ನವದೆಹಲಿ: ಭಾರತದ ವಿದೇಶಿ ವಿನಿಮಯ ಮೀಸಲು ನಿಧಿ (Forex Reserves) ಸಾರ್ವಕಾಲಿಕ ದಾಖಲೆಯತ್ತ ಮುನ್ನುಗ್ಗುತ್ತಿದೆ. ಕಳೆದ ವಾರಾಂತ್ಯಕ್ಕೆ ಭಾರತದ ವಿದೇಶಿ ವಿನಿಮಯ ಸಂಗ್ರಹವು ಬರೋಬ್ಬರಿ 9.06 ಬಿಲಿಯನ್ ಡಾಲರ್ ಏರಿಕೆಯಾಗಿದ್ದು, ಒಟ್ಟು ಮೊತ್ತವು 697.12 ಬಿಲಿಯನ್ ಡಾಲರ್ ತಲುಪಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (RBI) ತಿಳಿಸಿದೆ.
ಜಾಗತಿಕ ಮಟ್ಟದಲ್ಲಿ ಆರ್ಥಿಕ ಅಸ್ಥಿರತೆ ಇದ್ದರೂ, ಭಾರತದ ಖಜಾನೆ ಮಾತ್ರ ಭರ್ತಿಯಾಗುತ್ತಿರುವುದು ದೇಶದ ಆರ್ಥಿಕ ಶಕ್ತಿಯನ್ನು ಜಗತ್ತಿಗೆ ತೋರಿಸಿಕೊಟ್ಟಿದೆ.
ಭಾರತದ ಫಾರೆಕ್ಸ್ ರಿಸರ್ವ್ ಈಗ 700 ಬಿಲಿಯನ್ ಡಾಲರ್ ಎಂಬ ಐತಿಹಾಸಿಕ ಮೈಲಿಗಲ್ಲನ್ನು ಮುಟ್ಟಲು ಇನ್ನು ಕೆಲವೇ ಹೆಜ್ಜೆ ಬಾಕಿಯಿದೆ.
ವಿದೇಶಿ ಕರೆನ್ಸಿ ಆಸ್ತಿ (FCA) ಏರಿಕೆ: ಮೀಸಲು ನಿಧಿಯ ಪ್ರಮುಖ ಭಾಗವಾದ ವಿದೇಶಿ ಕರೆನ್ಸಿ ಆಸ್ತಿಗಳು ಈ ಅವಧಿಯಲ್ಲಿ 7.51 ಬಿಲಿಯನ್ ಡಾಲರ್ ಏರಿಕೆಯಾಗಿದ್ದು, ಒಟ್ಟು 611.12 ಬಿಲಿಯನ್ ಡಾಲರ್‌ಗೆ ತಲುಪಿದೆ.
ಬರೀ ಡಾಲರ್ ಅಷ್ಟೇ ಅಲ್ಲದೆ, ಆರ್‌ಬಿಐ ಬಳಿಯಿರುವ ಚಿನ್ನದ ಮೀಸಲು ಕೂಡ 1.2 ಬಿಲಿಯನ್ ಡಾಲರ್ ಹೆಚ್ಚಾಗಿದ್ದು, ಈಗ ಒಟ್ಟು 66.9 ಬಿಲಿಯನ್ ಡಾಲರ್ ಮೌಲ್ಯದ ಚಿನ್ನ ಭಾರತದ ಬಳಿಯಿದೆ.ದೇಶದ ಬಳಿ ವಿದೇಶಿ ವಿನಿಮಯ ಸಂಗ್ರಹ ಹೆಚ್ಚಿದ್ದಷ್ಟೂ ರೂಪಾಯಿ ಮೌಲ್ಯ ಸ್ಥಿರವಾಗಿರುತ್ತದೆ. ಯುದ್ಧ ಅಥವಾ ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಇದು ದೇಶಕ್ಕೆ ರಕ್ಷಣಾ ಕವಚದಂತೆ ಕೆಲಸ ಮಾಡುತ್ತದೆ.








