ಬೆಂಗಳೂರು: ಇಂದಿನಿಂದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-1 ಆರಂಭಗೊಂಡಿತ್ತು. ಮೊದಲ ದಿನದ ಪರೀಕ್ಷೆ ಸುಸೂತ್ರವಾಗಿ ನೆರವೇರಿದ್ದು, 4.93 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ.
ಈ ಬಗ್ಗೆ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಮಾಹಿತಿ ಹಂಚಿಕೊಂಡಿದ್ದು, ಇಂದು ರಾಜ್ಯಾಧ್ಯಂತ ದ್ವಿತೀಯ ಪಿಯುಸಿ ಪರೀಕ್ಷೆ-1ರ ಕನ್ನಡ ಮತ್ತು ಅರೇಬಿಕ್ ಪರೀಕ್ಷೆಗಳು ನಡೆದವು. ಇದಕ್ಕೆ 5,09,085 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಇವರಲ್ಲಿ 4,93,132 ಮಂದಿ ಹಾಜರಾಗಿದ್ದಾರೆ. 15,953 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ ಎಂಬುದಾಗಿ ತಿಳಿಸಿದೆ.
ಬೆಂಗಳೂರು ನಾರ್ಥ್ ವಿಭಾಗದಲ್ಲಿ 33.498, ಬೆಂಗಳೂರು ಸೌಥ್ ನಲ್ಲಿ 41,703, ಬೆಂಗಳೂರು ಗ್ರಾಮಾಂತರದಲ್ಲಿ 9,458, ರಾಮನಗರದಲ್ಲಿ 6,518, ಚಿತ್ರದುರ್ಗದಲ್ಲಿ 11,703, ಶಿವಮೊಗ್ಗದಲ್ಲಿ 14,708 ಸೇರಿದಂತೆ 4,93,132 ವಿದ್ಯಾರ್ಥಿಗಳು ಮೊದಲ ದಿನದ ಕನ್ನಡ ಮತ್ತು ಅರಾಬಿಕ್ ಭಾಷೆಯ ಪರೀಕ್ಷೆಗೆ ಹಾಜರಾಗಿದ್ದಾರೆ. ಇಂದಿನ ವಿದ್ಯಾರ್ಥಿಗಳ ಹಾಜರಾತಿ ಪ್ರಮಾಣ ಶೇ.96.87 ಆಗಿದೆ.
ರಾಜ್ಯದ ರೈತರಿಗೆ ಸಚಿವ ಕೆ.ಜೆ ಜಾರ್ಜ್ ಗುಡ್ ನ್ಯೂಸ್: ಹಗಲು ವೇಳೆಯಲ್ಲೂ 7 ಗಂಟೆ ವಿದ್ಯುತ್ ಪೂರೈಕೆ








