ಬೆಂಗಳೂರು: ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯ ಪ್ರವರ್ಗ-2ಎ ನಲ್ಲಿ ಮಡಿವಾಳ ಸಮುದಾಯಕ್ಕೆ ಸೇರಿದ ಜನರ ಅಭಿವೃದ್ದಿಗಾಗಿ 2025-26ನೇ ಸಾಲಿನಲ್ಲಿ ಅನುಷ್ಟಾನಗೊಳಿಸುತ್ತಿರುವ ಆಹಾರ ವಾಹಿನಿ (ಆಹಾರ ಕಿಯೋಸ್ಕ್) ಯೋಜನೆಯಲ್ಲಿ (ಮಡಿವಾಳ, ಅಗಸ, ದೋಬಿ ) ಸೌಲಭ್ಯ ಪಡೆಯಬಯಸುವವರಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಆಹಾರ ವಾಹಿನಿ (ಆಹಾರಕಿಯೋಸ್ಕ್) ಯೋಜನೆಯಡಿ ಸ್ಥಳಾಂತರಿಸಬಹುದಾದ ತಿಂಡಿಮಳಿಗೆಗಳನ್ನು ನಾಲ್ಕು ಚಕ್ರಗಳ ಇಗಿ-ಗೂಡ್ಸ್ ವಾಹನಗಳನ್ನು ಅಗತ್ಯಕ್ಕೆ ತಕ್ಕಂತೆ ನವೀಕರಿಸಿ ಫಲಾನುಭವಿಗಳಿಗೆ ವಿತರಿಸುವಯೋಜನೆಯಾಗಿದೆ. ನಿಗಮದಿಂದ ವಾಹನ ಖರೀದಿಗೆ ರೂ.3 ಲಕ್ಷಗಳ ಸಹಾಯಧನವನ್ನು ಬಿಡುಗಡೆ ಮಾಡಲಾಗುವುದು ಉಳಿಕೆ ಮೊತ್ತವನ್ನು ಬ್ಯಾಂಕುಗಳು, ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯಬಹುದು.
ನಗರ ಪ್ರದೇಶದ ವಿಧಾನ ಸಭಾಕ್ಷೇತ್ರಗಳಾದ ಹುಬ್ಬಳ್ಳಿ ಧಾರವಾಡ ಪೂರ್ವ, ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ಗಳಲ್ಲಿ ಯೋಜನೆಯ ಸೌಲಭ್ಯ ಪಡೆಯಬಯಸುವವರು ಮಡಿವಾಳ ಸಮುದಾಯಕ್ಕೆ ಸೇರಿದವರಾಗಿರಬೇಕು.
ಮಡಿವಾಳ ಸಮುದಾಯದ ಅರ್ಜಿದಾರರು ಮಾರ್ಚ್ 6, 2026 ರೊಳಗಾಗಿ ನಿಗಮದ ಜಾಲತಾಣ https://Kmmdc.karnataka.gov.in ಮೂಲಕ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಕಛೇರಿಯ ದೂರವಾಣಿ ಸಂಖ್ಯೆ: 0836-2957829 ಗೆ ಸಂಪರ್ಕಿಸಬಹುದು ಎಂದು ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜ್ಯದ ವಿಶ್ವಕರ್ಮ ಸಮುದಾಯದವರಿಗೆ ಗುಡ್ ನ್ಯೂಸ್: 3 ಲಕ್ಷದವರೆಗೆ ಸಹಾಯಧನಕ್ಕೆ ಅರ್ಜಿ ಆಹ್ವಾನ
ಬೆಂಗಳೂರಲ್ಲಿ ಓರ್ವ ಡ್ರಗ್ ಪೆಡ್ಲರ್ ಅರೆಸ್ಟ್, 3.8 ಲಕ್ಷ ಮೌಲ್ಯದ 35 ಗ್ರಾಂ ಮಾದಕ ವಸ್ತು ವಶಕ್ಕೆ








