ದಾವಣಗೆರೆ: ನಕಲಿ ದಾಖಲೆಗಳನ್ನು ನೀಡಿ, ಬ್ಯಾಂಕ್ ಖಾತೆಯನ್ನು ತೆರೆದು, ಅದರಿಂದ ಸೈಬರ್ ವಂಚಕರಿಗೆ ಸಹಾಯ ಮಾಡುತ್ತಿದ್ದಂತ ಎಂಜಿನಿಯರಿಂಗ್ ವಿದ್ಯಾರ್ಥಿ ಸೇರಿದಂತೆ ಇಬ್ಬರನ್ನು ದಾವಣಗೆರೆಯ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.
ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಕುಂಕುಮ ಗ್ರಾಮದ ಪರಶುರಾಮ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈತ ಬೆಂಗಳೂರಿನ ರಾಜಾಜಿನಗರದಲ್ಲಿನ ನಕಲಿ ಕಂಪನಿ ತೆಗೆದು, ವಿವಿಧ ರಾಷ್ಟ್ರೀಯ, ಖಾಸಗಿ ಬ್ಯಾಂಕ್ ಗಳಲ್ಲಿ 6 ಖಾತೆ ತೆರೆದಿದ್ದರು.
ಈ ಆರು ಮ್ಯೂಲ್ ಅಕೌಂಟ್ ಗಳಿಂದ ಕೋಟ್ಯಂತರ ಹಣ ವಂಚನೆ ಮಾಡಿರೋದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಆರು ಮ್ಯೂಲ್ ಅಕೌಂಟ್ ಗಳ ವಿರುದ್ಧ ದೇಶಾದ್ಯಂತ 95ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದಾವೆ.
ಮತ್ತೊಂದು ಕೇಸಲ್ಲಿ 19 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ. ಆನ್ ಲೈನ್ ನಲ್ಲಿ ಕೆಲಸ ಹುಡುಕೋರನ್ನು ಟಾರ್ಗೆಟ್ ಮಾಡುತ್ತಿದ್ದ ಈತ, ಕೆಲಸದಾಸೆಗೆ ಸೈಬರ್ ವಂಚಕರ ಜಾಲಕ್ಕೆ ಸಿಲುಕಿಸುತ್ತಿದ್ದನು. ಈ ಸಂಬಂಧ ಆತನನ್ನು ಬಂಧಿಸಲಾಗಿದೆ. ಆತ ಎರಡು ಮ್ಯೂಲ್ ಅಕೌಂಟ್ ಬಳಸುತ್ತಿದ್ದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಸಿಎಂ ಸಿದ್ಧರಾಮಯ್ಯಗೆ ಈ ತಿರುಗೇಟು ಕೊಟ್ಟ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ








