ಹಾವೇರಿ: ಸರ್ಕಾರದ ಹಣದಲ್ಲಿ ಶಾಸಕರು ವಿದೇಶಕ್ಕೆ ಹೋದರೆ ಅನುಮತಿ ಕೇಳಬೇಕು. ಸ್ವಂತ ಹಣದಲ್ಲಿ ವಿದೇಶಕ್ಕೆ ಹೋದರೆ ಯಾರನ್ನೂ ಕೇಳಬೇಕಾದ ಅಗತ್ಯವಿಲ್ಲ ಎಂಬುದಾಗಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ.
ಹಾವೇರಿಯಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಸುದ್ದಿಗಾರರೊಂದಿಗೆ ಮಾತನಾಡಿ, ಪರಿಷತ್ ನ ಜೆಡಿಎಸ್ ಸದಸ್ಯ ಭೋಜೇಗೌಡ ದಕ್ಷಿಣ ಆಫ್ರಿಕಾಗೆ ಹೊರಟಿದ್ದಾರೆ. ವಿಧಾನಸಭೆಯ 22 ಸದಸ್ಯರು ವಿದೇಶ ಪ್ರವಾಸಕ್ಕೆ ಹೊರಟಿದ್ದಾರೆ ಎಂದರು.
ಎಸ್ ಎಲ್ ಭೋಜೇಗೌಡ ವಿದೇಶ ಪ್ರವಾಸಕ್ಕೆ ಅನುಮತಿ ಕೇಳಿದ್ದಾರೆ. ಉಳಿದವರು ಅನುಮತಿ ಕೇಳಿದರೇ ಫೈಲ್ ಬರಲಿ ಪರಿಶೀಲನೆ ಮಾಡುವೆ. ಅವರು ವೈಯಕ್ತಿಕವಾಗಿ ಹೋಗುವುದಾದರೇ ಅನುಮತಿ ಕೇಳುವ ಅಗತ್ಯವಿಲ್ಲ. ಸರ್ಕಾರದ ಹಣದಲ್ಲಿ ವಿದೇಶಕ್ಕೆ ಹೋದರೇ ಅನುಮತಿ ಪಡೆಯಬೇಕು ಎಂದು ತಿಳಿಸಿದರು.
BREAKING: ಬಾಂಗ್ಲಾದೇಶದ ನೂತನ ಪ್ರಧಾನಿಯಾಗಿ ತಾರಿಕ್ ರೆಹಮಾನ್ ಪ್ರಮಾಣ ವಚನ ಸ್ವೀಕಾರ | Tarique Rahman








