ಬೆಂಗಳೂರು: ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಯಲಿರುವ ಉಪಚುನಾವಣೆಯ ಹಿನ್ನೆಲೆಯಲ್ಲಿ, ಮತದಾನದ ದಿನವಾದ ಏಪ್ರಿಲ್ 9, 2026 (ಗುರುವಾರ) ರಂದು ಆಯಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಕರ್ನಾಟಕ ಸರ್ಕಾರವು ‘ವೇತನ ಸಹಿತ ರಜೆ’ ಘೋಷಿಸಿ ಆದೇಶ ಹೊರಡಿಸಿದೆ.
ರಜೆ ಘೋಷಣೆಯಾಗಿರುವ ಕ್ಷೇತ್ರಗಳು:
-
24-ಬಾಗಲಕೋಟೆ ವಿಧಾನಸಭಾ ಕ್ಷೇತ್ರ.
-
107-ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ.
ಯಾರಿಗೆಲ್ಲ ರಜೆ ಅನ್ವಯಿಸುತ್ತದೆ? ಈ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿರುವ ಈ ಕೆಳಗಿನ ಸಂಸ್ಥೆಗಳಿಗೆ ರಜೆ ಅನ್ವಯಿಸಲಿದೆ:
-
ಎಲ್ಲಾ ರಾಜ್ಯ ಸರ್ಕಾರಿ ಕಚೇರಿಗಳು.
-
ಶಾಲಾ-ಕಾಲೇಜುಗಳು (ಅನುದಾನಿತ ಶಿಕ್ಷಣ ಸಂಸ್ಥೆಗಳು ಸೇರಿದಂತೆ).
-
ರಾಷ್ಟ್ರೀಯಕೃತ ಬ್ಯಾಂಕುಗಳು, ಜೀವ ವಿಮಾ ನಿಗಮ (LIC) ಮತ್ತು ಹಣಕಾಸು ಸಂಸ್ಥೆಗಳು.
-
ವ್ಯಾಪಾರ, ಕೈಗಾರಿಕಾ ಸಂಸ್ಥೆಗಳು ಹಾಗೂ ಇನ್ನಿತರೆ ಉದ್ಯಮಗಳಲ್ಲಿ (Business, trade, industrial undertaking or any other establishment) ಖಾಯಂ ಆಗಿ ಅಥವಾ ದಿನಗೂಲಿ ಮೇಲೆ ಕೆಲಸ ನಿರ್ವಹಿಸುತ್ತಿರುವ ಎಲ್ಲಾ ಅರ್ಹ ಮತದಾರರಿಗೆ.
ಪ್ರಮುಖ ಅಂಶಗಳು:
-
ವೇತನ ಸಹಿತ ರಜೆ: ಈ ರಜೆಯು ವೇತನ ಸಹಿತವಾಗಿದ್ದು, ಮತದಾನ ಮಾಡಲು ಅನುಕೂಲವಾಗುವಂತೆ ‘Negotiable Instruments Act 1881’ ಮತ್ತು ‘Representation of People Act 1951’ ಅಡಿಯಲ್ಲಿ ಈ ಸೌಲಭ್ಯವನ್ನು ನೀಡಲಾಗಿದೆ.
-
ಮತದಾರರು ತಮ್ಮ ಹಕ್ಕನ್ನು ಚಲಾಯಿಸಲು ಅನುವು ಮಾಡಿಕೊಡುವ ಉದ್ದೇಶದಿಂದ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಸರ್ಕಾರದ ಅಧೀನ ಕಾರ್ಯದರ್ಶಿಗಳು ಈ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದ್ದಾರೆ.

ಅನಂತ್ ಅಂಬಾನಿಯಿಂದ ಕೇರಳದ ದೇವಾಲಯಗಳು, ಆನೆಗಳ ಕಲ್ಯಾಣಕ್ಕಾಗಿ ₹18 ಕೋಟಿ ದೇಣಿಗೆ
ವಲಸೆ ಕಾರ್ಮಿಕರಿಗೆ ನೆಮ್ಮದಿಯ ಸುದ್ದಿ: 5 ಕೆಜಿ ಎಫ್ಟಿಎಲ್ ಸಿಲಿಂಡರ್ ಪೂರೈಕೆ ಪ್ರಮಾಣ ದುಪ್ಪಟ್ಟು








