ನವದೆಹಲಿ: ಸಂಸತ್ತಿನ ಆವರಣದಲ್ಲಿ ಇಂದು ಒಂದು ಅಪರೂಪದ ಮತ್ತು ರೋಚಕ ದೃಶ್ಯ ಕಂಡುಬಂದಿದೆ. ಪರಸ್ಪರ ರಾಜಕೀಯ ಟೀಕೆಗಳಲ್ಲಿ ತೊಡಗುವ ಪ್ರಧಾನಿ ನರೇಂದ್ರ ಮೋದಿ ಮತ್ತು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಮುಖಾಮುಖಿಯಾಗಿ ಕೆಲಕಾಲ ಮಾತುಕತೆ ನಡೆಸಿದ್ದಾರೆ.
ಸಂಸತ್ತಿನ ಅಧಿವೇಶನ ಮುಗಿಸಿ ಪ್ರಧಾನಿ ಮೋದಿ ಅವರು ತಮ್ಮ ಕಾರಿನಲ್ಲಿ ಹೊರಡಲು ಸಿದ್ಧರಾಗಿದ್ದರು. ಈ ವೇಳೆ ರಾಹುಲ್ ಗಾಂಧಿ ಅವರು ಸಂಸತ್ತಿನ ಕಾರಿಡಾರ್‌ನಲ್ಲಿ ನಡೆದುಕೊಂಡು ಹೋಗುತ್ತಿದ್ದರು. ರಾಹುಲ್ ಅವರನ್ನು ಕಂಡ ತಕ್ಷಣ ಪ್ರಧಾನಿ ಮೋದಿ ಅವರು ತಮ್ಮ ಕಾರನ್ನು ನಿಲ್ಲಿಸಿ, ಹೊರಬಂದು ರಾಹುಲ್ ಗಾಂಧಿ ಅವರ ಬಳಿ ಹೋಗಿ ಮಾತನಾಡಿಸಿದ್ದಾರೆ.
ಪ್ರಧಾನಿ ಮೋದಿ ಅವರು ನಗುಮುಖದಿಂದ ರಾಹುಲ್ ಗಾಂಧಿ ಅವರ ಹತ್ತಿರ ಹೋಗಿ ಹಸ್ತಲಾಘವ (Handshake) ಮಾಡಿದ್ದಾರೆ.ಇಬ್ಬರೂ ನಾಯಕರು ಸುಮಾರು 2-3 ನಿಮಿಷಗಳ ಕಾಲ ಆತ್ಮೀಯವಾಗಿ ಮಾತನಾಡಿದ್ದಾರೆ. ರಾಜಕೀಯ ಸಂಘರ್ಷದ ನಡುವೆಯೂ ಈ ನಾಯಕರ ನಡುವಿನ ಸೌಜನ್ಯದ ನಡವಳಿಕೆ ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.
“ಲೋಕತಂತ್ರದ ಅಸಲಿ ಸೌಂದರ್ಯ ಅಂದರೆ ಇದೇ” ಎಂದು ಅನೇಕರು ಈ ಭೇಟಿಯನ್ನು ಶ್ಲಾಘಿಸಿದ್ದಾರೆ.
#WATCH | Delhi: Prime Minister Narendra Modi arrives at Prerna Sthal on the Parliament premises to pay a floral tribute to Mahatma Jyotiba Phule on his 200th birth anniversary today.
Lok Sabha Speaker Om Birla, Lok Sabha LoP Rahul Gandhi, Union Minister Arjun Ram Meghwal, former… pic.twitter.com/QexqUVky1Z
— ANI (@ANI) April 11, 2026








