Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಹೊಸದಾಗಿ `PNG’ ಸಂಪರ್ಕ ಪಡೆಯುವವರಿಗೆ ಭರ್ಜರಿ ಗುಡ್ ನ್ಯೂಸ್ : ರೂ. 500 ವರೆಗೆ ಉಚಿತ ಗ್ಯಾಸ್, ಸೆಕ್ಯೂರಿಟಿ ಫೀಸ್ ಇಲ್ಲ!

27/03/2026 12:29 PM

ಸಾಗರ ಶ್ರೀ ಮಾರಿಕಾಂಬಾ ದೇವಿ ನ್ಯಾಸ ಚುನಾವಣೆ: ಅಧ್ಯಕ್ಷ ಸ್ಥಾನದ ಸ್ಪರ್ಧೆಯಿಂದ ಹಿಂದೆ ಸರಿದ ಟಿ.ವಿ ಪಾಂಡುರಂಗ

27/03/2026 12:29 PM

ALERT : `ಗ್ಯಾಸ್ ಸಿಲಿಂಡರ್’ ಬಳಸುವ ಮುನ್ನ ಎಚ್ಚರ : ತಪ್ಪದೇ ಈ ರೀತಿ ಚೆಕ್ ಮಾಡಿಕೊಳ್ಳಿ ಅದರ ‘ಎಕ್ಸ್‌ ಪೈರಿ ಡೇಟ್’!

27/03/2026 12:20 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸಾಗರ ಶ್ರೀ ಮಾರಿಕಾಂಬಾ ದೇವಿ ನ್ಯಾಸ ಚುನಾವಣೆ: ಅಧ್ಯಕ್ಷ ಸ್ಥಾನದ ಸ್ಪರ್ಧೆಯಿಂದ ಹಿಂದೆ ಸರಿದ ಟಿ.ವಿ ಪಾಂಡುರಂಗ
KARNATAKA

ಸಾಗರ ಶ್ರೀ ಮಾರಿಕಾಂಬಾ ದೇವಿ ನ್ಯಾಸ ಚುನಾವಣೆ: ಅಧ್ಯಕ್ಷ ಸ್ಥಾನದ ಸ್ಪರ್ಧೆಯಿಂದ ಹಿಂದೆ ಸರಿದ ಟಿ.ವಿ ಪಾಂಡುರಂಗ

By kannadanewsnow0927/03/2026 12:29 PM

ಶಿವಮೊಗ್ಗ: ಜಿಲ್ಲೆಯ ಸಾಗರ ತಾಲ್ಲೂಕಿನ ಸುಪ್ರಸಿದ್ಧ ಶ್ರೀ ಮಾರಿಕಾಂಬಾ ದೇವಿ ನ್ಯಾಸ ಪ್ರತಿಷ್ಠಾನದ ಅಧ್ಯಕ್ಷರ ಆಯ್ಕೆಗೆ ನಾಳೆ (ಶನಿವಾರ) ಚುನಾವಣೆ ನಡೆಯಲಿದ್ದು, ಇಡೀ ನಗರದ ಕುತೂಹಲ ಕೆರಳಿಸಿರುವ ಈ ಹೊತ್ತಿನಲ್ಲೇ ಹಿರಿಯ ಮುಖಂಡ ಟಿ.ವಿ. ಪಾಂಡುರಂಗ ಅವರು ಅಧ್ಯಕ್ಷ ಸ್ಥಾನದ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ.

​ಹಿರಿತನದ ಆಧಾರದಲ್ಲಿ ಆಯ್ಕೆಯಾಗುವ ಸಾಧ್ಯತೆ ಇತ್ತು

​ಮಾರಿ ಸಮಿತಿಯ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ್ದ ಟಿ.ವಿ. ಪಾಂಡುರಂಗ ಅವರು, ತಮ್ಮ ಹಿರಿತನದ ಆಧಾರದ ಮೇಲೆ ಪ್ರತಿಷ್ಠಾನದ ಅಧ್ಯಕ್ಷರಾಗಲಿದ್ದಾರೆ ಎಂಬ ದಟ್ಟವಾದ ವದಂತಿಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದ್ದವು. ಆದರೆ, ಈ ಎಲ್ಲಾ ಊಹಾಪೋಹಗಳಿಗೆ ಇಂದು ತೆರೆ ಬಿದ್ದಿದೆ.

​ಶಾಸಕ ಗೋಪಾಲಕೃಷ್ಣ ಬೇಳೂರು ಅವರಿಂದ ಅಧಿಕೃತ ಸ್ಪಷ್ಟನೆ

​ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಾಗರ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಅವರು, “ಟಿ.ವಿ. ಪಾಂಡುರಂಗ ಅವರು ಮಾರಿಕಾಂಬಾ ಸಮಿತಿ ಅಧ್ಯಕ್ಷ ಹುದ್ದೆಯ ಆಕಾಂಕ್ಷಿಯಲ್ಲ” ಎಂದು ಅಧಿಕೃತವಾಗಿ ಘೋಷಿಸಿದರು. ಪಾಂಡುರಂಗ ಅವರು ಈಗಾಗಲೇ ಸಾಗರದ ಮತ್ತೊಂದು ಪ್ರಮುಖ ಧಾರ್ಮಿಕ ಕೇಂದ್ರವಾದ ಮಹಾಗಣಪತಿ ದೇವಸ್ಥಾನದ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಮಾರಿಗುಡಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದಿಲ್ಲ ಎಂದು ಶಾಸಕರು ಸ್ಪಷ್ಟಪಡಿಸಿದರು.

​ನಾನು ಅಧ್ಯಕ್ಷರ ಹುದ್ದೆ ಆಕಾಂಕ್ಷಿ ಅಲ್ಲ: ಟಿ.ವಿ ಪಾಂಡುರಂಗ ಸ್ಪಷ್ಟನೆ

​ಈ ಕುರಿತು ಸ್ವತಃ ಸ್ಪಷ್ಟನೆ ನೀಡಿರುವ ಟಿ.ವಿ. ಪಾಂಡುರಂಗ ಅವರು, “ನಾನು ಮಾರಿಗುಡಿ ಸಮಿತಿ ಅಧ್ಯಕ್ಷ ಹುದ್ದೆಯ ಆಕಾಂಕ್ಷಿಯಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಹರಿದಾಡುತ್ತಿರುವ ಸುದ್ದಿಗಳು ಸತ್ಯಕ್ಕೆ ದೂರವಾದವುಗಳಾಗಿವೆ. ದೇವಿಯ ಸೇವೆಯೇ ನನಗೆ ಮುಖ್ಯವಾಗಿದ್ದು, ಆ ಹುದ್ದೆಯ ಮೇಲೆ ನನಗೆ ಯಾವುದೇ ಹಂಬಲವಿಲ್ಲ” ಎಂದು ತಿಳಿಸಿದ್ದಾರೆ.

​ನಾಳೆ ನಿರ್ಣಾಯಕ ಚುನಾವಣೆ

​ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಯೊಬ್ಬರು ಹಿಂದೆ ಸರಿದಿರುವುದರಿಂದ, ನಾಳೆ ನಡೆಯಲಿರುವ ಶ್ರೀ ಮಾರಿಕಾಂಬಾ ನ್ಯಾಸ ಪ್ರತಿಷ್ಠಾನದ ಅಧ್ಯಕ್ಷರ ಆಯ್ಕೆಯ ಪ್ರಕ್ರಿಯೆ ತೀವ್ರ ಕುತೂಹಲ ಮೂಡಿಸಿದೆ. ಇದರ ನಡುವೆ ಮಾರಿಗುಡಿ ಅಧ್ಯಕ್ಷರ ಹುದ್ದೆಯ ರೇಸಲ್ಲಿ ಹಾಲಿ ಅಧ್ಯಕ್ಷ ನಾಗೇಂದ್ರ, ಅತೀ ಹೆಚ್ಚು ಮತಗಳಿಂದ ಗೆಲುವು ಸಾಧಿಸಿರುವಂತ ಪುರುಷೋತ್ತಮ್ (ಪುಚ್ಚಿ), ಪವಿತ್ರ ನಾಗರಾಜ್, ಎಂ.ಡಿ ಆನಂದ್ ಹೆಸರುಗಳು ಮುಂಚೂಣಿಯಲ್ಲಿ ಇದ್ದಾವೆ.  ಮುಂದಿನ ಅಧ್ಯಕ್ಷ ಗಾದಿ ಯಾರಿಗೆ ಒಲಿಯಲಿದೆ ಎಂಬುದನ್ನು ನಾಳೆಯ ಚುನಾವಣೆ ನಿರ್ಧರಿಸಲಿದೆ.

ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು…

Share. Facebook Twitter LinkedIn WhatsApp Email

Related Posts

ಹೊಸದಾಗಿ `PNG’ ಸಂಪರ್ಕ ಪಡೆಯುವವರಿಗೆ ಭರ್ಜರಿ ಗುಡ್ ನ್ಯೂಸ್ : ರೂ. 500 ವರೆಗೆ ಉಚಿತ ಗ್ಯಾಸ್, ಸೆಕ್ಯೂರಿಟಿ ಫೀಸ್ ಇಲ್ಲ!

27/03/2026 12:29 PM2 Mins Read

ALERT : `ಗ್ಯಾಸ್ ಸಿಲಿಂಡರ್’ ಬಳಸುವ ಮುನ್ನ ಎಚ್ಚರ : ತಪ್ಪದೇ ಈ ರೀತಿ ಚೆಕ್ ಮಾಡಿಕೊಳ್ಳಿ ಅದರ ‘ಎಕ್ಸ್‌ ಪೈರಿ ಡೇಟ್’!

27/03/2026 12:20 PM2 Mins Read

ಬೆಂಗಳೂರಲ್ಲಿ ಬರ್ತ್ಡೇ ಪಾರ್ಟಿಗಾಗಿ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಸುಲಿಗೆ : ಐವರು ಆರೋಪಿಗಳು ಅರೆಸ್ಟ್!

27/03/2026 12:16 PM1 Min Read
Recent News

ಹೊಸದಾಗಿ `PNG’ ಸಂಪರ್ಕ ಪಡೆಯುವವರಿಗೆ ಭರ್ಜರಿ ಗುಡ್ ನ್ಯೂಸ್ : ರೂ. 500 ವರೆಗೆ ಉಚಿತ ಗ್ಯಾಸ್, ಸೆಕ್ಯೂರಿಟಿ ಫೀಸ್ ಇಲ್ಲ!

27/03/2026 12:29 PM

ಸಾಗರ ಶ್ರೀ ಮಾರಿಕಾಂಬಾ ದೇವಿ ನ್ಯಾಸ ಚುನಾವಣೆ: ಅಧ್ಯಕ್ಷ ಸ್ಥಾನದ ಸ್ಪರ್ಧೆಯಿಂದ ಹಿಂದೆ ಸರಿದ ಟಿ.ವಿ ಪಾಂಡುರಂಗ

27/03/2026 12:29 PM

ALERT : `ಗ್ಯಾಸ್ ಸಿಲಿಂಡರ್’ ಬಳಸುವ ಮುನ್ನ ಎಚ್ಚರ : ತಪ್ಪದೇ ಈ ರೀತಿ ಚೆಕ್ ಮಾಡಿಕೊಳ್ಳಿ ಅದರ ‘ಎಕ್ಸ್‌ ಪೈರಿ ಡೇಟ್’!

27/03/2026 12:20 PM

ಬೆಂಗಳೂರಲ್ಲಿ ಬರ್ತ್ಡೇ ಪಾರ್ಟಿಗಾಗಿ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಸುಲಿಗೆ : ಐವರು ಆರೋಪಿಗಳು ಅರೆಸ್ಟ್!

27/03/2026 12:16 PM
State News
KARNATAKA

ಹೊಸದಾಗಿ `PNG’ ಸಂಪರ್ಕ ಪಡೆಯುವವರಿಗೆ ಭರ್ಜರಿ ಗುಡ್ ನ್ಯೂಸ್ : ರೂ. 500 ವರೆಗೆ ಉಚಿತ ಗ್ಯಾಸ್, ಸೆಕ್ಯೂರಿಟಿ ಫೀಸ್ ಇಲ್ಲ!

By kannadanewsnow5727/03/2026 12:29 PM KARNATAKA 2 Mins Read

ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿಗಳ ನಡುವೆಯೂ ದೇಶದಲ್ಲಿ ಇಂಧನ ಪೂರೈಕೆಗೆ ಯಾವುದೇ ಅಡ್ಡಿಯಾಗದಂತೆ ಭಾರತ ಸರ್ಕಾರ ಮಹತ್ವದ…

ಸಾಗರ ಶ್ರೀ ಮಾರಿಕಾಂಬಾ ದೇವಿ ನ್ಯಾಸ ಚುನಾವಣೆ: ಅಧ್ಯಕ್ಷ ಸ್ಥಾನದ ಸ್ಪರ್ಧೆಯಿಂದ ಹಿಂದೆ ಸರಿದ ಟಿ.ವಿ ಪಾಂಡುರಂಗ

27/03/2026 12:29 PM

ALERT : `ಗ್ಯಾಸ್ ಸಿಲಿಂಡರ್’ ಬಳಸುವ ಮುನ್ನ ಎಚ್ಚರ : ತಪ್ಪದೇ ಈ ರೀತಿ ಚೆಕ್ ಮಾಡಿಕೊಳ್ಳಿ ಅದರ ‘ಎಕ್ಸ್‌ ಪೈರಿ ಡೇಟ್’!

27/03/2026 12:20 PM

ಬೆಂಗಳೂರಲ್ಲಿ ಬರ್ತ್ಡೇ ಪಾರ್ಟಿಗಾಗಿ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಸುಲಿಗೆ : ಐವರು ಆರೋಪಿಗಳು ಅರೆಸ್ಟ್!

27/03/2026 12:16 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.