Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಅಸ್ಸಾಂ ರಾಷ್ಟ್ರೀಯ ಹೆದ್ದಾರಿಯಲ್ಲಿ ಆಂಬ್ಯುಲೆನ್ಸ್-ಟ್ರಕ್ ಮುಖಾಮುಖಿ ಡಿಕ್ಕಿ; ಮಗು ಸೇರಿ 7 ಮಂದಿ ದುರ್ಮರಣ | Accident

23/03/2026 12:26 PM

​ಮಾ.27ರಂದು ಸಾಗರದಲ್ಲಿ ‘ಆರ್‌ಬಿಡಿ ಕೋ-ಆಪರೇಟಿವ್ ಸೊಸೈಟಿ’ ಉದ್ಘಾಟನೆ: ಮಾಲೀಕ ಜಲೀಲ್

23/03/2026 12:15 PM

BREAKING : ಬೆಂಗಳೂರಲ್ಲಿ ಅಪ್ರಾಪ್ತೆ ಕತ್ತು ಸೀಳಿ ಹತ್ಯೆ ಕೇಸ್ : ಪರಾರಿಯಾಗಿದ್ದ ಆರೋಪಿ ಅಜ್ಮಿರ್ ನಲ್ಲಿ ಅರೆಸ್ಟ್!

23/03/2026 12:12 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ​ಮಾ.27ರಂದು ಸಾಗರದಲ್ಲಿ ‘ಆರ್‌ಬಿಡಿ ಕೋ-ಆಪರೇಟಿವ್ ಸೊಸೈಟಿ’ ಉದ್ಘಾಟನೆ: ಮಾಲೀಕ ಜಲೀಲ್
KARNATAKA

​ಮಾ.27ರಂದು ಸಾಗರದಲ್ಲಿ ‘ಆರ್‌ಬಿಡಿ ಕೋ-ಆಪರೇಟಿವ್ ಸೊಸೈಟಿ’ ಉದ್ಘಾಟನೆ: ಮಾಲೀಕ ಜಲೀಲ್

By kannadanewsnow0923/03/2026 12:15 PM

ಶಿವಮೊಗ್ಗ: ಜಿಲ್ಲೆಯ ಸಾಗರ ನಗರದ ಪ್ರತಿಷ್ಠಿತ ಆರ್‌ಬಿಡಿ ಬಿಲ್ಡರ್ಸ್‌ ಸಂಸ್ಥೆಯ ವತಿಯಿಂದ ನೂತನವಾಗಿ ಆರಂಭಿಸಲಾಗಿರುವ ‘ಆರ್‌ಬಿಡಿ ಕೋ-ಆಪರೇಟಿವ್ ಸೊಸೈಟಿ’ ಯ ಶುಭಾರಂಭ ಇದೇ ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ ಎಂದು ಸಂಸ್ಥೆಯ ಮಾಲೀಕರಾದ ಜಲೀಲ್ ತಿಳಿಸಿದ್ದಾರೆ.

​ಇಂದು ಸಾಗರದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಆರ್‌ಬಿಡಿ ಬಿಲ್ಡರ್ಸ್‌ ಸಂಸ್ಥೆಯ ಮೇಲೆ ಇಲ್ಲಿಯವರೆಗೆ ಸಾಗರ ತಾಲ್ಲೂಕಿನ ಜನತೆ ಇರಿಸಿರುವ ನಂಬಿಕೆ ಮತ್ತು ಪ್ರೀತಿ ಅಪಾರ. ಈ ಯಶಸ್ಸಿನ ಮುಂದುವರಿದ ಭಾಗವಾಗಿ ಸಾರ್ವಜನಿಕರಿಗೆ ಇನ  ನೆರವು ನೀಡುವ ಉದ್ದೇಶದಿಂದ ಈ ಸಹಕಾರ ಸಂಘವನ್ನು ಸ್ಥಾಪಿಸಲಾಗಿದೆ,” ಎಂದರು.

​RBD ಸೊಸೈಟಿಯ ಪ್ರಮುಖ ಉದ್ದೇಶಗಳು:

  • ​ವಸತಿ ಸೌಕರ್ಯ: ಜನರು ನಿವೇಶನ ಖರೀದಿಸಿ ಮನೆ ಕಟ್ಟಿಕೊಳ್ಳಲು ಒನ್-ಪಾಯಿಂಟ್ ಕಾಂಟ್ಯಾಕ್ಟ್ ಆಗಿ ಅಗತ್ಯವಿರುವ ಎಲ್ಲಾ ಕನ್ಸಲ್ಟೇಶನ್ ಮತ್ತು ಸಹಕಾರ ನೀಡಲಾಗುವುದು.
  • ​ಆರ್ಥಿಕ ನೆರವು: ದುಡಿಯುವ ವರ್ಗದವರಿಗೆ ಸರಿಯಾದ ಆರ್ಥಿಕ ಬೆಂಬಲ ಸಿಗುತ್ತಿಲ್ಲ ಎಂಬ ಕೊರತೆಯನ್ನು ನೀಗಿಸಲು ಬಿಸಿನೆಸ್ ಲೋನ್, ಪರ್ಸನಲ್ ಲೋನ್ ಮತ್ತು ಗೋಲ್ಡ್ ಲೋನ್ ಸೌಲಭ್ಯಗಳನ್ನು ನೀಡಲಾಗುವುದು.
  • ​ವಾಹನ ಸಾಲ: ಸಂಸ್ಥೆಯು ಮೋಟಾರ್ ಉದ್ಯಮದಲ್ಲಿಯೂ ತೊಡಗಿಸಿಕೊಂಡಿರುವುದರಿಂದ ವಾಹನ ಖರೀದಿಗೆ ಫೈನಾನ್ಸ್ ಸೌಲಭ್ಯವನ್ನು ಸುಲಭವಾಗಿ ಒದಗಿಸಲಾಗುವುದು.

​‘ಎಲ್ಲರೂ ಪ್ರತಿಯೊಬ್ಬರಿಗಾಗಿ, ಪ್ರತಿಯೊಬ್ಬರು ಎಲ್ಲರಿಗಾಗಿ’ ಎಂಬ ಸಹಕಾರ ತತ್ವದಡಿ ಈ ಸಂಸ್ಥೆಯು ಕಾರ್ಯನಿರ್ವಹಿಸಲಿದೆ. ಕಾರ್ಯಕ್ರಮದ ಆಮಂತ್ರಣ ಪತ್ರಿಕೆಗಳನ್ನು ಸಿದ್ಧಪಡಿಸಲಾಗಿದ್ದು, ಒಂದು ವೇಳೆ ಯಾರಾದರೂ ತಲುಪಲು ಸಾಧ್ಯವಾಗದಿದ್ದರೆ ಅನ್ಯಥಾ ಭಾವಿಸದೆ ಸಾಗರದ ಜನತೆ ಮತ್ತು ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ನೂತನ ಉದ್ಯಮವನ್ನು ಹರಸಬೇಕು ಎಂದು ಜಲೀಲ್ ಅವರು ಈ ಮೂಲಕ ಮನವಿ ಮಾಡಿದ್ದಾರೆ.

ಆರ್‌ಬಿಡಿ ಸಹಕಾರ ಸಂಘದಿಂದ ಆಕರ್ಷಕ ಉಳಿತಾಯ ಯೋಜನೆಗಳ ಘೋಷಣೆ

​ಇನ್ನೂ ಸಹಕಾರ ಸಂಘದ ಅಧ್ಯಕ್ಷ ಮಹಾಬಲೇಶ್ವರ ಎಂ ಶೆಟ್ಟಿ ಮಾತನಾಡಿ, ಸಾಗರದ ಗ್ರಾಹಕರಿಗೆ ಬ್ಯಾಂಕುಗಳಿಗಿಂತಲೂ ಹೆಚ್ಚಿನ ಬಡ್ಡಿ ದರ ಹಾಗೂ ಉತ್ತಮ ಉಳಿತಾಯ ಯೋಜನೆಗಳನ್ನು ನೀಡುವ ಉದ್ದೇಶದೊಂದಿಗೆ ಆರ್‌ಬಿಡಿ (RBD) ಸಹಕಾರ ಸಂಘ ಹೊಸ ಹೆಜ್ಜೆ ಇಟ್ಟಿದೆ ಎಂದು ತಿಳಿಸಿದರು.

​ಉಳಿತಾಯ ಯೋಜನೆಗಳ ಮುಖ್ಯಾಂಶಗಳು:

  • ​ಹೆಚ್ಚಿನ ಬಡ್ಡಿ ದರ: ಸಾಮಾನ್ಯ ಬ್ಯಾಂಕ್ ಹಾಗೂ ಇತರ ಸಹಕಾರ ಸಂಘಗಳಿಗಿಂತಲೂ ಆರ್‌ಬಿಡಿ ಸಂಘವು ಉಳಿತಾಯ ಖಾತೆ, ಎಫ್.ಡಿ (FD) ಮತ್ತು ಆರ್.ಡಿ (RD) ಯೋಜನೆಗಳ ಮೇಲೆ ಆಕರ್ಷಕ ಬಡ್ಡಿ ದರವನ್ನು ನೀಡುತ್ತಿದೆ.
  • ​ಹಿರಿಯ ನಾಗರಿಕರಿಗೆ ಆದ್ಯತೆ: ಹಿರಿಯ ನಾಗರಿಕರಿಗೆ ಸಾಮಾನ್ಯ ದರಕ್ಕಿಂತ ಶೇ. 0.5ರಷ್ಟು ಹೆಚ್ಚಿನ ಬಡ್ಡಿಯನ್ನು ನೀಡುವ ಮೂಲಕ ಆರ್ಥಿಕ ಭದ್ರತೆ ನೀಡಲು ಮುಂದಾಗಿದೆ.
  • ​ವೈವಿಧ್ಯಮಯ ಸಾಲ ಸೌಲಭ್ಯ: ಈಗಾಗಲೇ ಬಿಸಿನೆಸ್ ಲೋನ್ ನೀಡುತ್ತಿದ್ದು, ಮುಂಬರುವ ದಿನಗಳಲ್ಲಿ ಸ್ವ-ಸಹಾಯ ಸಂಘಗಳಿಗೆ ಸಾಲ, ‘ಈಸಿ ಮನಿ’ (ತಕ್ಷಣದ ಹಣಕಾಸು ನೆರವು) ನಂತಹ ಯೋಜನೆಗಳನ್ನು ಜಾರಿಗೆ ತರಲಾಗುವುದು.
  • ​ಸ್ಥಿರಾಸ್ತಿ ಮತ್ತು ಉಳಿತಾಯದ ಸಮನ್ವಯ: ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಆರ್‌ಬಿಡಿ ಸಂಸ್ಥೆಯು, ತನ್ನ 2,000ಕ್ಕೂ ಹೆಚ್ಚು ಗ್ರಾಹಕರ ನೆಟ್ವರ್ಕ್ ಮೂಲಕ ಉಳಿತಾಯ ಯೋಜನೆಗಳನ್ನು ಪ್ರಚುರಪಡಿಸುತ್ತಿದೆ.

​ನಮ್ಮ ಸಂಘವು ಗ್ರಾಹಕ ಸ್ನೇಹಿ ಯೋಜನೆಗಳನ್ನು ರೂಪಿಸಿದ್ದು, ಉಳಿತಾಯವನ್ನು ಉತ್ತೇಜಿಸುವುದೇ ನಮ್ಮ ಪ್ರಮುಖ ಗುರಿ. ಸಂಘದ ಬ್ರೋಷರ್‌ಗಳನ್ನು ಈಗಾಗಲೇ ಬಿಡುಗಡೆ ಮಾಡಲಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಸಾರ್ವಜನಿಕರು ಸಂಘವನ್ನು ಸಂಪರ್ಕಿಸಬಹುದು ಎಂದು ಮಹಾಬಲೇಶ್ವರ ಎಂ. ಶೆಟ್ಟಿ ಈ ಸಂದರ್ಭದಲ್ಲಿ ತಿಳಿಸಿದರು.

ಈ ಸುದ್ದಿಗೋಷ್ಠಿಯ ವೇಳೆಯಲ್ಲಿ ಆರ್ ಬಿ ಡಿ ಸೌಹಾರ್ದ ಸಹಕಾರ ಸಂಘ ನಿರ್ದೇಶಕರಾದ ಶ್ರೀಧರ್, ಜಗದೀಶ್ ನಾಯ್ಕ್, ಶ್ರೀಕಾಂತ್, ಮ್ಯಾನೇಜರ್ ಅನಿಲ್, ಗಣೇಶ್ ಶೆಟ್ಟಿ ಉಪಸ್ಥಿತರಿದ್ದರು.

ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು…

Share. Facebook Twitter LinkedIn WhatsApp Email

Related Posts

BREAKING : ಬೆಂಗಳೂರಲ್ಲಿ ಅಪ್ರಾಪ್ತೆ ಕತ್ತು ಸೀಳಿ ಹತ್ಯೆ ಕೇಸ್ : ಪರಾರಿಯಾಗಿದ್ದ ಆರೋಪಿ ಅಜ್ಮಿರ್ ನಲ್ಲಿ ಅರೆಸ್ಟ್!

23/03/2026 12:12 PM1 Min Read

BREAKING : ರಾಜ್ಯದಲ್ಲಿ ಒಂದೇ ದಿನ 2 ಡಿಜಿಟಲ್ ಅರೆಸ್ಟ್ ಕೇಸ್ : ಇಬ್ಬರು ವೃದ್ಧರಿಂದ 20 ಕೋಟಿ ದೋಚಿದ ಸೈಬರ್ ವಂಚಕರು!

23/03/2026 11:57 AM2 Mins Read

BREAKING : ರಾಜ್ಯದ ಜನತೆಗೆ ಗುಡ್ ನ್ಯೂಸ್ : ಕೇಂದ್ರದಿಂದ ಪ್ರತಿನಿತ್ಯ 10 ಸಾವಿರ ಸಿಲಿಂಡರ್ ಪೂರೈಕೆ : ಕೆ.ಎಚ್ ಮುನಿಯಪ್ಪ

23/03/2026 11:28 AM1 Min Read
Recent News

ಅಸ್ಸಾಂ ರಾಷ್ಟ್ರೀಯ ಹೆದ್ದಾರಿಯಲ್ಲಿ ಆಂಬ್ಯುಲೆನ್ಸ್-ಟ್ರಕ್ ಮುಖಾಮುಖಿ ಡಿಕ್ಕಿ; ಮಗು ಸೇರಿ 7 ಮಂದಿ ದುರ್ಮರಣ | Accident

23/03/2026 12:26 PM

​ಮಾ.27ರಂದು ಸಾಗರದಲ್ಲಿ ‘ಆರ್‌ಬಿಡಿ ಕೋ-ಆಪರೇಟಿವ್ ಸೊಸೈಟಿ’ ಉದ್ಘಾಟನೆ: ಮಾಲೀಕ ಜಲೀಲ್

23/03/2026 12:15 PM

BREAKING : ಬೆಂಗಳೂರಲ್ಲಿ ಅಪ್ರಾಪ್ತೆ ಕತ್ತು ಸೀಳಿ ಹತ್ಯೆ ಕೇಸ್ : ಪರಾರಿಯಾಗಿದ್ದ ಆರೋಪಿ ಅಜ್ಮಿರ್ ನಲ್ಲಿ ಅರೆಸ್ಟ್!

23/03/2026 12:12 PM

ರೂಪಾಯಿ ಮೌಲ್ಯ ಪಾತಾಳಕ್ಕೆ: ಇತಿಹಾಸದಲ್ಲೇ ಮೊದಲ ಬಾರಿಗೆ ಡಾಲರ್ ಎದುರು 93.94ಕ್ಕೆ ಕುಸಿತ

23/03/2026 12:12 PM
State News
KARNATAKA

​ಮಾ.27ರಂದು ಸಾಗರದಲ್ಲಿ ‘ಆರ್‌ಬಿಡಿ ಕೋ-ಆಪರೇಟಿವ್ ಸೊಸೈಟಿ’ ಉದ್ಘಾಟನೆ: ಮಾಲೀಕ ಜಲೀಲ್

By kannadanewsnow0923/03/2026 12:15 PM KARNATAKA 2 Mins Read

ಶಿವಮೊಗ್ಗ: ಜಿಲ್ಲೆಯ ಸಾಗರ ನಗರದ ಪ್ರತಿಷ್ಠಿತ ಆರ್‌ಬಿಡಿ ಬಿಲ್ಡರ್ಸ್‌ ಸಂಸ್ಥೆಯ ವತಿಯಿಂದ ನೂತನವಾಗಿ ಆರಂಭಿಸಲಾಗಿರುವ ‘ಆರ್‌ಬಿಡಿ ಕೋ-ಆಪರೇಟಿವ್ ಸೊಸೈಟಿ’ ಯ…

BREAKING : ಬೆಂಗಳೂರಲ್ಲಿ ಅಪ್ರಾಪ್ತೆ ಕತ್ತು ಸೀಳಿ ಹತ್ಯೆ ಕೇಸ್ : ಪರಾರಿಯಾಗಿದ್ದ ಆರೋಪಿ ಅಜ್ಮಿರ್ ನಲ್ಲಿ ಅರೆಸ್ಟ್!

23/03/2026 12:12 PM

BREAKING : ರಾಜ್ಯದಲ್ಲಿ ಒಂದೇ ದಿನ 2 ಡಿಜಿಟಲ್ ಅರೆಸ್ಟ್ ಕೇಸ್ : ಇಬ್ಬರು ವೃದ್ಧರಿಂದ 20 ಕೋಟಿ ದೋಚಿದ ಸೈಬರ್ ವಂಚಕರು!

23/03/2026 11:57 AM

BREAKING : ರಾಜ್ಯದ ಜನತೆಗೆ ಗುಡ್ ನ್ಯೂಸ್ : ಕೇಂದ್ರದಿಂದ ಪ್ರತಿನಿತ್ಯ 10 ಸಾವಿರ ಸಿಲಿಂಡರ್ ಪೂರೈಕೆ : ಕೆ.ಎಚ್ ಮುನಿಯಪ್ಪ

23/03/2026 11:28 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.