Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ರಾಜ್ಯದ ಆರ್ಥಿಕ ಪರಿಸ್ಥಿತಿ ಸುಭದ್ರವಾಗಿದ್ದು, ಕೇಂದ್ರ ಬಜೆಟ್ ಗಿಂತ ರಾಜ್ಯದ ಬಜೆಟ್ ಉತ್ತಮ : ಸಿಎಂ ಸಿದ್ದರಾಮಯ್ಯ

02/04/2026 1:17 PM

ರಾಜ್ಯದಲ್ಲಿ `ಕ್ಷೇತ್ರ ಶಿಕ್ಷಣಾಧಿಕಾರಿ’ಗಳ ಶೈಕ್ಷಣಿಕ ಕರ್ತವ್ಯಗಳು & ಜವಾಬ್ದಾರಿಗಳೇನು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್!

02/04/2026 1:16 PM

BIG NEWS : ಕೇಂದ್ರ ಸರ್ಕಾರದಿಂದ ಬಿಗ್ ರಿಲೀಫ್ : ಇಂದಿನಿಂದ ಈ 41 ಉತ್ಪನ್ನಗಳ ಮೇಲಿನ ಆಮದು ಸುಂಕ ರದ್ದು.!

02/04/2026 1:07 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದಲ್ಲಿ `ಕ್ಷೇತ್ರ ಶಿಕ್ಷಣಾಧಿಕಾರಿ’ಗಳ ಶೈಕ್ಷಣಿಕ ಕರ್ತವ್ಯಗಳು & ಜವಾಬ್ದಾರಿಗಳೇನು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್!
KARNATAKA

ರಾಜ್ಯದಲ್ಲಿ `ಕ್ಷೇತ್ರ ಶಿಕ್ಷಣಾಧಿಕಾರಿ’ಗಳ ಶೈಕ್ಷಣಿಕ ಕರ್ತವ್ಯಗಳು & ಜವಾಬ್ದಾರಿಗಳೇನು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್!

By kannadanewsnow5702/04/2026 1:16 PM

ಬೆಂಗಳೂರು: ಶಿಕ್ಷಣ ಇಲಾಖೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ (BEO) ಪಾತ್ರ ಅತ್ಯಂತ ನಿರ್ಣಾಯಕವಾದುದು. ತಮ್ಮ ವ್ಯಾಪ್ತಿಯ ಪ್ರದೇಶಗಳಲ್ಲಿ ಪೂರ್ವ ಪ್ರಾಥಮಿಕದಿಂದ ಪ್ರೌಢ ಶಿಕ್ಷಣದವರೆಗೆ ಶೈಕ್ಷಣಿಕ ಗುಣಮಟ್ಟವನ್ನು ಕಾಪಾಡುವಲ್ಲಿ ಮತ್ತು ಆಡಳಿತಾತ್ಮಕ ವ್ಯವಸ್ಥೆಯನ್ನು ಸುಗಮಗೊಳಿಸುವಲ್ಲಿ ಇವರು ಪ್ರಮುಖ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಇತ್ತೀಚಿನ ಮಾರ್ಗಸೂಚಿಗಳ ಅನ್ವಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಪ್ರಮುಖ ಕರ್ತವ್ಯಗಳು ಮತ್ತು ಅಧಿಕಾರಗಳ ಪಟ್ಟಿ ಇಲ್ಲಿದೆ.

ಶೈಕ್ಷಣಿಕ ಕರ್ತವ್ಯಗಳು ಮತ್ತು ಜವಾಬ್ದಾರಿಗಳು

ಕ್ಷೇತ್ರ ಶಿಕ್ಷಣಾಧಿಕಾರಿಗಳು ಶೈಕ್ಷಣಿಕ ಪ್ರಗತಿಗಾಗಿ ಹತ್ತಾರು ಜವಾಬ್ದಾರಿಗಳನ್ನು ನಿರ್ವಹಿಸಬೇಕಾಗುತ್ತದೆ:

ಶಾಲಾ ನಕ್ಷೆ ಸಿದ್ಧಪಡಿಸುವುದು: ಶಾಲೆಗಳಿಲ್ಲದ ಹಳ್ಳಿಗಳನ್ನು ಗುರುತಿಸಿ, ಅಲ್ಲಿ ಶಾಲೆಗಳ ಸ್ಥಾಪನೆಗೆ ಆದ್ಯತೆ ನೀಡಿ ಶಾಲಾ ನಕ್ಷೆಯನ್ನು ಸಿದ್ಧಪಡಿಸುವುದು.

ಹೊಸ ಶಾಲೆಗಳ ಸ್ಥಾಪನೆ: ಹೊಸ ಪ್ರೌಢ ಶಾಲೆಗಳ ಸ್ಥಾಪನೆಯ ಸಾಧಕ-ಬಾಧಕಗಳನ್ನು ಪರಿಶೀಲಿಸಿ ಮೇಲಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸುವುದು.

ಶೈಕ್ಷಣಿಕ ಮೇಲ್ವಿಚಾರಣೆ: ಶಾಲೆಗಳ ಕೆಲಸದ ದಿನಗಳು, ಅವಧಿ ಮತ್ತು ಶೈಕ್ಷಣಿಕ ಪ್ರವಾಸಗಳಿಗೆ ಅನುಮತಿ ನೀಡುವುದು ಇವರ ವ್ಯಾಪ್ತಿಗೆ ಬರುತ್ತದೆ.

ಅನಧಿಕೃತ ಶಾಲೆಗಳಿಗೆ ಕಡಿವಾಣ: ತಮ್ಮ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಅನಧಿಕೃತ ಶಿಕ್ಷಣ ಸಂಸ್ಥೆಗಳನ್ನು ಪತ್ತೆ ಹಚ್ಚಿ, ಅಂತಹ ಸಂಸ್ಥೆಗಳನ್ನು ಕೂಡಲೇ ಮುಚ್ಚಿಸುವ ಅಧಿಕಾರ ಇವರಿಗಿದೆ.

ಗುಣಮಟ್ಟ ಸುಧಾರಣೆ: ಶಿಕ್ಷಕರಿಗೆ ತರಬೇತಿ ನೀಡುವುದು, ಸೆಮಿನಾರ್‌ಗಳನ್ನು ಆಯೋಜಿಸುವುದು ಮತ್ತು ಡಯಟ್ (DIET) ಸಹಯೋಗದೊಂದಿಗೆ ಶಾಲೆಗಳ ಶ್ರೇಣೀಕರಣ ಮಾಡುವಲ್ಲಿ ಇವರು ಕಾರ್ಯನಿರ್ವಹಿಸುತ್ತಾರೆ.

ವಿದ್ಯಾರ್ಥಿ ಸ್ನೇಹಿ ಕಾರ್ಯಕ್ರಮಗಳು: ಹಾಜರಾತಿ ಹೆಚ್ಚಿಸಲು ಮಧ್ಯಾಹ್ನದ ಉಪಹಾರ ಯೋಜನೆ, ಉಚಿತ ಪಠ್ಯಪುಸ್ತಕ ಮತ್ತು ಸಮವಸ್ತ್ರ ವಿತರಣೆಯ ಸಮರ್ಪಕ ಅನುಷ್ಠಾನವನ್ನು ನೋಡಿಕೊಳ್ಳುವುದು.

ಆಡಳಿತಾತ್ಮಕ ಅಧಿಕಾರಗಳು
ಶಿಕ್ಷಣ ಇಲಾಖೆಯ ಶಿಸ್ತು ಮತ್ತು ಆಡಳಿತವನ್ನು ಕಾಪಾಡಲು ಇವರಿಗೆ ವಿಶೇಷ ಅಧಿಕಾರ ನೀಡಲಾಗಿದೆ:

ವರ್ಗಾವಣೆ ಮತ್ತು ನೇಮಕಾತಿ: ಶಿಕ್ಷಕರ ಕೊರತೆಯಿರುವ ಶಾಲೆಗಳಿಗೆ ಅತಿಥಿ ಶಿಕ್ಷಕರನ್ನು ಅಥವಾ ಪರ್ಯಾಯ ವ್ಯವಸ್ಥೆ ಮಾಡುವುದು ಮತ್ತು ಖಾಸಗಿ ಶಾಲಾ ಶಿಕ್ಷಕರ ವರ್ಗಾವಣೆಗಳಿಗೆ ಅನುಮೋದನೆ ನೀಡುವುದು.

ತಪಾಸಣೆ: ವಾರ್ಷಿಕವಾಗಿ ಕನಿಷ್ಠ 10 ಪ್ರೌಢ ಶಾಲೆಗಳು, 15 ಹಿರಿಯ ಪ್ರಾಥಮಿಕ ಮತ್ತು 10 ಕಿರಿಯ ಪ್ರಾಥಮಿಕ ಶಾಲೆಗಳ ತಪಾಸಣೆ ನಡೆಸಬೇಕು.

ದಾಖಲೆಗಳ ನಿರ್ವಹಣೆ: ಕಚೇರಿಗಳಲ್ಲಿನ ಕಳ್ಳತನ, ಕೋರ್ಟ್ ಕೇಸ್‌ಗಳು ಮತ್ತು ಕಚೇರಿ ಕಡತಗಳ ಭದ್ರತೆಯ ಬಗ್ಗೆ ಇವರು ನಿಗಾ ವಹಿಸಬೇಕು.

ಆರ್ಥಿಕ ಅಧಿಕಾರಗಳು ಮತ್ತು ಕರ್ತವ್ಯಗಳು
ಹಣಕಾಸಿನ ವ್ಯವಹಾರಗಳಲ್ಲೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಹೆಚ್ಚಿನ ಜವಾಬ್ದಾರಿ ಇರುತ್ತದೆ:

ಅನುದಾನಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಮುಂಗಡ ಬಿಲ್ಸ್‌ಗಳಿಗೆ ನಿಯಮಾನುಸಾರ ಮೇಲು ಸಹಿ ಮಾಡುವುದು.

ಸರ್ಕಾರಿ ಮತ್ತು ಅನುದಾನಿತ ನೌಕರರ ವೇತನ ಸೆಳೆಯುವುದು ಹಾಗೂ ವಾರ್ಷಿಕ ವೇತನ ಬಡ್ತಿ (Increment) ಮಂಜೂರು ಮಾಡುವ ಅಧಿಕಾರ.

ಸರ್ಕಾರದಿಂದ ಬರುವ ವಿವಿಧ ಅನುದಾನಗಳನ್ನು (Grants) ನಿಯಮಗಳ ಪ್ರಕಾರ ವಿತರಿಸುವುದು ಮತ್ತು ಬಳಕೆ ಪ್ರಮಾಣ ಪತ್ರ ಸಲ್ಲಿಸುವುದು.

ನೌಕರರ ರಜೆ ಮಂಜೂರಾತಿ ಮತ್ತು ಆರ್ಥಿಕ ಇಲಾಖೆಯ ನಿಯಮಗಳಂತೆ ಹಣಕಾಸಿನ ಅಧಿಕಾರ ಚಲಾಯಿಸುವುದು.

ಸಂನ್ವಯ ಕಾರ್ಯ:
ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಹಾಗೂ ಆರೋಗ್ಯ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಶಿಕ್ಷಣ ಇಲಾಖೆಯ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತರುವುದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲ ಉದ್ದೇಶವಾಗಿದೆ.

What are the educational duties & responsibilities of 'Field Education Officers' in the state? Here are the complete details!
Share. Facebook Twitter LinkedIn WhatsApp Email

Related Posts

BIG NEWS : ರಾಜ್ಯದ ಆರ್ಥಿಕ ಪರಿಸ್ಥಿತಿ ಸುಭದ್ರವಾಗಿದ್ದು, ಕೇಂದ್ರ ಬಜೆಟ್ ಗಿಂತ ರಾಜ್ಯದ ಬಜೆಟ್ ಉತ್ತಮ : ಸಿಎಂ ಸಿದ್ದರಾಮಯ್ಯ

02/04/2026 1:17 PM2 Mins Read

ನಾನು ‘CM’ ಆದ್ರೆ ಮೊದಲ ಕ್ಯಾಬಿನೆಟ್‌ನಲ್ಲೇ ಮುಸ್ಲಿಮರನ್ನು ಅಲ್ಪಸಂಖ್ಯಾತ ಪಟ್ಟಿಯಿಂದ ಹೊರಹಾಕ್ತೇನೆ : ಶಾಸಕ ಯತ್ನಾಳ್ 

02/04/2026 1:05 PM1 Min Read

ರಾಜ್ಯದ ಹಿರಿಯ ನಾಗರಿಕರಿಗೆ ಗುಡ್ ನ್ಯೂಸ್ : ‘ದಂತ ಭಾಗ್ಯ’ ಯೋಜನೆಯಡಿ ಉಚಿತ ದಂತ ಚಿಕಿತ್ಸೆ.!

02/04/2026 12:42 PM1 Min Read
Recent News

BIG NEWS : ರಾಜ್ಯದ ಆರ್ಥಿಕ ಪರಿಸ್ಥಿತಿ ಸುಭದ್ರವಾಗಿದ್ದು, ಕೇಂದ್ರ ಬಜೆಟ್ ಗಿಂತ ರಾಜ್ಯದ ಬಜೆಟ್ ಉತ್ತಮ : ಸಿಎಂ ಸಿದ್ದರಾಮಯ್ಯ

02/04/2026 1:17 PM

ರಾಜ್ಯದಲ್ಲಿ `ಕ್ಷೇತ್ರ ಶಿಕ್ಷಣಾಧಿಕಾರಿ’ಗಳ ಶೈಕ್ಷಣಿಕ ಕರ್ತವ್ಯಗಳು & ಜವಾಬ್ದಾರಿಗಳೇನು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್!

02/04/2026 1:16 PM

BIG NEWS : ಕೇಂದ್ರ ಸರ್ಕಾರದಿಂದ ಬಿಗ್ ರಿಲೀಫ್ : ಇಂದಿನಿಂದ ಈ 41 ಉತ್ಪನ್ನಗಳ ಮೇಲಿನ ಆಮದು ಸುಂಕ ರದ್ದು.!

02/04/2026 1:07 PM

ನಾನು ‘CM’ ಆದ್ರೆ ಮೊದಲ ಕ್ಯಾಬಿನೆಟ್‌ನಲ್ಲೇ ಮುಸ್ಲಿಮರನ್ನು ಅಲ್ಪಸಂಖ್ಯಾತ ಪಟ್ಟಿಯಿಂದ ಹೊರಹಾಕ್ತೇನೆ : ಶಾಸಕ ಯತ್ನಾಳ್ 

02/04/2026 1:05 PM
State News
KARNATAKA

BIG NEWS : ರಾಜ್ಯದ ಆರ್ಥಿಕ ಪರಿಸ್ಥಿತಿ ಸುಭದ್ರವಾಗಿದ್ದು, ಕೇಂದ್ರ ಬಜೆಟ್ ಗಿಂತ ರಾಜ್ಯದ ಬಜೆಟ್ ಉತ್ತಮ : ಸಿಎಂ ಸಿದ್ದರಾಮಯ್ಯ

By kannadanewsnow0502/04/2026 1:17 PM KARNATAKA 2 Mins Read

ಬೆಂಗಳೂರು : ರಾಜ್ಯದ ಆರ್ಥಿಕ ಪರಿಸ್ಥಿತಿ ಸುಭದ್ರವಾಗಿದೆ. ಕೇಂದ್ರ ಬಜೆಟ್ ಗಿಂತ ರಾಜ್ಯದ ಬಜೆಟ್ ಉತ್ತಮವಾಗಿದೆ ಎಂದು ಬಿಜೆಪಿಗೆ ಸಿಎಂ…

ರಾಜ್ಯದಲ್ಲಿ `ಕ್ಷೇತ್ರ ಶಿಕ್ಷಣಾಧಿಕಾರಿ’ಗಳ ಶೈಕ್ಷಣಿಕ ಕರ್ತವ್ಯಗಳು & ಜವಾಬ್ದಾರಿಗಳೇನು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್!

02/04/2026 1:16 PM

ನಾನು ‘CM’ ಆದ್ರೆ ಮೊದಲ ಕ್ಯಾಬಿನೆಟ್‌ನಲ್ಲೇ ಮುಸ್ಲಿಮರನ್ನು ಅಲ್ಪಸಂಖ್ಯಾತ ಪಟ್ಟಿಯಿಂದ ಹೊರಹಾಕ್ತೇನೆ : ಶಾಸಕ ಯತ್ನಾಳ್ 

02/04/2026 1:05 PM

ರಾಜ್ಯದ ಹಿರಿಯ ನಾಗರಿಕರಿಗೆ ಗುಡ್ ನ್ಯೂಸ್ : ‘ದಂತ ಭಾಗ್ಯ’ ಯೋಜನೆಯಡಿ ಉಚಿತ ದಂತ ಚಿಕಿತ್ಸೆ.!

02/04/2026 12:42 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.