ನವದೆಹಲಿ: ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ರೋಚಕ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು 96 ರನ್ಗಳ ಬೃಹತ್ ಅಂತರದಿಂದ ಸೋಲಿಸಿದ ಭಾರತ, ಐಸಿಸಿ ಪುರುಷರ ಟಿ20 ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಈ ಮೂಲಕ ತವರು ನೆಲದಲ್ಲಿ ಮೂರು ಬಾರಿ ವಿಶ್ವಕಪ್ ಗೆದ್ದ ಏಕೈಕ ದೇಶ ಎಂಬ ಐತಿಹಾಸಿಕ ದಾಖಲೆಯನ್ನು ಭಾರತ ತನ್ನದಾಗಿಸಿಕೊಂಡಿದೆ.
ಟಿ20 ವಿಶ್ವಕಪ್ 2026ರ ಆವೃತ್ತಿಯಲ್ಲಿ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸಿ ಮೂರನೇ ಬಾರಿಗೆ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಈ ಐತಿಹಾಸಿಕ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಕೇರಳದ ಸ್ಟಾರ್ ಬ್ಯಾಟರ್ ಸಂಜು ಸ್ಯಾಮ್ಸನ್ ‘ಪ್ಲೇಯರ್ ಆಫ್ ದಿ ಟೂರ್ನಮೆಂಟ್’ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಫೈನಲ್ ಪಂದ್ಯದ ಹೀರೊಗಳು
ಭಾರತದ ಈ ಗೆಲುವಿನ ಹಿಂದೆ ಇಬ್ಬರು ಆಟಗಾರರ ಶ್ರಮ ಅತಿದೊಡ್ಡದಿದೆ. ಫೈನಲ್ ಪಂದ್ಯದಲ್ಲಿ ಅಮೋಘ ಬೌಲಿಂಗ್ ಪ್ರದರ್ಶಿಸಿದ ಜಸ್ಪ್ರೀತ್ ಬುಮ್ರಾ 4 ವಿಕೆಟ್ ಕಬಳಿಸುವ ಮೂಲಕ ‘ಪ್ಲೇಯರ್ ಆಫ್ ದಿ ಮ್ಯಾಚ್’ ಪ್ರಶಸ್ತಿ ಪಡೆದರೆ, ಸಂಜು ಸ್ಯಾಮ್ಸನ್ ಫೈನಲ್ನಲ್ಲಿ ಕೇವಲ 46 ಎಸೆತಗಳಲ್ಲಿ 89 ರನ್ ಸಿಡಿಸಿ ತಂಡಕ್ಕೆ ಆಸರೆಯಾದರು.
ಸಂಜು ಸ್ಯಾಮ್ಸನ್ ಅವರ ದಾಖಲೆ
ಸಂಜು ಈ ಟೂರ್ನಿಯ 5 ಪಂದ್ಯಗಳಿಂದ ಒಟ್ಟು 321 ರನ್ ಗಳಿಸುವ ಮೂಲಕ ಭಾರತದ ಪರ ಅತಿ ಹೆಚ್ಚು ರನ್ ಬಾರಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಸಾಧನೆಯ ಮೂಲಕ ಅವರು ವಿರಾಟ್ ಕೊಹ್ಲಿ ಮತ್ತು ಬುಮ್ರಾ ಅವರ ಸಾಲಿಗೆ ಸೇರ್ಪಡೆಯಾಗಿದ್ದಾರೆ.
2014 & 2016: ವಿರಾಟ್ ಕೊಹ್ಲಿ (ಪ್ಲೇಯರ್ ಆಫ್ ದಿ ಟೂರ್ನಮೆಂಟ್)
2024: ಜಸ್ಪ್ರೀತ್ ಬುಮ್ರಾ (ಪ್ಲೇಯರ್ ಆಫ್ ದಿ ಮ್ಯಾಚ್)
2026: ಸಂಜು ಸ್ಯಾಮ್ಸನ್ (ಪ್ಲೇಯರ್ ಆಫ್ ದಿ ಟೂರ್ನಮೆಂಟ್)
ಬೌಲಿಂಗ್ನಲ್ಲಿ ಬುಮ್ರಾ-ಚಕ್ರವರ್ತಿ ಆರ್ಭಟ
ಬೌಲಿಂಗ್ ವಿಭಾಗದಲ್ಲಿ ಜಸ್ಪ್ರೀತ್ ಬುಮ್ರಾ ಮತ್ತು ವರುಣ್ ಚಕ್ರವರ್ತಿ ತಲಾ 14 ವಿಕೆಟ್ ಪಡೆಯುವ ಮೂಲಕ ಜಂಟಿಯಾಗಿ ಟೂರ್ನಿಯ ಯಶಸ್ವಿ ಬೌಲರ್ಗಳಾಗಿ ಗುರುತಿಸಿಕೊಂಡರು.
ಪ್ರಶಸ್ತಿಗಳ ಪಟ್ಟಿ ಒಂದು ನೋಟದಲ್ಲಿ:







