ನವದೆಹಲಿ: ಭವಿಷ್ಯ ನಿಧಿ ಸಂಸ್ಥೆಯಲ್ಲಿ (EPFO) ವರ್ಷಗಳಿಂದ ಕೊಳೆಯುತ್ತಿದ್ದ ‘ಹಕ್ಕು ಪಡೆಯದ’ (Unclaimed) ಬರೋಬ್ಬರಿ 10,181 ಕೋಟಿ ರೂಪಾಯಿ ಹಣವನ್ನು ಅಸಲಿ ವಾರಸುದಾರರಿಗೆ ತಲುಪಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಇದಕ್ಕಾಗಿ ಹೊಸ ‘ಆಟೋ-ಸೆಟಲ್ಮೆಂಟ್’ (Auto-Settlement) ತಂತ್ರಜ್ಞಾನವನ್ನು ಪರಿಚಯಿಸಲಾಗುತ್ತಿದ್ದು, ಇನ್ನು ಮುಂದೆ ಇನ್‌ಆಕ್ಟಿವ್ (Inactive) ಖಾತೆಗಳಲ್ಲಿರುವ ಹಣವು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆಯಾಗಲಿದೆ.
ಹಲವು ವರ್ಷಗಳಿಂದ ಕೆಲಸ ಬದಲಿಸಿದ ಅಥವಾ ನಿವೃತ್ತಿಯ ನಂತರ ಹಣ ಹಿಂಪಡೆಯದ ಲಕ್ಷಾಂತರ ಚಂದಾದಾರರಿಗೆ ಇದರಿಂದ ದೊಡ್ಡ ಮಟ್ಟದ ಲಾಭವಾಗಲಿದೆ.ಇಪಿಎಫ್‌ಒ ಅಂಕಿಅಂಶಗಳ ಪ್ರಕಾರ, ಸುಮಾರು 5 ಕೋಟಿಗೂ ಹೆಚ್ಚು ಇನ್‌ಆಕ್ಟಿವ್ ಖಾತೆಗಳಲ್ಲಿ 10,181 ಕೋಟಿ ರೂಪಾಯಿ ಬಾಕಿ ಉಳಿದಿದೆ. ಈ ಹಣವನ್ನು ವಿಲೇವಾರಿ ಮಾಡುವುದು ದಶಕಗಳಿಂದ ದೊಡ್ಡ ಸವಾಲಾಗಿತ್ತು.
ಹೊಸ ‘ಆಟೋ-ಸೆಟಲ್ಮೆಂಟ್’ ಫೀಚರ್ ಮೂಲಕ, ಸಿಸ್ಟಮ್ ತನ್ನಷ್ಟಕ್ಕೇ ಇನ್‌ಆಕ್ಟಿವ್ ಖಾತೆಗಳನ್ನು ಗುರುತಿಸುತ್ತದೆ. ಚಂದಾದಾರರ ಯುಎಎನ್ (UAN) ಸಂಖ್ಯೆಗೆ ಲಿಂಕ್ ಆಗಿರುವ ಕೆವೈಸಿ (KYC) ಮತ್ತು ಬ್ಯಾಂಕ್ ವಿವರಗಳನ್ನು ಪರಿಶೀಲಿಸಿ, ಯಾವುದೇ ಅರ್ಜಿ ಸಲ್ಲಿಸದೆಯೇ ಹಣವನ್ನು ವರ್ಗಾವಣೆ ಮಾಡುತ್ತದೆ.ನಿಮ್ಮ ಖಾತೆಯಲ್ಲಿ ಹಣವಿದ್ದು, ಅದು ಇನ್ನೂ ಬಂದಿಲ್ಲವೆಂದರೆ ನಿಮ್ಮ UAN ನಂಬರ್‌ಗೆ ಆಧಾರ್, ಪ್ಯಾನ್ ಮತ್ತು ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡುವುದು ಅತ್ಯಗತ್ಯ.
ಇನ್‌ಆಕ್ಟಿವ್ ಖಾತೆಗಳಲ್ಲಿರುವ ಹಣಕ್ಕೆ ಬಡ್ಡಿ ಸಿಗುವುದು ನಿಂತುಹೋಗಿತ್ತು. ಈಗ ಆಟೋ-ಸೆಟಲ್ಮೆಂಟ್ ಮೂಲಕ ಹಣ ಕೈ ಸೇರಿದರೆ, ಅದನ್ನು ಬೇರೆಡೆ ಹೂಡಿಕೆ ಮಾಡಲು ಚಂದಾದಾರರಿಗೆ ಅನುಕೂಲವಾಗಲಿದೆ.








