ಕೇಂದ್ರ ಸರ್ಕಾರವು ಆಧಾರ್ ಕಾರ್ಡ್ ಹೊಂದಿರುವವರಿಗೆ ಸಂಬಂಧಿಸಿದಂತೆ ಮತ್ತೊಂದು ಪ್ರಮುಖ ಪ್ರಕಟಣೆಯನ್ನು ಹೊರಡಿಸಿದೆ. ವಿಶೇಷವಾಗಿ ಹತ್ತು ವರ್ಷಗಳ ಹಿಂದೆ ಆಧಾರ್ ಪಡೆದವರು ಮತ್ತು ಈವರೆಗೆ ಒಮ್ಮೆಯೂ ಮಾಹಿತಿಯನ್ನು ಅಪ್ಡೇಟ್ ಮಾಡದವರಿಗಾಗಿ ಈ ಸೂಚನೆ ನೀಡಲಾಗಿದೆ.
ಆಧಾರ್ನಲ್ಲಿನ ವಿಳಾಸ ಅಥವಾ ಇತರ ಗುರುತಿನ ದಾಖಲೆಗಳನ್ನು (PoI/PoA) ಆನ್ಲೈನ್ ಮೂಲಕ ಉಚಿತವಾಗಿ ನವೀಕರಿಸಲು ನೀಡಲಾಗಿದ್ದ ಗಡುವನ್ನು ಕೇಂದ್ರ ಸರ್ಕಾರವು ವಿಸ್ತರಿಸಿದೆ.
ಯಾರಿಗೆ ಅನ್ವಯ?
ತಮ್ಮ ಆಧಾರ್ ಕಾರ್ಡ್ ಪಡೆದು 10 ವರ್ಷಗಳಾಗಿದ್ದರೆ ಅಂತಹವರು ಕಡ್ಡಾಯವಾಗಿ ತಮ್ಮ ಇತ್ತೀಚಿನ ದಾಖಲೆಗಳನ್ನು ನವೀಕರಿಸಬೇಕು ಎಂದು ಯುಐಡಿಎಐ (UIDAI) ಸೂಚಿಸಿದೆ.
ಎಲ್ಲಿ ಮಾಡಬಹುದು?
‘ಮೈ ಆಧಾರ್’ (MyAadhaar) ಪೋರ್ಟಲ್ ಮೂಲಕ ಆನ್ಲೈನ್ನಲ್ಲಿ ದಾಖಲೆಗಳನ್ನು ಅಪ್ಲೋಡ್ ಮಾಡಿದರೆ ಯಾವುದೇ ಶುಲ್ಕವಿರುವುದಿಲ್ಲ. ಆದರೆ, ಆಧಾರ್ ಕೇಂದ್ರಗಳಿಗೆ ತೆರಳಿ ಭೌತಿಕವಾಗಿ ಅಪ್ಡೇಟ್ ಮಾಡಿದರೆ ನಿಗದಿತ ಶುಲ್ಕ ಪಾವತಿಸಬೇಕಾಗುತ್ತದೆ.
ಏಕೆ ಅಗತ್ಯ?
ಆಧಾರ್ ದತ್ತಾಂಶದ ನಿಖರತೆಯನ್ನು ಕಾಪಾಡಿಕೊಳ್ಳಲು ಮತ್ತು ವಂಚನೆಗಳನ್ನು ತಡೆಗಟ್ಟಲು ಈ ಪ್ರಕ್ರಿಯೆ ಸಹಕಾರಿಯಾಗಿದೆ.








