Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ನನ್ನ ಪರವಾಗಿ ಯಾರೂ ದೆಹಲಿಗೆ ಹೋಗುವುದು ಬೇಡ: ಡಿಸಿಎಂ ಡಿ.ಕೆ. ಶಿವಕುಮಾರ್

27/02/2026 7:26 PM

ವಿನಯ್ ಕುಲಕರ್ಣಿ ಜಾಮೀನು; ಕೊನೆಗೂ ಸಿಕ್ಕ ನ್ಯಾಯ- ಡಿಸಿಎಂ ಡಿಕೆಶಿ

27/02/2026 7:24 PM

BREAKING : ಪಾಕಿಸ್ತಾನ ಮೇಲೆ ಪ್ರತಿದಾಳಿಗೆ ಅಫ್ಘಾನ್ ಸಿದ್ಧತೆ ; ‘ಆತ್ಮಹತ್ಯಾ ದಳ’ಕ್ಕೆ ತಾಲಿಬಾನ್ ಸಜ್ಜು!

27/02/2026 6:13 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ವಿನಯ್ ಕುಲಕರ್ಣಿ ಜಾಮೀನು; ಕೊನೆಗೂ ಸಿಕ್ಕ ನ್ಯಾಯ- ಡಿಸಿಎಂ ಡಿಕೆಶಿ
KARNATAKA

ವಿನಯ್ ಕುಲಕರ್ಣಿ ಜಾಮೀನು; ಕೊನೆಗೂ ಸಿಕ್ಕ ನ್ಯಾಯ- ಡಿಸಿಎಂ ಡಿಕೆಶಿ

By kannadanewsnow0927/02/2026 7:24 PM

ಬೆಂಗಳೂರು: ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಜಾಮೀನು ನೀಡಿರುವುದು ಅವರಿಗೆ ಕೊನೆಗೂ ಸಿಕ್ಕ ನ್ಯಾಯವಾಗಿದೆ ಎಂಬುದಾಗಿ ಡಿಸಿಎಂ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.

ವಿನಯ್ ಕುಲಕರ್ಣಿ ಅವರಿಗೆ ಜಾಮೀನು ಸಿಕ್ಕಿರುವ ವಿಚಾರವಾಗಿ ಕೇಳಿದಾಗ, “ಯಾವುದೇ ವ್ಯಕ್ತಿಗೆ ಕಿರುಕುಳ ನೀಡಬೇಕು ಎಂದರೆ ಅದಕ್ಕೆ ಒಂದು ಮಿತಿ ಇದೆ. ರಾಜಕೀಯ ಉದ್ದೇಶದಿಂದ ಮುಕ್ತಾಯಗೊಂಡಿದ್ದ ಪ್ರಕಾರಣವನ್ನು ಯಡಿಯೂರಪ್ಪ ಅವರ ಸರ್ಕಾರ ಸಿಬಿಐಗೆ ಹಸ್ತಾಂತರ ಮಾಡಿ, ತೊಂದರೆ ನೀಡಲಾಗುತ್ತಿತ್ತು. ಅವರಿಗೆ ಅವರ ಕ್ಷೇತ್ರಕ್ಕೆ ಕಾಲಿಡದಂತೆ ನಿರ್ಬಂಧ ಹೇರಲಾಗಿತ್ತು. ಚುನಾವಣೆಯಲ್ಲಿ ಅವರು ಮತ ಕೇಳುವಂತಿಲ್ಲ ಎಂಬ ಆದೇಶವನ್ನು ಮೊದಲ ಬಾರಿಗೆ ನೀಡಲಾಗಿತ್ತು. ನಾವು ನ್ಯಾಯಾಲಯಕ್ಕೆ ತಲೆಬಾಗಿ ಗೌರವ ನೀಡಿದೆವು. ಇದೆಲ್ಲವನ್ನು ಗಮನಿಸಿದ ನ್ಯಾಯಾಲಯ ಜಾಮೀನು ನೀಡಿದೆ ಎಂದರು.

ನಾನು ಪ್ರಕರಣದ ವಿಚಾರಣೆ ಗಮನಿಸುತ್ತಾ ಬಂದಿದ್ದೇನೆ. ಈಗ ಅವರಿಗೆ ನ್ಯಾಯ ಸಿಕ್ಕಿದೆ, ಅವರು, ಅವರ ಕುಟುಂಬ, ಕ್ಷೇತ್ರದ ಜನ ಹಾಗೂ ಅವರು ಅನುಭವಿಸಿದ ವೇದನೆ ಯಾರೂ ಮರೆಯಲು ಸಾಧ್ಯವಿಲ್ಲ. ಇದನ್ನು ನಾನೂ ಅನುಭವಿಸಿದ್ದೇನೆ. ದೇವರು ವಿನಯ್ ಕುಲಕರ್ಣಿ ಅವರಿಗೆ ಇನ್ನಷ್ಟು ಹೆಚ್ಚಿನ ಶಕ್ತಿ ನೀಡಲಿ, ನ್ಯಾಯ ಒದಗಿಸಿರುವ ನ್ಯಾಯಾಲಯಕ್ಕೆ ಗೌರವದಿಂದ ಅಭಿನಂದನೆ ಅರ್ಪಿಸುತ್ತೇವೆ” ಎಂದು ತಿಳಿಸಿದರು.

ವಿವಿಧ ಹುದ್ದೆಗಳ ನೇಮಕಾತಿಗೆ ಸಚಿವ ಸಂಪುಟದಲ್ಲಿ ತೀರ್ಮಾನ ಮಾಡಿರುವ ಬಗ್ಗೆ ಕೇಳಿದಾಗ, “ನಾವು ಹೊಸ ಮೀಸಲಾತಿ ಮಾಡಿದ್ದರೂ 2022ರ ನ್ಯಾಯಾಲಯ ಆದೇಶ ಅನುಸಾರ ಹಳೆ ಮೀಸಲಾತಿ ಮೇಲೆ ಮೊದಲ ಹಂತದಲ್ಲಿ 56 ಸಾವಿರ ನೇಮಕಾತಿ ಮಾಡಲು ತೀರ್ಮಾನ ಮಾಡಲಾಗಿದೆ. ಉದ್ಯೋಗ ನೇಮಕಾತಿ ಮಾಡುವುದಾಗಿ ನಾವು ಯುವಕರಿಗೆ ಮಾತು ನೀಡಿದ್ದು, ನಾವು ಅದರಂತೆ ನೇಮಕಾತಿ ಮಾಡುತ್ತೇವೆ. 1 ಲಕ್ಷಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕಾತಿ ಮಾಡಬೇಕು. ಎಲ್ಲವನ್ನು ಏಕ ಕಾಲಕ್ಕೆ ಮಾಡಿದರೆ ಕೆಲವರಿಗೆ ಅವಕಾಶ ಸಿಗುವುದಿಲ್ಲ ಎಂದು ಹಂತ ಹಂತವಾಗಿ ಮಾಡಲಾಗುವುದು. ನ್ಯಾಯಾಲಯಕ್ಕೆ ತಲೆಬಾಗಿ ಕಾನೂನಿನಲ್ಲಿ ಇರುವ ಅವಕಾಶವನ್ನು ಬಳಸಿಕೊಂಡು ನೇಮಕಾತಿ ಮಾಡುತ್ತೇವೆ. 2.84 ಲಕ್ಷ ಖಾಲಿ ಹುದ್ದೆಗಳನ್ನು ಹಂತ ಹಂತವಾಗಿ ತುಂಬಲಾಗುವುದು” ಎಂದು ತಿಳಿಸಿದರು.

Share. Facebook Twitter LinkedIn WhatsApp Email

Related Posts

ನನ್ನ ಪರವಾಗಿ ಯಾರೂ ದೆಹಲಿಗೆ ಹೋಗುವುದು ಬೇಡ: ಡಿಸಿಎಂ ಡಿ.ಕೆ. ಶಿವಕುಮಾರ್

27/02/2026 7:26 PM1 Min Read

8 ವರ್ಷ ಪ್ರೀತಿಸಿ ಕೈಕೊಡೋದಕ್ಕೆ ಯತ್ನಿಸಿದ ಶಿಕ್ಷಕ ಲಾಕ್: ಪೊಲೀಸರ ಸಮ್ಮುಖದಲ್ಲೇ ಪ್ರೇಯಸಿಗೆ ಮಾಂಗಲ್ಯಧಾರಣೆ

27/02/2026 5:40 PM1 Min Read

ರಾಜ್ಯದ ರೈತರಿಗೆ ಸಚಿವ ಕೆ.ಜೆ ಜಾರ್ಜ್ ಗುಡ್ ನ್ಯೂಸ್: ಹಗಲು ವೇಳೆಯಲ್ಲೂ 7 ಗಂಟೆ ವಿದ್ಯುತ್ ಪೂರೈಕೆ

27/02/2026 5:11 PM2 Mins Read
Recent News

ನನ್ನ ಪರವಾಗಿ ಯಾರೂ ದೆಹಲಿಗೆ ಹೋಗುವುದು ಬೇಡ: ಡಿಸಿಎಂ ಡಿ.ಕೆ. ಶಿವಕುಮಾರ್

27/02/2026 7:26 PM

ವಿನಯ್ ಕುಲಕರ್ಣಿ ಜಾಮೀನು; ಕೊನೆಗೂ ಸಿಕ್ಕ ನ್ಯಾಯ- ಡಿಸಿಎಂ ಡಿಕೆಶಿ

27/02/2026 7:24 PM

BREAKING : ಪಾಕಿಸ್ತಾನ ಮೇಲೆ ಪ್ರತಿದಾಳಿಗೆ ಅಫ್ಘಾನ್ ಸಿದ್ಧತೆ ; ‘ಆತ್ಮಹತ್ಯಾ ದಳ’ಕ್ಕೆ ತಾಲಿಬಾನ್ ಸಜ್ಜು!

27/02/2026 6:13 PM

ದೆಹಲಿಯಲ್ಲಿ ಚುನಾವಣೆ ನಡೆಸಿ, ಬಿಜೆಪಿ 10 ಸ್ಥಾನಗಳಲ್ಲಿ ಗೆದ್ದರೆ ರಾಜಕೀಯ ತ್ಯಜಿಸುತ್ತೇನೆ : ಅರವಿಂದ್ ಕೇಜ್ರಿವಾಲ್

27/02/2026 5:59 PM
State News
KARNATAKA

ನನ್ನ ಪರವಾಗಿ ಯಾರೂ ದೆಹಲಿಗೆ ಹೋಗುವುದು ಬೇಡ: ಡಿಸಿಎಂ ಡಿ.ಕೆ. ಶಿವಕುಮಾರ್

By kannadanewsnow0927/02/2026 7:26 PM KARNATAKA 1 Min Read

ಬೆಂಗಳೂರು: “ನನ್ನ ಪರವಾಗಿ ಯಾರೂ ದೆಹಲಿಗೆ ಹೋಗುವುದು ಬೇಡ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು. ಖಾಸಗಿ ಹೋಟೆಲ್ ಹಾಗೂ…

ವಿನಯ್ ಕುಲಕರ್ಣಿ ಜಾಮೀನು; ಕೊನೆಗೂ ಸಿಕ್ಕ ನ್ಯಾಯ- ಡಿಸಿಎಂ ಡಿಕೆಶಿ

27/02/2026 7:24 PM

8 ವರ್ಷ ಪ್ರೀತಿಸಿ ಕೈಕೊಡೋದಕ್ಕೆ ಯತ್ನಿಸಿದ ಶಿಕ್ಷಕ ಲಾಕ್: ಪೊಲೀಸರ ಸಮ್ಮುಖದಲ್ಲೇ ಪ್ರೇಯಸಿಗೆ ಮಾಂಗಲ್ಯಧಾರಣೆ

27/02/2026 5:40 PM

ರಾಜ್ಯದ ರೈತರಿಗೆ ಸಚಿವ ಕೆ.ಜೆ ಜಾರ್ಜ್ ಗುಡ್ ನ್ಯೂಸ್: ಹಗಲು ವೇಳೆಯಲ್ಲೂ 7 ಗಂಟೆ ವಿದ್ಯುತ್ ಪೂರೈಕೆ

27/02/2026 5:11 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.