ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ತಾಲೂಕಿನ ವೆಂಕಟರಾಯನಕೋಟೆ ಗ್ರಾಮದಲ್ಲಿ ಭಯಾನಕ ಘಟನೆಯೊಂದು ನಡೆದಿದ್ದು, ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿಯೊಬ್ಬಳು ಮಲಗಿದ್ದ ಪತಿಯ ಮರ್ಮಾಂಗಕ್ಕೆ ಒದ್ದು ತೀವ್ರವಾಗಿ ಹಲ್ಲೆ ನಡೆಸಿದ್ದಾಳೆ.
ಘಟನೆಯ ವಿವರ: ವೆಂಕಟರಾಯನಕೋಟೆ ಗ್ರಾಮದ ದಂಪತಿಗಳು ಕಳೆದ ಒಂದು ವರ್ಷದ ಹಿಂದೆಯಷ್ಟೇ ಪ್ರೀತಿಸಿ ವಿವಾಹವಾಗಿದ್ದರು. ಆದರೆ, ಮದುವೆಯಾದ ಕೆಲವು ಸಮಯದ ನಂತರ ಪತ್ನಿ ವಿಚಿತ್ರವಾಗಿ ವರ್ತಿಸಲು ಪ್ರಾರಂಭಿಸಿದ್ದಳು ಎನ್ನಲಾಗಿದೆ. ವಿನಾಕಾರಣ ಪತಿಯೊಂದಿಗೆ ಜಗಳ ತೆಗೆಯುತ್ತಿದ್ದ ಆಕೆ, ಘಟನೆ ನಡೆದ ದಿನದಂದು ಬೆಳಿಗ್ಗೆ ಪತಿಯ ಬಟ್ಟೆಗಳನ್ನು ಹರಿದು ಹಾಕಿ ದೊಡ್ಡ ಗಲಾಟೆ ಮಾಡಿದ್ದಳು.
ಮಧ್ಯರಾತ್ರಿ ಕೃತ್ಯ: ಬೆಳಿಗ್ಗೆ ನಡೆದ ಜಗಳದ ಬಳಿಕ ಪತಿ ರಾತ್ರಿ ಮಲಗಿದ್ದಾಗ, ಪತ್ನಿ ಆತನ ಮರ್ಮಾಂಗಕ್ಕೆ ಬಲವಾಗಿ ಒದ್ದಿದ್ದಾಳೆ. ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡ ಪತಿ, ತಾನೇ ಆಂಬುಲೆನ್ಸ್‌ಗೆ ಕರೆ ಮಾಡಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಆಸ್ಪತ್ರೆಯಲ್ಲಿ ಹೈಡ್ರಾಮಾ: ಪತಿ ಆಸ್ಪತ್ರೆಗೆ ದಾಖಲಾದ ವಿಷಯ ತಿಳಿದು ಮರುದಿನ ಬೆಳಿಗ್ಗೆ ಪತ್ನಿ ಆತನನ್ನು ನೋಡಲು ಬಂದಿದ್ದಾಳೆ. ಆದರೆ, ಪತಿಯ ಕುಟುಂಬಸ್ಥರು ಆಕೆಯನ್ನು ಒಳಗೆ ಬಿಡಲು ನಿರಾಕರಿಸಿದ್ದಾರೆ. ಅಲ್ಲದೆ, ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರಿಗೆ ದೂರು ನೀಡಿರುವುದನ್ನು ತಿಳಿದ ಮಹಿಳೆ, ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಅಸ್ವಸ್ಥಗೊಂಡ ಆಕೆಯನ್ನು ಕೂಡಲೇ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಪ್ರಸ್ತುತ ಪತಿ ಮತ್ತು ಪತ್ನಿ ಇಬ್ಬರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪೊಲೀಸರು ಪ್ರಕರಣದ ತನಿಖೆಯನ್ನು ಮುಂದುವರಿಸಿದ್ದಾರೆ.
ಶೀಘ್ರದಲ್ಲೇ ‘ಲಕ್ಕಿ ಡ್ರಾ ಬಹುಮಾನ’ ಘೋಷಣೆ ದಿನಾಂಕ ಪ್ರಕಟ: ‘ರಿಪ್ಪನ್ ಪೇಟೆ ಕಲಾಕೌಸ್ತುಭ ಕನ್ನಡ ಸಂಘ’ ಸ್ಪಷ್ಟನೆ
ಅಮೆರಿಕಕ್ಕೆ ಬಿಗ್ ಶಾಕ್: ಇರಾನ್ ನಡೆಸಿದ ಪ್ರತಿದಾಳಿಗೆ US ನ 6,700 ಕೋಟಿ ರೂ. ಮೌಲ್ಯದ ಆಸ್ತಿ ಪಾಸ್ತಿ ನಾಶ!








