಅಥವಾ ಉಪನ್ಯಾಸಕರು ಕೋರಿಕೆ ವರ್ಗಾವಣೆ ಪಡೆಯಲು ಆಯಾ ಶಾಲೆಯಲ್ಲಿ ಕನಿಷ್ಠ ಸೇವಾ ಅವಧಿಯನ್ನು ಪೂರೈಸಿರಬೇಕು.

ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳಿಗೆ ವಿಶೇಷ ಸೂಚನೆ: ಈ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು ಈ ಪ್ರದೇಶದ ಹೊರಗೆ ವರ್ಗಾವಣೆ ಪಡೆಯಲು ಕನಿಷ್ಠ 10 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿರಬೇಕು.

4. ಮಾನವೀಯ ಆಧಾರದ ವರ್ಗಾವಣೆ:

ಗರ್ಭಿಣಿ ಶಿಕ್ಷಕಿಯರು ಅಥವಾ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗುವನ್ನು ಹೊಂದಿರುವ ಮಹಿಳಾ ಶಿಕ್ಷಕಿಯರಿಗೆ ವರ್ಗಾವಣೆಯಲ್ಲಿ ಆದ್ಯತೆ ನೀಡಲು ಅವಕಾಶ ಕಲ್ಪಿಸಲಾಗಿದೆ. ಆದರೆ, ಈ ಸೌಲಭ್ಯವು ಪ್ರಸೂತಿ ರಜೆಯಿಂದ ಹಿಂದಿರುಗಿದ ನಂತರದ ವರ್ಷದಲ್ಲಿ ಕೈಗೊಳ್ಳುವ ಸಾಮಾನ್ಯ ವರ್ಗಾವಣೆಗೆ ಮಾತ್ರ ಅನ್ವಯಿಸುತ್ತದೆ.

5. ಇಲಾಖಾ ಬದಲಾವಣೆ ನಿರ್ಬಂಧ:
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಬೋಧಕ ಸಿಬ್ಬಂದಿಯನ್ನು ಇತರ ರಾಜ್ಯ ಸಿವಿಲ್ ಸೇವೆಗಳು ಅಥವಾ ಮಂಡಳಿ/ನಿಗಮಗಳಿಗೆ ವರ್ಗಾವಣೆ ಮಾಡುವುದನ್ನು ಈ ತಿದ್ದುಪಡಿಯ ಮೂಲಕ ನಿರ್ಬಂಧಿಸಲಾಗಿದೆ.

ಈ ಹೊಸ ನಿಯಮಗಳು ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯಲ್ಲಿ ಹೆಚ್ಚಿನ ಪಾರದರ್ಶಕತೆ ಮತ್ತು ಶಿಸ್ತನ್ನು ತರುವ ನಿರೀಕ್ಷೆಯಿದೆ.

Important amendment to the transfer rules of state government school teachers: Important order from the government
Share. Facebook Twitter LinkedIn WhatsApp Email

Related Posts

BREAKING : ರಾಜ್ಯ ಸರ್ಕಾರದಿಂದ 2026ನೇ ಸಾಲಿನ `ಡಾ. ಬಿ.ಆರ್. ಅಂಬೇಡ್ಕರ್ ಪ್ರಶಸ್ತಿ’ ಘೋಷಣೆ : ಐವರು ಸಾಧಕರಿಗೆ ಗೌರವ

12/04/2026 6:17 AM1 Min Read

ಹುಬ್ಬಳ್ಳಿ ಬೆನ್ನಲ್ಲೇ ಕೊಪ್ಪಳದಲ್ಲೂ ‘ಲವ್ ಜಿಹಾದ್’ ಆರೋಪ: ನಗ್ನ ಚಿತ್ರ ಬಳಸಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಯುವಕನ ಅರೆಸ್ಟ್.!

12/04/2026 6:03 AM1 Min Read

​ವಾಹನ ಸವಾರರ ಗಮನಕ್ಕೆ: ಹುಲಿಕಲ್ ಘಾಟ್ ರಸ್ತೆ ಸಂಚಾರ ಬಂದ್ – ಪರ್ಯಾಯ ಮಾರ್ಗಗಳ ವಿವರ ಇಲ್ಲಿದೆ

11/04/2026 8:25 PM2 Mins Read
Recent News

BREAKING : ರಾಜ್ಯ ಸರ್ಕಾರದಿಂದ 2026ನೇ ಸಾಲಿನ `ಡಾ. ಬಿ.ಆರ್. ಅಂಬೇಡ್ಕರ್ ಪ್ರಶಸ್ತಿ’ ಘೋಷಣೆ : ಐವರು ಸಾಧಕರಿಗೆ ಗೌರವ

12/04/2026 6:17 AM

ರಾಜ್ಯ ಸರ್ಕಾರಿ ಶಾಲಾ `ಶಿಕ್ಷಕರ ವರ್ಗಾವಣೆ’ ನಿಯಮಕ್ಕೆ ಮಹತ್ವದ ತಿದ್ದುಪಡಿ : ಸರ್ಕಾರದಿಂದ ಮಹತ್ವದ ಆದೇಶ

12/04/2026 6:09 AM

ಹುಬ್ಬಳ್ಳಿ ಬೆನ್ನಲ್ಲೇ ಕೊಪ್ಪಳದಲ್ಲೂ ‘ಲವ್ ಜಿಹಾದ್’ ಆರೋಪ: ನಗ್ನ ಚಿತ್ರ ಬಳಸಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಯುವಕನ ಅರೆಸ್ಟ್.!

12/04/2026 6:03 AM

ಕೇಂದ್ರ ಸರ್ಕಾರಿ ನೌಕರರಿಗೆ ಏಪ್ರಿಲ್ 14 ರಂದು `ಸಾರ್ವಜನಿಕ ರಜೆ’ ಘೋಷಣೆ.!

12/04/2026 6:00 AM
State News
KARNATAKA

BREAKING : ರಾಜ್ಯ ಸರ್ಕಾರದಿಂದ 2026ನೇ ಸಾಲಿನ `ಡಾ. ಬಿ.ಆರ್. ಅಂಬೇಡ್ಕರ್ ಪ್ರಶಸ್ತಿ’ ಘೋಷಣೆ : ಐವರು ಸಾಧಕರಿಗೆ ಗೌರವ

By kannadanewsnow5712/04/2026 6:17 AM KARNATAKA 1 Min Read

ಬೆಂಗಳೂರು: ಡಾ. ಬಿ.ಆರ್. ಅಂಬೇಡ್ಕರ್‌ ರವರ 135ನೇ ಜನ್ಮ ದಿನಾಚರಣೆಯ ಅಂಗವಾಗಿ ಸಮಾಜ ಕಲ್ಯಾಣ ಇಲಾಖೆಯು 2026ನೇ ಸಾಲಿನ ಪ್ರತಿಷ್ಠಿತ…

ರಾಜ್ಯ ಸರ್ಕಾರಿ ಶಾಲಾ `ಶಿಕ್ಷಕರ ವರ್ಗಾವಣೆ’ ನಿಯಮಕ್ಕೆ ಮಹತ್ವದ ತಿದ್ದುಪಡಿ : ಸರ್ಕಾರದಿಂದ ಮಹತ್ವದ ಆದೇಶ

12/04/2026 6:09 AM

ಹುಬ್ಬಳ್ಳಿ ಬೆನ್ನಲ್ಲೇ ಕೊಪ್ಪಳದಲ್ಲೂ ‘ಲವ್ ಜಿಹಾದ್’ ಆರೋಪ: ನಗ್ನ ಚಿತ್ರ ಬಳಸಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಯುವಕನ ಅರೆಸ್ಟ್.!

12/04/2026 6:03 AM

​ವಾಹನ ಸವಾರರ ಗಮನಕ್ಕೆ: ಹುಲಿಕಲ್ ಘಾಟ್ ರಸ್ತೆ ಸಂಚಾರ ಬಂದ್ – ಪರ್ಯಾಯ ಮಾರ್ಗಗಳ ವಿವರ ಇಲ್ಲಿದೆ

11/04/2026 8:25 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.