ವಯಸ್ಸಾದಂತೆ ಮೂಳೆ ಸವೆತ, ಕೀಲು ನೋವು, ನಡೆಯಲು ಅಥವಾ ನಿಲ್ಲಲು ಕಷ್ಟವಾಗುವುದು ಇಂದಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಆದರೆ, ಇದಕ್ಕೆ ಅಸಲಿ ಕಾರಣ ನಾವೆಲ್ಲರೂ ಅಂದುಕೊಂಡಂತೆ ‘ಕ್ಯಾಲ್ಸಿಯಂ’ ಕೊರತೆಯಲ್ಲವಂತೆ! ಹೌದು, ಖ್ಯಾತ ವೈದ್ಯರಾದ ಡಾ. ಹರಿಹರನ್ ಅವರು ಮೂಳೆಗಳ ಆರೋಗ್ಯದ ಬಗ್ಗೆ ಅಚ್ಚರಿಯ ಸತ್ಯಗಳನ್ನು ಬಯಲಿಗೆಳೆದಿದ್ದಾರೆ.
30 ng/mL ವಿಟಮಿನ್ ಡಿ ಸಾಕಾ? ಖಂಡಿತ ಇಲ್ಲ!
ಡಾ. ಹರಿಹರನ್ ಅವರ ಪ್ರಕಾರ, ಅನೇಕ ಲ್ಯಾಬ್‌ಗಳಲ್ಲಿ ವಿಟಮಿನ್ ಡಿ ಮಟ್ಟ 30 ng/mL ಇದ್ದರೆ ಅದನ್ನು ‘ನಾರ್ಮಲ್’ ಎಂದು ಪರಿಗಣಿಸಲಾಗುತ್ತದೆ. ಆದರೆ ಇದು ಕೇವಲ ಜೀವ ಉಳಿಸಿಕೊಳ್ಳಲು ಬೇಕಾದ ಕನಿಷ್ಠ ಪ್ರಮಾಣವಷ್ಟೇ.
ವಿಟಮಿನ್ ಡಿ ಮಟ್ಟ 30ಕ್ಕಿಂತ ಕಡಿಮೆಯಾದಾಗ, ದೇಹದಲ್ಲಿ ‘ಪ್ಯಾರಾಥೈರಾಯ್ಡ್’ ಹಾರ್ಮೋನ್ ಹೆಚ್ಚಾಗುತ್ತದೆ.
ಹೃದಯದ ಬಡಿತಕ್ಕೆ ರಕ್ತದಲ್ಲಿ ಕ್ಯಾಲ್ಸಿಯಂ ಅತ್ಯಗತ್ಯ. ರಕ್ತದಲ್ಲಿ ಕ್ಯಾಲ್ಸಿಯಂ ಕೊರತೆಯಾದಾಗ, ದೇಹವು ಮೂಳೆಗಳಲ್ಲಿರುವ ಕ್ಯಾಲ್ಸಿಯಂ ಅನ್ನು ‘ಕದಿಯಲು’ ಆರಂಭಿಸುತ್ತದೆ. ಇದರಿಂದ ಮೂಳೆಗಳು ಸವೆಯುತ್ತವೆ.
ಕ್ಯಾಲ್ಸಿಯಂ ಮಾತ್ರೆಗಳೆಂಬ ಭ್ರಮೆ
ಸಾಮಾನ್ಯವಾಗಿ ವಯಸ್ಸಾದವರಿಗೆ ವೈದ್ಯರು ಕ್ಯಾಲ್ಸಿಯಂ ಮಾತ್ರೆಗಳನ್ನು ನೀಡುತ್ತಾರೆ. ಆದರೆ ಡಾ. ಹರಿಹರನ್ ಇದನ್ನು ಅನಗತ್ಯ ಎನ್ನುತ್ತಾರೆ. ನಮ್ಮ ದೇಹದ ಮೂಳೆಗಳಲ್ಲಿ ಸುಮಾರು 5 ಕಿಲೋ ಕ್ಯಾಲ್ಸಿಯಂ ಸಂಗ್ರಹವಿರುತ್ತದೆ. ದೈನಂದಿನ ಕೆಲಸಗಳಿಗೆ ಬೇಕಿರುವುದು ಕೇವಲ 5 ಗ್ರಾಂ ಮಾತ್ರ. ದೇಹದಲ್ಲಿ ಈಗಾಗಲೇ 1000 ಪಟ್ಟು ಹೆಚ್ಚು ಸಂಗ್ರಹವಿರುವಾಗ, ಮತ್ತೆ ಮಾತ್ರೆಗಳ ಅಗತ್ಯವೇನಿದೆ?
ಅಸಲಿ ಸಮಸ್ಯೆ: ಕ್ಯಾಲ್ಸಿಯಂ ಕೊರತೆಯಲ್ಲ, ಬದಲಿಗೆ ಆ ಕ್ಯಾಲ್ಸಿಯಂ ಅನ್ನು ಮೂಳೆಗಳಿಗೆ ತಲುಪಿಸುವ ‘ಕೈಪಿಡಿ’ ಅಥವಾ ‘ಕೀಲಿ ಕೈ’ ಆದ ವಿಟಮಿನ್ ಡಿ ನಮ್ಮಲ್ಲಿ ಇಲ್ಲದಿರುವುದೇ ಮುಖ್ಯ ಕಾರಣ.
ಭಾರತೀಯರು ಮತ್ತು ವಿಟಮಿನ್ ಡಿ ಸಮಸ್ಯೆ
ಬಿಳಿ ಚರ್ಮದವರಿಗೆ ಹೋಲಿಸಿದರೆ ಭಾರತೀಯರಿಗೆ ವಿಟಮಿನ್ ಡಿ ಪಡೆಯಲು ಹೆಚ್ಚಿನ ಬಿಸಿಲು ಬೇಕು. ನಮ್ಮ ಚರ್ಮದಲ್ಲಿರುವ ‘ಮೆಲನಿನ್’ ಸೂರ್ಯನ ಕಿರಣಗಳನ್ನು ತಡೆಯುತ್ತದೆ. ನಾವು ಬಿಸಿಲಿಗೆ ಹೋಗುವುದನ್ನು ನಿಲ್ಲಿಸಿರುವುದರಿಂದ ಇಂದು ಬಹುತೇಕರಲ್ಲಿ ಈ ಕೊರತೆ ಕಾಣಿಸಿಕೊಂಡಿದೆ.
ಆಫ್ರಿಕಾದ ಹಡ್ಜಾಬೆ ಮತ್ತು ಮಾಸಾಯಿ ಬುಡಕಟ್ಟು ಜನರಲ್ಲಿ ಮೂಳೆ ಸವೆತವೇ ಇಲ್ಲ! ಏಕೆಂದರೆ ಅವರ ರಕ್ತದಲ್ಲಿ ವಿಟಮಿನ್ ಡಿ ಮಟ್ಟ ಯಾವಾಗಲೂ 50 ng/mL ಗಿಂತ ಹೆಚ್ಚಿರುತ್ತದೆ.
ಆರೋಗ್ಯವಂತ ಮೂಳೆಗಳಿಗಾಗಿ ಡಾಕ್ಟರ್ ಸಲಹೆಗಳು:
ನಿಮ್ಮ ವಿಟಮಿನ್ ಡಿ ಮಟ್ಟ ಕನಿಷ್ಠ 50 ng/mL ಗಿಂತ ಹೆಚ್ಚಿರುವಂತೆ ನೋಡಿಕೊಳ್ಳಿ.
ಅಗತ್ಯವಿಲ್ಲದೆ ಕ್ಯಾಲ್ಸಿಯಂ ಮಾತ್ರೆಗಳನ್ನು ಸೇವಿಸಬೇಡಿ.
ಆಹಾರದ ಮೂಲಕ ಸಿಗುವ ಕ್ಯಾಲ್ಸಿಯಂ ಮೂಳೆಗಳಿಗೆ ಸೇರಬೇಕೆಂದರೆ ವಿಟಮಿನ್ ಡಿ ಅತ್ಯಗತ್ಯ.
ವೈದ್ಯರ ಸಲಹೆಯ ಮೇರೆಗೆ ವಾರಕ್ಕೊಮ್ಮೆ 60,000 IU ವಿಟಮಿನ್ ಡಿ ಸೇವಿಸುವುದು ಉತ್ತಮ.
ನಿಮ್ಮ ಮೂಳೆಗಳು 100 ವರ್ಷಗಳವರೆಗೆ ಗಟ್ಟಿಯಾಗಿರಬೇಕೆಂದರೆ, ಕ್ಯಾಲ್ಸಿಯಂ ಗಿಂತ ವಿಟಮಿನ್ ಡಿ ಕಡೆಗೆ ಗಮನ ಹರಿಸಿ.








