ಬೆಂಗಳೂರು: ಕರ್ನಾಟಕ ಸರ್ಕಾರದ 2026ನೇ ಸಾಲಿನ 10ನೇ ಸಚಿವ ಸಂಪುಟ ಸಭೆಯನ್ನು ಇದೇ ಏಪ್ರಿಲ್ 16, ಗುರುವಾರದಂದು ಕರೆಯಲಾಗಿದೆ.
ಸಭೆಯ ವಿವರಗಳು:
-
ಸಮಯ: ಸಂಜೆ 4:30 ಗಂಟೆಗೆ.
-
ಸ್ಥಳ: ವಿಧಾನಸೌಧದ ಸಚಿವ ಸಂಪುಟ ಸಭಾಮಂದಿರ.
-
ಅಧ್ಯಕ್ಷತೆ: ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಈ ಸಭೆ ನಡೆಯಲಿದೆ.
ಸರ್ಕಾರದ ಅಪರ ಕಾರ್ಯದರ್ಶಿಗಳಾದ (ಸಚಿವ ಸಂಪುಟ) ಆರ್. ಚಂದ್ರಶೇಖರ್ ಅವರು ಈ ಕುರಿತು ಅಧಿಕೃತ ಸೂಚನಾ ಪತ್ರವನ್ನು ಹೊರಡಿಸಿದ್ದಾರೆ. ಈ ಸಭೆಯಲ್ಲಿ ಉಪ ಮುಖ್ಯಮಂತ್ರಿಗಳು ಸೇರಿದಂತೆ ರಾಜ್ಯ ಸರ್ಕಾರದ ಎಲ್ಲಾ ಸಚಿವರುಗಳು ಭಾಗವಹಿಸಲಿದ್ದಾರೆ.
ಸಭೆಯ ನಿರ್ದಿಷ್ಟ ಕಾರ್ಯಸೂಚಿಯನ್ನು (Agenda) ಪ್ರತ್ಯೇಕವಾಗಿ ಕಳುಹಿಸಿಕೊಡುವುದಾಗಿ ಪತ್ರದಲ್ಲಿ ತಿಳಿಸಲಾಗಿದ್ದು, ರಾಜ್ಯದ ಅಭಿವೃದ್ಧಿ ಹಾಗೂ ಆಡಳಿತಾತ್ಮಕ ವಿಷಯಗಳ ಕುರಿತು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ.
ಮುಖ್ಯ ಕಾರ್ಯದರ್ಶಿಗಳು ಸೇರಿದಂತೆ ಸರ್ಕಾರದ ಎಲ್ಲಾ ಇಲಾಖೆಗಳ ಅಪರ ಮುಖ್ಯ ಕಾರ್ಯದರ್ಶಿಗಳು ಮತ್ತು ಪ್ರಧಾನ ಕಾರ್ಯದರ್ಶಿಗಳಿಗೆ ಸಭೆಯ ಮಾಹಿತಿಯನ್ನು ರವಾನಿಸಲಾಗಿದೆ.
ಇದಕ್ಕೆ ಕೇಂದ್ರ ಸಚಿವ H.D.ಕುಮಾರಸ್ವಾಮಿ ಯಾವಾಗ್ಲೂ ಜನರಿಗೆ ಇಷ್ಟ ಆಗೋದು! ಅದೇನು ಅಂತ ಈ ಸುದ್ದಿ ಓದಿ!
Artemis II: ನಾಸಾದ ಚಂದ್ರಯಾನದಲ್ಲಿ ಗಗನಯಾತ್ರಿಗಳ ಜೊತೆ ಬಾಹ್ಯಾಕಾಶಕ್ಕೆ ಹಾರಿದ ‘ಡಲ್ಕೋಫ್ಲೆಕ್ಸ್’








