ಬೆಂಗಳೂರು: ಇಂದಿನ ಅವಸರದ ಜೀವನಶೈಲಿಯಲ್ಲಿ ನಾವು ನಮ್ಮ ದೇಹದ ಬಗ್ಗೆ ಕಾಳಜಿ ವಹಿಸುವುದು ಮರೆಯುತ್ತಿದ್ದೇವೆ. ಆರೋಗ್ಯವಾಗಿರಲು ಕೇವಲ ಉತ್ತಮ ಆಹಾರ ಸೇವಿಸಿದರೆ ಸಾಲದು, ನಮ್ಮ ಎತ್ತರಕ್ಕೆ ಅನುಗುಣವಾದ ಸರಿಯಾದ ತೂಕವನ್ನು ಹೊಂದಿರುವುದು ಅತಿ ಮುಖ್ಯ. ತೂಕ ಹೆಚ್ಚಾದರೂ ಕಷ್ಟ, ತೀರಾ ಕಡಿಮೆಯಾದರೂ ಕಷ್ಟ. ಹಾಗಾದರೆ ಯಾವ ಎತ್ತರಕ್ಕೆ ಎಷ್ಟು ತೂಕವಿರಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ.
ಬಾಡಿ ಮಾಸ್ ಇಂಡೆಕ್ಸ್ (BMI) ಎಂದರೇನು?
ವೈದ್ಯಕೀಯ ಲೋಕದಲ್ಲಿ ಒಬ್ಬ ವ್ಯಕ್ತಿ ಆರೋಗ್ಯಕರವಾಗಿದ್ದಾನೆಯೇ ಎಂದು ತಿಳಿಯಲು BMI (Body Mass Index) ಅನ್ನು ಬಳಸಲಾಗುತ್ತದೆ. ವ್ಯಕ್ತಿಯ ತೂಕವನ್ನು (ಕೆಜಿಗಳಲ್ಲಿ), ಅವರ ಎತ್ತರದ (ಮೀಟರ್ಗಳಲ್ಲಿ) ವರ್ಗದಿಂದ ಭಾಗಿಸಿದಾಗ ಸಿಗುವ ಮೊತ್ತವೇ ಬಿಎಂಐ.
ವಯಸ್ಸಿನ ಆಧಾರದಲ್ಲಿ ಮಕ್ಕಳ ತೂಕ ಎಷ್ಟಿರಬೇಕು?
ಮಗು ಜನಿಸಿದಾಗಿನಿಂದ ಬೆಳೆಯುವ ಹಂತದವರೆಗೆ ತೂಕದ ಮೇಲೆ ನಿಗಾ ಇಡುವುದು ಅವಶ್ಯಕ:
ನವಜಾತ ಶಿಶು: ಗಂಡು ಮಗು 3.3 ಕೆಜಿ, ಹೆಣ್ಣು ಮಗು 3.2 ಕೆಜಿ ಇರುವುದು ಸೂಕ್ತ.
3 ರಿಂದ 5 ತಿಂಗಳು: ಗಂಡು ಮಗು 6 ಕೆಜಿ, ಹೆಣ್ಣು ಮಗು ಸುಮಾರು 5.4 ಕೆಜಿ.
1 ವರ್ಷ: ಗಂಡು ಮಗು 9.2 ಕೆಜಿ, ಹೆಣ್ಣು ಮಗು 8.6 ಕೆಜಿ.
10 ರಿಂದ 11 ವರ್ಷ: ಬಾಲಕರು 31 ಕೆಜಿ ಹಾಗೂ ಬಾಲಕಿಯರು ಸುಮಾರು 30 ಕೆಜಿ ಇರಬೇಕು.
19 ರಿಂದ 29 ವರ್ಷ: ಪುರುಷರು ಸರಾಸರಿ 80 ಕೆಜಿ ಮತ್ತು ಮಹಿಳೆಯರು 73 ಕೆಜಿ ವರೆಗೆ ಇರಬಹುದು (ಇದು ಎತ್ತರವನ್ನೂ ಅವಲಂಬಿಸಿರುತ್ತದೆ).








