ಬೆಂಗಳೂರು: ಕಟ್ಟಡ ಕಲ್ಲುಗಣಿ ಗುತ್ತಿಗೆ, ಲೈಸೆನ್ಸ್ ಪ್ರದೇಶಗಳಲ್ಲಿ ಹಾಗೂ ಸದರಿ ಗುತ್ತಿಗೆ, ಲೈಸೆನ್ಸ್ ಪ್ರದೇಶಗಳಲ್ಲಿ ಒತ್ತುವರಿ ಮಾಡಿ ಗಣಿಗಾರಿಕೆ ನಡೆಸಿ ಸಾಗಾಣಿಕೆ ಮಾಡಿರುವ ಉಪ ಖನಿಜದ ಪ್ರಮಾಣಕ್ಕೆ ವಿಧಿಸುವ ದಂಡವನ್ನು One Time Settlement( OTS) ಮೂಲಕ ಪಾವತಿಸಲು ಅವಕಾಶ ನೀಡಿದೆ. ಆ ಮೂಲಕ ಕಲ್ಲು ಗಣಿಗಾರಿಕೆ ಗುತ್ತಿಗೆದಾರರಿಗೆ ಗುಡ್ ನ್ಯೂಸ್ ನೀಡಲಾಗಿದೆ.
ಈ ಕುರಿತಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ರಾಜ್ಯದಲ್ಲಿ ಕಟ್ಟಡ ಕಲ್ಲುಗಣಿ ಗುತ್ತಿಗೆ / ಲೈಸೆನ್ಸ್ ವುದೇಶಗಳಲ್ಲಿ ( (2006-07)ನೇ ಸಾಲಿನಿಂದ ಸಂಚಿತ ಆಡಿಟ್ ಪ್ರಮಾಣಕ್ಕಿಂತ ಹೆಚ್ಚುವರಿಯಾಗಿ ಉಪಖನಿಜವನ್ನು ತೆಗೆದು ರಾಜಧನವನ್ನು ಪಾವತಿಸದೇ, ಖನಿಜ ಸಾಗಾಣಿಕೆ ಪರವಾನಿಗೆ ಪಡೆಯದೇ ಕಟ್ಟಡ ಕಲ್ಲು ಸಾಗಾಣಿಕೆ ಮಾಡಿರುವ ಸಂಬಂಧ) ಹಾಗೂ ಕಟ್ಟಡ ಕಲ್ಲು ಗಣಿ ಗುತ್ತಿಗೆ / ಲೈಸೆನ್ಸ್ ಪದೇಶವನ್ನು ಒತ್ತುವರಿ ಮಾಡಿರುವ ಕಲ್ಲು ಗಣಿ ಗುತ್ತಿಗೆದಾರರು / ಲೈಸೆನ್ಸ್ ದಾರರುಗಳಿಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ವಿಧಿಸಿರುವ ದಂಡವನ್ನು One Time Settlement (OTS) ಮೂಲಕ ಅನುಷ್ಠಾನಗೊಳಿಸಿ ಇತ್ಯರ್ಥಪಡಿಸಲು ಉಲ್ಲೇಖಿತ ಕರ್ನಾಟಕ ಉಪಖನಿಜ ರಿಯಾಯಿತಿ (ತಿದ್ದುಪಡಿ) ನಿಯಮಗಳು, 2025ರ ನಿಯಮ-44-A ನ್ನು ಜಾರಿಗೊಳಿಸಿದೆ.
ಸದರಿ ತಿದ್ದುಪಡಿ ನಿಯಮಗಳಂತೆ ಕಲ್ಲು ಗಣಿ ಗುತ್ತಿಗೆ / ಲೈಸನ್ಸ್ ವುದೇಶಗಳಲ್ಲಿ ಸಂಚಿತ ಆಡಿಟ್ ಪ್ರಮಾಣಕ್ಕಿಂತ ಅಧಿಕವಾಗಿ ಉಪಖನಿಜವನ್ನು ಉತ್ಪಾದಿಸಿ ಮತ್ತು ಖನಿಜ ಸಾಗಾಣಿಕೆ ಪರವಾನಿಗೆ ಪಡೆಯದೇ ನಿಯಮ ಉಲ್ಲಂಘಿಸಿ ಸಾಗಾಣಿಕೆ ಮಾಡಿರುವ ಪ್ರಕರಣಗಳನ್ನು ಮತ್ತು ಒತ್ತುವರಿ ಮಾಡಿ ಗಣಿಗಾರಿಕೆ ನಡೆಸಿ ಸಾಗಾಣಿಕೆ ಮಾಡಿರುವ ಪಕರಣಗಳಿಗೆ One Time Settlement (OTS) ರನ್ವಯ ದಂಡ ವಿಧಿಸಿ ಸಂಗ್ರಹಿಸಲು ಅವಕಾಶ ಕಲ್ಪಿಸಿದೆ.
ಮೇಲ್ಕಂಡ ನಿಯಮ-44-A ನ್ನು ಅನುಷ್ಠಾನಗೊಳಿಸಲು ಮಾರ್ಗಸೂಚಿಗಳನ್ನು ಹೊರಡಿಸುವುದು ಸೂಕ್ತವೆಂದು ಭಾವಿಸಿ, ಸರ್ಕಾರವು ಕೆಳಕಂಡಂತೆ ಮಾರ್ಗಸೂಚಿಗಳನ್ನು ಜಾರಿ ಮಾಡಿದೆ.
ಪುಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಕರ್ನಾಟಕ ಉಪಖನಿಜ ರಿಯಾಯಿತಿ (ತಿದ್ದುಪಡಿ) ನಿಯಮಗಳು, 2025ರ ನಿಯಮ-44-A(1)(e) ರಲ್ಲಿ ಪುದತ್ತವಾದ ಅಧಿಕಾರದನ್ವಯ, ಸರ್ಕಾರವು, One Time Settlement (OTS) ಯೋಜನೆಯನ್ನು ಜಾರಿಗೊಳಿಸಲು ಈ ಕೆಳಕಂಡಂತೆ ಮಾರ್ಗಸೂಚಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಜಾರಿಗೊಳಿಸಿದೆ:
ಕಟ್ಟಡ ಕಲ್ಲು ಗಣಿ ಗುತ್ತಿಗೆ ಪ್ರದೇಶದಲ್ಲಿ ಪರವಾನಗಿ ಪಡೆಯದೆ ಕಟ್ಟಡ ಕಲ್ಲು ಉಪಖನಿಜವನ್ನು ಅನಧಿಕೃತವಾಗಿ ಸಾಗಾಣಿಕೆ ಮಾಡಿರುವ / ಗುತ್ತಿಗೆ ಪ್ರದೇಶವನ್ನು ಒತ್ತುವರಿ ಮಾಡಿ ಗಣಿಗಾರಿಕೆ ನಡೆಸಿರುವ ಪ್ರಕರಣಗಳಲ್ಲಿ ಕಟ್ಟಡ ಕಲ್ಲಿನ ಪ್ರಮಾಣವನ್ನು ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರದಿಂದ ಸಲ್ಲಿಸಲಾದ ವರದಿಯನ್ವಯ ಲೆಕ್ಕ ಹಾಕುವ ಕುರಿತು:- 1. ಕೆ.ಎಂ.ಎಂ.ಸಿ ನಿಯಮಗಳು, 19940 Java-44-A(1)(a) ರಲ್ಲಿ ತಿಳಿಸಿರುವಂತೆ ಕಟ್ಟಡ ಕಲ್ಲು ಗಣಿ ಗುತ್ತಿಗೆ ಪುದೇಶದಲ್ಲಿ ಪರವಾನಗಿ ಪಡೆಯದೆ ಕಟ್ಟಡ ಕಲ್ಲು ಉಪಖನಿಜವನ್ನು ಅನಧಿಕೃತವಾಗಿ ಸಾಗಾಣಿಕೆ ಮಾಡಿರುವ ಪಮಾಣವನ್ನು ಹಾಗೂ ನಿಯಮ 44-Á(1)(b) ರಲ್ಲಿ ತಿಳಿಸಿರುವಂತೆ, ಗುತ್ತಿಗೆ ಪದೇಶವನ್ನು ಒತ್ತುವರಿ ಮಾಡಿ ಗಣಿಗಾರಿಕೆ ನಡೆಸಿ ಸಾಗಾಣಿಕೆ ಮಾಡಿರುವ ಕಟ್ಟಡ ಕಲ್ಲಿನ ಪುಮಾಣವನ್ನು ಪ್ರತ್ಯೇಕವಾಗಿ ಲೆಕ್ಕ ಹಾಕುವುದು.
2. ಈಗಾಗಲೇ ಕಲ್ಲುಗಣಿ ಗುತ್ತಿಗೆ ವುದೇಶದಲ್ಲಿ ಖನಿಜ ಸಾಗಾಣಿಕೆ ಪರವಾನಗಿ ಪಡೆಯದೇ ಕಟ್ಟಡ ಕಲ್ಲು ಉಪಖನಿಜವನ್ನು ಸಾಗಾಣಿಕೆ ಮಾಡಿರುವ ಪಕರಣಗಳಿಗೆ ನಿಯಮ-44(4) ರಂತೆ ದಂಡ ವಿಧಿಸಿ, ಸದರಿ ದಂಡದ ಮೊತ್ತವನ್ನು ಕಲ್ಲುಗಣಿ ಗುತ್ತಿಗೆದಾರರು ಪಾವತಿಸಿದಲ್ಲಿ, ಸದರಿ ajada Cumulative Audit Quantity 32, One Time Settlement (OTS) ವ್ಯಾಪ್ತಿಯಲ್ಲಿ ಪರಿಗಣಿಸಿ ಪುನಃ ದಂಡ ವಿಧಿಸತಕ್ಕದ್ದಲ್ಲ. 3. ನಿಯಮ-44(4) ರನ್ವಯ ದಂಡ ವಿಧಿಸಿ ನೋಟೀಸ್ ಜಾರಿ ಮಾಡಿದ್ದು, ಕಟ್ಟಡ ಕಲ್ಲು ಗಣಿ ಗುತ್ತಿಗೆದಾರರು ಭಾಗಶಃ ದಂಡ ಪಾವತಿ ಮಾಡಿದ್ದಲ್ಲಿ, ಆ ಪುಮಾಣ ಮತ್ತು ಮೊತ್ತವನ್ನು ಪರಿಶೀಲಿಸಿಕೊಂಡು ಉಳಿಕೆ ಪ್ರಮಾಣವನ್ನು OTS ಅಡಿಯಲ್ಲಿ ಪರಿಗಣಿಸಿ ಕ್ರ.ಸಂ.01ರಲ್ಲಿ ತಿಳಿಸಿರುವಂತೆ ಕ್ರಮವಹಿಸುವುದು. 4. ಖನಿಜ ಸಾಗಾಣಿಕೆ ಪರವಾನಿಗೆ ಪಡೆಯದೇ ಕಟ್ಟಡ ಕಲ್ಲು ಉಪಖನಿಜವನ್ನು ಸಾಗಾಣಿಕೆ ಮಾಡಲಾಗಿರುವ ಕಟ್ಟಡ ಕಲ್ಲಿಗೆ ನಿಯಮ-40 ರನ್ವಯ ನೋಟೀಸ್ ಜಾರಿ ಮಾಡಿದ್ದು, ಕಲ್ಲುಗಣಿ ಗುತ್ತಿಗೆದಾರರು ದಂಡದ ಮೊತ್ತವನ್ನು ಪಾವತಿಸದಿದ್ದಲ್ಲಿ, ಅಂತಹ ಪಕರಣಗಳನ್ನು OTS ಅಡಿಯಲ್ಲಿ ಪರಿಗಣಿಸಿ ಕ್ರ.ಸಂ.01 ರಲ್ಲಿ ತಿಳಿಸಿರುವಂತೆ ಪರಿಗಣಿಸುವುದು.
5. ಗುತ್ತಿಗೆ ಪದೇಶವನ್ನು ಒತ್ತುವರಿ ಮಾಡಿ ಗಣಿಗಾರಿಕೆ ನಡೆಸಿ, ಸಾಗಾಣಿಕೆ ನಡೆಸಲಾಗಿರುವ ಪುಕರಣಗಳಲ್ಲಿ ನಿಯಮಾನುಸಾರ ದಂಡವನ್ನು ಸಂಗ್ರಹಿಸಿದ್ದಲ್ಲಿ One Time Settlement (OTS) ವ್ಯಾಪ್ತಿಯಲ್ಲಿ ಪರಿಗಣಿಸಿ ಪುನಃ ದಂಡ ವಿಧಿಸತಕ್ಕದ್ದಲ್ಲ.
B. ನೋಟೀಸ್ ಜಾರಿ ಮಾಡಲು ಅನುಸರಿಸಬೇಕಾದ ವಿಧಾನ:-
1. KSRSAC ಸಂಸ್ಥೆ ವತಿಯಿಂದ ಡಿಜಿಪಿಎಸ್ ಮತ್ತು ಡೋಣ ಸರ್ವೆ ವರದಿ ಅಥವಾ ಇತರೆ ವೈಜ್ಞಾನಿಕ ವಿಧಾನದ ತಂತ್ರಾಂಶಗಳನ್ನು ಅಳವಡಿಸಿಕೊಂಡು ನೀಡಲಾದ ವರದಿ ಸ್ವೀಕೃತವಾದ ನಂತರ ಮೇಲಿನ ಕ್ರ.ಸಂ.01 44(1)ರಲ್ಲಿ ತಿಳಿಸಿರುವಂತೆ ಕ್ರಮ ಜರುಗಿಸಿ, 45 ದಿನಗಳ ಒಳಗೆ ಕಲ್ಲುಗಣಿ ಗುತ್ತಿಗೆದಾರರಿಗೆ ನೋಟೀಸ್ ಜಾರಿ ಮಾಡುವುದು.
2. ಜಾರಿ ಮಾಡಲಾಗುವ ನೋಟೀಸ್‌ನೊಂದಿಗೆ ಕಡ್ಡಾಯವಾಗಿ KSRSAC ಸಂಸ್ಥೆ ವತಿಯಿಂದ ಅಂತಿಮಗೊಳಿಸಿದ ಡಿಜಿಪಿಎಸ್ ಮತ್ತು ಡೋಣ್ ಸರ್ವೆ ವರದಿಯ
ವ್ರತಿಯನ್ನು ನೀಡುವುದು.
3. ದಂಡ ಪಾವತಿಸುವಂತೆ ಜಾರಿಗೊಳಿಸುವ ನೋಟೀಸಿನಲ್ಲಿ, ಒಂದು ವೇಳೆ OTS ರಡಿ ನಿಗದಿತ ಅವಧಿಯೊಳಗೆ ದಂಡ ಪಾವತಿಸಲು ತಪ್ಪಿದಲ್ಲಿ, ನಿಯಮ-44- H(1)(e) ರಂತೆ ಕ್ರಮ ಜರುಗಿಸಲಾಗುವುದು ಎಂದು ಕಡ್ಡಾಯವಾಗಿ ನಮೂದಿಸುವುದು.
4. ಕಲ್ಲುಗಣಿ ಗುತ್ತಿಗೆದಾರರಿಗೆ ಜಾರಿಗೊಳಿಸುವ ನೋಟೀಸ್‌ನಲ್ಲಿ ದಂಡದ ಮೊತ್ತದ ಬಗ್ಗೆ ಸೂಕ್ತ ದಾಖಲಾತಿಗಳೊಂದಿಗೆ ಕಲ್ಲು ಗಣಿ ಗುತ್ತಿಗೆದಾರರು ತಮಗೆ ನೋಟೀಸ್ ಜಾರಿಯಾದ 07 ದಿನಗಳಲ್ಲಿ ಸಕ್ಷಮ ಪ್ರಾಧಿಕಾರದೊಂದಿಗೆ ಸಮಾಲೋಚಿಸಿ ಇತ್ಯರ್ಥಪಡಿಸಿಕೊಳ್ಳಲು ಗುತ್ತಿಗೆದಾರರಿಗೆ ನೋಟೀಸ್‌ನಲ್ಲಿ ತಿಳಿಸುವುದು.
5. OTS ಅಡಿಯಲ್ಲಿ ನಮೂದಿಸಲಾದ ದಂಡದ ಮೊತ್ತವನ್ನು ನಿಯಮ-44- (1)(d) ರಲ್ಲಿ ತಿಳಿಸಿರುವಂತೆ ನೋಟೀಸ್ ಜಾರಿಯಾದ 06 ತಿಂಗಳೊಳಗಾಗಿ ಪಾವತಿಸುವಂತೆ ನೋಟೀಸಿನಲ್ಲಿ ನಮೂದಿಸುವುದು. ಸದರಿ ದಂಡದ ಮೊತ್ತವನ್ನು 04 ಸಮಾನ ಕಂತುಗಳಲ್ಲಿ 45 ದಿನಗಳಿಗೆ ಒಂದು ಕಂತಿನಂತೆ ಪಾವತಿಸಲು ಕಲ್ಲುಗಣಿ ಗುತ್ತಿಗೆದಾರರಿಗೆ ಅವಕಾಶ ನೀಡುವುದು.
C. OTS ವ್ಯಾಪ್ತಿಯಡಿ ಕಲ್ಲುಗಣಿ ಗುತ್ತಿಗೆದಾರರು ದಂಡ ಪಾವತಿಸದಿದ್ದಲ್ಲಿ ಅನುಸರಿಸಬೇಕಾದ ಕ್ರಮಗಳು:-
1. ಒಂದು ವೇಳೆ ಕಲ್ಲು ಗಣಿ ಗುತ್ತಿಗೆದಾರರು OTS ವ್ಯಾಪ್ತಿಯಡಿ ಸಂಪೂರ್ಣವಾಗಿ ಹಣ ಪಾವತಿಸದಿದ್ದಲ್ಲಿ ಅಥವಾ ಭಾಗಶಃ ಹಣ ಪಾವತಿಸಿರುವ ಪಕರಣಗಳನ್ನು Ja-44-A(1)(e) ರಡಿ ಕಮ ವಹಿಸಲು ಪರಿಗಣಿಸುವುದು.
2. ನಿಯಮ-44-Á(1)(e) ರನ್ವಯ ಕಲ್ಲುಗಣಿ ಗುತ್ತಿಗೆಯನ್ನು ರದ್ದು ಪಡಿಸಲು OTS ರಡಿ ಜಾರಿಗೊಳಿಸಿರುವ ನೋಟೀಸ್‌ನಲ್ಲಿ ನಮೂದಿಸಿರುವ ಅವಧಿ ಮುಕ್ತಾಯವಾದ 30 ದಿನಗಳೊಳಗಾಗಿ ಪ್ರಕ್ರಿಯೆ ಪ್ರಾರಂಭಿಸುವುದು.
3. ರದ್ದುಪಡಿಸುವ ಪೂರ್ವದಲ್ಲಿ ಸದರಿ ನಿಯಮದಲ್ಲಿ ನಿರ್ದಿಷ್ಟ ಪಡಿಸಿರುವಂತೆ ಕಲ್ಲುಗಣಿ ಗುತ್ತಿಗೆದಾರರಿಗೆ ಅಹವಾಲು ಸಲ್ಲಿಸಲು ಕಡ್ಡಾಯವಾಗಿ ಅವಕಾಶ ನೀಡುವುದು.
4. ಸಕ್ಷಮ ಪ್ರಾಧಿಕಾರ ನಿಯಮಾನುಸಾರ ಕಲ್ಲು ಗಣಿ ಗುತ್ತಿಗೆದಾರರು ನೀಡಿರುವ ಅಹವಾಲನ್ನು ಸಹ ಪರಿಶೀಲಿಸಿ ನಿಯಮಾನುಸಾರ ಕಲ್ಲುಗಣಿ ಗುತ್ತಿಗೆಯನ್ನು ರದ್ದುಪಡಿಸಲು ಕ್ರಮ ವಹಿಸುವುದು.
5. ನಿಯಮ-44-Á(1)(e) ರಲ್ಲಿ ತಿಳಿಸಿರುವಂತೆ ಕಲ್ಲುಗಣಿ ಗುತ್ತಿಗೆಯನ್ನು ರದ್ದುಪಡಿಸುವುದರ ಜೊತೆಗೆ ಕಲ್ಲುಗಣಿ ಗುತ್ತಿಗೆದಾರರ ವಿರುದ್ಧ ನಿಯಮಾನುಸಾರ ಕ್ರಮ ಜರುಗಿಸುವ ಹಕ್ಕು ಸಕ್ಷಮ ಪ್ರಾಧಿಕಾರದ್ದಾಗಿರುತ್ತದೆ. 6. ಕಟ್ಟಡ ಕಲ್ಲುಗಣಿ ಗುತ್ತಿಗೆ ಪ್ರದೇಶದಲ್ಲಿ ಪರವಾನಗಿ ಪಡೆಯದೆ ಸಾಗಾಣಿಕೆ ಮಾಡಿರುವ ಕಟ್ಟಡ ಕಲ್ಲಿನ ಪ್ರಮಾಣಕ್ಕೆ ನಿಯಮ-44-Á(1)(a) ರನ್ವಯ OTS ಅಡಿಯಲ್ಲಿ ಕಲ್ಲುಗಣಿ ಗುತ್ತಿಗೆದಾರರು ದಂಡ ಪಾವತಿಸದಿದ್ದಲ್ಲಿ ನಿಯಮ- 44(4) ರಂತೆ ದಂಡ ವಿಧಿಸಿ RRC ರಂತೆ ವಸೂಲಾತಿಗೆ ಕ್ರಮ ವಹಿಸುವುದು. 7. ಒತ್ತುವರಿ ಮಾಡಿ ಅನಧಿಕೃತ ಗಣಿಗಾರಿಕೆ ನಡೆಸಿ ಸಾಗಾಣಿಕೆ ಮಾಡಿರುವ ಕಟ್ಟಡ ಕಲ್ಲಿನ ಪುಮಾಣಕ್ಕೆ ನಿಯಮ-44-H(1)(b) ರನ್ವಯ OTS ಅಡಿಯಲ್ಲಿ ಕಲ್ಲುಗಣಿ ಗುತ್ತಿಗೆದಾರರು ದಂಡ ಪಾವತಿಸದಿದ್ದಲ್ಲಿ ನಿಯಮ-43(A)ರ ಷೆಡ್ಯೂಲ್-I(c) ರಂತೆ ದಂಡ ವಿಧಿಸಿ RRC ರಂತೆ ವಸೂಲಾತಿಗೆ ಕ್ರಮ ವಹಿಸುವುದು.
D. ಕಲ್ಲುಗಣಿ ಗುತ್ತಿಗೆದಾರರು OTS ರಡಿ ದಂಡ ಪಾವತಿಸದಿದ್ದಲ್ಲಿ ಕಲ್ಲುಗಣಿ ಗುತ್ತಿಗೆದಾರರಿಗೆ ಹೊಸದಾಗಿ ಉಪಖನಿಜ ಗಣಿಗುತ್ತಿಗೆಗಳನ್ನು ಮಂಜೂರು ಮಾಡಲು ನಿರ್ಬಂಧಿಸುವ ಕುರಿತು:-
1. OTS ಯೋಜನೆಯಡಿ ರಾಜಧನ / ದಂಡವನ್ನು ಪಾವತಿಸಿ, ಬೇಬಾಕಿ ಪ್ರಮಾಣ ಪತ್ರ ಸಲ್ಲಿಸದ ಹೊರತು ಕಲ್ಲುಗಣಿ ಗುತ್ತಿಗೆ / ಲೈಸೆನ್ಸ್‌ನ್ನು ಕಂಪನಿ /ಸಂಸ್ಥೆ/ ವ್ಯಕ್ತಿ/ ಅವಿಭಕ್ತ ಕುಟುಂಬ ಸದಸ್ಯರ ಹೆಸರಿನಲ್ಲಿ ಸದರಿಯವರು ಉಪಖನಿಜದ ಗುತ್ತಿಗೆ ಪರವಾನಗಿ ಕೋರಿ ಸಲ್ಲಿಸಿರುವ / ಸಲ್ಲಿಸುವ ಅರ್ಜಿಗಳನ್ನು ಮಂಜೂರಾತಿಗೆ ಪರಿಗಣಿಸತಕ್ಕದ್ದಲ್ಲ.
2. ಮುಂದುವರೆದು, OTS ಯೋಜನೆಯಡಿ ರಾಜಧನ / ದಂಡವನ್ನು ಪಾವತಿಸಿ, ಬೇಬಾಕಿ ಪ್ರಮಾಣ ಪತ್ರ ಸಲ್ಲಿಸದ ಹೊರತು ಕಲ್ಲುಗಣಿ ಗುತ್ತಿಗೆದಾರ / ಲೈಸೆನ್ಸ್ ದಾರರು ಯಾವುದೇ ಉಪಖನಿಜದ ಗಣಿ ಗುತ್ತಿಗೆಗಳನ್ನು ಟೆಂಡರ್ / ಹರಾಜು ಮೂಲಕ ಮಂಜೂರು ಮಾಡುವ -ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದಂತೆ ನಿರ್ಬಂಧಿಸುವುದು.

BIG NEWS: ದ್ವಿತೀಯ PUC ಪ್ರಶ್ನೆ ಪತ್ರಿಕೆ ಮಾರಾಟ?: ಈ ಸ್ಪಷ್ಟನೆ ಕೊಟ್ಟ ಕರ್ನಾಟಕ ಶಾಲಾ ಪರೀಕ್ಷೆ ಮಂಡಳಿ
ಮತದಾರರ ಪಟ್ಟಿಯಲ್ಲಿರುವ ಲೋಪವನ್ನು ಸರಿಪಡಿಸಲು ಸಮರ್ಪಕವಾಗಿ ಮನೆವಾರು ಮ್ಯಾಪಿಂಗ್: ಮಂಡ್ಯ ಡಿಸಿ








