Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

NEET ಮರುಪರೀಕ್ಷೆ: ಅಕ್ರಮ ಎಸಗಿದರೆ ಕಠಿಣ ಕಾನೂನು ಕ್ರಮ ಎದುರಿಸಬೇಕಾದೀತು: ಕೇಂದ್ರ ಸರ್ಕಾರ ಎಚ್ಚರಿಕೆ

ಜಿ-7 ಶೃಂಗಸಭೆ: ಫ್ರಾನ್ಸ್, ಸ್ಲೋವಾಕಿಯಾಗೆ ಪ್ರಧಾನಿ ಮೋದಿ ಐತಿಹಾಸಿಕ ಪ್ರವಾಸ ಆರಂಭ

​ತರಬೇತುದಾರ ಜಸ್ಪಾಲ್ ರಾಣಾ ನಿಧನಕ್ಕೆ ಕಣ್ಣೀರಿಟ್ಟ ಒಲಿಂಪಿಕ್ ಪದಕ ವಿಜೇತೆ ಮನು ಭಾಕರ್

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಉದ್ಯೋಗ ಸಿಗುತ್ತಿಲ್ಲವೇ? ಚಿಂತೆ ಬಿಡಿ: ಕೈತುಂಬಾ ಲಾಭ ತರುವ 7 ಭರ್ಜರಿ ಬ್ಯುಸಿನೆಸ್ ಐಡಿಯಾಗಳು ಇಲ್ಲಿವೆ!
KARNATAKA

ಉದ್ಯೋಗ ಸಿಗುತ್ತಿಲ್ಲವೇ? ಚಿಂತೆ ಬಿಡಿ: ಕೈತುಂಬಾ ಲಾಭ ತರುವ 7 ಭರ್ಜರಿ ಬ್ಯುಸಿನೆಸ್ ಐಡಿಯಾಗಳು ಇಲ್ಲಿವೆ!

By kannadanewsnow57

ಬೆಂಗಳೂರು: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪದವಿ ಮುಗಿಸಿ ಕೈಯಲ್ಲಿ ಸರ್ಟಿಫಿಕೇಟ್ ಇದ್ದರೂ, ಅರ್ಹತೆಗೆ ತಕ್ಕ ಕೆಲಸ ಸಿಗದೆ ಎಷ್ಟೋ ಯುವಕ-ಯುವತಿಯರು ಕಂಗೆಟ್ಟಿದ್ದಾರೆ. ಆದರೆ, “ಕೆಲಸ ಸಿಕ್ಕಿಲ್ಲ” ಎಂದು ಕೈಕಟ್ಟಿ ಕುಳಿತುಕೊಳ್ಳುವ ಬದಲು, ಸ್ವಂತ ಕಾಲಿನ ಮೇಲೆ ನಿಂತು ಯಶಸ್ವಿ ಉದ್ಯಮಿಯಾಗುವ ಅವಕಾಶಗಳು ನಮ್ಮ ಮುಂದಿವೆ.

ಕಡಿಮೆ ಹೂಡಿಕೆಯಲ್ಲಿ ಆರಂಭಿಸಿ, ವರ್ಷವಿಡೀ ಉತ್ತಮ ಲಾಭ ತಂದುಕೊಡುವ 7 ಪ್ರಮುಖ ವ್ಯವಹಾರಗಳ ಬಗ್ಗೆ ಇಲ್ಲಿದೆ ಕಂಪ್ಲೀಟ್ ಮಾಹಿತಿ.

1. ಜ್ಯೂಸ್ ಮತ್ತು ಹಣ್ಣಿನ ಅಂಗಡಿ (Juice & Fruit Stall)

ಆರೋಗ್ಯದ ಬಗ್ಗೆ ಕಾಳಜಿ ವಹಿಸುವವರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ತಾಜಾ ಹಣ್ಣಿನ ರಸಕ್ಕೆ ಎಲ್ಲಿಲ್ಲದ ಬೇಡಿಕೆ ಇದೆ. ಜನನಿಬಿಡ ಪ್ರದೇಶ ಅಥವಾ ಕಾಲೇಜುಗಳ ಹತ್ತಿರ ಈ ವ್ಯವಹಾರ ಆರಂಭಿಸಿದರೆ ದಿನವಹಿ ಸಾವಿರಾರು ರೂಪಾಯಿ ಗಳಿಸಬಹುದು.

2. ಬೇಕರಿ ವ್ಯವಹಾರ (Bakery Business)

ಬೆಳಗಿನ ಉಪಹಾರದಿಂದ ಹಿಡಿದು ಸಂಜೆಯ ಸ್ನ್ಯಾಕ್ಸ್ ವರೆಗೆ ಬೇಕರಿ ಉತ್ಪನ್ನಗಳಿಗೆ ಸದಾ ಡಿಮ್ಯಾಂಡ್ ಇರುತ್ತದೆ. ಕೇಕ್, ಬಿಸ್ಕೆಟ್ ಮತ್ತು ಪಫ್ಸ್‌ಗಳ ತಯಾರಿಕೆಯಲ್ಲಿ ಗುಣಮಟ್ಟ ಕಾಪಾಡಿಕೊಂಡರೆ ಈ ಉದ್ಯಮದಲ್ಲಿ ತಿರುಗಿ ನೋಡುವ ಅವಶ್ಯಕತೆಯಿಲ್ಲ.

3. ಇಂಟರ್ನೆಟ್ ಕೆಫೆ ಮತ್ತು ಜೆರಾಕ್ಸ್ ಕೇಂದ್ರ (Cyber Cafe & Xerox Centre)

ಸರ್ಕಾರಿ ಯೋಜನೆಗಳಿಗೆ ಅರ್ಜಿ ಸಲ್ಲಿಸಲು, ಆನ್‌ಲೈನ್ ಕೆಲಸಗಳಿಗೆ ಮತ್ತು ವಿದ್ಯಾರ್ಥಿಗಳ ಪ್ರಾಜೆಕ್ಟ್ ವರ್ಕ್‌ಗಳಿಗೆ ಇಂಟರ್ನೆಟ್ ಕೆಫೆಗಳು ಅನಿವಾರ್ಯ. ಇದರ ಜೊತೆಗೆ ಪ್ರಿಂಟಿಂಗ್ ಮತ್ತು ಲ್ಯಾಮಿನೇಷನ್ ಸೌಲಭ್ಯ ನೀಡಿದರೆ ಲಾಭ ದ್ವಿಗುಣವಾಗಲಿದೆ.

4. ಫಾಸ್ಟ್ ಫುಡ್ ಟ್ರಕ್ (Fast Food Truck)

ಇದು ಇಂದಿನ ಟ್ರೆಂಡಿಂಗ್ ಬ್ಯುಸಿನೆಸ್. ಸಂಜೆ ವೇಳೆ ಜನದಟ್ಟಣೆ ಇರುವ ಕಡೆ ರುಚಿಕರವಾದ ಫಾಸ್ಟ್ ಫುಡ್ ನೀಡುವ ಮೂಲಕ ಕಡಿಮೆ ಅವಧಿಯಲ್ಲಿ ಹೆಚ್ಚು ಹಣ ಗಳಿಸಬಹುದು. ಬಾಡಿಗೆ ಕಟ್ಟಡದ ಕಿರಿಕಿರಿ ಇಲ್ಲದಿರುವುದು ಇದರ ಪ್ಲಸ್ ಪಾಯಿಂಟ್.

5. ಐಸ್ ಕ್ರೀಮ್ ಮತ್ತು ತಂಪು ಪಾನೀಯಗಳ ಪಾರ್ಲರ್

ಬೇಸಿಗೆಯಲ್ಲಂತೂ ಇದಕ್ಕೆ ಭಾರೀ ಬೇಡಿಕೆ. ಬ್ರ್ಯಾಂಡೆಡ್ ಐಸ್‌ಕ್ರೀಮ್‌ಗಳ ಜೊತೆಗೆ ವೈವಿಧ್ಯಮಯ ತಂಪು ಪಾನೀಯಗಳನ್ನು ಮಾರಾಟ ಮಾಡುವುದು ಲಾಭದಾಯಕ ಹಾದಿಯಾಗಿದೆ.

6. ಸ್ಟೇಷನರಿ ಮತ್ತು ಪುಸ್ತಕದ ಅಂಗಡಿ (Stationery Shop)

ಶಾಲೆ, ಕಾಲೇಜು ಮತ್ತು ಕಚೇರಿಗಳ ಹತ್ತಿರ ಸ್ಟೇಷನರಿ ಅಂಗಡಿ ತೆರೆಯುವುದು ಸುಸ್ಥಿರ ಆದಾಯಕ್ಕೆ ದಾರಿಯಾಗಿದೆ. ಪೆನ್ನು, ಪುಸ್ತಕಗಳಿಂದ ಹಿಡಿದು ಗಿಫ್ಟ್ ಆರ್ಟಿಕಲ್‌ಗಳವರೆಗೆ ಎಲ್ಲವನ್ನೂ ಒಂದೇ ಸೂರಿನಡಿ ನೀಡಿದರೆ ಗ್ರಾಹಕರು ಹೆಚ್ಚುತ್ತಾರೆ.

7. ಸಾಕುಪ್ರಾಣಿಗಳು ಮತ್ತು ಅವುಗಳ ಆಹಾರದ ಅಂಗಡಿ (Pet Shop)

ನಗರ ಪ್ರದೇಶಗಳಲ್ಲಿ ಸಾಕುಪ್ರಾಣಿಗಳನ್ನು ಸಾಕುವ ಹವ್ಯಾಸ ಹೆಚ್ಚಿದೆ. ಹೀಗಾಗಿ ನಾಯಿ, ಬೆಕ್ಕು ಹಾಗೂ ಪಕ್ಷಿಗಳ ಆಹಾರ ಮತ್ತು ಅವುಗಳ ಆರೈಕೆಯ ವಸ್ತುಗಳಿಗೆ ಮಾರುಕಟ್ಟೆಯಲ್ಲಿ ಭರ್ಜರಿ ಬೇಡಿಕೆಯಿದೆ.

Can't find a job? Stop worrying: Here are 7 great business ideas that will bring in a lot of profits!
Share. Facebook Twitter LinkedIn WhatsApp Email

Related Posts

ರಾಜ್ಯದಲಲ್ಲೂಂದು ಘೋರ ಘಟನೆ: ನಂಬಿಸಿ ಹಣ ಪಡೆದವ ಕೈಕೊಟ್ಟಿದ್ದಕ್ಕೆ ವಿದ್ಯಾರ್ಥಿನಿ ಆತ್ಮಹತ್ಯೆ

1 Min Read

ಭಾರತದಲ್ಲಿ ನಕ್ಸಲ್ ಚಟುವಟಿಕೆಗೆ ವಿದೇಶದಿಂದ ಫಂಡಿಂಗ್ ಆರೋಪ: ಬೆಂಗಳೂರಿನ ನಿವಾಸಿ ಸೇರಿದಂತೆ 7 ಆರೋಪಿಗಳ ವಿರುದ್ಧ FIR ದಾಖಲು

2 Mins Read

BIG NEWS: ಬೆಂಗಳೂರು ಅಭಿವೃದ್ಧಿ ಖಾತೆ ಸ್ವೀಕರಿಸಲು ಕೃಷ್ಣ ಬೈರೇಗೌಡ ಹಿಂದೇಟು: ಸರ್ಕಾರಿ ಕಾರು ಬಿಟ್ಟು ಖಾಸಗಿ ಕಾರಿನಲ್ಲೇ ಸಚಿವರ ಓಡಾಟ!

2 Mins Read
Recent News

NEET ಮರುಪರೀಕ್ಷೆ: ಅಕ್ರಮ ಎಸಗಿದರೆ ಕಠಿಣ ಕಾನೂನು ಕ್ರಮ ಎದುರಿಸಬೇಕಾದೀತು: ಕೇಂದ್ರ ಸರ್ಕಾರ ಎಚ್ಚರಿಕೆ

ಜಿ-7 ಶೃಂಗಸಭೆ: ಫ್ರಾನ್ಸ್, ಸ್ಲೋವಾಕಿಯಾಗೆ ಪ್ರಧಾನಿ ಮೋದಿ ಐತಿಹಾಸಿಕ ಪ್ರವಾಸ ಆರಂಭ

​ತರಬೇತುದಾರ ಜಸ್ಪಾಲ್ ರಾಣಾ ನಿಧನಕ್ಕೆ ಕಣ್ಣೀರಿಟ್ಟ ಒಲಿಂಪಿಕ್ ಪದಕ ವಿಜೇತೆ ಮನು ಭಾಕರ್

ಭಾರತದಲ್ಲಿ ನೀವು ಎಂದಿಗೂ ನಿರ್ಲಕ್ಷಿಸಬಾರದ 10 ಅತ್ಯಂತ ಅಪಾಯಕಾರಿ ಹಾವುಗಳಿವು

State News
KARNATAKA

ರಾಜ್ಯದಲಲ್ಲೂಂದು ಘೋರ ಘಟನೆ: ನಂಬಿಸಿ ಹಣ ಪಡೆದವ ಕೈಕೊಟ್ಟಿದ್ದಕ್ಕೆ ವಿದ್ಯಾರ್ಥಿನಿ ಆತ್ಮಹತ್ಯೆ

By ವಸಂತ ಬಿ ಈಶ್ವರಗೆರೆ KARNATAKA 1 Min Read

ಕಾರವಾರ: ಕಾಲೇಜು ಶುಲ್ಕ ಪಾವತಿಸಲು ತಂದೆ ಕೊಟ್ಟಿದ್ದ ಹಣವನ್ನು ಪರಿಚಯಸ್ಥನಿಗೆ ಸಾಲವಾಗಿ ನೀಡಿ, ಆತ ಹಣವನ್ನು ಸಕಾಲದಲ್ಲಿ ಮರಳಿ ನೀಡದ…

ಭಾರತದಲ್ಲಿ ನಕ್ಸಲ್ ಚಟುವಟಿಕೆಗೆ ವಿದೇಶದಿಂದ ಫಂಡಿಂಗ್ ಆರೋಪ: ಬೆಂಗಳೂರಿನ ನಿವಾಸಿ ಸೇರಿದಂತೆ 7 ಆರೋಪಿಗಳ ವಿರುದ್ಧ FIR ದಾಖಲು

BIG NEWS: ಬೆಂಗಳೂರು ಅಭಿವೃದ್ಧಿ ಖಾತೆ ಸ್ವೀಕರಿಸಲು ಕೃಷ್ಣ ಬೈರೇಗೌಡ ಹಿಂದೇಟು: ಸರ್ಕಾರಿ ಕಾರು ಬಿಟ್ಟು ಖಾಸಗಿ ಕಾರಿನಲ್ಲೇ ಸಚಿವರ ಓಡಾಟ!

ನಿಮ್ಮ ಮನಸ್ಸಿನಲ್ಲಿರುವ ಎಲ್ಲಾ ಆಸೆಗಳು ಈಡೇರಲು ಪ್ರತಿದಿನ 30 ಸೆಕೆಂಡ್ ಈ ಚಿತ್ರ ವೀಕ್ಷಿಸಿ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.