ಬೆಂಗಳೂರು: ಸಿಲಿಕಾನ್ ಸಿಟಿಯ ಹೊರವಲಯದ ನೆಲಮಂಗಲದ ವೈದ್ಯಕೀಯ ಕಾಲೇಜೊಂದರಲ್ಲಿ ಸಿನಿಮಾ ಮಾದರಿಯ ನಾಟಕೀಯ ಘಟನೆಯೊಂದು ನಡೆದಿದ್ದು, ವಿದ್ಯಾರ್ಥಿನಿಗೆ ಬಹಿರಂಗವಾಗಿ ಪ್ರೇಮ ನಿವೇದನೆ ಮಾಡಿದ ಪ್ರೊಫೆಸರ್ ಒಬ್ಬರಿಗೆ ವಿದ್ಯಾರ್ಥಿಗಳು ಚಪ್ಪಲಿಯಿಂದ ಹಿಗ್ಗಾಮುಗ್ಗಾ ತಳಿಸಿದ ಘಟನೆ ನಡೆದಿದೆ.
ಕಾಲೇಜಿನ ಉಪನ್ಯಾಸದ ವೇಳೆ ಲ್ಯಾಪೆಲ್ ಮೈಕ್ರೊಫೋನ್ ಧರಿಸಿದ್ದ ಪ್ರೊಫೆಸರ್, ಹಠಾತ್ತನೆ ಪಾಠ ನಿಲ್ಲಿಸಿ “ನಮ್ಮ ಬ್ಯಾಚ್‌ನ ಅತ್ಯಂತ ಪ್ರಮುಖ ಹುಡುಗಿಯೊಬ್ಬಳಿಗೆ ನಾನು ಪ್ರಪೋಸ್ ಮಾಡಲು ಬಯಸುತ್ತೇನೆ” ಎಂದು ಹೇಳಿ ತನ್ನ ಪ್ರೇಮವನ್ನು ವ್ಯಕ್ತಪಡಿಸಿದ್ದಾರೆ. ಪ್ರೊಫೆಸರ್ ಅವರ ಈ ವರ್ತನೆಯಿಂದ ಆಘಾತಕ್ಕೊಳಗಾದ ವಿದ್ಯಾರ್ಥಿನಿ ತಕ್ಷಣವೇ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಇಡೀ ತರಗತಿಯ ಮುಂದೆಯೇ ವಾಗ್ವಾದ ನಡೆದಿದೆ.
⚠️ Ab@sive language in second video
A professor proposes to a student in the classroom of a medical college in Bengaluru. The girl takes objection
A few moments later, The girl & fellow students thr@sh the professor
— Veena Jain (@Vtxt21) March 26, 2026
ಜಗಳದ ವೇಳೆ ಪ್ರೊಫೆಸರ್ “ನೀನೇ ನನಗೆ ಐ ಲವ್ ಯು ಎಂದು ಹೇಳಿದ್ದೆ” ಎಂದು ಆರೋಪಿಸಿದ್ದು, ಇದನ್ನು ಸಾರಾಸಗಟಾಗಿ ನಿರಾಕರಿಸಿದ ವಿದ್ಯಾರ್ಥಿನಿ “ನಾನು ಎಂದೂ ಹಾಗೆ ಹೇಳಿಲ್ಲ, ಧೈರ್ಯವಿದ್ದರೆ ಪ್ರಾಂಶುಪಾಲರ ಬಳಿ ಹೋಗೋಣ ನಡೆ” ಎಂದು ಸವಾಲು ಹಾಕಿದ್ದಾರೆ. ತಾನು ಹೇಳುತ್ತಿರುವುದು ಸತ್ಯ ಮತ್ತು ಇದಕ್ಕೆ ಸಿಸಿಟಿವಿ ದೃಶ್ಯಾವಳಿಗಳ ಪುರಾವೆ ಇದೆ ಎಂದು ಪ್ರೊಫೆಸರ್ ವಾದಿಸಿದರೂ, ಕೂಡಲೇ ಆ ದೃಶ್ಯ ತೋರಿಸುವಂತೆ ವಿದ್ಯಾರ್ಥಿಗಳು ಪಟ್ಟು ಹಿಡಿದಾಗ ಪ್ರೊಫೆಸರ್ ಹಿಂದೇಟು ಹಾಕಿ ಜಾರಿಕೊಳ್ಳಲು ಯತ್ನಿಸಿದ್ದಾರೆ. ಇದರಿಂದ ಕೆರಳಿದ ವಿದ್ಯಾರ್ಥಿನಿ ಮತ್ತು ಆಕೆಯ ಸಹಪಾಠಿಗಳು ತರಗತಿಯಲ್ಲೇ ಪ್ರೊಫೆಸರ್ ಮೇಲೆ ಮುಗಿಬಿದ್ದು, ಚಪ್ಪಲಿ ಮತ್ತು ಕೈಗಳಿಂದ ಮನಬಂದಂತೆ ಥಳಿಸಿದ್ದಾರೆ.
ಘಟನೆ ತಿಳಿಯುತ್ತಿದ್ದಂತೆಯೇ ನೆಲಮಂಗಲ ಗ್ರಾಮಾಂತರ ಪೊಲೀಸರು ಕಾಲೇಜು ಕ್ಯಾಂಪಸ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಾಲೇಜು ಆಡಳಿತ ಮಂಡಳಿಯಿಂದ ವರದಿ ಕೇಳಿದ್ದಾರೆ. ಸದ್ಯಕ್ಕೆ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲವಾದರೂ, ದೂರು ಸಲ್ಲಿಕೆಯಾದ ನಂತರವಷ್ಟೇ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರೊಫೆಸರ್ ಅವರ ಈ ಅಶಿಸ್ತಿನ ವರ್ತನೆ ಹಾಗೂ ನಂತರ ನಡೆದ ಹಿಂಸಾಚಾರದ ಕುರಿತು ವೈದ್ಯಕೀಯ ಕಾಲೇಜು ಆಡಳಿತ ಮಂಡಳಿ ಇನ್ನು ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.
ರಾಜ್ಯದ ಜನತೆಗೆ ಮತ್ತೊಂದು ಗುಡ್ ನ್ಯೂಸ್: ಆಸ್ತಿ ತೆರಿಗೆ ಪಾವತಿಗೆ ಶೇ.5ರಷ್ಟು ರಿಯಾಯಿತಿ ಸೌಲಭ್ಯದ ಅವಧಿ ವಿಸ್ತರಣೆ
BREAKING : ಬೆಂಗಳೂರು ಕಾಲ್ತುಳಿತ ಸಂತ್ರಸ್ತರಿಗೆ ಗೌರವಾರ್ಥ 2026ರ ‘IPL ಉದ್ಘಾಟನಾ ಸಮಾರಂಭ’ ರದ್ದು!








