Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘AC’ ಇಲ್ಲದೆಯೇ ನಿಮ್ಮ ಮನೆ ಮಲೆನಾಡಿನಂತೆ ತಂಪಾಗಿರಬೇಕೆ? ಈ 6 ಸೂತ್ರಗಳನ್ನು ಪಾಲಿಸಿ!

05/04/2026 9:44 PM

ಇನ್ಮುಂದೆ ರಾಜ್ಯದಲ್ಲಿ ‘ದ್ವಿತೀಯ PUC’ವರೆಗೆ ಗಂಡು ಮಕ್ಕಳಿಗೂ ‘ಉಚಿತ ಬಸ್ ಪ್ರಯಾಣ’ದ ವ್ಯವಸ್ಥೆ

05/04/2026 9:28 PM

ಹುಬ್ಬಳ್ಳಿಯಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ, ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಆರೋಪಿಗಳ ಬಂಧನ

05/04/2026 9:18 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಕಾಂಗ್ರೆಸ್ MLC ರಮೇಶ್ ಬಾಬು ಹಿಗ್ಗಾಮುಗ್ಗಾ ವಾಗ್ಧಾಳಿ
KARNATAKA

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಕಾಂಗ್ರೆಸ್ MLC ರಮೇಶ್ ಬಾಬು ಹಿಗ್ಗಾಮುಗ್ಗಾ ವಾಗ್ಧಾಳಿ

By kannadanewsnow0916/02/2026 8:07 PM

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಹಾಗೂ ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷರಾದಂತ ರಮೇಶ್ ಬಾಬು ಹಿಗ್ಗಾಮುಗ್ಗಾ ವಾಗ್ಧಾಳಿ ನಡೆಸಿದ್ದಾರೆ.

ಇಂದು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವಂತ ಅವರು, ಕರ್ನಾಟಕ ಬಿಜೆಪಿ ಬಾಲ ಭವನದ ನಾಯಕ ವಿಜಯೇಂದ್ರರವರು ತನ್ನ ಪಟಾಲಾಂ ಜೊತೆ ಬಿಜೆಪಿ ಕಚೇರಿಯಲ್ಲಿ ಕಾಂಗ್ರೆಸ್ ನಾಯಕರಾದ ಪ್ರಿಯಾಂಕ ಖರ್ಗೆ ಮತ್ತು ಅವರ ಕುಟುಂಬದ ಮೇಲೆ ಅವಲತ್ತುಕೊಂಡಿರುವುದು ಅವರ ಬೌದ್ಧಿಕ ದಿವಾಳಿತನದ ಸಾಕ್ಷಿಯಾಗಿರುತ್ತದೆ. ಕರ್ನಾಟಕದ ಬಿಜೆಪಿಗೆ ಮತ್ತು ಸಂಘ ಪರಿವಾರದವರಿಗೆ ತಮ್ಮ ಸಮರ್ಥನೆಗೆ ಇಂತಹ ಬಾಲಂಗೋಚಿ ನಾಯಕರ ಅವಶ್ಯಕತೆ ಬಂದಿರುವುದು ವ್ಯವಸ್ಥೆಯ ದೌರ್ಬಲ್ಯವಾಗಿರುತ್ತದೆ ಎಂದು ಗುಡುಗಿದ್ದಾರೆ.

ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರರವರು ಪ್ರಿಯಾಂಕ ಖರ್ಗೆರವರನ್ನು ಟೀಕಿಸಲು ಮಾಡಿರುವ ಆಲಾಪ ನಗೆ ಪಾಟಲಿನ ಪರಮಾವಧಿ ಆಗಿರುತ್ತದೆ. ತಮ್ಮ ರಾಜಕೀಯ ಅಧಿಕಾರ ಸ್ಥಾನವನ್ನು, ಅಧ್ಯಕ್ಷ ಸ್ಥಾನವನ್ನು ಉಳಿಸಿಕೊಳ್ಳಲು ಪದೇ ಪದೇ ದೆಹಲಿಗೆ ದಂಡೆಯಾತ್ರೆ ಮಾಡುತ್ತಿರುವ ವಿಜಯೇಂದ್ರರವರಿಗೆ, ಆರ್.ಎಸ್.ಎಸ್ ಸಮರ್ಥಿಸುವ ಅನಿವಾರ್ಯತೆ ಸೃಷ್ಟಿ ಆಗಿರುವುದು ದೊಡ್ಡ ವಿಪರ್ಯಾಸ. ಮೊದಲು ಆರ್‌.ಎಸ್‌.ಎಸ್ ನವರು ಇವರ ರಾಜ್ಯಾಧ್ಯಕ್ಷರ ಆಯ್ಕೆಯನ್ನು ಸಮರ್ಥಿಸಲಿ! ನಂತರ ಅವರು ಆರೆಸ್ಸೆಸ್ ಪರವಾದ ಹೇಳಿಕೆಯನ್ನು ನೀಡಲಿ ಎಂದು ತಿರುಗೇಟು ನೀಡಿದ್ದಾರೆ.

ಪ್ರಿಯಾಂಕ ಖರ್ಗೆರವರು ಸೈದ್ಧಾಂತಿಕವಾಗಿ ಸಂಘ ಪರಿವಾರದ ಅಸ್ತಿತ್ವ, ನೋಂದಾವಣೆ ಕಾರ್ಯ ಮತ್ತು ಚಟುವಟಿಕೆಗಳನ್ನು ಪ್ರಶ್ನೆ ಮಾಡುತ್ತಿದ್ದಾರೆ. ಪ್ರಿಯಾಂಕ ಖರ್ಗೆರವರು ಎತ್ತಿರುವ ಮೂಲಭೂತ ಪ್ರಶ್ನೆಗಳಿಗೆ ತಡ ಬಡಾಯಿಸಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ, ಸ್ವತಃ ಮೋಹನ್ ಭಾಗವತ್ ರವರನ್ನು ಬೆಂಗಳೂರಿಗೆ ಕರೆತಂದು ಪ್ರಿಯಾಂಕಾ ಖರ್ಗೆರವರ ಮೂಲಭೂತ ಪ್ರಶ್ನೆಗಳಿಗೆ ಉತ್ತರವನ್ನು ಹುಡುಕುವ ಪ್ರಯತ್ನವನ್ನು ಮಾಡಿರುತ್ತದೆ. ಇಲ್ಲಿಯವರೆಗೆ ಸಂಘ ಪರಿವಾರದ ನೊಂದಾವಣೆಯನ್ನು ಕುರಿತು ಸಮರ್ಪಕವಾದಂತ ಉತ್ತರವನ್ನು ಕೊಡಲು ಅವರಿಗೆ ಸಾಧ್ಯವಾಗಿಲ್ಲ. ಇಂತಹ ಕಟು ಸತ್ಯವನ್ನು ತಿಳಿಯದ ವಿಜಯೇಂದ್ರರವರು, ಬಿಜೆಪಿ ಅಧಿಕರಾದ ಅವಧಿಯಲ್ಲಿ ಅತ್ಯಂತ ಭ್ರಷ್ಟಾಚಾರದ ಆರೋಪವನ್ನು ಸ್ವಪಕ್ಷದಿಂದಲೇ ಎದುರಿಸಿ ಪಲಾಯನ ಗೈದಂತಹ ನಾಯಕ. ಕಳಂಕಿತ ನಾಯಕ ವಿಜಯೇಂದ್ರ ಸಂಘ ಪರಿವಾರದ ಪ್ರತಿಪಾದನೆಗೆ ಅಥವಾ ಸಮರ್ಥನೆಗೆ ನಿಲ್ಲುವ ಮೂಲಕ ಸಂಘ ಪರಿವಾರದ ಮತ್ತೊಂದು ಮುಖವನ್ನು ಜನರ ಮುಂದೆ ತೆರೆದಿಟ್ಟಿದ್ದಾರೆ ಎಂದಿದ್ದಾರೆ.

ಈ ದೇಶದ ಕಾನೂನಿನ ಅನ್ವಯ ಯಾವುದೇ ಸಂಘ ಸಂಸ್ಥೆ ನೋಂದಾವಣೆ ಮಾಡಿಕೊಳ್ಳಬೇಕಾಗುತ್ತದೆ. ನೊಂದಾವಣೆ ಆಗದ ಸಂಘ ಸಂಸ್ಥೆಯ ಲೆಕ್ಕಪತ್ರಗಳನ್ನು ಅಥವಾ ಹಣಕಾಸು ವ್ಯವಹಾರಗಳನ್ನು ಅನುಮಾನದಿಂದ ನೋಡಲು ಅವಕಾಶವಾಗುತ್ತದೆ. ರಾಷ್ಟ್ರಸೇವೆಯೇ ತನ್ನ ಧ್ಯೇಯವೆಂದು ಸಾರುವ ಸಂಘ ಪರಿವಾರದವರು ಇಲ್ಲಿಯವರೆಗೆ ಪ್ರಿಯಾಂಕಾ ಖರ್ಗೆರವರ ಮೂಲಬೂತ ಪ್ರಶ್ನೆಗಳಿಗೆ ಉತ್ತರ ನೀಡಲು ಸಾಧ್ಯವಾಗಿಲ್ಲ. ಆದರೆ ವಿಜಯೇಂದ್ರರಂತಹ ಕಳಂಕಿತ ನಾಯಕರನ್ನು ಮುಂದೆ ಇಟ್ಟುಕೊಂಡು ತಮ್ಮನ್ನು ಸಮರ್ಥನೆ ಮಾಡಿಕೊಳ್ಳುವ ಪ್ರಯತ್ನಕ್ಕೆ ಮುಂದಾಗಿರುತ್ತಾರೆ. ಪ್ರಿಯಾಂಕ ಖರ್ಗೆ ಅವರನ್ನಾಗಲಿ ಅವರ ಕುಟುಂಬವನ್ನಾಗಲಿ ವೈಯಕ್ತಿಕ ನೆಲೆಗಟ್ಟಿನಲ್ಲಿ ಟೀಕಿಸುವ ಮೂಲಕ ಸಂಘ ಪರಿವಾರದವರು ತಮ್ಮ ಜವಾಬ್ದಾರಿಯಿಂದ ಪಲಾಯನ ಮಾಡಲು ಸಾಧ್ಯವಿಲ್ಲ ಅಂತ ವಾಗ್ಧಾಳಿ ನಡೆಸಿದ್ದಾರೆ.

ತಮ್ಮ ಸುದೀರ್ಘ ರಾಜಕೀಯ ಪಯಣದಲ್ಲಿ ಶ್ರೀ ಮಲ್ಲಿಕಾರ್ಜುನ ಖರ್ಗೆರವರು ಏಕಾಂಗಿ ಪ್ರಯತ್ನದ ಮೂಲಕ ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನವನ್ನು ತಂದು ಕೊಟ್ಟಿರುತ್ತಾರೆ . ಅದರ ಜೊತೆಗೆ ಆ ಭಾಗದಲ್ಲಿ ಕಾರ್ಮಿಕ ಆಸ್ಪತ್ರೆ, ವಿಶೇಷವಾಗಿ ರೈಲ್ವೆ ಸಂಪರ್ಕಗಳು, ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ, ಕಲ್ಯಾಣ ಕರ್ನಾಟಕದ ಜನರಿಗೆ ಉದ್ಯೋಗಗಳ ಅವಕಾಶ ಮುಂತಾದ ಸಾರ್ವಜನಿಕ ಕೆಲಸಗಳಿಗೆ ಬುನಾದಿ ಹಾಕಿ ಇತರ ನಾಯಕರಿಗೆ ಆದರ್ಶಪ್ರಾಯ ರಾಗಿರುತ್ತಾರೆ. ಪ್ರಿಯಾಂಕ ಖರ್ಗೆರವರು ಐಟಿ ಬಿಟಿ ಇಲಾಖೆಯ ಮುಖಾಂತರ ಗ್ರಾಮೀಣಾಭಿವೃದ್ಧಿ ಖಾತೆಯ ಮುಖಾಂತರ ರಾಜ್ಯದ ಅಭಿವೃದ್ಧಿಗೆ ತಾವು ಮಾಡಿರುವ ಸಾಧನೆಯನ್ನು ವಿಧಾನಸಭೆಯ ಅಧಿವೇಶನದಲ್ಲಿ ಅಂಕಿ ಅಂಶಗಳ ಸಮೇತವಾಗಿ ತೆಗೆದಿಟ್ಟಿರುತ್ತಾರೆ ಎಂದು ತಿಳಿಸಿದ್ದಾರೆ.

ತಮ್ಮ ತಂದೆ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಸಹಿಯನ್ನು ನಕಲು ಮಾಡಿದ ಆರೋಪವನ್ನು ಹೊತ್ತಿರುವ ವಿಜಯೇಂದ್ರ ಅವರು ಇಂದಿಗೂ ಸಹ ಸಾರ್ವಜನಿಕವಾಗಿ ಉತ್ತರವನ್ನು ನೀಡಿರುವುದಿಲ್ಲ. ನೀರಾವರಿ ಇಲಾಖೆಯಲ್ಲಿ ಸುಮಾರು 20 ಸಾವಿರ ಕೋಟಿ ರೂಪಾಯಿಗಳ ಕಾಮಗಾರಿಗಳ ಅವ್ಯವಹಾರ ಕುರಿತು ಅವರದೇ ಪಕ್ಷದ ಶಾಸಕರು ಆರೋಪಗಳನ್ನು ಮಾಡಿದಾಗ ಮನೆ ಸೇರಿದ ವ್ಯಕ್ತಿ ಇದೇ ವಿಜಯೇಂದ್ರರವರು. ವರ್ಗಾವಣೆ ದಂದೆ ಮತ್ತು ಅಕ್ರಮ ಟೆಂಡರ್ ಗಳ ಆರೋಪವನ್ನು ಹೊತ್ತಿದ್ದರು. ಇಡೀ ಶಿವಮೊಗ್ಗ ಜಿಲ್ಲೆಯಲ್ಲಿ ವೈಯಕ್ತಿಕವಾಗಿ ಇವರ ಕುಟುಂಬ ಮಾಡಿರುವ ಆಸ್ತಿಯ ಕುರಿತು ಅವರದೇ ಪಕ್ಷದ ನಾಯಕರಾದ ಈಶ್ವರಪ್ಪನವರು ಆರೋಪ ಮಾಡಿರುತ್ತಾರೆ ಎಂದಿದ್ದಾರೆ.

ಕೇವಲ ತಂದೆಯ ಹೆಸರಿನಲ್ಲಿ ರಾಜಕೀಯ ಆಶ್ರಯವನ್ನು ಪಡೆದಿರುವ ವಿಜಯೇಂದ್ರ, ತಮ್ಮ ಅಧ್ಯಕ್ಷ ಸ್ಥಾನ ಉಳಿಸಿಕೊಳ್ಳಲು ಪದೇಪದೇ ದೆಹಲಿಗೆ ಡೆಯಾತ್ರೆ ಮಾಡುತ್ತಿದ್ದಾರೆ. ಇವರು ಅಧ್ಯಕ್ಷರಾದ ನಂತರ ಬಿಜೆಪಿಯ ಗುಂಪುಗಾರಿಕೆ ಮಿತಿಮೀರಿರುತ್ತದೆ. ವಿಜಯೇಂದ್ರರವರು ಪ್ರಿಯಾಂಕ ಖರ್ಗೆ ಅವರನ್ನಾಗಲಿ, ಖರ್ಗೆರವರ ಕುಟುಂಬವನ್ನಾಗಲಿ ಅವರ ಸಿದ್ಧಾಂತವನ್ನಾಗಲಿ ಅಥವಾ ಅವರು ಈ ರಾಜ್ಯಕ್ಕೆ ಕೊಟ್ಟಿರುವ ಕೊಡುಗೆಗಳನ್ನಾಗಲಿ ಪ್ರಶ್ನಿಸುವ ಯಾವುದೇ ನೈತಿಕತೆಯನ್ನು ಉಳಿಸಿಕೊಂಡಿಲ್ಲ. ಇವರಿಂದ ನೈತಿಕತೆಯ ಪಾಠ, ಆದರ್ಶದ ಪಾಠ, ಸಿದ್ಧಾಂತದ ಪಾಠ ಹೇಳಿಸಿಕೊಳ್ಳುವ ಅನಿವಾರ್ಯತೆ ಅಥವಾ ಅವಶ್ಯಕತೆ ಖರ್ಗೆರವರ ಕುಟುಂಬಕ್ಕಾಗಲಿ, ಕಾಂಗ್ರೆಸ್ ಪಕ್ಷಕ್ಕೆ ಆಗಲಿ ಅಥವಾ ಕರ್ನಾಟಕದ ಜನರಿಗಾಗಲಿ ಇರುವುದಿಲ್ಲ. ವಿಜಯೇಂದ್ರರವರ ಈ ವ್ಯರ್ಥ ಪ್ರಲಾಪವನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷ ಖಂಡಿಸುತ್ತದೆ ಮತ್ತು ಸಂಘ ಪರಿವಾರ ಇಂತಹ ನಾಟಕಗಳಿಂದ ಸತ್ಯವನ್ನು ಮುಚ್ಚಲು ಸಾಧ್ಯವೇ ಇಲ್ಲ ಎಂಬುದಾಗಿ ಕಾಂಗ್ರೆಸ್ ಪರಿಷತ್ ಸದಸ್ಯ, ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷರಾದಂತ ರಮೇಶ್ ಬಾಬು ಗುಡುಗಿದ್ದಾರೆ.

BREAKING: ಎಲ್ಲಾ ಸರ್ಕಾರಿ ಶಾಲೆ ಶಿಕ್ಷಕರು, ಕಾಲೇಜು ಉಪನ್ಯಾಸಕರಿಗೆ ‘KAAMS ಮೊಬೈಲ್ ಹಾಜರಾತಿ’ ಕಡ್ಡಾಯ: ರಾಜ್ಯ ಸರ್ಕಾರ ಆದೇಶ

GOOD NEWS: ರಾಜ್ಯದ 108 ಆಂಬುಲೆನ್ಸ್ ಸಿಬ್ಬಂದಿಗಳಿಗೆ ಭರ್ಜರಿ ಸಿಹಿಸುದ್ದಿ: ಬೋನಸ್, ಪ್ರೋತ್ಸಾಹಧನಕ್ಕೆ ಸರ್ಕಾರ ಗ್ರೀನ್ ಸಿಗ್ನಲ್

Share. Facebook Twitter LinkedIn WhatsApp Email

Related Posts

ಇನ್ಮುಂದೆ ರಾಜ್ಯದಲ್ಲಿ ‘ದ್ವಿತೀಯ PUC’ವರೆಗೆ ಗಂಡು ಮಕ್ಕಳಿಗೂ ‘ಉಚಿತ ಬಸ್ ಪ್ರಯಾಣ’ದ ವ್ಯವಸ್ಥೆ

05/04/2026 9:28 PM1 Min Read

ಹುಬ್ಬಳ್ಳಿಯಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ, ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಆರೋಪಿಗಳ ಬಂಧನ

05/04/2026 9:18 PM1 Min Read

Rain In Karnataka: ನಾಳೆಯಿಂದ 4 ದಿನ ರಾಜ್ಯದಲ್ಲಿ ಮಳೆ ಅಬ್ಬರ: ಬೆಂಗಳೂರು ಸೇರಿ 16 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ

05/04/2026 7:59 PM2 Mins Read
Recent News

‘AC’ ಇಲ್ಲದೆಯೇ ನಿಮ್ಮ ಮನೆ ಮಲೆನಾಡಿನಂತೆ ತಂಪಾಗಿರಬೇಕೆ? ಈ 6 ಸೂತ್ರಗಳನ್ನು ಪಾಲಿಸಿ!

05/04/2026 9:44 PM

ಇನ್ಮುಂದೆ ರಾಜ್ಯದಲ್ಲಿ ‘ದ್ವಿತೀಯ PUC’ವರೆಗೆ ಗಂಡು ಮಕ್ಕಳಿಗೂ ‘ಉಚಿತ ಬಸ್ ಪ್ರಯಾಣ’ದ ವ್ಯವಸ್ಥೆ

05/04/2026 9:28 PM

ಹುಬ್ಬಳ್ಳಿಯಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ, ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಆರೋಪಿಗಳ ಬಂಧನ

05/04/2026 9:18 PM

ಸಿಎಸ್‌ಕೆ ವಿರುದ್ಧ ವಿರಾಟ್ ಕೊಹ್ಲಿ ಅಬ್ಬರ: ರೋಹಿತ್ ಶರ್ಮಾ ದಾಖಲೆ ಪುಡಿಪುಡಿ ಮಾಡಿದ ‘ಕಿಂಗ್ ಕೊಹ್ಲಿ’!

05/04/2026 9:15 PM
State News
KARNATAKA

ಇನ್ಮುಂದೆ ರಾಜ್ಯದಲ್ಲಿ ‘ದ್ವಿತೀಯ PUC’ವರೆಗೆ ಗಂಡು ಮಕ್ಕಳಿಗೂ ‘ಉಚಿತ ಬಸ್ ಪ್ರಯಾಣ’ದ ವ್ಯವಸ್ಥೆ

By kannadanewsnow0905/04/2026 9:28 PM KARNATAKA 1 Min Read

ಬೆಂಗಳೂರು: ರಾಜ್ಯದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಕರ್ನಾಟಕ ಸರ್ಕಾರವು ಸಿಹಿ ಸುದ್ದಿಯೊಂದನ್ನು ನೀಡಲು ಸಜ್ಜಾಗಿದೆ. ರಾಜ್ಯದಲ್ಲಿ ‘ಮಕ್ಕಳ ಸ್ನೇಹಿ ಸಾರಿಗೆ ವ್ಯವಸ್ಥೆ’ಯನ್ನು…

ಹುಬ್ಬಳ್ಳಿಯಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ, ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಆರೋಪಿಗಳ ಬಂಧನ

05/04/2026 9:18 PM

Rain In Karnataka: ನಾಳೆಯಿಂದ 4 ದಿನ ರಾಜ್ಯದಲ್ಲಿ ಮಳೆ ಅಬ್ಬರ: ಬೆಂಗಳೂರು ಸೇರಿ 16 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ

05/04/2026 7:59 PM

ಮನೆಯ ‘ಗೃಹಮಂತ್ರಿ’ಯಾದತಂಹ ಗೃಹಿಣಿಗಾಗಿ ಉಪಯುಕ್ತ ‘ಟಿಪ್ಸ್’ಗಳು.!

05/04/2026 7:04 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.