Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಶನಿ ದೋಷದಿಂದ ವಿಮುಕ್ತಿಗಾಗಿ ಶನಿ ಜಯಂತಿಯನ್ನು ಹೀಗೆ ತಪ್ಪದೇ ಮಾಡಿ!

BREAKING: ಸಿಎಂ ಸ್ಥಾನಕ್ಕೆ ರಾಜೀನಾಮೆ ಬಳಿಕ ಸಿದ್ದರಾಮಯ್ಯ ವಿದಾಯದ ಭಾಷಣ; ಹೇಳಿದ್ದೇನು? ಇಲ್ಲಿದೆ ಓದಿ

BREAKING : ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ : ಸಿದ್ದರಾಮಯ್ಯ ಅಧಿಕೃತ ಘೋಷಣೆ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » SHOCKING : `ಫಾಸ್ಟ್‌ ಟ್ಯಾಗ್‌’ನಲ್ಲಿ ಹಣವಿಲ್ಲದ್ದಕ್ಕೆ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಟೋಲ್ ಸಿಬ್ಬಂದಿ : ವಿಡಿಯೋ ವೈರಲ್ | WATCH VIDEO
KARNATAKA

SHOCKING : `ಫಾಸ್ಟ್‌ ಟ್ಯಾಗ್‌’ನಲ್ಲಿ ಹಣವಿಲ್ಲದ್ದಕ್ಕೆ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಟೋಲ್ ಸಿಬ್ಬಂದಿ : ವಿಡಿಯೋ ವೈರಲ್ | WATCH VIDEO

By kannadanewsnow57

ಮಂಡ್ಯ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಟೋಲ್ ಸಿಬ್ಬಂದಿಗಳ ಅಟ್ಟಹಾಸ ಮಿತಿಮೀರಿದ್ದು, ಫಾಸ್ಟ್‌ಟ್ಯಾಗ್‌ನಲ್ಲಿ ಹಣವಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಯುವಕನೋರ್ವನ ಮೇಲೆ ಮೃಗೀಯವಾಗಿ ಹಲ್ಲೆ ನಡೆಸಿರುವ ಘಟನೆ ಗಣಂಗೂರು ಟೋಲ್ ಬಳಿ ನಡೆದಿದೆ.

ಘಟನೆಯ ಹಿನ್ನೆಲೆ:
ಎರಡು ದಿನಗಳ ಹಿಂದೆ ಮಹೇಶ್ ಎಂಬ ಯುವಕ ತನ್ನ ಸ್ನೇಹಿತರೊಂದಿಗೆ ಕಾರಿನಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿಯ ಮೂಲಕ ಪ್ರಯಾಣಿಸುತ್ತಿದ್ದರು. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಗಣಂಗೂರು ಟೋಲ್ ತಲುಪಿದಾಗ, ಅವರ ಕಾರಿನ ಫಾಸ್ಟ್‌ಟ್ಯಾಗ್‌ನಲ್ಲಿ (Fastag) ಹಣ ಖಾಲಿಯಾಗಿರುವುದು ಗಮನಕ್ಕೆ ಬಂದಿದೆ.

ನಡೆದಿದ್ದೇನು?
ಫಾಸ್ಟ್‌ಟ್ಯಾಗ್‌ನಲ್ಲಿ ಹಣವಿಲ್ಲದ ಕಾರಣ, ಮಹೇಶ್ ಕಾರನ್ನು ಸ್ವಲ್ಪ ಹಿಂದಕ್ಕೆ ತೆಗೆದು ತನಗೆ ಪರಿಚಯವಿರುವವರಿಗೆ ಕರೆ ಮಾಡಿ ಹಣ ಹಾಕಿಸಿಕೊಳ್ಳಲು ಮುಂದಾಗಿದ್ದಾರೆ. ಆದರೆ ಈ ಸಂದರ್ಭದಲ್ಲಿ ಟೋಲ್ ಸಿಬ್ಬಂದಿ ಹಾಗೂ ಮಹೇಶ್ ನಡುವೆ ಮಾತಿನ ಚಕಮಕಿ ನಡೆದಿದೆ. ಕ್ಷಣಾರ್ಧದಲ್ಲಿ ಆಕ್ರೋಶಗೊಂಡ ಟೋಲ್ ಸಿಬ್ಬಂದಿಗಳು ಕಾನೂನನ್ನು ಕೈಗೆತ್ತಿಕೊಂಡು ಗೂಂಡಾಗಳಂತೆ ವರ್ತಿಸಿದ್ದಾರೆ.

ಯುವಕನಿಗೆ ಅಸಭ್ಯ ಭಾಷೆಯಲ್ಲಿ ಬೈದು ಗಲಾಟೆ ಆರಂಭಿಸಿದ್ದಾರೆ.ಯುವಕ ಯಾರನ್ನೋ ಸಂಪರ್ಕಿಸಲು ಪ್ರಯತ್ನಿಸುತ್ತಿದ್ದಾಗ ಆತನ ಕೈಯಲ್ಲಿದ್ದ ಮೊಬೈಲ್ ಫೋನ್ ಕಿತ್ತುಕೊಂಡು ದರ್ಪ ತೋರಿದ್ದಾರೆ. ಅಷ್ಟಕ್ಕೇ ನಿಲ್ಲದ ಸಿಬ್ಬಂದಿಗಳು ಮಹೇಶ್ ಮೇಲೆ ಮುಗಿಬಿದ್ದು, ಅಟ್ಟಾಡಿಸಿಕೊಂಡು ಹೋಗಿ ಹಿಗ್ಗಾಮುಗ್ಗಾ ಹಲ್ಲೆ ನಡೆಸಿದ್ದಾರೆ.

ವೈರಲ್ ಆದ ವೀಡಿಯೊ:
ಟೋಲ್ ಸಿಬ್ಬಂದಿಗಳು ಮಹೇಶ್ ಮೇಲೆ ನಡೆಸಿದ ಮೃಗೀಯ ಹಲ್ಲೆಯ ದೃಶ್ಯಗಳು ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. “ಇವರು ಟೋಲ್ ಸಿಬ್ಬಂದಿಗಳೋ ಅಥವಾ ರೌಡಿಗಳೋ?” ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

https://kannadanewsnow.com/kannada/wp-content/uploads/2026/04/WhatsApp-Video-2026-04-10-at-1.10.55-PM.mp4
SHOCKING: Toll booth staff brutally beats up young man for not having money in `FASTag': Video goes viral | WATCH VIDEO
Share. Facebook Twitter LinkedIn WhatsApp Email

Related Posts

ಶನಿ ದೋಷದಿಂದ ವಿಮುಕ್ತಿಗಾಗಿ ಶನಿ ಜಯಂತಿಯನ್ನು ಹೀಗೆ ತಪ್ಪದೇ ಮಾಡಿ!

3 Mins Read

BREAKING: ಸಿಎಂ ಸ್ಥಾನಕ್ಕೆ ರಾಜೀನಾಮೆ ಬಳಿಕ ಸಿದ್ದರಾಮಯ್ಯ ವಿದಾಯದ ಭಾಷಣ; ಹೇಳಿದ್ದೇನು? ಇಲ್ಲಿದೆ ಓದಿ

5 Mins Read

BREAKING : ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ : ಸಿದ್ದರಾಮಯ್ಯ ಅಧಿಕೃತ ಘೋಷಣೆ

1 Min Read
Recent News

ಶನಿ ದೋಷದಿಂದ ವಿಮುಕ್ತಿಗಾಗಿ ಶನಿ ಜಯಂತಿಯನ್ನು ಹೀಗೆ ತಪ್ಪದೇ ಮಾಡಿ!

BREAKING: ಸಿಎಂ ಸ್ಥಾನಕ್ಕೆ ರಾಜೀನಾಮೆ ಬಳಿಕ ಸಿದ್ದರಾಮಯ್ಯ ವಿದಾಯದ ಭಾಷಣ; ಹೇಳಿದ್ದೇನು? ಇಲ್ಲಿದೆ ಓದಿ

BREAKING : ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ : ಸಿದ್ದರಾಮಯ್ಯ ಅಧಿಕೃತ ಘೋಷಣೆ

BREAKING: ದಾಖಲೆಯ 2,902 ದಿನಗಳ ಸಿದ್ದರಾಮಯ್ಯ ಆಡಳಿತ ಅಂತ್ಯ: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಕೆ | CM Siddaramaiah Resigns

State News
KARNATAKA

ಶನಿ ದೋಷದಿಂದ ವಿಮುಕ್ತಿಗಾಗಿ ಶನಿ ಜಯಂತಿಯನ್ನು ಹೀಗೆ ತಪ್ಪದೇ ಮಾಡಿ!

By ವಸಂತ ಬಿ ಈಶ್ವರಗೆರೆ KARNATAKA 3 Mins Read

ಶನಿ ದೋಷವನ್ನು ಅನುಭವಿಸುತ್ತಿರುವ ಮೇಷ, ಸಿಂಹ, ಕನ್ಯಾ, ಧನುಸ್ಸು, ಕುಂಭ ಹಾಗೂ ಮೀನ ರಾಶಿಯವರಿಗೆ ಶನಿ ದೋಷದಿಂದ ವಿಮುಕ್ತಿ ದೊರಕುವ…

BREAKING: ಸಿಎಂ ಸ್ಥಾನಕ್ಕೆ ರಾಜೀನಾಮೆ ಬಳಿಕ ಸಿದ್ದರಾಮಯ್ಯ ವಿದಾಯದ ಭಾಷಣ; ಹೇಳಿದ್ದೇನು? ಇಲ್ಲಿದೆ ಓದಿ

BREAKING : ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ : ಸಿದ್ದರಾಮಯ್ಯ ಅಧಿಕೃತ ಘೋಷಣೆ

BREAKING: ದಾಖಲೆಯ 2,902 ದಿನಗಳ ಸಿದ್ದರಾಮಯ್ಯ ಆಡಳಿತ ಅಂತ್ಯ: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಕೆ | CM Siddaramaiah Resigns

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.