ಬೆಂಗಳೂರು: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತವಾಗಿ “ನಾರಿ ಪವರ್ ಟೀಂ” ಆಯೋಜಿಸಿದ್ದ “ವುಮೆನ್-ಆಥಾನ್ 4 ನೇ ಆವೃತ್ತಿ” ಯಲ್ಲಿ 1,500 ಮಹಿಳೆಯರು ಪಾಲ್ಗೊಂಡು, ಮಹಿಳೆಯರು ತಮ್ಮ ಆರೈಕೆ ಬಗ್ಗೆ ಕಾಳಜಿ ವಹಿಸಿ ಎಂಬ ಸಂದೇಶದೊಂದಿಗೆ ವಾಕಥಾನ್ ನಡೆಸಿದರು.
ಸುಮಾರು ಮೂರು ಕಿ.ಮೀ.ವರೆಗೂ ಮಹಿಳಾ ಆರೈಕೆ ಬಗ್ಗೆ ಸಂದೇಶ ಹೊಂದಿರುವ ಫಲಕಗಳನ್ನು ಹಿಡಿದು ಸಾಗಿದರು. ಒಂದೂವರೆ ಸಾವಿರಕ್ಕೂ ಅಧಿಕ ಮಹಿಳೆಯರು ನೇರಳೆ ಬಣ್ಣದ ಬಟ್ಟೆ ಧರಿಸಿ, ಎಲ್ಲರೂ ಒಂದೇ ಎಂಬ ಸಂದೇಶದೊಂದಿಗೆ ಸಾಗಿದರು. ಈ ವೇಳೆ ಹಲವು ಆಸ್ಪತ್ರೆ ಸಿಬ್ಬಂದಿಗಳು, ಮಕ್ಕಳು ಸಹ ಇದರಲ್ಲಿ ಪಾಲ್ಗೊಂಡರು.
ಈ ವೇಳೆ ಮಾತನಾಡಿದ ಡೆಂಟಲ್ ಡೆನ್‌ನ ವ್ಯವಸ್ಥಾಪಕ ನಿರ್ದೇಶಕಿ ಡಾ. ಲಕ್ಷ್ಮಿ ರೂಪೇಶ್, ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ತಮ್ಮನ್ನು ತೊಡಗಿಸಿಕೊಂಡು, ಹೊರಗೆ-ಒಳಗೆ ಎಲ್ಲೆಡೆ ಶ್ರಮವಹಿಸಿ ದುಡಿಯುತ್ತಾರೆ. ಈ ವೇಳೆ ತಮ್ಮ ಆರೈಕೆ ಬಗ್ಗೆಯೇ ಕಾಳಜಿ ವಹಿಸುವುದಿಲ್ಲ. ಪ್ರತಿಯೊಬ್ಬ ಮಹಿಳೆಯೂ ಸ್ವ ಆರೈಕೆಗೆ ಗಮನ ನೀಡಿ. ಈ ಆಥಾನ್‌ನ ಮೂಲಕ ಮಹಿಳೆಯರು ಇನ್ನಾದರೂ ಜಾಗೃತಿ ವಹಿಸಲು ಎಂಬ ಸಂದೇಶ ಸಾರಲಾಗುತ್ತಿದೆ ಎಂದು ಹೇಳಿದರು.
ರಾಜ್ಯದ ವಿವಿಧ ಇಲಾಖೆಗಳಲ್ಲಿ 56,432 ಹುದ್ದೆಗಳ ಭರ್ತಿಗೆ ಸರ್ಕಾರ ನಿರ್ಧಾರ








