ಟೆಹ್ರಾನ್: ಇರಾನ್ ಸಶಸ್ತ್ರ ಪಡೆಗಳ ಮುಖ್ಯಸ್ಥ ಅಬ್ದುಲ್ ರಹೀಮ್ ಮೂಸವಿ ಅವರು ಹತ್ಯೆಯಾಗಿದ್ದಾರೆ ಎಂದು ಇರಾನ್ ಸರ್ಕಾರಿ ದೂರದರ್ಶನ ಆರಂಭಿಕ ವರದಿಗಳಲ್ಲಿ ತಿಳಿಸಿದೆ.
ಇರಾನ್ ಸೇನೆಯು ಅಮೆರಿಕ ಮತ್ತು ಇಸ್ರೇಲ್ ಮೇಲೆ ಕ್ಷಿಪಣಿ ದಾಳಿ ನಡೆಸಿದ ಬೆನ್ನಲ್ಲೇ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಇರಾನ್ ಮಾಧ್ಯಮಗಳ ಪ್ರಕಾರ, ರಾಜಧಾನಿ ಟೆಹ್ರಾನ್‌ನಲ್ಲಿ ಹಲವಾರು ಭೀಕರ ಸ್ಫೋಟದ ಸಬ್ದಗಳು ಕೇಳಿಬಂದಿವೆ.
ಇಸ್ರೇಲ್ ಮತ್ತು ಅಮೆರಿಕದ ನೆಲೆಗಳ ಮೇಲೆ ಇರಾನ್ ದಾಳಿ ನಡೆಸಿದ ನಂತರ, ಪ್ರತಿಯಾಗಿ ನಡೆದ ದಾಳಿಯಲ್ಲಿ ಮೂಸವಿ ಅವರು ಮೃತಪಟ್ಟಿದ್ದಾರೆ ಎಂದು ತಿಳಿಸಿದೆ.







