Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ಸರ್ಕಾರ `ಭೂಸ್ವಾಧೀನ’ ಪ್ರಕರಣಗಳಲ್ಲಿ ಭೂಮಿಯ ಬೆಲೆ ನಿಗದಿಪಡಿಸುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

BREAKING: `ನಮ್ಮ ಮೆಟ್ರೋ’ದಲ್ಲಿ ಪ್ರಯಾಣಿಸಿದ ಸಿಎಂ ಡಿ.ಕೆ.ಶಿವಕುಮಾರ್ : ವಿಡಿಯೋ ವೈರಲ್ | WATCH VIDEO

ನಿಮ್ಮ ಮನೆಯ `ಅಡುಗೆ ಎಣ್ಣೆ’ ಬಳಕೆಗೆ ಯೋಗ್ಯವಾಗಿದೆಯೇ? ಇಲ್ಲಿದೆ ಪತ್ತೆ ಹಚ್ಚುವ 6 ಸುಲಭ ವಿಧಾನಗಳು!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಪ್ರೇಯಸಿಯೊಂದಿಗೆ ನಿಶ್ಚಿತಾರ್ಥ: ಗದಗದಲ್ಲಿ ಯುವಕನ ಬರ್ಬರ ಹತ್ಯೆ, 24 ಗಂಟೆಯಲ್ಲೇ ಪ್ರಿಯಕರನ ಬಂಧನ!
KARNATAKA

ಪ್ರೇಯಸಿಯೊಂದಿಗೆ ನಿಶ್ಚಿತಾರ್ಥ: ಗದಗದಲ್ಲಿ ಯುವಕನ ಬರ್ಬರ ಹತ್ಯೆ, 24 ಗಂಟೆಯಲ್ಲೇ ಪ್ರಿಯಕರನ ಬಂಧನ!

By ಅವಿನಾಶ್‌ ಆರ್‌ ಭೀಮಸಂದ್ರ
Faruq Sanadi
Faruq Sanadi

ಗದಗ: ಇತ್ತೀಚೆಗೆ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಹೊರವಲಯದ ಜಮೀನೊಂದರಲ್ಲಿ ನಡೆದಿದ್ದ ಯುವಕನ ಬರ್ಬರ ಹತ್ಯೆ ಪ್ರಕರಣ ಇಡೀ ಜಿಲ್ಲೆಯನ್ನೇ ಬೆಚ್ಚಿಬೀಳಿಸಿತ್ತು. ಇದೀಗ ಈ ಕೊಲೆ ಕೇಸ್‌ಗೆ ಸಂಬಂಧಿಸಿದಂತೆ ರಹಸ್ಯ ಭೇದಿಸುವಲ್ಲಿ ಗದಗ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದು, ಪ್ರಕರಣಕ್ಕೊಂದು ಅಚ್ಚರಿಯ ‘ಬಿಗ್ ಟ್ವಿಸ್ಟ್’ ಸಿಕ್ಕಿದೆ. ತನ್ನ ಪ್ರೇಯಸಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಎಂಬ ಒಂದೇ ಕಾರಣಕ್ಕೆ, ಆಕೆಯ ಪ್ರಿಯಕರನೇ ಸಂಚು ರೂಪಿಸಿ ಯುವಕನನ್ನು ಕತ್ತು ಕೊಯ್ದು ಹತ್ಯೆಗೈದಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.

ಮೃತ ಯುವಕನನ್ನು ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಗ್ರಾಮದ ನಿವಾಸಿ ಫಾರೂಕ್ ಸನದಿ (25 ವರ್ಷ) ಎಂದು ಗುರುತಿಸಲಾಗಿದೆ. ಫೆಬ್ರವರಿ 28ರಂದು ಫಾರೂಕ್‌ನನ್ನು ಅತ್ಯಂತ ಕ್ರೂರವಾಗಿ ಕೊಲೆ ಮಾಡಲಾಗಿತ್ತು. ಘಟನೆ ನಡೆದ ಕೇವಲ 24 ಗಂಟೆಗಳ ಒಳಗೆ ನಾಲ್ವರು ಆರೋಪಿಗಳನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ತ್ರಿಕೋನ ಪ್ರೇಮವೇ ಕೊಲೆಗೆ ಕಾರಣ!
ಮದುವೆಯಾಗಿ ಹೊಸ ಜೀವನಕ್ಕೆ ಕಾಲಿಡಬೇಕಿದ್ದ ಯುವಕನ ಜೀವವನ್ನು ‘ತ್ರಿಕೋನ ಪ್ರೇಮ’ ಬಲಿಪಡೆದಿದೆ. ಶಿಗ್ಲಿ ಗ್ರಾಮದ ಯುವಕ ಫಾರೂಕ್ ಸನದಿಗೆ ಕುಟುಂಬಸ್ಥರು ಹೆಣ್ಣು ಹುಡುಕಿ, ಮೂರು ತಿಂಗಳ ಹಿಂದಷ್ಟೇ ಯುವತಿಯೊಬ್ಬಳ ಜೊತೆ ಅದ್ಧೂರಿಯಾಗಿ ನಿಶ್ಚಿತಾರ್ಥ (Engagement) ಮಾಡಿದ್ದರು. ಆದರೆ, ಆ ಯುವತಿಯು ಧಾರವಾಡ ಜಿಲ್ಲೆಯ ಅಣ್ಣಿಗೇರಿ ಪಟ್ಟಣದ ನಿವಾಸಿಯಾದ ದಾವಲಸಾಬ್ ಮಕಂದಾರ್ ಎಂಬಾತನನ್ನು ಪ್ರೀತಿಸುತ್ತಿದ್ದಳು ಎನ್ನಲಾಗಿದೆ.

ತಾನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಹುಡುಗಿ ಬೇರೊಬ್ಬನ ಪಾಲಾಗುತ್ತಿದ್ದಾಳೆ ಎಂಬ ವಿಚಾರ ದಾವಲಸಾಬ್‌ಗೆ ಸಹಿಸಲಾಗಲಿಲ್ಲ. ಹೀಗಾಗಿ ಹೇಗಾದರೂ ಮಾಡಿ ತನ್ನ ಪ್ರೇಯಸಿಯನ್ನು ಒಲಿಸಿಕೊಳ್ಳಲು, ನಿಶ್ಚಿತಾರ್ಥ ಮಾಡಿಕೊಂಡಿದ್ದ ಫಾರೂಕ್ ಸನದಿಯನ್ನೇ ಮುಗಿಸಲು ಆತ ಖತರ್ನಾಕ್ ಸ್ಕೆಚ್ ಹಾಕಿದ್ದನು.

ಮಾತನಾಡಲು ಕರೆಸಿ ಬರ್ಬರ ಹತ್ಯೆ
ತನ್ನ ಸಂಚಿನಂತೆ ಕಾರ್ಯಪ್ರವೃತ್ತನಾದ ದಾವಲಸಾಬ್, ಫಾರೂಕ್ ಸನದಿಯನ್ನು ಮಾತನಾಡಬೇಕು ಎಂದು ನಂಬಿಸಿ ಲಕ್ಷ್ಮೇಶ್ವರದ ಹೊರವಲಯದ ಜಮೀನಿಗೆ ಕರೆಯಿಸಿಕೊಂಡಿದ್ದಾನೆ. ಈ ವೇಳೆ ನಿಶ್ಚಿತಾರ್ಥದ ವಿಚಾರವಾಗಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ತೀವ್ರ ಗಲಾಟೆ ಶುರುವಾಗಿದೆ. ವಾಗ್ವಾದ ವಿಕೋಪಕ್ಕೆ ತಿರುಗಿದಾಗ, ಮೊದಲೇ ಹೊಂಚು ಹಾಕಿ ಕುಳಿತಿದ್ದ ದಾವಲಸಾಬ್ ಹಾಗೂ ಆತನ ಸಹಚರರು ಫಾರೂಕ್‌ನ ಮೇಲೆ ಏಕಾಏಕಿ ದಾಳಿ ಮಾಡಿದ್ದಾರೆ.

ಕೋಪದ ಭರದಲ್ಲಿ ಕೊಡಲಿಯಿಂದ ಫಾರೂಕ್ ಸನದಿಯನ್ನು ಮನಬಂದಂತೆ ಕೊಚ್ಚಿ, ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಿ, ನಂತರ ಯಾರಿಗೂ ಅನುಮಾನ ಬಾರದಂತೆ ಅಲ್ಲಿಂದ ಎಸ್ಕೇಪ್ ಆಗಿದ್ದರು.

24 ಗಂಟೆಯಲ್ಲೇ ಹಂತಕರನ್ನು ಬಂಧಿಸಿದ ಪೊಲೀಸರು
ಫೆಬ್ರವರಿ 28ರಂದು ಜಮೀನಿನಲ್ಲಿ ಯುವಕನ ಶವ ಪತ್ತೆಯಾದ ತಕ್ಷಣವೇ ಪೊಲೀಸರು ಅಲರ್ಟ್ ಆಗಿದ್ದರು. ಕೊಲೆ ಮಾಹಿತಿ ಸಿಕ್ಕ ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಗದಗ ಎಸ್ಪಿ ರೋಹನ್ ಜಗದೀಶ್, ಡಿವೈಎಸ್ಪಿ ಮುರ್ತುಜ ಖಾದ್ರಿ ಹಾಗೂ ಇತರೆ ಹಿರಿಯ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು. ಹಂತಕರ ಪತ್ತೆಗಾಗಿ ವಿಶೇಷ ತನಿಖಾ ತಂಡಗಳನ್ನು (Special Teams) ರಚಿಸಲಾಗಿತ್ತು.

ಪೊಲೀಸರು ತಮ್ಮದೇ ಶೈಲಿಯಲ್ಲಿ ಎಲ್ಲಾ ಆಯಾಮಗಳಲ್ಲೂ ತನಿಖೆ ಚುರುಕುಗೊಳಿಸಿ, ಕೇವಲ 24 ಗಂಟೆಗಳಲ್ಲಿ ಪ್ರಮುಖ ಆರೋಪಿ ದಾವಲಸಾಬ್, ಆತನಿಗೆ ಸಾಥ್ ನೀಡಿದ್ದ ಸ್ನೇಹಿತ ಮಕ್ಕಬೂಲ್ ಸಾಬ್ ಹಾಗೂ ಇಬ್ಬರು ಅಪ್ರಾಪ್ತರು ಸೇರಿದಂತೆ ಒಟ್ಟು ನಾಲ್ವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿಚಾರಣೆ ವೇಳೆ, “ತನ್ನ ಹುಡುಗಿಯ ಜೊತೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದಕ್ಕೆ ಫಾರೂಕ್‌ನನ್ನು ನಾವೇ ಕೊಲೆ ಮಾಡಿದ್ದಾಗಿ” ದಾವಲಸಾಬ್ ಬಾಯ್ಬಿಟ್ಟಿದ್ದಾನೆ.

ಮನೆಯವರ ಆಕ್ರಂದನ ಮುಗಿಲು ಮುಟ್ಟಿದೆ
ಯಾವುದೇ ತಪ್ಪು ಮಾಡದ, ಕೇವಲ ಹಿರಿಯರು ನಿಶ್ಚಯಿಸಿದ ವಿವಾಹಕ್ಕೆ ಒಪ್ಪಿಗೆ ಸೂಚಿಸಿದ್ದ ಅಮಾಯಕ ಯುವಕ ಫಾರೂಕ್ ಇಂದು ಹೆಣವಾಗಿ ಮಲಗಿದ್ದಾನೆ. ಮದುವೆಯಾಗಿ ಸುಂದರ ಭವಿಷ್ಯ ರೂಪಿಸಿಕೊಳ್ಳಬೇಕಿದ್ದ ಮಗನನ್ನು ಕಳೆದುಕೊಂಡ ಆತನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇಡೀ ಶಿಗ್ಲಿ ಗ್ರಾಮದಲ್ಲಿ ಮೌನ ಮತ್ತು ಶೋಕದ ಮಡುವು ಆವರಿಸಿದೆ.

Crime News in Kannada Faruq Sanadi Murder Case Gadag News Karnataka Crime Lakshmeshwar Police Love Triangle Murder ಕೊಲೆ ಪ್ರಕರಣ. ಗದಗ ಸುದ್ದಿ
Share. Facebook Twitter LinkedIn WhatsApp Email

Related Posts

BIG NEWS : ಸರ್ಕಾರ `ಭೂಸ್ವಾಧೀನ’ ಪ್ರಕರಣಗಳಲ್ಲಿ ಭೂಮಿಯ ಬೆಲೆ ನಿಗದಿಪಡಿಸುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

2 Mins Read

BREAKING: `ನಮ್ಮ ಮೆಟ್ರೋ’ದಲ್ಲಿ ಪ್ರಯಾಣಿಸಿದ ಸಿಎಂ ಡಿ.ಕೆ.ಶಿವಕುಮಾರ್ : ವಿಡಿಯೋ ವೈರಲ್ | WATCH VIDEO

1 Min Read

ನಿಮ್ಮ ಮನೆಯ `ಅಡುಗೆ ಎಣ್ಣೆ’ ಬಳಕೆಗೆ ಯೋಗ್ಯವಾಗಿದೆಯೇ? ಇಲ್ಲಿದೆ ಪತ್ತೆ ಹಚ್ಚುವ 6 ಸುಲಭ ವಿಧಾನಗಳು!

2 Mins Read
Recent News

BIG NEWS : ಸರ್ಕಾರ `ಭೂಸ್ವಾಧೀನ’ ಪ್ರಕರಣಗಳಲ್ಲಿ ಭೂಮಿಯ ಬೆಲೆ ನಿಗದಿಪಡಿಸುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

BREAKING: `ನಮ್ಮ ಮೆಟ್ರೋ’ದಲ್ಲಿ ಪ್ರಯಾಣಿಸಿದ ಸಿಎಂ ಡಿ.ಕೆ.ಶಿವಕುಮಾರ್ : ವಿಡಿಯೋ ವೈರಲ್ | WATCH VIDEO

ನಿಮ್ಮ ಮನೆಯ `ಅಡುಗೆ ಎಣ್ಣೆ’ ಬಳಕೆಗೆ ಯೋಗ್ಯವಾಗಿದೆಯೇ? ಇಲ್ಲಿದೆ ಪತ್ತೆ ಹಚ್ಚುವ 6 ಸುಲಭ ವಿಧಾನಗಳು!

BREAKING : ವನ್ಯಜೀವಿ ಬೇಟೆಯಾಡಲು ಸಂಚು : ಬೆಂಗಳೂರಲ್ಲಿ 7 ಆರೋಪಿಗಳು ಅರೆಸ್ಟ್!

State News
KARNATAKA

BIG NEWS : ಸರ್ಕಾರ `ಭೂಸ್ವಾಧೀನ’ ಪ್ರಕರಣಗಳಲ್ಲಿ ಭೂಮಿಯ ಬೆಲೆ ನಿಗದಿಪಡಿಸುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

By kannadanewsnow57 KARNATAKA 2 Mins Read

ಬೆಂಗಳೂರು: ರಾಜ್ಯದಲ್ಲಿ ಭೂಸ್ವಾಧೀನ ಪ್ರಕ್ರಿಯೆಗಳಲ್ಲಿ ರೈತರು ಮತ್ತು ಭೂಮಾಲೀಕರಿಗೆ ನ್ಯಾಯಯುತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಹಾಗೂ ಅನಗತ್ಯ ಕೋರ್ಟ್ ವ್ಯಾಜ್ಯಗಳನ್ನು…

BREAKING: `ನಮ್ಮ ಮೆಟ್ರೋ’ದಲ್ಲಿ ಪ್ರಯಾಣಿಸಿದ ಸಿಎಂ ಡಿ.ಕೆ.ಶಿವಕುಮಾರ್ : ವಿಡಿಯೋ ವೈರಲ್ | WATCH VIDEO

ನಿಮ್ಮ ಮನೆಯ `ಅಡುಗೆ ಎಣ್ಣೆ’ ಬಳಕೆಗೆ ಯೋಗ್ಯವಾಗಿದೆಯೇ? ಇಲ್ಲಿದೆ ಪತ್ತೆ ಹಚ್ಚುವ 6 ಸುಲಭ ವಿಧಾನಗಳು!

BREAKING : ವನ್ಯಜೀವಿ ಬೇಟೆಯಾಡಲು ಸಂಚು : ಬೆಂಗಳೂರಲ್ಲಿ 7 ಆರೋಪಿಗಳು ಅರೆಸ್ಟ್!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.