Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಡಿಸಿಎಂ DKS ಸಂಧಾನ ಯಶಸ್ವಿ, IPL ಟಿಕೆಟ್ ಕಗ್ಗಂಟು ಅಂತ್ಯ: ಶಾಸಕರಿಗೆ 2 ಟಿಕೆಟ್ ಕೊಡಲು KSCA ಒಪ್ಪಿಗೆ

27/03/2026 8:07 PM

ಕುಡಿಯುವ ನೀರಿನ ಸಮಸ್ಯೆಯಾದರೆ ಅಧಿಕಾರಿಗಳ ತಲೆದಂಡ: ಮದ್ದೂರು ಶಾಸಕ ಕೆ.ಎಂ‌.ಉದಯ್ ವಾರ್ನಿಂಗ್

27/03/2026 8:03 PM

ಪುರುಷರು ಮತ್ತು ಮಹಿಳೆಯರ ಲೈಂಗಿಕ ಜೀವನಕ್ಕೂ ವರದಾನ ಈ ಏಲಕ್ಕಿ!

27/03/2026 7:59 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಕುಡಿಯುವ ನೀರಿನ ಸಮಸ್ಯೆಯಾದರೆ ಅಧಿಕಾರಿಗಳ ತಲೆದಂಡ: ಮದ್ದೂರು ಶಾಸಕ ಕೆ.ಎಂ‌.ಉದಯ್ ವಾರ್ನಿಂಗ್
KARNATAKA

ಕುಡಿಯುವ ನೀರಿನ ಸಮಸ್ಯೆಯಾದರೆ ಅಧಿಕಾರಿಗಳ ತಲೆದಂಡ: ಮದ್ದೂರು ಶಾಸಕ ಕೆ.ಎಂ‌.ಉದಯ್ ವಾರ್ನಿಂಗ್

By kannadanewsnow0927/03/2026 8:03 PM

ಮಂಡ್ಯ : ಕುಡಿಯುವ ನೀರಿಗೆ ನಗರ ಸೇರಿದಂತೆ ಕ್ಷೇತ್ರದಲ್ಲಿ ಎಲ್ಲಿಯೂ ಸಮಸ್ಯೆ ಆಗದಂತೆ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಇಲ್ಲದಿದ್ದರೆ ಅಂತಹ ಅಧಿಕಾರಿಗಳ ವಿರುದ್ದ ನಿರ್ದಾಕ್ಷಿಣ್ಯವಾಗಿ ತಲೆದಂಡ ಮಾಡಲಾಗುವುದು ಎಂದು ಶಾಸಕ ಕೆ.ಎಂ.ಉದಯ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಮದ್ದೂರು ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಕುಡಿಯುವ ನೀರಿನ ಸಮಸ್ಯೆ ಸಂಬಂಧ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು.

ಬೇಸಿಗೆಯಲ್ಲಿ ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಆಗದಂತೆ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಸಮನ್ವಯತೆಯಿಂದ ಕೆಲಸ ಮಾಡಬೇಕು. ತಾಲೂಕಿನ ಕೆಲವು ಗ್ರಾಮಗಳಲ್ಲಿ ಸಾಕಷ್ಟು ಕುಡಿಯುವ ನೀರಿನ ಸಮಸ್ಯೆ ಕಂಡು ಬರುತ್ತಿದ್ದು, ಒಂದು ವಾರದೊಳಗೆ ಸಮಸ್ಯೆ ಬಗೆಹರಿಸಬೇಕೆಂದರು.

ಕೊಪ್ಪ, ಆತಗೂರು ಹಾಗೂ ಕಸಬಾ ಹೋಬಳಿಯ ಕೆಲವು ಗ್ರಾಮಗಳಲ್ಲಿ ಈಗಾಗಲೇ ಕುಡಿಯುವ ನೀರಿನ ಅಭಾವ ಕಂಡು ಬಂದಿದೆ. ಕೆಲ ಗ್ರಾಮಗಳ ಕೊಳವೆ ಬಾವಿಗಳಲ್ಲಿ ನೈಟ್ರೈಟ್, ಪ್ಲೋರೆಡ್ ಅಂಶ ಸೇರಿದಂತೆ ಕಲುಷಿತ ನೀರು ಬರುತ್ತಿದ್ದು, ಇದರಿಂದ ಜನರಿಗೆ ಅನಾರೋಗ್ಯದ ಸಮಸ್ಯೆ ಕಾಡುವ ಸಾಧ್ಯತೆ ಇದೆ ಹೀಗಾಗಿ ಮುಂದಾಗುವ ಅನಾಹುತಗಳಿಗೆ ಆಸ್ಪದ ನೀಡದಂತೆ ಅಧಿಕಾರಿಗಳು ಶುದ್ಧ ಕುಡಿಯುವ ನೀರು ಸರಬರಾಜು ಮಾಡಬೇಕು.

ಚೆಸ್ಕಾಂ ಸಹಾಯಕ ಅಭಿಯಂತರರು ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿದ್ದು, ಸಭೆಯಲ್ಲಿದ್ದ ಕಾರ್ಯಪಾಲಕ ಎಂಜಿನಿಯರ್ ಶಿವಕುಮಾರ್ ಅವರಿಗೆ ಇಂತಹ ಬೇಜವಾಬ್ದಾರಿ ಅಧಿಕಾರಿಗಳಿಗೆ ನೋಟಿಸ್ ನೀಡುವ ಜೊತೆಗೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.

ಕುಡಿಯುವ ನೀರಿಗೆ ಸಮಸ್ಯೆ ಇರುವ ಗ್ರಾಮಗಳಲ್ಲಿ ರೈತರಿಂದ ಹಾಗೂ ಖಾಸಗಿ ವ್ಯಕ್ತಿಗಳ ಕೊಳವೆ ಬಾವಿಗಳಿಂದ ಸಂಪರ್ಕ ಪಡೆದು ಕುಡಿಯುವ ನೀರಿಗೆ ಸಮಸ್ಯೆ ಆಗದಂತೆ ಪೂರೈಕೆ ಮಾಡಬೇಕು. ಈಗಾಗಲೇ ನೀರಿನ ಸಮಸ್ಯೆಯಾಗದಂತೆ ಅತ್ಯಗತ್ಯ ಇರುವ ಕಡೆಗಳಲ್ಲಿ ಕೊಳವೆ ಬಾವಿ ಕೊರೆಸಲಾಗಿದೆ. ಹೆಚ್ಚುವರಿ ಕೊಳವೆಬಾವಿ ಅವಶ್ಯಕತೆ ಇದ್ದಲ್ಲಿ ಕೊರೆಸಲು ಅನುದಾನದ ಕೊರತೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ತಾಲೂಕಿನ ಹಲವು ಗ್ರಾಮಗಳಲ್ಲಿ ಜೆಜೆಎಂ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳು ಅಪೂರ್ಣವಾಗಿವೆ ಅಂತಹ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಜೆಜೆಎಂ ಯೋಜನೆಯಡಿ ಅಪೂರ್ಣ ಕಾಮಗಾರಿಯನ್ನು ಪೂರ್ಣಗೊಳಿಸಲು ಸೂಚಿಸಲಾಗಿದ್ದು, ಮೂರು ತಿಂಗಳಲ್ಲಿ ಕಾಮಗಾರಿಗಳು ಪೂರ್ಣಗೊಳಿಸಬೇಕೆಂದು ತಾಕೀತು ಮಾಡಿದರು.

ಚೆಸ್ಕಾಂ ಅಧಿಕಾರಿಗಳಿಗೆ ಎಚ್ಚರಿಕೆ

ಬೇಸಿಗೆ ಕಾಲವಾದರಿಂದ ಕುಡಿಯುವ ನೀರು ಸರಬರಾಜು ಮಾಡಲು ವಿದ್ಯುತ್ ಅತ್ಯವಶ್ಯಕವಾಗಿರುವುದರಿಂದ ವಿದ್ಯುತ್ ಪರಿವರ್ತಕ ಹಾಗೂ ಅಗತ್ಯ ಸಹಕಾರ ಪಿಡಿಓಗಳಿಗೆ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ನೀಡುವ ಮೂಲಕ ಜನ ಸಾಮಾನ್ಯರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕೆಂದು ಶಾಸಕ ಉದಯ್ ಹೇಳಿದರು.

ಮೇವಿಗೆ ಕೊರತೆ ಇಲ್ಲ

ಕ್ಷೇತ್ರದಲ್ಲಿ ಬೇಸಿಗೆಗೆ ಜಾನುವಾರಗಳ ಮೇವಿಗೆ ಯಾವುದೇ ಕೊರತೆಯಾಗದಂತೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ ಎಂದರು.

ಸಭೆಯಲ್ಲಿ ತಹಶೀಲ್ದಾರ್ ಪರಶುರಾಮ್ ಸತ್ತಿಗೇರಿ, ತಾಪಂ ಇಓ ರಾಮಲಿಂಗಯ್ಯ, ನಗರಸಭೆ ಪೌರಯುಕ್ತೆ ಎಸ್.ಎನ್.ರಾಧಿಕಾ, ಚೆಸ್ಕಾಂ ಇಇ ಶಿವಕುಮಾರ್, ಗ್ರಾಮೀಣ ಕುಡಿಯುವ ನೀರು ಇಲಾಖೆ ಎಇಇ ಮಧುಸೂದನ್, ಬಿಇಓ ಧನಂಜಯ, ಟಿಎಚ್ಓ ರವಿಶಂಕರ್, ಆರ್‌ಎಫ್ಓ ಗವಿಯಪ್ಪ, ಸಿಡಿಪಿಓ ಅರುಣ್ ಕುಮಾರ್, ಪಶು ಇಲಾಖೆ ಸಹಾಯಕ ನಿರ್ದೇಶಕ ಗೋವಿಂದ್ ಹಾಗೂ ಗ್ರಾಪಂ ಆಡಳಿತಾಧಿಕಾರಿಗಳು, ತಾಲೂಕು ಮಟ್ಟದ ಅಧಿಕಾರಿಗಳು ಅಧಿಕಾರಿಗಳು, ಪಿಡಿಓಗಳು ಇದ್ದರು.

ವರದಿ : ಗಿರೀಶ್ ರಾಜ್, ಮಂಡ್ಯ

BREAKING: ಮಂಡ್ಯದ ಮದ್ದೂರು ಬಳಿ ಭೀಕರ ಅಪಘಾತ: 14 ಶಾಲಾ ಮಕ್ಕಳು ಸೇರಿದಂತೆ 6 ಮಂದಿಗೆ ಗಾಯ

Share. Facebook Twitter LinkedIn WhatsApp Email

Related Posts

ಡಿಸಿಎಂ DKS ಸಂಧಾನ ಯಶಸ್ವಿ, IPL ಟಿಕೆಟ್ ಕಗ್ಗಂಟು ಅಂತ್ಯ: ಶಾಸಕರಿಗೆ 2 ಟಿಕೆಟ್ ಕೊಡಲು KSCA ಒಪ್ಪಿಗೆ

27/03/2026 8:07 PM1 Min Read

ಪುರುಷರು ಮತ್ತು ಮಹಿಳೆಯರ ಲೈಂಗಿಕ ಜೀವನಕ್ಕೂ ವರದಾನ ಈ ಏಲಕ್ಕಿ!

27/03/2026 7:59 PM2 Mins Read

BREAKING: ಮಂಡ್ಯದ ಮದ್ದೂರು ಬಳಿ ಭೀಕರ ಅಪಘಾತ: 14 ಶಾಲಾ ಮಕ್ಕಳು ಸೇರಿದಂತೆ 6 ಮಂದಿಗೆ ಗಾಯ

27/03/2026 7:58 PM1 Min Read
Recent News

ಡಿಸಿಎಂ DKS ಸಂಧಾನ ಯಶಸ್ವಿ, IPL ಟಿಕೆಟ್ ಕಗ್ಗಂಟು ಅಂತ್ಯ: ಶಾಸಕರಿಗೆ 2 ಟಿಕೆಟ್ ಕೊಡಲು KSCA ಒಪ್ಪಿಗೆ

27/03/2026 8:07 PM

ಕುಡಿಯುವ ನೀರಿನ ಸಮಸ್ಯೆಯಾದರೆ ಅಧಿಕಾರಿಗಳ ತಲೆದಂಡ: ಮದ್ದೂರು ಶಾಸಕ ಕೆ.ಎಂ‌.ಉದಯ್ ವಾರ್ನಿಂಗ್

27/03/2026 8:03 PM

ಪುರುಷರು ಮತ್ತು ಮಹಿಳೆಯರ ಲೈಂಗಿಕ ಜೀವನಕ್ಕೂ ವರದಾನ ಈ ಏಲಕ್ಕಿ!

27/03/2026 7:59 PM

BREAKING: ಮಂಡ್ಯದ ಮದ್ದೂರು ಬಳಿ ಭೀಕರ ಅಪಘಾತ: 14 ಶಾಲಾ ಮಕ್ಕಳು ಸೇರಿದಂತೆ 6 ಮಂದಿಗೆ ಗಾಯ

27/03/2026 7:58 PM
State News
KARNATAKA

ಡಿಸಿಎಂ DKS ಸಂಧಾನ ಯಶಸ್ವಿ, IPL ಟಿಕೆಟ್ ಕಗ್ಗಂಟು ಅಂತ್ಯ: ಶಾಸಕರಿಗೆ 2 ಟಿಕೆಟ್ ಕೊಡಲು KSCA ಒಪ್ಪಿಗೆ

By kannadanewsnow0927/03/2026 8:07 PM KARNATAKA 1 Min Read

ಬೆಂಗಳೂರು: ಐಪಿಎಲ್ ಪಂದ್ಯಗಳ ವೀಕ್ಷಣೆಗೆ ಟಿಕೆಟ್ ಹಾಗೂ ಪಾಸ್‌ಗಳಿಗಾಗಿ ಶಾಸಕರು ಮತ್ತು ಕೆಎಸ್‌ಸಿಎ (KSCA) ನಡುವೆ ಉಂಟಾಗಿದ್ದ ಅಸಮಾಧಾನಕ್ಕೆ ಉಪಮುಖ್ಯಮಂತ್ರಿ…

ಕುಡಿಯುವ ನೀರಿನ ಸಮಸ್ಯೆಯಾದರೆ ಅಧಿಕಾರಿಗಳ ತಲೆದಂಡ: ಮದ್ದೂರು ಶಾಸಕ ಕೆ.ಎಂ‌.ಉದಯ್ ವಾರ್ನಿಂಗ್

27/03/2026 8:03 PM

ಪುರುಷರು ಮತ್ತು ಮಹಿಳೆಯರ ಲೈಂಗಿಕ ಜೀವನಕ್ಕೂ ವರದಾನ ಈ ಏಲಕ್ಕಿ!

27/03/2026 7:59 PM

BREAKING: ಮಂಡ್ಯದ ಮದ್ದೂರು ಬಳಿ ಭೀಕರ ಅಪಘಾತ: 14 ಶಾಲಾ ಮಕ್ಕಳು ಸೇರಿದಂತೆ 6 ಮಂದಿಗೆ ಗಾಯ

27/03/2026 7:58 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.