ಬೆಂಗಳೂರು: ರಾಜಧಾನಿಯ ಚಂದ್ರಾ ಲೇಔಟ್ ವ್ಯಾಪ್ತಿಯಲ್ಲಿ ವಿವಾಹಿತ ಮಹಿಳೆಯೊಬ್ಬರನ್ನು ಪರಿಚಿತ ವ್ಯಕ್ತಿಯೇ ಡ್ಯಾಗರ್ನಿಂದ ಇರಿದು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಮೃತ ಮಹಿಳೆಯನ್ನು ಗಂಗೊಂಡನಹಳ್ಳಿಯ ನಿವಾಸಿ ಫಿರ್ದೋಸ್ ಬಾನು ಎಂದು ಗುರುತಿಸಲಾಗಿದೆ.
ಘಟನೆಯ ಹಿನ್ನೆಲೆ:
ಪ್ರಾಥಮಿಕ ಮಾಹಿತಿಯ ಪ್ರಕಾರ, ಫಿರ್ದೋಸ್ ಬಾನು ಮತ್ತು ಆರೋಪಿ ಮೊದಲೇ ಪರಿಚಿತರಾಗಿದ್ದರು. ಇತ್ತೀಚಿನ ದಿನಗಳಲ್ಲಿ ಫಿರ್ದೋಸ್ ಆ ವ್ಯಕ್ತಿಯನ್ನು ನಿರ್ಲಕ್ಷಿಸುತ್ತಿದ್ದರು ಎನ್ನಲಾಗಿದೆ. ಘಟನೆಯ ದಿನ ಫಿರ್ದೋಸ್ ಬಳಿ ಬಂದ ಆರೋಪಿಯು, “ಇಷ್ಟು ದಿನ ಸಂಪರ್ಕದಲ್ಲಿದ್ದು, ಈಗ ನನ್ನನ್ನು ಯಾಕೆ ಅವಾಯ್ಡ್ ಮಾಡುತ್ತಿದ್ದೀಯಾ?” ಎಂದು ಕಿರಿಕ್ ತೆಗೆದಿದ್ದಾನೆ.
ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿದಾಗ, ಆಕ್ರೋಶಗೊಂಡ ಆರೋಪಿಯು ತನ್ನ ಬಳಿಯಿದ್ದ ಡ್ಯಾಗರ್ನಿಂದ ಫಿರ್ದೋಸ್ ಅವರ ಹೊಟ್ಟೆ, ತೊಡೆ ಮತ್ತು ಕೈಗಳಿಗೆ ಮನಬಂದಂತೆ ಇರಿದಿದ್ದಾನೆ. ತೀವ್ರ ರಕ್ತಸ್ರಾವಕ್ಕೊಳಗಾದ ಫಿರ್ದೋಸ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಪೊಲೀಸ್ ತನಿಖೆ:
ಘಟನೆ ನಡೆದ ತಕ್ಷಣ ಚಂದ್ರಾ ಲೇಔಟ್ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತಲೆಮರೆಸಿಕೊಂಡಿರುವ ಆರೋಪಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.
BREAKING: ರಾಜ್ಯದಲ್ಲಿ ಯುಗಾದಿ ಹಬ್ಬದ ದಿನವೇ ಘೋರ ಘಟನೆ: ರೀಲ್ಸ್ ಹುಚ್ಚಾಟಕ್ಕೆ ಬಿಜೆಪಿ ಪುತ್ರ ಬಲಿ
ಸಾಗರ ‘ತಹಶೀಲ್ದಾರ್ ಕಚೇರಿ’ಯಲ್ಲಿ ನಕಲಿ ದಾಖಲೆ ಸೃಷ್ಟಿ ಜಾಲ ಬಯಲು: ಆರು ಜನರ ವಿರುದ್ಧ ‘FIR’ ದಾಖಲು








