ಬೆಂಗಳೂರು: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ 2026 ರಿಂದ 2031ರ ಅವಧಿಗಾಗಿ ವಿವಿಧ ಹಂತಗಳ ಚುನಾವಣೆಗೆ ಅಧಿಕೃತ ಅಧಿಸೂಚನೆ ಹೊರಬಿದ್ದಿದೆ. ರಾಜ್ಯ ಚುನಾವಣಾಧಿಕಾರಿಯಾಗಿ ನೇಮಕಗೊಂಡಿರುವ ನಿವೃತ್ತ ಜಾನುವಾರು ಅಭಿವೃದ್ಧಿ ಅಧಿಕಾರಿ ಮೆಹಬೂಬ್ ಪಾಷಾ ಮೂಲಿಮನಿ ಅವರು ಈ ಕುರಿತು ಪ್ರಕಟಣೆ ಹೊರಡಿಸಿದ್ದಾರೆ.
ಚುನಾವಣಾ ಪ್ರಕ್ರಿಯೆಯ ವೇಳಾಪಟ್ಟಿ: ಸಂಘದ ಬೈಲಾ ನಿಯಮಾವಳಿಗಳ ಅನ್ವಯ ಎರಡು ಹಂತಗಳಲ್ಲಿ ಚುನಾವಣೆಗಳು ನಡೆಯಲಿವೆ:
-
ಮೊದಲ ಹಂತ: ತಾಲ್ಲೂಕು, ವಿಶೇಷ ಹಾಗೂ ಯೋಜನಾ ಶಾಖೆಗಳ ಕಾರ್ಯಕಾರಿ ಸಮಿತಿ ಚುನಾವಣೆಗಳು ದಿನಾಂಕ 11/04/2026 ರಿಂದ 19/04/2026 ರವರೆಗೆ ನಡೆಯಲಿವೆ.
-
ಎರಡನೇ ಹಂತ: ತಾಲ್ಲೂಕು, ವಿಶೇಷ, ಯೋಜನಾ ಶಾಖೆ ಹಾಗೂ ಜಿಲ್ಲಾ ಮತ್ತು ರಾಜ್ಯ ಪದಾಧಿಕಾರಿಗಳ ಚುನಾವಣೆಗಳು ದಿನಾಂಕ 22/04/2026 ರಿಂದ 30/04/2026 ರವರೆಗೆ ನಡೆಯಲಿವೆ.
ಸೂಚನೆಗಳು:
-
ಆಯಾ ಶಾಖೆಗಳ ಚುನಾವಣಾಧಿಕಾರಿಗಳು ಅಧಿಸೂಚನೆಯಲ್ಲಿರುವ ಮಾರ್ಗಸೂಚಿಯಂತೆ ಕಡ್ಡಾಯವಾಗಿ ಪ್ರಕ್ರಿಯೆ ನಡೆಸಬೇಕು.
-
ಚುನಾವಣೆ ಮತ್ತು ಮತ ಎಣಿಕೆ ಪೂರ್ಣಗೊಂಡ ನಂತರ, ಅಭ್ಯರ್ಥಿಗಳ ವಿವರ ಹಾಗೂ ಅಯ್ಕೆಯಾದವರ ಪಟ್ಟಿಯನ್ನು ರಾಜ್ಯ ಚುನಾವಣಾಧಿಕಾರಿಗಳ ಅಧಿಕೃತ ಇಮೇಲ್ ವಿಳಾಸಕ್ಕೆ (kspstaelection2026@gmail.com) ಪಿಡಿಎಫ್ ಅಥವಾ ಎಂಎಸ್ ವರ್ಡ್/ಎಕ್ಸೆಲ್ ಫಾರ್ಮ್ಯಾಟ್ನಲ್ಲಿ ಕಳುಹಿಸಬೇಕು.
-
ಪೂರ್ವಾನುಮೋದನೆ ಪಡೆಯದೆ ಸ್ವಯಂ ಘೋಷಿಸಿಕೊಳ್ಳುವ ಫಲಿತಾಂಶಗಳಿಗೆ ಮಾನ್ಯತೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವಂತ ಸಾಗರ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ದಿನೇಶ್ ನರಸೀಪುರ ಅವರು, ಚುನಾವಣೆಗೆ ನಾವು ಕೂಡ ತಯಾರಿ ಮಾಡಿಕೊಂಡಿದ್ದೇವೆ. ತಾಲ್ಲೂಕಿನ ಎಲ್ಲಾ ಶಿಕ್ಷಕರನ್ನು ಒಟ್ಟುಗೂಡಿಸಿಕೊಂಡು ಚುನಾವಣೆಯಲ್ಲಿ ಭಾಗಿಯಾಗಲಿದ್ದೇನೆ. ಶಿಕ್ಷಕರ ಸರ್ವತೋಮುಖ ಏಳಿಗೆಗಾಗಿ ದುಡಿಯುವಂತ ಕೆಲಸ ಮಾಡುವುದಾಗಿ ತಿಳಿಸಿದರು.
ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು…

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: 1 ರಿಂದ 9ನೇ ತರಗತಿ ವಿದ್ಯಾರ್ಥಿಗಳ ‘BMTC ಬಸ್ ಪಾಸ್’ ಅವಧಿ ವಿಸ್ತರಣೆ
Vastu for Wealth: ನಿಮ್ಮ ಸಾಲಬಾಧೆ ಮುಕ್ತಿಗಾಗಿ ‘ವಾಸ್ತು ಟಿಪ್ಸ್’: ಲಕ್ಷ್ಮಿಯ ಕೃಪೆ ಪಡೆಯಲು ಇಲ್ಲಿದೆ ಮಾರ್ಗ!






