ಘಾಜಿಯಾಬಾದ್: ವಿಶ್ವದ ಅತ್ಯಂತ ಕಲುಷಿತ ನಗರ ಎಂದರೆ ತಕ್ಷಣ ನೆನಪಾಗುವುದು ದೆಹಲಿ. ಆದರೆ, ಸ್ವಿಟ್ಜರ್ಲೆಂಡ್ ಮೂಲದ ಐಕ್ಯೂಏರ್ (IQAir) ಸಂಸ್ಥೆ ಬಿಡುಗಡೆ ಮಾಡಿರುವ ‘2025ರ ಜಾಗತಿಕ ವಾಯು ಗುಣಮಟ್ಟ ವರದಿ’ಯಲ್ಲಿ (ಮಾರ್ಚ್ 24, 2026ರಂದು ಪ್ರಕಟಗೊಂಡಿದ್ದು) ಉತ್ತರ ಪ್ರದೇಶದ ಲೋನಿ (Loni) ನಗರವು ವಿಶ್ವದ ಅತ್ಯಂತ ಕಲುಷಿತ ನಗರವಾಗಿ ಹೊರಹೊಮ್ಮಿದೆ.
ಘಾಜಿಯಾಬಾದ್ ಜಿಲ್ಲೆಯ ಲೋನಿ ನಗರವು ಗಾಳಿಯಲ್ಲಿನ ಅತಿ ಸೂಕ್ಷ್ಮ ಕಣಗಳ (PM2.5) ಪ್ರಮಾಣದಲ್ಲಿ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ. ಇಲ್ಲಿನ ವಾಯುಮಾಲಿನ್ಯದ ಮಟ್ಟವು ವಿಶ್ವ ಆರೋಗ್ಯ ಸಂಸ್ಥೆ (WHO) ನಿಗದಿಪಡಿಸಿದ ಸುರಕ್ಷಿತ ಮಿತಿಗಿಂತ 22 ಪಟ್ಟಿಗೂ ಅಧಿಕವಾಗಿದೆ.ದೆಹಲಿಯು ವಿಶ್ವದ ಅತ್ಯಂತ ಕಲುಷಿತ ರಾಜಧಾನಿ ಎಂಬ ಪಟ್ಟವನ್ನು ಉಳಿಸಿಕೊಂಡಿದೆಯಾದರೂ, ನಗರಗಳ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ.
ಅಗ್ರ 10 ಕಲುಷಿತ ನಗರಗಳ ಪಟ್ಟಿಯಲ್ಲಿ ಭಾರತದ 5 ನಗರಗಳಿವೆ. ಲೋನಿ (1), ಬೈರ್ನಿಹತ್ (3-ಮೇಘಾಲಯ), ದೆಹಲಿ (4), ಘಾಜಿಯಾಬಾದ್ (7) ಮತ್ತು ಪಶ್ಚಿಮ ಬಂಗಾಳದ ಉಲಾ (10) ಅತ್ಯಂತ ಕೆಟ್ಟ ಗಾಳಿಯನ್ನು ಹೊಂದಿವೆ.
ಜಾಗತಿಕವಾಗಿ ಅತ್ಯಂತ ಕಲುಷಿತ ದೇಶಗಳ ಪಟ್ಟಿಯಲ್ಲಿ ಭಾರತವು 6ನೇ ಸ್ಥಾನದಲ್ಲಿದೆ. ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಕ್ರಮವಾಗಿ ಮೊದಲ ಎರಡು ಸ್ಥಾನಗಳನ್ನು ಪಡೆದಿವೆ.








