ಮಂಡ್ಯ : ಖಾಸಗಿ ಶಾಲೆ ಮತ್ತು ಖಾಸಗಿ ಬಸ್ ನಡುವೆ ಅಪಘಾತ ಸಂಭವಿಸಿದ್ದು, 14 ವಿದ್ಯಾರ್ಥಿಗಳು 6 ಮಂದಿಗೆ ಗಾಯಗೊಂಡಿರುವ ಘಟನೆ ಸೋಮನಹಳ್ಳಿ ಕೆಸ್ತೂರು ಅಡ್ಡರಸ್ತೆಯ ಅಡಿಗಾಸ್ ಹೋಟೆಲ್ ಬಳಿ ಶುಕ್ರವಾರ ಸಂಜೆ ಜರುಗಿದೆ.
ನಗರದ ಡಾ.ಶಾಂತಾ ಹೆಚ್.ಕೆ.ಮರಿಯಪ್ಪ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಾದ ಶಶಾಂಕ್ ಗೌಡ, ಹಿತಾ, ನಂದಿನಿ, ವಿಕ್ರಾಂತ್ ವಂದನಾ, ನಿಖಿತ್, ಮನ್ವಿತ್, ಹರ್ಷಿತಾ, ಹಾಗೂ ಸಾಹಿತ್ಯ ಗಾಯಗೊಂಡ ವಿದ್ಯಾರ್ಥಿಗಳಾಗಿದ್ದಾರೆ.
ಉದಯರಂಗ ಬಸ್ ನಲ್ಲಿದ್ದ ಸುಶೀಲಮ್ಮ, ಗೌರಮ್ಮ, ಶಿವರಾಂ, ಶೋಭಾ, ಶಿವಮಲ್ಲು, ಗಾಯಗೊಂಡ ವ್ಯಕ್ತಿ ಗಳಾಗಿದ್ದು, ವಿದ್ಯಾರ್ಥಿಗಳಾಗಿದ್ದು, ಪ್ರಯಾಣಿಕರು ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ವಿಕ್ರಾಂತ್, ಹರ್ಷಿತಾ ಸೇರಿದಂತೆ 6 ಮಂದಿ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.
ಎಂದಿನಂತೆ ಶಾಲೆಗೆ ಆಗಮಿಸಿದ್ದ ವಿದ್ಯಾರ್ಥಿಗಳು ಶಾಲೆ ಮುಗಿಸಿ ತಮ್ಮ ಗ್ರಾಮಗಳಿಗೆ ಶಾಲಾ ವಾಹನದ ಮೂಲಕ ತೆರಳುತ್ತಿದ ವೇಳೆ ಮದ್ದೂರು ಮಾರ್ಗವಾಗಿ ಆಗಮಿಸಿದ ಉದಯರಂಗ ಖಾಸಗಿ ಬಸ್ ಶಾಲಾ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.
ಕದಲೀಪುರ, ಹುಳಗನಹಳ್ಳಿ, ಹೆಮ್ಮನಹಳ್ಳಿ, ಗ್ರಾಮಗಳ ವಿದ್ಯಾರ್ಥಿಗಳನ್ನು ತಮ್ಮ ಗ್ರಾಮಕ್ಕೆ ಬಿಡಲು ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ. ಅಪಘಾತ ಸಂಭವಿಸಿದ ವಿಷಯ ತಿಳಿದು ಪೋಷಕರು ಆಸ್ಪತ್ರೆಗೆ ದೌಡಾಯಿಸಿ ತಮ್ಮ ಮಕ್ಕಳ ಆರೋಗ್ಯ ವಿಚಾರಿಸಿದರು.
ತಾಲೂಕು ಆಸ್ಪತ್ರೆಗೆ ಭೇಟಿ ನೀಡಿದ ಮಾಜಿ ಸಚಿವ ಡಿ.ಸಿ.ತಮ್ಮಣ್ಸ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ. ಶೋಭಾರಾಣಿ, ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ, ಡಿವೈಎಸ್ಪಿ ಯಶವಂತ್ ಕುಮಾರ್, ಬಿಇಓ ಧನಂಜಯ, ಕದಲೂರು ಉದಯ್ ಚಾರಿಟಬಲ್ ಟ್ರಸ್ಟಿ ಕೆ.ಎಂ.ರವಿ, ಶಾಲಾ ಆಡಳಿತ ಮಂಡಳಿಯ ಅಪೂರ್ವ ಚಂದ್ರು ಆಸ್ಪತ್ರೆಗೆ ಭೇಟಿ ಗಾಯಾಳುಗಳ ಆರೋಗ್ಯ ವಿಚಾರಿಸಿ ಧೈರ್ಯ ತುಂಬಿದರು.
ಮದ್ದೂರು ಸಂಚಾರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.
ವರದಿ : ಗಿರೀಶ್ ರಾಜ್, ಮಂಡ್ಯ
ನಾಳೆ ಬೆಂಗಳೂರಲ್ಲಿ ಐಪಿಎಲ್ ಪಂದ್ಯಾವಳಿ: 44 ಮೆಟ್ರೋ ನಿಲ್ದಾಣಗಳಲ್ಲಿ ಹೆಚ್ಚುವರಿ ಪಾರ್ಕಿಂಗ್ ವ್ಯವಸ್ಥೆ








