Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ಬಂಗಾಳ ಚುನಾವಣೆದ ಫಾಲ್ಟಾ ಕ್ಷೇತ್ರದ ಎಲ್ಲಾ 285 ಮತಗಟ್ಟೆಗಳಲ್ಲೂ ಮರುಮತದಾನಕ್ಕೆ ಆಯೋಗದ ಆದೇಶ

02/05/2026 10:29 PM

ಸಾಗರ ಶಿಕ್ಷಕರ ಸಂಘದ ಚುನಾವಣೆ; ಮತದಾರ ಪ್ರಭುಗಳಿಗೆ ‘ಸ್ವಾಭಿಮಾನಿ ಶಿಕ್ಷಕರ ಬಳಗ’ದ ದೇವೇಂದ್ರಪ್ಪ ಕೃತಜ್ಞತೆ

02/05/2026 9:55 PM

ರಾಜ್ಯ ಆರೋಗ್ಯ ಇಲಾಖೆಯ ನೂತನ ನಿರ್ದೇಶಕರಾಗಿ ಡಾ.ಎಂ.ರಜನಿ ನೇಮಕ

02/05/2026 9:41 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS: ವಿಧಾನಸೌಧದ ನಿರ್ಧಿಷ್ಟ ಪಡಿಸಿದ ಸ್ಥಳದಲ್ಲೇ ಮಾಧ್ಯಮದವರು ಸಂದರ್ಶನ ನಡೆಸಿ: ರಾಜ್ಯ ಸರ್ಕಾರ ಆದೇಶ
KARNATAKA

BIG NEWS: ವಿಧಾನಸೌಧದ ನಿರ್ಧಿಷ್ಟ ಪಡಿಸಿದ ಸ್ಥಳದಲ್ಲೇ ಮಾಧ್ಯಮದವರು ಸಂದರ್ಶನ ನಡೆಸಿ: ರಾಜ್ಯ ಸರ್ಕಾರ ಆದೇಶ

By kannadanewsnow0918/02/2026 4:23 PM

ಬೆಂಗಳೂರು: ಮಾಧ್ಯಮದವರು ವಿಧಾನಸೌಧ ಕಟ್ಟದಲ್ಲಿ ಅವರಿಗೆ ನಿಗದಿಪಡಿಸಲಾದ ಸ್ಥಳದಲ್ಲಿ ಮಾತ್ರ ಸಂದರ್ಶನ ಮಾಡುವಂತೆ ರಾಜ್ಯ ಸರ್ಕಾರ ಆದೇಶಿಸಿದೆ. ಆ ಮೂಲಕ ವಿಧಾನಸೌಧದ ಒಳಗಡೆ ಮಾಧ್ಯಮದವರಿಗೆ ನಿರ್ಬಂಧ ಹೇರಿದ್ದು, ಈಗ ವಿವಾದಕ್ಕೆ ಕಾರಣವಾಗಿದೆ. 

ಈ ಕುರಿತಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಅವರು ವಾರ್ತಾ ಮತ್ತು ಪ್ರಚಾರ ಇಲಾಖೆಯ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. ಅದರಲ್ಲಿ ವಾರ್ತಾ ಮತ್ತು ಪ್ರಚಾರ ಇಲಾಖೆಯು ಶಿಫಾರಸ್ಸು ಮಾಡುವ ಮಾಧ್ಯಮ ಪ್ರತಿನಿಧಿಗಳಿಗೆ ಮಾತ್ರ ಸಿಆಸು ಇಲಾಖೆ(ಕಾರ್ಯಕಾರಿ)ಯಲ್ಲಿ ಗುರುತಿನ ಚೀಟಿ ವಿತರಿಸಲಾಗುತ್ತಿದೆ ಎಂದಿದ್ದಾರೆ.

ಈ ರೀತಿರುತಿನ ಚೀಟಿ ಹೊಂದಿರುವ ಎಲ್ಲಾ ಪತ್ರಿಕಾ ಮಾಧ್ಯಮ ಪ್ರತಿನಿಧಿಗಳಿಗೆ ಭದ್ರತಾ ಹಿತದೃಷ್ಟಿಯಿಂದ ವಿಧಾನಸೌಧ ಪಶ್ಚಿಮ ದ್ವಾರದ ಪೋರ್ಟಿಕೋ ಬಳಿ ನಿಗದಿಪಡಿಸಲಾಗಿರುವ ಸ್ಥಳದಲ್ಲಿ ಮಾತ್ರ ಬೈಟ್ ಹೇಳಿಕೆಗಳನ್ನು ಪಡೆದುಕೊಳ್ಳುವಂತೆ ಹಾಗೂ ವಿಧಾನಸೌಧ ಒಳ ಪ್ರವೇಶಿಸುವ ಸಂದರ್ಭದಲ್ಲಿ ಮಾನ್ಯ ಮುಖ್ಯಮಂತ್ರಿಗಳು/ಮಾನ್ಯ ಉಪ ತೆಗೆದುಕೊಳ್ಳಲು/ಸಂದರ್ಶನಕ್ಕಾಗಿ ಮುಖ್ಯಮಂತ್ರಿಗಳು/ಮಾನ್ಯ ಸಚಿವರುಗಳು/ಗಣ್ಯ ವ್ಯಕ್ತಿಗಳಿಂದ ಬೈಟ್ ಹಿಂಬಾಲಿಸದಂತೆ ಸೂಕ್ತ ಸಲಹೆ/ಸೂಚನೆಗಳನ್ನು ನೀಡುವೆಂತೆ ತಮಗೆ ತಿಳಿಸಲು ನಿರ್ದೇಶಿಸಿದ್ದಾರೆ.

ರಾಜ್ಯ ಸರ್ಕಾರದಿಂದ ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ನಿರ್ಬಂಧದ ವಿರುದ್ಧ ಬಿಜೆಪಿ ನಾಯಕರು ಕಿಡಿಕಿಡಿ

ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರಕಾರವು ವಿಧಾನಸೌಧದ ಒಳಗೆ ಮಾಧ್ಯಮಗಳಿಗೆ ನಿರ್ಬಂಧ ಹೇರಿದ್ದು, ಇದನ್ನು ಬಿಜೆಪಿ ಬಲವಾಗಿ ಖಂಡಿಸುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ.

ಅವರು ಇಂದು ಮಾಧ್ಯಮಗಳ ಜೊತೆ ಮಾತನಾಡಿದರು. ರಾಜ್ಯದ ಕಾಂಗ್ರೆಸ್ಸಿನದು ನಾಲಾಯಕ್ ಸರಕಾರ ಎಂದು ಜನರು ಮಾತನಾಡುತ್ತಿದ್ದಾರೆ. ಇದಕ್ಕೆ ಪುಷ್ಟಿ ಕೊಡುವಂತೆ ಮತ್ತೊಂದು ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಆಕ್ಷೇಪಿಸಿದರು. ಇದು ಪ್ರಜಾಪ್ರಭುತ್ವ ವಿರೋಧಿ ನಡೆ ಎಂದು ಟೀಕಿಸಿದರು.

ಇಂಥ ತೀರ್ಮಾನಗಳನ್ನು ಯಾಕೆ ತೆಗೆದುಕೊಳ್ಳುತ್ತಾರೆಂದು ನನಗಂತೂ ಅರ್ಥ ಆಗುತ್ತಿಲ್ಲ. ಕಳೆದ ಬೆಳಗಾವಿಯ ಅಧಿವೇಶನದ ಸಂದರ್ಭದಲ್ಲಿ ದ್ವೇóಷ ಭಾಷಣ ಸಂಬಂಧ ಕಾಯ್ದೆ ತಂದಿದ್ದರು. ಗಮನಿಸುತ್ತ ಹೋದರೆ, ಈ ಸರಕಾರದ ಒಂದೊಂದು ನಿರ್ಣಯವೂ ಪ್ರಜಾಪ್ರಭುತ್ವವನ್ನು ಅಣಕಿಸುವ ರೀತಿಯಲ್ಲಿದೆ. ಇದು ಖಂಡಿತ ಸರಿಯಲ್ಲ ಎಂದು ನುಡಿದರು.

ಈ ನಿರ್ಧಾರವನ್ನು ರಾಜ್ಯ ಸರಕಾರ ಹಿಂಪಡೆಯಬೇಕು. ಮಾಧ್ಯಮಗಳಿಗೆ ನಿರ್ಬಂಧ ಹೇರುವುದನ್ನು ನಾವು ಖಂಡಿತ ಒಪ್ಪಲು ಸಾಧ್ಯವಿಲ್ಲ. ಇದು ಪ್ರಜಾಪ್ರಭುತ್ವ ವಿರೋಧಿ ನಡೆ ಎಂದು ಮತ್ತೊಮ್ಮೆ ಹೇಳುವುದಾಗಿ ತಿಳಿಸಿದರು.

ಪಾಕಿಸ್ತಾನ ಜಿಂದಾಬಾದ್ ಎಂದು ಜಯಘೋಷ ಕೂಗುವುದಕ್ಕೆ ಕಡಿವಾಣ ಹಾಕಲು ಈ ಅಯೋಗ್ಯ ಸರಕಾರಕ್ಕೆ ಸಾಧ್ಯವಾಗಿಲ್ಲ; ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಮೊಳಗಿದರೂ ಪುರಾವೆಗಳಿಲ್ಲವೆಂದು ತಿಳಿಸಿದ್ದರು. ಅಂಥ ದೇಶದ್ರೋಹಿಗಳನ್ನು ಒದ್ದು ಒಳಗೆ ಹಾಕಲು ಕಾಂಗ್ರೆಸ್ ಸರಕಾರಕ್ಕೆ ಸಾಧ್ಯವಾಗಿಲ್ಲ ಎಂದು ಖಂಡಿಸಿದರು. ಈಗ ಸಚಿವರ ಕಚೇರಿಯಲ್ಲಿ ಕಳ್ಳತನದ ನೆಪವೊಡ್ಡಿ ಈ ರೀತಿ ಮಾಧ್ಯಮಗಳಿಗೆ ನಿರ್ಬಂಧ ಹೇರಿದ್ದಾರೆ ಎಂದ ಅವರು, ಈ ಕುರಿತ ಆದೇಶವನ್ನು ತಕ್ಷಣ ಹಿಂಪಡೆಯುವಂತೆ ಆಗ್ರಹಿಸಿದರು.

ಪ್ರಜಾಪ್ರಭುತ್ವ, ವಾಕ್ ಸ್ವಾತಂತ್ರ್ಯದ ಮೇಲಿನ ದಾಳಿ: ಎಸ್.ಆರ್.ವಿಶ್ವನಾಥ್

ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರಕಾರವು ವಿಧಾನಸೌಧದ ಒಳಗೆ ಮಾಧ್ಯಮಗಳಿಗೆ ನಿರ್ಬಂಧ ಹೇರಿದ್ದು, ಇದು ಪ್ರಜಾಪ್ರಭುತ್ವ ಮತ್ತು ವಾಕ್ ಸ್ವಾತಂತ್ರ್ಯದ ಮೇಲಿನ ದಾಳಿ ಎಂದು ಶಾಸಕ ಎಸ್.ಆರ್.ವಿಶ್ವನಾಥ್ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಅವರು ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು. ಭಾಷಣ ಮಾಡುವಾಗ ಪತ್ರಿಕಾ ರಂಗ ಸಂವಿಧಾನದ ನಾಲ್ಕನೇ ಅಂಗ ಎನ್ನುತ್ತೇವೆ. ಇದನ್ನು ನೋಡಿದರೆ ತುರ್ತು ಪರಿಸ್ಥಿತಿ ಜ್ಞಾಪಕ ಬರುತ್ತಿದೆ. ಅವತ್ತು ಮಾಧ್ಯಮಗಳಿಗೆ ಕಡಿವಾಣ ಹಾಕಿದ್ದರು ಎಂದು ಗಮನ ಸೆಳೆದರು. ನಿಮ್ಮ ಭದ್ರತಾ ಲೋಪ ಸರಿ ಮಾಡಿಕೊಳ್ಳಿ ಎಂದ ಅವರು, ಸರಕಾರವು ಸುತ್ತೋಲೆಯನ್ನು ತಕ್ಷಣ ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದರು.

ಕಸದ ಸಮಸ್ಯೆ ಕುರಿತು ಮಾಧ್ಯಮಗಳು ಗಮನ ಸೆಳೆದಾಗ ಉತ್ತರ ನೀಡಿದ ಅವರು, ಆಧುನಿಕ ತಂತ್ರಜ್ಞಾನ ತರುತ್ತೇವೆ; ವಿದ್ಯುತ್ ಆಗಿ ಪರಿವರ್ತಿಸುವುದಾಗಿ ಸರಕಾರ ಹೇಳಿತ್ತು. ಇಲ್ಲಿನವರೆಗೂ ಯಾವುದನ್ನೂ ಮಾಡಿಲ್ಲ ಎಂದು ಟೀಕಿಸಿದರು. ಹಿಂದೆ ಬಿಜೆಪಿ ಸರಕಾರ ಇದ್ದಾಗ ಏನಿತ್ತೋ ಹಾಗೇ ಇದೆ. ಕಸ ಹಾಕುವ ಹೊಸ ಘಟಕ ಮಾಡಿಲ್ಲ ಎಂದು ಆರೋಪಿಸಿದರು. ಸರಕಾರವು ವೈಜ್ಞಾನಿಕವಾಗಿ ಕಸ ನಿರ್ವಹಣೆ ಮಾಡಬೇಕೆಂದು ಆಗ್ರಹಿಸಿದರು.

ವಿಧಾನಸಭಾ ಚುನಾವಣೆ ಹತ್ತಿರದಲ್ಲಿಲ್ಲ. ಮೈತ್ರಿ, ನಾಯಕತ್ವ ವಿಚಾರವಾಗಿ ರಾಷ್ಟ್ರೀಯ ನಾಯಕರ ನಿರ್ಧಾರ ಏನಿದೆಯೋ ಅದಕ್ಕೆ ಬದ್ಧವಾಗಿ ಕೆಲಸ ಮಾಡುತ್ತೇವೆ. ಅದಕ್ಕೆ ವ್ಯತಿರಿಕ್ತವಾಗಿ ಮಾತನಾಡಲು ಹೋಗುವುದಿಲ್ಲ ಎಂದು ಇನ್ನೊಂದು ಪ್ರಶ್ನೆಗೆ ಉತ್ತರ ಕೊಟ್ಟರು. ಸದ್ಯಕ್ಕೆ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಹೊಂದಾಣಿಕೆ ಪ್ರಶ್ನೆ ನಮ್ಮ ಮುಂದಿದೆ. ರಾಜ್ಯ- ರಾಷ್ಟ್ರದ ವರಿಷ್ಠರು ಏನು ಹೇಳುತ್ತಾರೋ ಅದರ ಕುರಿತು ನಾವು ಚಿಂತೆ ಮಾಡುತ್ತೇವೆ. ಯಾರೋ ಚರ್ಚೆ ಹುಟ್ಟು ಹಾಕಿದ್ದಾರೆ ಎಂದು ತಿಳಿಸಿದರು.

ಈ ಚರ್ಚೆಯನ್ನು ಇಲ್ಲಿಗೆ ನಿಲ್ಲಿಸುವುದು ಒಳ್ಳೆಯದು. ಉಪ ಚುನಾವಣೆ, ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಗೆಲ್ಲುವ ಕಡೆ ನಾವು ಗಮನ ಹರಿಸಬೇಕಿದೆ ಎಂದು ತಿಳಿಸಿದರು.

ಎಮರ್ಜೆನ್ಸಿ ಇನ್ ಕರ್ನಾಟಕವೆಂದ ವಿಪಕ್ಷ ನಾಯಕ ಆರ್.ಅಶೋಕ್

ತನ್ನ ವೈಫಲ್ಯಗಳನ್ನ, ಯಡವಟ್ಟುಗಳನ್ನ, ಭ್ರಷ್ಟಾಚಾರವನ್ನ ಮುಚ್ಚಿಟ್ಟುಕೊಳ್ಳುವ ಸಲುವಾಗಿ ಮಾಧ್ಯಮಗಳ ಮೇಲೆ ನಿಯಂತ್ರಣ ಹೇರಲು ಹೊರಟಿರುವ ಕಾಂಗ್ರೆಸ್  ಸರ್ಕಾರ ತನ್ನ ಪ್ರಜಾಪ್ರಭುತ್ವ ವಿರೋಧಿ, ಸರ್ವಾಧಿಕಾರಿ ಧೋರಣೆಯನ್ನು ಮತ್ತೊಮ್ಮೆ ಪ್ರದರ್ಶನ ಮಾಡಿದೆ.

ಸಿಎಂ ಸಿದ್ಧರಾಮಯ್ಯನವರೇ, ತಮ್ಮ ಸರ್ವೋಚ್ಛ ನಾಯಕ ರಾಹುಲ್ ಗಾಂಧಿ ಅವರು ಹೋದ ಬಂದಲ್ಲೆಲ್ಲ ಪ್ರದೇಶನ ಮಾಡುವ ಕೆಂಪು ಸಂವಿಧಾನದ ಪುಸ್ತಕದಲ್ಲಿ ಮಾಧ್ಯಮಗಳಿಗೆ ಪತ್ರಿಕಾ ಸ್ವಾತಂತ್ರ್ಯ ಇಲ್ಲವೇ? ಅಥವಾ ಇತ್ತೀಚೆಗೆ ಮಾಧ್ಯಮಗಳು ಬಯಲು ಮಾಡಿದ ತಮ್ಮ ಅತ್ಯಾಪ್ತ ಸಚಿವ ಭೈರತಿ ಸುರೇಶ್ ಅವರ ಕಚೇರಿಯಲ್ಲಿ ನಡೆದ ಲಕ್ಷಾಂತರ ರೂಪಾಯಿ ಚಿನ್ನ, ನಗದು ಕಳ್ಳತನದಂತಹ ಪ್ರಕರಣಗಳು, ಅಕ್ರಮ ವ್ಯವಹಾರಗಳು ಇನ್ನಷ್ಟು ಬಯಲಾಗುತ್ತವೆ ಎನ್ನುವ ಭಯವೋ? ಎಂದು ಪ್ರಶ್ನಿಸಿದ್ದಾರೆ.

ವಿಧಾನಸೌಧ ನಿಮ್ಮ ಕಾಂಗ್ರೆಸ್ ಪಕ್ಷದ ಕಚೇರಿ ಅಲ್ಲ ಸ್ವಾಮಿ, ಅದು ಪ್ರಜಾಸೌಧ, ಏಳು ಕೋಟಿ ಕನ್ನಡಿಗರಿಗೆ ಸೇರಿದ ಶಕ್ತಿಸೌಧ. ಅಲ್ಲಿಗೆ ಮಾಧ್ಯಮದವರನ್ನು ಬರಬೇಡಿ ಎಂದು ನಿಯಂತ್ರಣ ಮಾಡಲು ಯಾರಿಗೂ ಅಧಿಕಾರವಿಲ್ಲ. ಮಾಧ್ಯಮದವರು ವಿಧಾನಸೌಧದ ನಿಗದಿತ ಸ್ಥಳದಲ್ಲಿ ಮಾತ್ರ ಸಂದರ್ಶನ ಮಾಡಬೇಕು ಎನ್ನುವ ಈ ಅಸಂವಿಧಾನಿಕ ಆದೇಶವನ್ನ ಈ ಕೂಡಲೇ ವಾಪಸ್ಸು ಪಡೆಯಬೇಕು ಮತ್ತು ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವಾದ ಮಾಧ್ಯಮಗಳು ಸ್ವತಂತ್ರವಾಗಿ ತಮ್ಮ ಕರ್ತವ್ಯ ನಿರ್ವಹಣೆ ಮಾಡಲು ಮುಕ್ತ ಅವಕಾಶ ಮಾಡಿಕೊಡಬೇಕು ಎಂದು ರಾಜ್ಯ ಸರ್ಕಾರವನ್ನ ಆಗ್ರಹಿಸಿದ್ದಾರೆ.

ಎಮರ್ಜೆನ್ಸಿ ಇನ್ ಕರ್ನಾಟಕ !

ತನ್ನ ವೈಫಲ್ಯಗಳನ್ನ, ಯಡವಟ್ಟುಗಳನ್ನ, ಭ್ರಷ್ಟಾಚಾರವನ್ನ ಮುಚ್ಚಿಟ್ಟುಕೊಳ್ಳುವ ಸಲುವಾಗಿ ಮಾಧ್ಯಮಗಳ ಮೇಲೆ ನಿಯಂತ್ರಣ ಹೇರಲು ಹೊರಟಿರುವ @INCKarnataka ಸರ್ಕಾರ ತನ್ನ ಪ್ರಜಾಪ್ರಭುತ್ವ ವಿರೋಧಿ, ಸರ್ವಾಧಿಕಾರಿ ಧೋರಣೆಯನ್ನು ಮತ್ತೊಮ್ಮೆ ಪ್ರದರ್ಶನ ಮಾಡಿದೆ.

ಸಿಎಂ @siddaramaiah ನವರೇ,

ತಮ್ಮ ಸರ್ವೋಚ್ಛ ನಾಯಕ… pic.twitter.com/fR3uAd6vZ6

— R. Ashoka (@RAshokaBJP) February 18, 2026

ಸಾಗರದ ‘ತಾಯಿ ಮತ್ತು ಮಕ್ಕಳ ಆಸ್ಪತ್ರೆ’ಗೆ ‘ರೇಡಿಯಾಲಜಿಸ್ಟ್ ತಜ್ಞ ವೈದ್ಯ’ರನ್ನು ನೇಮಿಸಿ ಸರ್ಕಾರ ಆದೇಶ

ಮದುವೆ ಮಂಟಪದವರು ವಧು-ವರರ ವಯಸ್ಸಿನ ದಾಖಲೆ ಪರಿಶೀಲಿಸಬೇಕೆಂಬ ನಿಯಮಗಳಿಲ್ಲ : ಹೈಕೋರ್ಟ್

Share. Facebook Twitter LinkedIn WhatsApp Email

Related Posts

ಸಾಗರ ಶಿಕ್ಷಕರ ಸಂಘದ ಚುನಾವಣೆ; ಮತದಾರ ಪ್ರಭುಗಳಿಗೆ ‘ಸ್ವಾಭಿಮಾನಿ ಶಿಕ್ಷಕರ ಬಳಗ’ದ ದೇವೇಂದ್ರಪ್ಪ ಕೃತಜ್ಞತೆ

02/05/2026 9:55 PM1 Min Read

ರಾಜ್ಯ ಆರೋಗ್ಯ ಇಲಾಖೆಯ ನೂತನ ನಿರ್ದೇಶಕರಾಗಿ ಡಾ.ಎಂ.ರಜನಿ ನೇಮಕ

02/05/2026 9:41 PM1 Min Read

SHOCKING: ರಾಜ್ಯದಲ್ಲೊಂದು ಹೃದಯ ವಿದ್ರಾವಕ ಘಟನೆ: ಹೊಲದಲ್ಲಿ ಕೆಲಸ ಮಾಡುತ್ತಿದ್ದ ಗರ್ಭಿಣಿ ಹಾವು ಕಚ್ಚಿ ಸಾವು

02/05/2026 9:33 PM2 Mins Read
Recent News

BREAKING: ಬಂಗಾಳ ಚುನಾವಣೆದ ಫಾಲ್ಟಾ ಕ್ಷೇತ್ರದ ಎಲ್ಲಾ 285 ಮತಗಟ್ಟೆಗಳಲ್ಲೂ ಮರುಮತದಾನಕ್ಕೆ ಆಯೋಗದ ಆದೇಶ

02/05/2026 10:29 PM

ಸಾಗರ ಶಿಕ್ಷಕರ ಸಂಘದ ಚುನಾವಣೆ; ಮತದಾರ ಪ್ರಭುಗಳಿಗೆ ‘ಸ್ವಾಭಿಮಾನಿ ಶಿಕ್ಷಕರ ಬಳಗ’ದ ದೇವೇಂದ್ರಪ್ಪ ಕೃತಜ್ಞತೆ

02/05/2026 9:55 PM

ರಾಜ್ಯ ಆರೋಗ್ಯ ಇಲಾಖೆಯ ನೂತನ ನಿರ್ದೇಶಕರಾಗಿ ಡಾ.ಎಂ.ರಜನಿ ನೇಮಕ

02/05/2026 9:41 PM

SHOCKING: ರಾಜ್ಯದಲ್ಲೊಂದು ಹೃದಯ ವಿದ್ರಾವಕ ಘಟನೆ: ಹೊಲದಲ್ಲಿ ಕೆಲಸ ಮಾಡುತ್ತಿದ್ದ ಗರ್ಭಿಣಿ ಹಾವು ಕಚ್ಚಿ ಸಾವು

02/05/2026 9:33 PM
State News
KARNATAKA

ಸಾಗರ ಶಿಕ್ಷಕರ ಸಂಘದ ಚುನಾವಣೆ; ಮತದಾರ ಪ್ರಭುಗಳಿಗೆ ‘ಸ್ವಾಭಿಮಾನಿ ಶಿಕ್ಷಕರ ಬಳಗ’ದ ದೇವೇಂದ್ರಪ್ಪ ಕೃತಜ್ಞತೆ

By kannadanewsnow0902/05/2026 9:55 PM KARNATAKA 1 Min Read

ಶಿವಮೊಗ್ಗ: ಜಿಲ್ಲೆಯ ತಾಲ್ಲೂಕು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆ ನಿನ್ನೆ ಸಾಂಗವಾಗಿ ನೆರವೇರಿದ್ದು, ಈ ಚುನಾವಣೆಯಲ್ಲಿ ಪಾಲ್ಗೊಂಡು…

ರಾಜ್ಯ ಆರೋಗ್ಯ ಇಲಾಖೆಯ ನೂತನ ನಿರ್ದೇಶಕರಾಗಿ ಡಾ.ಎಂ.ರಜನಿ ನೇಮಕ

02/05/2026 9:41 PM

SHOCKING: ರಾಜ್ಯದಲ್ಲೊಂದು ಹೃದಯ ವಿದ್ರಾವಕ ಘಟನೆ: ಹೊಲದಲ್ಲಿ ಕೆಲಸ ಮಾಡುತ್ತಿದ್ದ ಗರ್ಭಿಣಿ ಹಾವು ಕಚ್ಚಿ ಸಾವು

02/05/2026 9:33 PM

ಮದ್ದೂರಿನಲ್ಲಿ ಮೈಸೂರು ದಸರಾ ಮಾದರಿಯ ದೀಪಾಲಂಕಾರ: ಶಾಸಕ ಉದಯ್ ಚಾಲನೆ!

02/05/2026 9:19 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.