Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS: ರಾಜ್ಯದಲ್ಲಿ ‘ಸರ್ಕಾರಿ ವೈದ್ಯರ ಖಾಸಗಿ ಪ್ರಾಕ್ಟೀಸ್‌’ಗೆ ಸರ್ಕಾರ ಬ್ರೇಕ್: 60 ದಿನಗಳಲ್ಲಿ ಮಾಹಿತಿ ನೀಡದಿದ್ದರೆ ಕಠಿಣ ಕ್ರಮದ ಎಚ್ಚರಿಕೆ!

29/03/2026 5:57 AM

2025ನೇ ಸಾಲಿನ `ಮುಖ್ಯಮಂತ್ರಿ ಪದಕ’ ಪ್ರಕಟ: ಪ್ರಜ್ವಲ್ ರೇವಣ್ಣ ಕೇಸ್ ತನಿಖೆ ನಡೆಸಿದ್ದ ಸುಮನ್ ಪನ್ನೇಕರ್‌ ಸೇರಿ ರಾಜ್ಯದ 153 ಅಧಿಕಾರಿ, ಸಿಬ್ಬಂದಿಗೆ ಗೌರವ !

29/03/2026 5:52 AM

IPL 2026 : ಚಿನ್ನಸ್ವಾಮಿಯಲ್ಲಿ ` ಕೊಹ್ಲಿ-ಪಡಿಕ್ಕಲ್’ ಅಬ್ಬರ : SRH ವಿರುದ್ಧ RCBಗೆ 6 ವಿಕೆಟ್‌ಗಳ ಭರ್ಜರಿ ಜಯ | WATCH VIDEO

29/03/2026 5:47 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » 2025ನೇ ಸಾಲಿನ `ಮುಖ್ಯಮಂತ್ರಿ ಪದಕ’ ಪ್ರಕಟ: ಪ್ರಜ್ವಲ್ ರೇವಣ್ಣ ಕೇಸ್ ತನಿಖೆ ನಡೆಸಿದ್ದ ಸುಮನ್ ಪನ್ನೇಕರ್‌ ಸೇರಿ ರಾಜ್ಯದ 153 ಅಧಿಕಾರಿ, ಸಿಬ್ಬಂದಿಗೆ ಗೌರವ !
KARNATAKA

2025ನೇ ಸಾಲಿನ `ಮುಖ್ಯಮಂತ್ರಿ ಪದಕ’ ಪ್ರಕಟ: ಪ್ರಜ್ವಲ್ ರೇವಣ್ಣ ಕೇಸ್ ತನಿಖೆ ನಡೆಸಿದ್ದ ಸುಮನ್ ಪನ್ನೇಕರ್‌ ಸೇರಿ ರಾಜ್ಯದ 153 ಅಧಿಕಾರಿ, ಸಿಬ್ಬಂದಿಗೆ ಗೌರವ !

By kannadanewsnow5729/03/2026 5:52 AM

ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ 153 ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ 2025ನೇ ಸಾಲಿನ ಪ್ರತಿಷ್ಠಿತ ‘ಮುಖ್ಯಮಂತ್ರಿಗಳ ಪೊಲೀಸ್ ಪದಕ’ವನ್ನು ಪ್ರಕಟಿಸಲಾಗಿದೆ. ಈ ಕುರಿತು ರಾಜ್ಯ ಪೊಲೀಸ್ ಮಹಾನಿರ್ದೇಶಕರು ಮತ್ತು ಐಜಿಪಿ (ಡಿಜಿ-ಐಜಿಪಿ) ಡಾ. ಎಂ.ಎ. ಸಲೀಂ ಅವರು ಮಾರ್ಚ್ 27ರಂದು ಅಧಿಕೃತ ಆದೇಶ ಹೊರಡಿಸಿದ್ದಾರೆ.

ಪ್ರಮುಖ ಪುರಸ್ಕೃತರು:

ಈ ಬಾರಿಯ ಪುರಸ್ಕೃತರ ಪಟ್ಟಿಯಲ್ಲಿ ಹಿರಿಯ ಐಪಿಎಸ್ ಅಧಿಕಾರಿಗಳಿಂದ ಹಿಡಿದು ಕಾನ್ಸ್ಟೇಬಲ್ ಹಂತದವರೆಗಿನ ಸಿಬ್ಬಂದಿ ಸೇರಿದ್ದಾರೆ. ಪ್ರಮುಖವಾಗಿ:

ಡಾ. ಸುಮನ್ ಡಿ. ಪೆನ್ನೇಕರ್ (ಎಸ್ಪಿ, ಬಳ್ಳಾರಿ ಜಿಲ್ಲೆ)

ಡಾ. ಅರುಣ್ ಕೆ. (ಎಸ್ಪಿ, ಉಡುಪಿ ಜಿಲ್ಲೆ)

ಪ್ರತೀಕ್ ಶಂಕರ್ (ಎಸ್ಪಿ, ಯಾದಗಿರಿ ಜಿಲ್ಲೆ)

ಡಾ. ಗೋಪಾಲ ಎಂ. ಬ್ಯಾಕೋಡ (ಡಿಸಿಪಿ, ಸಂಚಾರ ದಕ್ಷಿಣ ವಿಭಾಗ, ಬೆಂಗಳೂರು) ಸೇರಿದಂತೆ ರಾಜ್ಯಾದ್ಯಂತ ಕಾರ್ಯನಿರ್ವಹಿಸುತ್ತಿರುವ ಒಟ್ಟು 153 ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಸರ್ಕಾರ ಈ ಗೌರವಕ್ಕೆ ಆಯ್ಕೆ ಮಾಡಿದೆ.

ಏಪ್ರಿಲ್ 2ರಂದು ಪದಕ ಪ್ರದಾನ ಸಮಾರಂಭ:
ಪದಕ ಪುರಸ್ಕೃತರಿಗೆ ಏಪ್ರಿಲ್ 02, 2026 ರಂದು ನಡೆಯುವ ವಿಶೇಷ ಸಮಾರಂಭದಲ್ಲಿ ಪದಕ ಪ್ರದಾನ ಮಾಡಲಾಗುವುದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಕಾರ್ಯಕ್ರಮದ ತಾಲೀಮು ಮತ್ತು ನಿಯಮಗಳು:

ಪೂರ್ವಭಾವಿ ತಾಲೀಮು: ಪದಕ ಪ್ರದಾನ ಸಮಾರಂಭದ ಹಿನ್ನೆಲೆಯಲ್ಲಿ ಮಾರ್ಚ್ 29, 2026 ರಿಂದಲೇ ಪೂರ್ವಭಾವಿ ತಾಲೀಮು (ರಿಹರ್ಸಲ್) ನಡೆಯಲಿದೆ. ಆಯ್ಕೆಯಾದ ಎಲ್ಲಾ 153 ಸಿಬ್ಬಂದಿಗಳು ಮಾ.29ರ ಬೆಳಗ್ಗೆ 8:00 ಗಂಟೆಗೆ ಕೋರಮಂಗಲದ ಕೆಎಸ್ಆರ್ಪಿ 3ನೇ ಪಡೆಯ ಕಮಾಂಡೆಂಟ್ ಎದುರು ವರದಿ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ.

ಕಡ್ಡಾಯ ಹಾಜರಾತಿ: ತಾಲೀಮಿನಲ್ಲಿ ಭಾಗವಹಿಸದೇ ಇರುವ ಅಧಿಕಾರಿ ಮತ್ತು ಸಿಬ್ಬಂದಿಗೆ ನಿಗದಿಪಡಿಸಿದ ಪದಕ ಪ್ರದಾನ ಸಮಾರಂಭದಲ್ಲಿ ಭಾಗವಹಿಸಲು ಅನುಮತಿ ನೀಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಸಮವಸ್ತ್ರ ಸಂಹಿತೆ: ಡಿವೈಎಸ್ಪಿ ಮತ್ತು ಮೇಲ್ಪಟ್ಟ ಅಧಿಕಾರಿಗಳು ‘ವರ್ಕಿಂಗ್ ಡ್ರೆಸ್’ ಜೊತೆಗೆ ಕ್ರಾಸ್ ಬೆಲ್ಟ್ ಹಾಗೂ ಕತ್ತಿ (Sword) ಧರಿಸಬೇಕು. ಸಿಪಿಐ ನಿಂದ ಎಎಸ್ಐ ವರೆಗಿನ ಅಧಿಕಾರಿಗಳು ‘ವರ್ಕಿಂಗ್ ಡ್ರೆಸ್’ ಜೊತೆಗೆ ಕ್ರಾಸ್ ಬೆಲ್ಟ್ ಹಾಗೂ ಮುಖ್ಯ ಕಾನ್ಸ್ಟೇಬಲ್ (HC) ಮತ್ತು ಕಾನ್ಸ್ಟೇಬಲ್ (PC) ಹಂತದ ಸಿಬ್ಬಂದಿ ‘ಸೆರಿಮೋನಿಯಲ್ ಡ್ರೆಸ್’ ಧರಿಸುವಂತೆ ನಿರ್ದೇಶನ ನೀಡಲಾಗಿದೆ.

ಒಂದು ವೇಳೆ ಆಯ್ಕೆಯಾದ ಅಧಿಕಾರಿ/ಸಿಬ್ಬಂದಿಗಳಲ್ಲಿ ಯಾರಾದರೂ ಪ್ರಸ್ತುತ ಅಮಾನತ್ತಿನಲ್ಲಿದ್ದರೆ ಅಂತಹವರಿಗೆ ಪದಕ ಪ್ರದಾನ ಸಮಾರಂಭದಲ್ಲಿ ಪಾಲ್ಗೊಳ್ಳಲು ಅವಕಾಶವಿರುವುದಿಲ್ಲ. ನಿವೃತ್ತರಾಗಿದ್ದರೂ ಅಥವಾ ಮರಣ ಹೊಂದಿದ್ದರೂ ಅವರಿಗೆ/ಅವರ ಕುಟುಂಬದವರಿಗೆ ಈ ಗೌರವವನ್ನು ತಲುಪಿಸುವ ಜವಾಬ್ದಾರಿಯನ್ನು ಆಯಾ ಘಟಕಾಧಿಕಾರಿಗಳಿಗೆ ವಹಿಸಲಾಗಿದೆ.

2025 Chief Minister's Medal announced: 153 officers and staff of the state including Suman Pannekar who conducted investigation in Prajwal Revanna case were honoured!
Share. Facebook Twitter LinkedIn WhatsApp Email

Related Posts

BIG NEWS: ರಾಜ್ಯದಲ್ಲಿ ‘ಸರ್ಕಾರಿ ವೈದ್ಯರ ಖಾಸಗಿ ಪ್ರಾಕ್ಟೀಸ್‌’ಗೆ ಸರ್ಕಾರ ಬ್ರೇಕ್: 60 ದಿನಗಳಲ್ಲಿ ಮಾಹಿತಿ ನೀಡದಿದ್ದರೆ ಕಠಿಣ ಕ್ರಮದ ಎಚ್ಚರಿಕೆ!

29/03/2026 5:57 AM2 Mins Read

IPL 2026 : ಚಿನ್ನಸ್ವಾಮಿಯಲ್ಲಿ ` ಕೊಹ್ಲಿ-ಪಡಿಕ್ಕಲ್’ ಅಬ್ಬರ : SRH ವಿರುದ್ಧ RCBಗೆ 6 ವಿಕೆಟ್‌ಗಳ ಭರ್ಜರಿ ಜಯ | WATCH VIDEO

29/03/2026 5:47 AM2 Mins Read

ರಾಜ್ಯದ ಜನರೇ ಗಮನಿಸಿ : ಏ.1 ರಿಂದ ‘ಸ್ವಯಂ-ಗಣತಿ’ ಆರಂಭ, ಮನೆಯಲ್ಲೇ ಕುಳಿತು ಜಸ್ಟ್ ಈ ರೀತಿ ಮಾಹಿತಿ ಸಲ್ಲಿಸಿ!

29/03/2026 5:34 AM1 Min Read
Recent News

BIG NEWS: ರಾಜ್ಯದಲ್ಲಿ ‘ಸರ್ಕಾರಿ ವೈದ್ಯರ ಖಾಸಗಿ ಪ್ರಾಕ್ಟೀಸ್‌’ಗೆ ಸರ್ಕಾರ ಬ್ರೇಕ್: 60 ದಿನಗಳಲ್ಲಿ ಮಾಹಿತಿ ನೀಡದಿದ್ದರೆ ಕಠಿಣ ಕ್ರಮದ ಎಚ್ಚರಿಕೆ!

29/03/2026 5:57 AM

2025ನೇ ಸಾಲಿನ `ಮುಖ್ಯಮಂತ್ರಿ ಪದಕ’ ಪ್ರಕಟ: ಪ್ರಜ್ವಲ್ ರೇವಣ್ಣ ಕೇಸ್ ತನಿಖೆ ನಡೆಸಿದ್ದ ಸುಮನ್ ಪನ್ನೇಕರ್‌ ಸೇರಿ ರಾಜ್ಯದ 153 ಅಧಿಕಾರಿ, ಸಿಬ್ಬಂದಿಗೆ ಗೌರವ !

29/03/2026 5:52 AM

IPL 2026 : ಚಿನ್ನಸ್ವಾಮಿಯಲ್ಲಿ ` ಕೊಹ್ಲಿ-ಪಡಿಕ್ಕಲ್’ ಅಬ್ಬರ : SRH ವಿರುದ್ಧ RCBಗೆ 6 ವಿಕೆಟ್‌ಗಳ ಭರ್ಜರಿ ಜಯ | WATCH VIDEO

29/03/2026 5:47 AM

ರಾಜ್ಯದ ಜನರೇ ಗಮನಿಸಿ : ಏ.1 ರಿಂದ ‘ಸ್ವಯಂ-ಗಣತಿ’ ಆರಂಭ, ಮನೆಯಲ್ಲೇ ಕುಳಿತು ಜಸ್ಟ್ ಈ ರೀತಿ ಮಾಹಿತಿ ಸಲ್ಲಿಸಿ!

29/03/2026 5:34 AM
State News
KARNATAKA

BIG NEWS: ರಾಜ್ಯದಲ್ಲಿ ‘ಸರ್ಕಾರಿ ವೈದ್ಯರ ಖಾಸಗಿ ಪ್ರಾಕ್ಟೀಸ್‌’ಗೆ ಸರ್ಕಾರ ಬ್ರೇಕ್: 60 ದಿನಗಳಲ್ಲಿ ಮಾಹಿತಿ ನೀಡದಿದ್ದರೆ ಕಠಿಣ ಕ್ರಮದ ಎಚ್ಚರಿಕೆ!

By kannadanewsnow0929/03/2026 5:57 AM KARNATAKA 2 Mins Read

ಬೆಂಗಳೂರು: ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರು ಮತ್ತು ಅರೆ ವೈದ್ಯಕೀಯ ಸಿಬ್ಬಂದಿ ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಕುರಿತು…

2025ನೇ ಸಾಲಿನ `ಮುಖ್ಯಮಂತ್ರಿ ಪದಕ’ ಪ್ರಕಟ: ಪ್ರಜ್ವಲ್ ರೇವಣ್ಣ ಕೇಸ್ ತನಿಖೆ ನಡೆಸಿದ್ದ ಸುಮನ್ ಪನ್ನೇಕರ್‌ ಸೇರಿ ರಾಜ್ಯದ 153 ಅಧಿಕಾರಿ, ಸಿಬ್ಬಂದಿಗೆ ಗೌರವ !

29/03/2026 5:52 AM

IPL 2026 : ಚಿನ್ನಸ್ವಾಮಿಯಲ್ಲಿ ` ಕೊಹ್ಲಿ-ಪಡಿಕ್ಕಲ್’ ಅಬ್ಬರ : SRH ವಿರುದ್ಧ RCBಗೆ 6 ವಿಕೆಟ್‌ಗಳ ಭರ್ಜರಿ ಜಯ | WATCH VIDEO

29/03/2026 5:47 AM

ರಾಜ್ಯದ ಜನರೇ ಗಮನಿಸಿ : ಏ.1 ರಿಂದ ‘ಸ್ವಯಂ-ಗಣತಿ’ ಆರಂಭ, ಮನೆಯಲ್ಲೇ ಕುಳಿತು ಜಸ್ಟ್ ಈ ರೀತಿ ಮಾಹಿತಿ ಸಲ್ಲಿಸಿ!

29/03/2026 5:34 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.