ಶಿವಮೊಗ್ಗ : ಮಹಿಳೆ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಸಬಲೀಕರಣವಾಗಬೇಕು. ಮಹಿಳೆಗೆ ಸಿಗಬೆಕಾದ ಸ್ಥಾನಮಾನ ಸೂಕ್ತವಾಗಿ ಸಿಗಬೇಕು ಎಲ್ಲಾ ಕ್ಷೇತ್ರಗಳಲ್ಲೂ ಯಶಸ್ವಿಯಾಗಿ ಮುನ್ನಡೆಯಬೇಕು ಎಂದು ವಿಧಾನ ಪರಿಷತ್ ಸದಸ್ಯೆ ಬಲ್ಕಿಶ್ ಬಾನು ಹೇಳಿದರು.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಕಾಂಗ್ರೇಸ್ ಕಚೇರಿಯಲ್ಲಿ ಮಹಿಳಾ ಕಾಂಗ್ರೇಸ್ ವತಯಿಂದ ಹಮ್ಮಿಕೊಳ್ಳಲಾಗಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದಂತ ಅವರು, ಮಹಿಳೆಯರು ಸ್ವಾಭಿಮಾನದ ಬದುಕು ನಡೆಸಲು ಬೇಕಾದ ವಾತಾವರಣ ಸಮಾಜ ನಿರ್ಮಾಣ ಮಾಡಿಕೊಟ್ಟಿದೆ. ಇನ್ನೂ ಹೆಚ್ಚು ಸಮಾಜದಿಂದ ನಿರೀಕ್ಷೆ ಮಾಡುವುದು ತಪ್ಪು. ಈಗಾಗಲೆ ಶೇ. 33 ಮೀಸಲಾತಿ ಮಹಿಳೆಯರಿಗೆ ನೀಡಿದ್ದರೂ ಅದರ ಪರಿಣಾಮಕಾರಿ ಅನುಷ್ಟಾನ ಶೀಘ್ರವಾಗಿ ಆಗಬೇಕು. ಮಹಿಳೆಯರಿಗೆ ಇನ್ನಷ್ಟು ಅವಕಾಶ ಗೌರವ ಸಿಗಬೇಕಾದರೆ ನಮ್ಮ ನಡೆನುಡಿ ಶುದ್ದವಾಗಿರಬೇಕು. ಸಮಾಜಮುಖಿ ಆಲೋಚನೆ ನಮ್ಮಿಂದ ಹೆಚ್ಚೆಚ್ಚು ಆಗಬೇಕು ಎಂದರು.
ದೇವರು ಪ್ರತ್ಯಕ್ಷನಾಗಿ ವರ ಕೊಡುವುದಿಲ್ಲ. ನಮಗೆ ಅನೇಕ ಅವಕಾಶಗಳನ್ನು ವರದ ರೂಪದಲ್ಲಿ ದೇವರು ನೀಡುತ್ತಾನೆ. ನಾವು ಅದನ್ನು ಸದ್ಭಳಕೆ ಮಾಡಿಕೊಳ್ಳಬೇಕು. ಪ್ರಗತಿ ಹಾದಿಯಲ್ಲಿ ನಾವು ಹೆಜ್ಜೆ ಹಾಕಬೇಕು. ಕಾಂಗ್ರೇಸ್ ಪಕ್ಷ ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಒತ್ತು ನೀಡಿದೆ. ರಾಜಕೀಯ ಕ್ಷೇತ್ರಕ್ಕೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕು. ತನ್ಮೂಲಕ ಕಾಂಗ್ರೇಸ್ ಪಕ್ಷವನ್ನು ಬಲಪಡಿಸಬೇಕು ಎಂದು ಹೇಳಿದರು.
ಮಹಿಳಾ ಕಾಂಗ್ರೇಸ್ ನಗರ ಘಟಕದ ಅಧ್ಯಕ್ಷೆ ಉಷಾ ಎನ್. ಮಾತನಾಡಿ, ಮಹಿಳಾ ದಿನಾಚರಣೆ ಮೂಲಕ ನಮ್ಮ ಆತ್ಮಾವಲೋಕನ ಮಾಡಿಕೊಳ್ಳುವ ಸದಾವಕಾಶ ಸಿಗುತ್ತದೆ. ಮಹಿಳೆಯರು ತಮ್ಮ ಸ್ವಸಾಮರ್ಥ್ಯದ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರುತ್ತಿರುವಾಗ ಅವರಿಗೆ ಸೂಕ್ತ ಸಹಕಾರ ನೀಡುವಂತಾಗಬೇಕು. ಮಹಿಳೆಯರಿಗೆ ಮಹಿಳೆಯರೆ ಶತೃ ಎನ್ನುವ ಶಬ್ದವನ್ನು ಸುಳ್ಳು ಮಾಡುವ ನಿಟ್ಟಿನಲ್ಲಿ ಮಹಿಳೆಯರು ಸ್ವಾಭಿಮಾನದ ಬದುಕು ನಡೆಸಬೇಕು. ಗ್ಯಾರಂಟಿ ಯೋಜನೆ ಮೂಲಕ ಮಹಿಳೆಯರು ರಾಜ್ಯದಲ್ಲಿ ಹೆಚ್ಚು ನೆಮ್ಮದಿಯಿಂದ ಇದ್ದಾರೆ ಎಂದು ತಿಳಿಸಿದರು.
ಈ ವೇಳೆ ಸಹಾಯಕ ಪ್ರಾಧ್ಯಾಪಕಿ ಡಾ. ಶುಭ ಮರವಂತೆ ಉಪನ್ಯಾಸ ನೀಡಿದರು. ವೇದಿಕೆಯಲ್ಲಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಪ್ರಭಾವತಿ ಚಂದ್ರಕಾಂತ್, ಶ್ವೇತಾ ಬಂಡಿ, ಸರಸ್ವತಿ ನಾಗರಾಜ್, ಮಧು ಮಾಲತಿ, ದೀಪಾ ಕಾಗೋಡು, ಉಷಾ ಸುರೇಶ್, ಎನ್.ಲಲಿತಮ್ಮ, ಸಿರಿಜಾನ್ ಆನಂದಪುರ, ಸದ್ದಾಂ ದೊಡ್ಮನೆ, ಕಲಸೆ ಚಂದ್ರಪ್ಪ, ಸುರೇಶ್ ಬಾಬು ಇನ್ನಿತರರು ಹಾಜರಿದ್ದರು.
‘ಸಾಗರ ಮಾರಿಕಾಂಬಾ ದೇವಿ ನ್ಯಾಸ’ಕ್ಕೆ ನೂತನ ಸಾರಥ್ಯ: ನಾಗರಾಜ್, ಆನಂದ್ ನೇತೃತ್ವದಲ್ಲಿ ಅಭಿವೃದ್ಧಿಯ ಹೊಸ ಸಂಕಲ್ಪ!
ಬೀದರ್ ನಲ್ಲಿ 40ನೇ ರಾಜ್ಯ ಪತ್ರಕರ್ತರ ಸಮ್ಮೇಳ: ಪೂರ್ವಭಾವಿ ಸಿದ್ಧತಾ ಸಭೆ ನಡೆಸಿದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ
ತರಗತಿಯಲ್ಲಿ ಮುಸ್ಲಿಂ ವಿದ್ಯಾರ್ಥಿಯನ್ನು ಟೆರರಿಸ್ಟ್ ಎಂದು ಕರೆದ ಪ್ರೊಫೆಸರ್ : ವಿಡಿಯೋ ವೈರಲ್ | WATCH VIDEO








