ಮಡಿಕೇರಿ: ರಾಜ್ಯದಲ್ಲಿ ಕಾಡಾನೆ ದಾಳಿಗೆ ಮತ್ತೊಂದು ಬಲಿ ಎನ್ನುವಂತೆ ಮಡಿಕೇರಿಯಲ್ಲಿ ವಿದ್ಯಾರ್ಥಿನಿಯೊಬ್ಬರನ್ನು ಕಾಡಾನೆ ತುಳಿದು ಸಾಯಿಸಿದೆ.
ಮಡಿಕೇರಿ ತಾಲ್ಲೂಕಿನ ಬೆಟ್ಟತೂರು ಗ್ರಾಮದಲ್ಲಿ ಗಿರೀಶ್ ಎಂಬುವರ ಪುತ್ರಿ ಪೂಜಾ(17) ಎಂಬ ವಿದ್ಯಾರ್ಥಿನಿಯನ್ನು ಕಾಡಾನೆ ಹತ್ಯೆ ಮಾಡಿದೆ. ಮೃತ ಪೂಜಾ ಮಡಿಕೇರಿಯ ಸಂತ ಮೈಕಲ್ ಶಾಲೆಯಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದರು.
ನಿನ್ನೆ ಸಂಜೆ 5.30ಕ್ಕೆ ಕಾಲೇಜು ಮುಗಿಸಿಕೊಂಡು ಪೂಜಾ ತಮ್ಮ ಊರು ಬೆಟ್ಟತೂರಿಗೆ ಬಸ್ಸಿನಿಂದ ಬಂದಿಳಿದು, ಮನೆಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಏಕಾಏಕಿ ಕಾಡಾನೆ ಪೂಜಾ ಮಾಲೆ ದಾಳಿ ಮಾಡಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮೃತ ಯುವತಿ ಪೂಜಾ ಅವರ ಶವವನ್ನು ಮಡಿಕೇರಿಯ ಸರ್ಕಾರಿ ಆಸ್ಪತ್ರೆಯ ಶಾವಾಗಾರದಲ್ಲಿ ಇರಿಸಲಾಗಿದೆ. ಘಟನೆಯಿಂದಾಗಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದರೇ, ಕಾಡಾನೆ ನಿಯಂತ್ರಿಸದ ಅರಣ್ಯಾಧಿಕಾರಿಗಳ ವಿರುದ್ಧ ಬೆಟ್ಟತೂರು ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದಾರೆ.
ರಾಜ್ಯದ ಜನತೆಗೆ ಸಿಹಿ ಸುದ್ದಿ: ಸದ್ಯಕ್ಕಿಲ್ಲ ವಿದ್ಯುತ್ ದರ ಏರಿಕೆ; ಸಿಎಂ ಸ್ಪಷ್ಟನೆ
ಮಕ್ಕಳಲ್ಲಿ ಹೆಚ್ಚಾದ ಮೊಬೈಲ್ ವ್ಯಸನ: ಪೋಷಕರಲ್ಲಿ ಹೆಚ್ಚುತ್ತಿದೆ ಆತಂಕ, ತಜ್ಞರಿಂದ ಈ ಎಚ್ಚರಿಕೆ!








