ಶಿವಮೊಗ್ಗ: ಮಲ್ಲಿಕಾರ್ಜುನ ಹಕ್ರೆ ಅವರೇ ನೀವು ಬೇಸೂರು ಗ್ರಾಮಕ್ಕೆ ಭೇಟಿ ನೀಡಿ, ದಲಿತ ಕಾಲನಿಗೆ ಹೊಂದಿಕೊಂಡ ಭೂಮಿಯಲ್ಲಿ ಅರಣ್ಯ ಅಧಿಕಾರಿಗಳು ಟ್ರಂಚ್ ಹೊಡೆಯುತ್ತಿದ್ದದ್ದು ನಿಲ್ಲಿಸಿದ್ದು ಒಳ್ಳೆಯ ನಡೆ. ಜನರ ಬಳಿ ಸಾಗುವುದೇ ನಿಜದ ರಾಜಕೀಯ ಸೇವೆ. ಆದರೇ ಅರಣ್ಯ ಹಕ್ಕು ಕಾಯಿದೆ ತಿದ್ದುಪಡಿ ಮಾಡಬೇಕಿರೋದು ರಾಜ್ಯ ಸರ್ಕಾರವಲ್ಲ, ಕೇಂದ್ರ ಸರ್ಕಾರ. ನಿಮ್ಮ ಬಿಜೆಪಿ ಪಕ್ಷ ಎಂಬುದಾಗಿ ಮಲ್ಲಿಕಾರ್ಜುನ ಹಕ್ರೆಗೆ, ಕಾಂಗ್ರೆಸ್ ಮುಖಂಡ ಜಿ.ಟಿ ಸತ್ಯನಾರಾಯಣ ತುಮುರಿ ತಿರುಗೇಟು ನೀಡಿದ್ದಾರೆ.
ಈ ಕುರಿತಂತೆ ತಮ್ಮ ಫೇಸ್ ಬುಕ್ ಮುಖ ಪುಟದಲ್ಲಿ ಬರೆದು ಪೋಸ್ಟ್ ಮಾಡಿರುವಂತ ಅವರು, ತಾವು ನಿನ್ನೆ ಸಾಗರ ತಾಲ್ಲೂಕಿನ ಬೇಸೂರು ಗ್ರಾಮಕೆ ಭೇಟಿ ದಲಿತ ಕಾಲನಿಯ ಹೊಂದಿಕೊಂಡ ಭೂಮಿಯನ್ನು ಟ್ರೆಂಚ್ ಹೊಡೆಯುತ್ತಾ ಇದ್ದ ಅರಣ್ಯ ಅಧಿಕಾರಿಗಳನ್ನು ಮುಖಾಮುಖಿ ಆಗಿ ಪ್ರತಿರೋಧ ತೋರಿರುವ ಸುದ್ದಿ ನೋಡಿದೆ. ಹಾಗೆಯೇ ನೀವು ಸಾಗರ ಶಾಸಕರಿಗೆ ದಿಕ್ಕಾರ ಕೂಗಿ ಕಾಲನಿ ಜನರಿಂದಲೂ ಕೂಗಿಸಿದ್ದು ಕೇಳಿದೆ ಎಂದಿದ್ದಾರೆ.
ನನ್ನ ಪಾಯಿಂಟ್ ಇಷ್ಟೇ. ನೀವು ಹೋಗಿ ಪ್ರತಿರೋಧ ತೋರಿದ್ದು ಒಳ್ಳೆಯ ನಡೆ. ಜನರ ಬಳಿ ಸಾಗುವುದೇ ನಿಜದ ರಾಜಕೀಯ ಸೇವೆ ಅರ್ಥ. ಗುಡ್. ಆದರೆ ಅರಣ್ಯ ಅನ್ನೋ ಸಬ್ಜೆಕ್ಟ್ ಶಾಸನಾತ್ಮಕ ಆಗಿ ಸಮವರ್ತಿ ಪಟ್ಟಿಯಲ್ಲಿ ಬರುತ್ತೆ. ಅಂದ್ರೆ ಕೇಂದ್ರ ರಾಜ್ಯ ಎರಡು ಕಾನೂನು ಮಾಡಬಹುದು. ಕೇಂದ್ರ ಸಹಜವಾಗೇ ಪವರ್ ಫುಲ್ ಇರುತ್ತೆ. ಹೀಗಿರುವಾಗ ಅವರಿಗೆ ಅರಣ್ಯ ಕಾನೂನುಗಳ ವಿರುದ್ದ ರಕ್ಷಣೆ ಪಡೆಯಲು ಇರುವುದು ಒಂದೇ ದಾರಿ ಅದು ಅರಣ್ಯ ಹಕ್ಕು ಕಾಯಿದೆ ತಿದ್ದುಪಡಿ. ಅದನ್ನು ಕೇಂದ್ರ ಮಾಡಬೇಕು. ಸರಳವಾಗಿ ಹೇಳಬೇಕು ಅಂದ್ರೆ ನಿಮ್ಮ ಬಿಜೆಪಿ ಪಕ್ಷ. ನಮ್ಮ ರಸ್ತೆ ರೈಲು ಸಂಸದರು ಈ ಬಗ್ಗೆ ಏನೂ ಮಾತಾಡೋದು ಇಲ್ಲ. ಕೇಂದ್ರ ಸರ್ಕಾರ ಮತ್ತು ನಮ್ಮ ಪವರ್ ಫುಲ್ ಸಂಸದರು ಯಾವಾಗ ಬಿಕ್ಕಟ್ಟು ಬಗೆ ಹರಿಸಬಹುದು..? ಎಂದು ಪ್ರಶ್ನಿಸಿದ್ದಾರೆ.
ಇನ್ನು ಈ ನಮ್ಮ ರೈತರು ಅರಣ್ಯ ಹಕ್ಕು ಕಾಯಿದೆ ಅಡಿ ಕೊಟ್ಟ ಅರ್ಜಿ ರಾತ್ರೋ ರಾತ್ರಿ ವಜಾ ಆಗಿದ್ದು ಕೂಡಾ ನಮ್ಮ ಈಗಿನ ಸಂಸದರು ಇರುವಾಗ ಅವರ ತಂದೆ ಬಿ ಎಸ್ ಯಡಿಯೂರಪ್ಪನವರು ಮುಖ್ಯಮಂತ್ರಿ ಆಗಿದ್ದಾಗ ಅಲ್ವಾ..? ಅಂದ ಹಾಗೆ ಅರಣ್ಯ ಹಕ್ಕು ಕಾಯಿದೆ ಅರ್ಜಿ ಹಾಕಿಸುವಾಗ ನಮ್ಮ ಕಾಗೋಡು ಜತೆ ನೀವು ಇದ್ದಿರಿ. ನಿಮಗೆ ವಿಷಯ ಚಂದ ಗೊತ್ತು ಮಾರಾಯ್ರೇ ಅಂತ ವ್ಯಂಗ್ಯವಾಡಿದ್ದಾರೆ.
ಲೇಟೆಸ್ಟ್ ನ್ಯೂಸ್ ಗೆ ಬರೋಣ. ಕರ್ನಾಟಕ ರಾಜ್ಯಸರ್ಕಾರ ಹೈ ಕೋರ್ಟ್ ಗೆ ಅರಣ್ಯ ಒತ್ತುವರಿ ತೆರವು ಬಗ್ಗೆ ಪ್ರಮಾಣ ಪತ್ರ ನೀಡಿದೆ. ಅದಕೆ ಸ್ಪೆಷಲ್ ಫೋರ್ಸ್ ಸಮಿತಿ ರಚನೆ ಮಾಡಿದೆ. ಈಗ ಮಲೆನಾಡಲ್ಲಿ ನಡೆಯುತ್ತಾ ಇರುವ ತೆರವು ಅದರ ಭಾಗ ಅಷ್ಟೇ. ರಾಜ್ಯದಲ್ಲಿ ಬಿಜೆಪಿ ವಿರೋಧ ಪಕ್ಷ ಆಗಿ ಈ ಬಗ್ಗೆ ವಿಧಾನಸೌಧದಲ್ಲಿ ಯಾವ ಪ್ರತಿರೋಧ ಒಡ್ದುವುದಿಲ್ಲ. ಪ್ರಮಾಣ ಪತ್ರ ವಿಷಯ ಸದನದಲ್ಲಿ ಮುನ್ನೆಲೆ ಚರ್ಚೆ ಬರಲ್ಲ. ನಮ್ಮ ಸಂಸದರ ತಮ್ಮ ಬಿ ವೈ ವಿಜಯೇಂದ್ರರವರೆ ಬಿಜೆಪಿ ರಾಜ್ಯ ಅಧ್ಯಕ್ಷರು ಬೇರೆ. ನಿಮ್ಮ ಕಾರ್ಯಕಾರಿಣಿಯಲ್ಲೂ ಈ ಬಗ್ಗೆ ಅಜೆಂಡಾ ಇಲ್ಲ. ನಮ್ಮ ಹರತಾಳು ಹಾಲಪ್ಪನವರು ರಾಜ್ಯ ಬಿಜೆಪಿ ಉಪಾಧ್ಯಕ್ಷರು ಎಂದಿದ್ದಾರೆ.
ಸರ್ಕಾರ ನಡೆಸ್ತಾ ಇರೋ ಕೇಂದ್ರ ನೋಡಿದರೆ ಹಂಗೆ ರಾಜ್ಯ ವಿರೋಧ ಪಕ್ಷ ಬಿಜೆಪಿ ಹಿಂಗೇ..!! ಹಕ್ರೆ ಸರ್.. ನೀವು ತೋರೋ ಪ್ರತಿರೋಧ ನಿಮ್ಮ ಪಕ್ಷ ಸರ್ಕಾರ ಕಡೆಯಿಂದಲೆ ಇಲ್ಲ. ನೀವು ನೋಡಿದರೆ ರಾಜ್ಯ ಸರ್ಕಾರಕೆ ದಿಕ್ಕಾರ ಶಾಸಕರಿಗೆ ದಿಕ್ಕಾರ ಅಂತ ಇದ್ದೀರಿ. ನಿಮ್ಮ ಕೂಗು ವಸ್ತುನಿಷ್ಠ ಆಗಬೇಕು ಅಂದರೆ ಕಾಡು ನಾಡಿನ ಬಿಕ್ಕಟ್ಟು ಬಗೆ ಹರಿಸದ ಕೇಂದ್ರ ಮತ್ತು ರಾಜ್ಯ ಸರ್ಕಾರಕೆ.. ದಿಕ್ಕಾರ ದಿಕ್ಕಾರ ಆಗ್ಬೇಕು. ಕ್ಷಮಿಸಿ.. ಮಲೆನಾಡು ಜನರ ಬಿಕ್ಕಟ್ಟು ಪಕ್ಷ ರಾಜಕೀಯ ಆಚೆ ಇದೆ. ಸಮಸ್ಯೆ ಬಿಜೆಪಿ ಕಾಂಗ್ರೆಸ್ ಎರಡರಲ್ಲೂ ಇದೆ. ಇದನ್ನ ಮರೆ ಮಾಚಲು ಸಾಧ್ಯ ಇಲ್ಲ. ಮರೆಮಾಚಿ ಒಮ್ಮುಕ ದಿಕ್ಕಾರ ಕೂಗಿಸಿದ್ರೆ. ಇದು ರಾಜಕೀಯ ಬಿಟ್ರೆ ಬೇರೇನೂ ಅಲ್ಲ..!!! ಇದೆ ಮಾತನ್ನು ಮೊನ್ನೆ ಅರಗ ಸರ್ ಗೆ ಹೇಳಿದ್ದೆ. ಇವತ್ತು ನಿಮಗೆ ಎಂಬುದಾಗಿ ಬಿಜೆಪಿ ಮುಖಂಡ ಮಲ್ಲಿಕಾರ್ಜುನ ಹಕ್ರೆ ಅವರಿಗೆ, ಕಾಂಗ್ರೆಸ್ ಮುಖಂಡ ಜಿ.ಟಿ ಸತ್ಯನಾರಾಯಣ ತುಮುರಿ ತಿರುಗೇಟು ನೀಡಿದ್ದಾರೆ.
ಶಕ್ತಿ, ಗೃಹಲಕ್ಷ್ಮೀ ಯೋಜನೆಗಳು ಮಹಿಳಾ ಸಬಲೀಕರಣ, ಸ್ವಾಭಿಮಾನದ ಸಂಕೇತ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್
BIG NEWS: ಗೃಹ ಲಕ್ಷ್ಮೀ ಯೋಜನೆ ಹಣವನ್ನು ದೇವಸ್ಥಾನಕ್ಕೆ ದೇಣಿಗೆಯಾಗಿ ನೀಡಿದ ಯಜಮಾನಿ








