ಬೆಂಗಳೂರು: ಅಡುಗೆ ಮನೆಯ ಬಜೆಟ್ ಮೇಲೆ ಈಗ ಯುದ್ಧದ ನೆರಳು ಬಿದ್ದಿದೆ. ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷದ ಪರಿಣಾಮವಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತಲ್ಲಣ ಉಂಟಾಗಿದ್ದು, ರಾಜ್ಯದಲ್ಲಿ ಅಡುಗೆ ಎಣ್ಣೆ ದರ ಗಗನಕ್ಕೇರುತ್ತಿದೆ. ಕಳೆದ ನಾಲ್ಕೇ ದಿನಗಳಲ್ಲಿ ಬೆಲೆಗಳು ಗಣನೀಯವಾಗಿ ಏರಿಕೆಯಾಗಿದ್ದು, ಸಾಮಾನ್ಯ ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ವಾರದಲ್ಲೇ ಎರಡು ಬಾರಿ ದರ ಏರಿಕೆ!
ಕಳೆದ ವಾರವಷ್ಟೇ ಪ್ರತಿ ಲೀಟರ್ಗೆ ₹10 ಹೆಚ್ಚಳವಾಗಿದ್ದ ಅಡುಗೆ ಎಣ್ಣೆ, ಇದೀಗ ನಾಲ್ಕು ದಿನಗಳ ಅಂತರದಲ್ಲಿ ಮತ್ತೆ ₹8 ಏರಿಕೆ ಕಂಡಿದೆ. ಕೇವಲ ಎಣ್ಣೆ ಮಾತ್ರವಲ್ಲದೆ, ಎಲ್ಪಿಜಿ ಸಿಲಿಂಡರ್ ಬೆಲೆಯೂ ಏರಿಕೆಯಾಗಿರುವುದು ಗೃಹಿಣಿಯರ ಆತಂಕಕ್ಕೆ ಕಾರಣವಾಗಿದೆ.
ಮುಂದಿನ ವಾರದಲ್ಲಿ ಬೆಲೆಗಳು ಮತ್ತೆ ₹5 ರಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಮುಂದಿನ ತಿಂಗಳ ವೇಳೆಗೆ ಅಡುಗೆ ಎಣ್ಣೆ ದರ ₹140 ರಿಂದ ₹150ರ ಗಡಿ ತಲುಪಬಹುದು ಎಂದು ಅಂದಾಜಿಸಲಾಗಿದೆ.
ಪ್ರಸ್ತುತ ಮಾರುಕಟ್ಟೆ ದರ ಪಟ್ಟಿ (ಪ್ರತಿ ಲೀಟರ್ಗೆ):
ಸೂರ್ಯಕಾಂತಿ ಎಣ್ಣೆ (Sunflower Oil): ₹151 ರಿಂದ ₹175
ಸಾಸಿವೆ ಎಣ್ಣೆ (Mustard Oil): ₹193
ಎಳ್ಳೆಣ್ಣೆ (Sesame Oil): ₹290 ರಿಂದ ₹410
ದಿನದಿಂದ ದಿನಕ್ಕೆ ಬೆಲೆಗಳು ಹೇಗೆ ಬದಲಾಗುತ್ತಿವೆ ಎಂಬುದನ್ನು ಈ ಕೆಳಗಿನ ಪಟ್ಟಿಯಲ್ಲಿ ನೋಡಬಹುದು:








