Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರೈತರೇ ಜಸ್ಟ್ 10 ರೂಪಾಯಿಯ ಈ ಸಸ್ಯ ಬೆಳೆಸಿ ಮಾರಾಟ ಮಾಡಿ, ಕೋಟಿಗಟ್ಟಲೇ ಲಾಭ ಪಡೆಯಿರಿ.!

09/03/2026 7:29 AM

ಸಂಸತ್ತಿನಲ್ಲಿಂದು ‘ನಂಬಿಕೆ’ಯ ಜಿದ್ದಾಜಿದ್ದಿ: ಓಂ ಬಿರ್ಲಾ ವಿರುದ್ಧ ಅವಿಶ್ವಾಸ ನಿರ್ಣಯ; ಇರಾನ್ ಯುದ್ಧ ಮತ್ತು ಅಮೆರಿಕದ ತೈಲ ಒಪ್ಪಂದದ ಬಗ್ಗೆಯೂ ಭಾರಿ ಚರ್ಚೆ!

09/03/2026 7:29 AM

ಟೀಮ್ ಇಂಡಿಯಾಗೆ `ಟಿ20 ವಿಶ್ವಕಪ್ ಟ್ರೋಫಿ’ ಪ್ರದಾನ ಮಾಡಿದ ಐಸಿಸಿ ಅಧ್ಯಕ್ಷ ಜಯ್ ಶಾ : ವಿಡಿಯೋ ವೈರಲ್ | WATCH VIDEO

09/03/2026 7:25 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಟೀಮ್ ಇಂಡಿಯಾಗೆ `ಟಿ20 ವಿಶ್ವಕಪ್ ಟ್ರೋಫಿ’ ಪ್ರದಾನ ಮಾಡಿದ ಐಸಿಸಿ ಅಧ್ಯಕ್ಷ ಜಯ್ ಶಾ : ವಿಡಿಯೋ ವೈರಲ್ | WATCH VIDEO
SPORTS

ಟೀಮ್ ಇಂಡಿಯಾಗೆ `ಟಿ20 ವಿಶ್ವಕಪ್ ಟ್ರೋಫಿ’ ಪ್ರದಾನ ಮಾಡಿದ ಐಸಿಸಿ ಅಧ್ಯಕ್ಷ ಜಯ್ ಶಾ : ವಿಡಿಯೋ ವೈರಲ್ | WATCH VIDEO

By kannadanewsnow5709/03/2026 7:25 AM

ಅಹಮದಾಬಾದ್ : ಟೀಮ್ ಇಂಡಿಯಾ ಮತ್ತೊಮ್ಮೆ ವಿಶ್ವ ಕ್ರಿಕೆಟ್‌ನಲ್ಲಿ ತನ್ನ ಅಧಿಪತ್ಯವನ್ನು ಸಾಬೀತುಪಡಿಸಿದೆ. 2026ರ ಟಿ20 ವಿಶ್ವಕಪ್‌ನ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು 96 ರನ್‌ಗಳ ಬೃಹತ್ ಅಂತರದಿಂದ ಸೋಲಿಸುವ ಮೂಲಕ ಭಾರತ ಐತಿಹಾಸಿಕ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಸತತ ಎರಡು ಬಾರಿ ಟಿ20 ವಿಶ್ವಕಪ್ ಗೆದ್ದ ವಿಶ್ವದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಇದು ಭಾರತದ ಒಟ್ಟಾರೆ ಮೂರನೇ ಟಿ20 ವಿಶ್ವಕಪ್ ಪ್ರಶಸ್ತಿಯಾಗಿದ್ದು, ಈ ಸಾಧನೆ ಮಾಡಿದ ಏಕೈಕ ತಂಡವಾಗಿ ಭಾರತ ಹೊರಹೊಮ್ಮಿದೆ.

ಸ್ಯಾಮ್ಸನ್ ಅಬ್ಬರ, ಬೌಲಿಂಗ್‌ನಲ್ಲಿ ಬುಮ್ರಾ ಮಿಂಚು

ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನ ನೀಡಿದ್ದ ಸೂರ್ಯಕುಮಾರ್ ಯಾದವ್ ನಾಯಕತ್ವದ ಭಾರತ ತಂಡ, ಫೈನಲ್‌ನಲ್ಲಿ ಕಿವೀಸ್ ಪಡೆಯನ್ನು ಸಂಪೂರ್ಣವಾಗಿ ಮಣಿಸಿತು.

ಸಂಜು ಸ್ಯಾಮ್ಸನ್: ತಂಡಕ್ಕೆ ಮರಳಿದ ನಂತರ ಅದ್ಭುತ ಫಾರ್‌್ಯನಲ್ಲಿರುವ ಸಂಜು, ಫೈನಲ್‌ನಲ್ಲಿ ಕೇವಲ 46 ಎಸೆತಗಳಲ್ಲಿ 89 ರನ್ ಸಿಡಿಸಿ ತಂಡದ ಬೃಹತ್ ಮೊತ್ತಕ್ಕೆ ಅಡಿಪಾಯ ಹಾಕಿದರು.

ಅಭಿಷೇಕ್ ಶರ್ಮಾ ಮತ್ತು ಇಶಾನ್ ಕಿಶನ್: ಯುವ ಬ್ಯಾಟರ್ ಅಭಿಷೇಕ್ ಶರ್ಮಾ (21 ಎಸೆತಗಳಲ್ಲಿ 52) ಮತ್ತು ಇಶಾನ್ ಕಿಶನ್ (25 ಎಸೆತಗಳಲ್ಲಿ 54) ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಇದರಿಂದಾಗಿ ಭಾರತ 20 ಓವರ್‌ಗಳಲ್ಲಿ 255/5 ರನ್‌ಗಳ ಬೃಹತ್ ಮೊತ್ತ ಪೇರಿಸಿತು.

ಜಸ್ಪ್ರಿತ್ ಬುಮ್ರಾ: ಬೌಲಿಂಗ್‌ನಲ್ಲಿ ಎದುರಾಳಿಗಳನ್ನು ನಡುಗಿಸಿದ ಬುಮ್ರಾ, 4 ಓವರ್‌ಗಳಲ್ಲಿ ಕೇವಲ 15 ರನ್ ನೀಡಿ 4 ವಿಕೆಟ್ ಕಬಳಿಸಿದರು. ಅಪ್ರತಿಮ ಪ್ರದರ್ಶನ ನೀಡಿದ ಬುಮ್ರಾಗೆ ‘ಪಂದ್ಯ ಪುರುಷ’ ಪ್ರಶಸ್ತಿ ಒಲಿಯಿತು.

ಟ್ರೋಫಿ ಎತ್ತಿ ಹಿಡಿದ ಸೂರ್ಯಕುಮಾರ್ ಯಾದವ್
ಪಂದ್ಯದ ನಂತರ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಐಸಿಸಿ ಅಧ್ಯಕ್ಷ ಜೈ ಶಾ ಅವರು ಟಿ20 ವಿಶ್ವಕಪ್ ಟ್ರೋಫಿಯನ್ನು ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರಿಗೆ ಹಸ್ತಾಂತರಿಸಿದರು.

ಕಳೆದ ಬಾರಿ ರೋಹಿತ್ ಶರ್ಮಾ ಅವರು ಟ್ರೋಫಿ ಪಡೆಯುವಾಗ ಸಂಭ್ರಮಿಸಿದ ರೀತಿ ಈ ಬಾರಿ ಸೂರ್ಯಕುಮಾರ್ ಮಾಡದಿದ್ದರೂ, ಟ್ರೋಫಿ ಎತ್ತಿ ಹಿಡಿದ ಆ ಕ್ಷಣ ಕೋಟ್ಯಂತರ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಕಣ್ಣಲ್ಲಿ ಆನಂದಬಾಷ್ಪ ತರಿಸಿತು. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.

CHAK DE, INDIAAAAA! 🇮🇳

Ladies & gentlemen, presenting the three-time ICC Men's T20 World Cup champions 🏆🏆🏆#T20WorldCup #INDvNZ pic.twitter.com/0hb7APCcD2

— Star Sports (@StarSportsIndia) March 8, 2026

ICC President Jay Shah presents T20 World Cup trophy to Team India: Video goes viral | WATCH VIDEO
Share. Facebook Twitter LinkedIn WhatsApp Email

Related Posts

BREAKING : ‘ಚಿನ್ನಸ್ವಾಮಿ ಕ್ರೀಡಾಂಗಣ’ದಲ್ಲಿ ಮತ್ತೆ ‘IPL’ ಹವಾ ; ‘5 ಪಂದ್ಯಗಳು, ಉದ್ಘಾಟನೆ, ಪ್ಲೇ ಆಫ್ & ಫೈನಲ್’ಗೆ ಬೆಂಗಳೂರು ಆತಿಥ್ಯ!

03/03/2026 5:09 PM1 Min Read

BREAKING : ‘RCB’ ಅಭಿಮಾನಿಗಳಿಗೆ ಗುಡ್ ನ್ಯೂಸ್ ; ಬೆಂಗಳೂರಿನಲ್ಲೇ ‘IPL ಉದ್ಘಾಟನೆ ಸೇರಿ 5 ಪಂದ್ಯಗಳು’ ಆಯೋಜನೆ!

03/03/2026 4:23 PM1 Min Read

BREAKING : 2026ರ ‘ಟಿ20 ವಿಶ್ವಕಪ್’ನಿಂದ ನಿರ್ಗಮಿಸಿದ ಪಾಕ್ ಆಟಗಾರರಿಗೆ ಬಿಗ್ ಶಾಕ್ ; 16 ಲಕ್ಷ ದಂಡ ವಿಧಿಸಿದ ‘PCB’

02/03/2026 5:16 PM1 Min Read
Recent News

ರೈತರೇ ಜಸ್ಟ್ 10 ರೂಪಾಯಿಯ ಈ ಸಸ್ಯ ಬೆಳೆಸಿ ಮಾರಾಟ ಮಾಡಿ, ಕೋಟಿಗಟ್ಟಲೇ ಲಾಭ ಪಡೆಯಿರಿ.!

09/03/2026 7:29 AM

ಸಂಸತ್ತಿನಲ್ಲಿಂದು ‘ನಂಬಿಕೆ’ಯ ಜಿದ್ದಾಜಿದ್ದಿ: ಓಂ ಬಿರ್ಲಾ ವಿರುದ್ಧ ಅವಿಶ್ವಾಸ ನಿರ್ಣಯ; ಇರಾನ್ ಯುದ್ಧ ಮತ್ತು ಅಮೆರಿಕದ ತೈಲ ಒಪ್ಪಂದದ ಬಗ್ಗೆಯೂ ಭಾರಿ ಚರ್ಚೆ!

09/03/2026 7:29 AM

ಟೀಮ್ ಇಂಡಿಯಾಗೆ `ಟಿ20 ವಿಶ್ವಕಪ್ ಟ್ರೋಫಿ’ ಪ್ರದಾನ ಮಾಡಿದ ಐಸಿಸಿ ಅಧ್ಯಕ್ಷ ಜಯ್ ಶಾ : ವಿಡಿಯೋ ವೈರಲ್ | WATCH VIDEO

09/03/2026 7:25 AM

ಅಮೆರಿಕ ರಾಯಭಾರ ಕಚೇರಿ ಬಳಿ ಸ್ಫೋಟ: ಇದರ ಹಿಂದೆ ‘ಭಯೋತ್ಪಾದನಾ ಸಂಚು’ ಶಂಕೆ ವ್ಯಕ್ತಪಡಿಸಿದ ನಾರ್ವೆ ಪೊಲೀಸರು!

09/03/2026 7:25 AM
State News
KARNATAKA

ರೈತರೇ ಜಸ್ಟ್ 10 ರೂಪಾಯಿಯ ಈ ಸಸ್ಯ ಬೆಳೆಸಿ ಮಾರಾಟ ಮಾಡಿ, ಕೋಟಿಗಟ್ಟಲೇ ಲಾಭ ಪಡೆಯಿರಿ.!

By kannadanewsnow5709/03/2026 7:29 AM KARNATAKA 1 Min Read

ಬೆಂಗಳೂರು: ಕೃಷಿಯಲ್ಲಿ ಹೊಸತನ ಹುಡುಕುತ್ತಿರುವ ರೈತರಿಗೆ ಮತ್ತು ಅಲ್ಪಾವಧಿಯಲ್ಲಿ ಹೆಚ್ಚಿನ ಲಾಭ ಗಳಿಸಬೇಕೆನ್ನುವವರಿಗೆ ‘ಮಲಬಾರ್ ಬೇವು’ (Malabar Neem) ಒಂದು…

ಚಿಕನ್ ಪ್ರಿಯರಿಗೆ ಶಾಕಿಂಗ್ ನ್ಯೂಸ್: ಗಗನಕ್ಕೇರಿದ ಕೋಳಿ ಮಾಂಸ ದರ, ಕೆಜಿಗೆ 300 ರೂ.!

09/03/2026 7:19 AM

ವಾಹನ ಸವಾರರೇ ಗಮನಿಸಿ : `ಪೆಟ್ರೋಲ್ ಬಂಕ್‌’ ಗಳಲ್ಲಿ ಈ ಸೌಲಭ್ಯಗಳು ಉಚಿತ: ಹಣ ಕೇಳಿದರೆ ದೂರು ನೀಡಿ!

09/03/2026 7:05 AM

ರಾಜ್ಯದ ರೈತರೇ ಗಮನಿಸಿ : ಜಮೀನಿನ `ಪೋಡಿ’ ಮಾಡಿಸುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

09/03/2026 7:03 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.