Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಜೆಇಇ ಮುಖ್ಯ ಪರೀಕ್ಷೆ ಫಲಿತಾಂಶ ಬಿಡುಗಡೆ ; ರಿಸಲ್ಟ್ ನೋಡಲು ನೇರ ಲಿಂಕ್ ಇಲ್ಲಿದೆ! JEE Main results

16/02/2026 6:37 PM

GOOD NEWS: ರಾಜ್ಯದ 108 ಆಂಬುಲೆನ್ಸ್ ಸಿಬ್ಬಂದಿಗಳಿಗೆ ಭರ್ಜರಿ ಸಿಹಿಸುದ್ದಿ: ಬೋನಸ್, ಪ್ರೋತ್ಸಾಹಧನಕ್ಕೆ ಸರ್ಕಾರ ಗ್ರೀನ್ ಸಿಗ್ನಲ್

16/02/2026 6:27 PM

CBSE 10,12ನೇ ತರಗತಿ ಪರೀಕ್ಷೆಗಳಿಗೆ ಮುನ್ನ ನಕಲಿ ಸುದ್ದಿ, ವದಂತಿಗಳ ವಿರುದ್ಧ ಮಂಡಳಿ ಎಚ್ಚರಿಕೆ!

16/02/2026 6:21 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » GOOD NEWS: ರಾಜ್ಯದ 108 ಆಂಬುಲೆನ್ಸ್ ಸಿಬ್ಬಂದಿಗಳಿಗೆ ಭರ್ಜರಿ ಸಿಹಿಸುದ್ದಿ: ಬೋನಸ್, ಪ್ರೋತ್ಸಾಹಧನಕ್ಕೆ ಸರ್ಕಾರ ಗ್ರೀನ್ ಸಿಗ್ನಲ್
KARNATAKA

GOOD NEWS: ರಾಜ್ಯದ 108 ಆಂಬುಲೆನ್ಸ್ ಸಿಬ್ಬಂದಿಗಳಿಗೆ ಭರ್ಜರಿ ಸಿಹಿಸುದ್ದಿ: ಬೋನಸ್, ಪ್ರೋತ್ಸಾಹಧನಕ್ಕೆ ಸರ್ಕಾರ ಗ್ರೀನ್ ಸಿಗ್ನಲ್

By kannadanewsnow0916/02/2026 6:27 PM

ಬೆಂಗಳೂರು: ರಾಜ್ಯದ 108 ಆರೋಗ್ಯ ಕವಚ ಸೇವೆಯಡಿಯಲ್ಲಿ ನೇಮಕಗೊಳ್ಳಲಿರುವ ಇಎಂಟಿ ಮತ್ತು ಪೈಲೆಟ್ ಗಳಿಗೆ ಮೂಲ ವೇತನವನ್ನು ಚಾಲ್ತಿಯಲ್ಲಿರುವ ಕನಿಷ್ಠ ವೇತನ ದರದಲ್ಲಿ ಹಾಗೂ ಹಿಂದಿನ ಸೇವಾ ಅನುಭವಗಾಗಿ ಅನುಭವ ಬೋನಸ್ ಅನ್ನು ಹಾಗೂ ಕಾರ್ಯಕ್ಷಮತೆ ಆಧಾರಿತ ಪ್ರೋತ್ಸಾಹ ಧನವನ್ನು ನೀಡೋದಕ್ಕೆ ಸರ್ಕಾರ ಅನುಮೋದನೆ ನೀಡಿದೆ.

ಈ ಕುರಿತಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಅವರು ನಡವಳಿಯನ್ನು ಹೊರಡಿಸಿದ್ದು,  ಆಯವ್ಯಯ ಭಾಷಣ ಕಂಡಿಕೆಯಲ್ಲಿ ರಾಜ್ಯದಲ್ಲಿ 108 ಆಂಬುಲೆನ್ಸ್ ಸೇವೆಯನ್ನು ಉತ್ತಮಗೊಳಿಸುವ ಉದ್ದೇಶದಿಂದ, ಈ ಸೇವೆಯನ್ನು ನಿಯಂತ್ರಣ ಮಾಡುವ ಕಮಾಂಡ್ ಕಂಟ್ರೋಲ್ ಕೇಂದ್ರವನ್ನು ಆರೋಗ್ಯ ಇಲಾಖೆಯ ಅಧೀನಕ್ಕೆ ಒಳಪಡಿಸುವ ಮೂಲಕ ‘ಆರೋಗ್ಯ ಕವಚ’ ಸೇವೆಯನ್ನು ಬಲಪಡಿಸಲಾಗುವುದು ಎಂದು ಘೋಷಿಸಲಾಗಿರುತ್ತದೆ ಎಂದಿದ್ದಾರೆ.

2025-26ನೇ ಸಾಲಿನ ಆಯವ್ಯಯ ಘೋಷಣೆಯನ್ನು ಅನುಷ್ಠಾನಗೊಳಿಸಲು ರಾಜ್ಯದಲ್ಲಿ 108-ಆರೋಗ್ಯ ಕವಚ ಸೇವೆಯನ್ನು ಒಡಂಬಡಿಕೆಯ ಪಾಲುದಾರರಾದ GVK-EMRI ಸಂಸ್ಥೆ (ಪ್ರಸ್ತುತ EMRI GHS) ಸಂಸ್ಥೆಯಿಂದ ಹಿಂಪಡೆದು, ಈ ಸೇವೆಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ನಿರ್ವಹಿಸಲು ಸರ್ಕಾರದ ವತಿಯಿಂದ ರಾಜ್ಯ ಮಟ್ಟದಲ್ಲಿ 112 NG ERSS ತಂತ್ರಾಂಶವನ್ನು ಬಳಸಿಕೊಂಡು ಕಮಾಂಡ್ ಅಂಡ್‌ ಕಂಟ್ರೋಲ್ ಸೆಂಟರ್ ಅನ್ನು ಸ್ಥಾಪಿಸಲು ಹಾಗೂ ಜಿಲ್ಲಾಡಳಿತದ ಮುಖಾಂತರ ಆಂಬ್ಯುಲೆನ್ಸ್‌ಗಳ ವಿಕೇಂದ್ರಿಕೃತವಾಗಿ ನಿರ್ವಹಣೆ ಮಾಡಲು ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಮುಂದುವರೆದು, ಈ ಯೋಜನೆಯನ್ನು 2025-26 ನೇ ಸಾಲಿನ ಅನುಮೋದಿತ ಅನುದಾನದ ಮಿತಿಯೊಳಗೆ ಅನುಷ್ಠಾನ ಮಾಡಲು ಹಾಗೂ ಯೋಜನೆಯ ಅನುಷ್ಠಾನಕ್ಕೆ ಅಗತ್ಯವಿರುವ ಮಾನವ ಸಂಪನ್ಮೂಲ ಪಡೆಯಲು ಪ್ರತ್ಯೇಕ ಪುಸ್ತಾವನೆ ಹಾಗೂ ಭಾರತ ಸರ್ಕಾರದ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಮಂತ್ರಾಲಯ (MEITY)ದಡಿಯಲ್ಲಿನ C-DAC ತಿರುವಂತಪುರಂ ಸಂಸ್ಥೆಯ ಜೊತೆ ಒಡಂಬಡಿಕೆಯನ್ನು ಮಾಡಿಕೊಂಡು 112 NG-ERSS ತಂತ್ರಾಂಶ ಬಳಸಿಕೊಂಡು ರಾಜ್ಯದಲ್ಲಿ 108- ಆರೋಗ್ಯ ಕವಚ ಹಾಗೂ 104-ಆರೋಗ್ಯ ಸಹಾಯವಾಣಿ ಕಾರ್ಯಕ್ರಮಗಳ ಕೇಂದ್ರೀಕೃತ ಕಮಾಂಡ್ ಅಂಡ್ ಕಂಟ್ರೋಲ್ ಸೆಂಟರ್‌ನ್ನು ಐದು ವರ್ಷಗಳ ಅವಧಿಗೆ ಸ್ಥಾಪಿಸಲು ಕೆಟಿಪಿಪಿ ಕಾಯ್ದೆ ಕಲಂ 4(g) ವಿನಾಯಿತಿಗೆ ಪ್ರತ್ಯೇಕ ಪ್ರಸ್ತಾವನೆ ಸಲ್ಲಿಸಲು ಹಾಗೂ ಯೋಜನೆಯ ಅನುಷ್ಠಾನಕ್ಕೆ ವಿವರವಾದ ಕ್ರಿಯಾ ಯೋಜನೆ ಸಿದ್ಧಪಡಿಸಿ ಸಕ್ಷಮ ಪ್ರಾಧಿಕಾರದಿಂದ ತಾಂತ್ರಿಕ ಹಾಗೂ ಆಡಳಿತಾತ್ಮಕ ಅನುಮೋದನೆ ಪಡೆಯಲು ಆದೇಶಿಸಲಾಗಿದೆ.

ರಾಜ್ಯದಲ್ಲಿ 108 ಆಂಬುಲೆನ್ಸ್ ಸೇವೆಯನ್ನು ಉತ್ತಮಗೊಳಿಸಲು 108 – ಆರೋಗ್ಯ ಕವಚ ಹಾಗೂ 104 – ಆರೋಗ್ಯ ಸಹಾಯವಾಣಿ ಕಮಾಂಡ್ ಅಂಡ್ ಕಂಟ್ರೋಲ್ ಸೆಂಟರ್ ಅನ್ನು ಸರ್ಕಾರದ ಅಧೀನಕ್ಕೆ ಪಡೆದು ನಿರ್ವಹಿಸುವ ಉದ್ದೇಶದಿಂದ ಮಾನವ ಸಂಪನ್ಮೂಲ, ಉಪಕರಣಗಳು ಮತ್ತು ಸೇವೆಗಳನ್ನು ಖರೀದಿ / ಸಂಗ್ರಹಣೆ ಮಾಡುವ ಸಂಬಂಧವಾಗಿ ನಿರ್ದೇಶಕರು, ಕರ್ನಾಟಕ ಹೆಲ್ ಡಿಜಿಟಲ್ ಸೊಸೈಟಿ (KHDS) ಹಾಗೂ ಆಯುಕ್ತರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು, ಅಧಿಕಾರಿಗಳಿಗೆ ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ನಿಗದಿಪಡಿಸಿ, ಆದೇಶದಲ್ಲಿ ತಿಳಿಸಿರುವ ಕ್ರಮಗಳನ್ನು ಸರ್ಕಾರದಿಂದ ಆಡಳಿತಾತ್ಮಕ ಅನುಮೋದನೆ ಪಡೆದ ನಂತರವೇ ನಿಯಮಾನುಸಾರ ಅಂತಿಮಗೊಳಿಸಲು ಆದೇಶಿಸಲಾಗಿದೆ.

ಮುಂದುವರೆದು, ಆದೇಶ ಭಾಗದ ಅಂಶ (2)ರಲ್ಲಿ ಆಯುಕ್ತರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು, ಇವರು ಆಂಬುಲೆನ್ಸ್ ವಾಹನಗಳ ನಿರ್ವಹಣೆ ಮತ್ತು ಆಂಬುಲೆನ್ಸ್ ಗಳ (ಅಂದರೆ, ಚಾಲಕ ಮತ್ತು ಇಎಂಟಿ) ಮಾನವ ಸಂಪನ್ಮೂಲಕ್ಕಾಗಿ ಹೊರಗುತ್ತಿಗೆ ಸಂಸ್ಥೆಯ ಮೂಲಕ ಖರೀದಿಯನ್ನು ಆಯಾ DHS (ಜಿಲ್ಲಾ ಆರೋಗ್ಯ ಸೊಸೈಟಿ)ನಲ್ಲಿ ವಿಕೇಂದ್ರೀಕೃತ ರೀತಿಯಲ್ಲಿ ನಡೆಸಲು ಹಾಗೂ ಈ ಖರೀದಿಗಾಗಿ ಟೆಂಡರ್ ದಾಖಲೆಯನ್ನು ಸಿದ್ಧಪಡಿಸಿ ಜಿಲ್ಲೆಗಳಿಗೆ ವಿತರಿಸಲು ಆದೇಶಿಸಲಾಗಿದೆ. ಟೆಂಡರ್ ದಾಖಲೆಯು ಕೆಳಕಂಡ ಪ್ರಮುಖ ಅಂಶಗಳು ಹೊಂದಿರಲು ತಿಳಿಸಲಾಗಿದೆ; ಅ) ಟೆಂಡರ್ ಅವಧಿಯು ಒಂದು ವರ್ಷಗಳ ಅವಧಿಗೆ ಸೀಮಿತಗೊಳಿಸುವುದು, ಅಗತ್ಯವಿದ್ದಲ್ಲಿ ಇನ್ನೊಂದು ವರ್ಷದವರೆಗೆ ವಿಸ್ತರಿಸಬಹುದು.

ಆ) ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ಸೂಕ್ತವೆಂದು ಕಂಡುಬಂದಲ್ಲಿ ಅವರಿಗೆ ಆದ್ಯತೆ ನೀಡಬಹುದು.

ಇ) ಚಾಲಕರಿಗೆ ಕನಿಷ್ಠ ಎಸ್‌ಎಸ್‌ಎಲ್‌ಸಿ ಮತ್ತು ಇಎಂಟಿ ತಂತ್ರಜ್ಞರಿಗೆ ಬಿಎಸ್‌ಸಿ ನರ್ಸಿಂಗ್‌ ಜೊತೆಗೆ ಇಎಂಟಿ ಕೋರ್ಸ್ ಲಭ್ಯವಿಲ್ಲದಿದ್ದಲ್ಲಿ ಬಿಎಸ್ಸಿ (ನರ್ಸಿಂಗ್) ಅಥವಾ ಅವರ ಅನುಪಸ್ಥಿತಿಯಲ್ಲಿ ಜಿಎನ್‌ಎಂ ಅಭ್ಯರ್ಥಿಗಳನ್ನು ಜಿಲ್ಲೆಗಳಲ್ಲಿ ರಜಾದಿನಗಳಲ್ಲಿ ತರಬೇತಿಯ ಮೂಲಕ 6 ತಿಂಗಳೊಳಗೆ ಇಎಂಟಿ ಪ್ರಮಾಣಪತ್ರ ಕೋರ್ಸ್‌ಗೆ ತರಬೇತಿ ಪಡೆಯಬೇಕು ಎಂಬ ಷರತ್ತಿನಡಿಯಲ್ಲಿ ಪಡೆದುಕೊಳ್ಳಬಹುದು.

ಈ) ಆಂಬ್ಯುಲೆನ್ಸ್ ಸಿಬ್ಬಂದಿಗೆ ಕನಿಷ್ಠ ವೇತನ ನಿಯಮದನ್ವಯ ವೇತನ ಪಾವತಿ ಜೊತೆಗೆ ವೇತನದ ಮೊತ್ತದ 20% ವರೆಗೆ ಕಾರ್ಯಕ್ಷಮತೆ ಆಧಾರದ ಮೇಲೆ ನೀಡುವ ಷರತ್ತಿಗೊಳಪಟ್ಟು (performance based incentive) ವೇತನವನ್ನು ಪಾವತಿಸತಕ್ಕದ್ದು.

ಉ) ಜಿಲ್ಲೆಗಳಲ್ಲಿನ ಕಾಲ್ ಸೆಂಟರ್‌ಗಳಿಗೆ ಮಾನವ ಸಂಪನ್ಮೂಲ ಸಂಗ್ರಹಣೆಯನ್ನು ಕನಿಷ್ಠ ವೇತನದ ಪುಕಾರ ಗುತ್ತಿಗೆ ಅಥವಾ ಹೊರಗುತ್ತಿಗೆ ಮುಖಾಂತರ ಮಾಡತಕ್ಕದ್ದು.

ಊ) ಮೇಲೆ ತಿಳಿಸಿರುವ ಕ್ರಮಗಳನ್ನು ಸರ್ಕಾರದಿಂದ ಆಡಳಿತಾತ್ಮಕ ಅನುಮೋದನೆ ಪಡೆದ ನಂತರವೇ ನಿಯಮಾನುಸಾರ ಅಂತಿಮಗೊಳಿಸತಕ್ಕದ್ದು.

ದಿನಾಂಕ: 09.10.2025ರ ಆದೇಶದಲ್ಲಿ 2025-26ನೇ ಸಾಲಿನ ಆಯವ್ಯಯ ಭಾಷಣೆ ಕಂಡಿಕೆ 144 ರಲ್ಲಿನ ಕಾರ್ಯಕ್ರಮ ಅನುಷ್ಠಾನಕ್ಕಾಗಿ ರಾಜ್ಯದಲ್ಲಿ 108 ಆಂಬುಲೆನ್ಸ್ ಸೇವೆಯನ್ನು ಉತ್ತಮಗೊಳಿಸಲು 108 ಆರೋಗ್ಯ ಕವಚ ಹಾಗೂ 104-ಆರೋಗ್ಯ ಸಹಾಯವಾಣಿ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್ ಅನ್ನು ನಿರ್ವಹಿಸಲು 1700 EMTS ಹಾಗೂ 1700 Pilots ಹುದ್ದೆಗಳನ್ನು ಒಳಗೊಂಡಂತೆ ಒಟ್ಟಾರೆ 3691 ಹುದ್ದೆಗಳನ್ನು ಸೃಜಿಸಿ ಆದೇಶಿಸಲಾಗಿದೆ ಹಾಗೂ ದಿನಾಂಕ: 30.10.20250 ಆದೇಶದಲ್ಲಿ 04 ಆಡಳಿತಾತ್ಮಕ ಹುದ್ದೆಗಳನ್ನು ಸೃಜಿಸಿ ಆದೇಶಿಸಲಾಗಿದೆ

108-ಆರೋಗ್ಯ ಕವಚ ಸೇವೆಯಡಿಯಲ್ಲಿ ನೇಮಕಗೊಳ್ಳಲಿರುವ ಇ.ಎಂ.ಟಿ ಮತ್ತು ಪೈಲೆಟ್‌ಗಳಿಗೆ ಮೂಲ ವೇತನವನ್ನು ಚಾಲ್ತಿಯಲ್ಲಿರುವ ಕನಿಷ್ಟ ವೇತನ ದರದಲ್ಲಿ ಹಾಗೂ ಹಿಂದಿನ ಸೇವಾ ಅನುಭವಗಾಗಿ ಅನುಭವ ಬೋನಸ್ (Experience Bonus) ನ್ನು ಹಾಗೂ ಕಾರ್ಯಕ್ಷಮತೆ ಆಧಾರಿತ ಪ್ರೋತ್ಸಾಹ ಧನವನ್ನು ಆರೋಗ್ಯ ಇಲಾಖೆಯು ನಿರ್ಧರಿಸುವ ಮಾನದಂಡಗಳನ್ವಯ ನೀಡಲು ಸಚಿವ ಸಂಪುಟದಲ್ಲಿ ಅನುಮೋದನೆಗೊಂಡಿದ್ದು, ಈ ಸಂಬಂಧ ಸೂಕ್ತ ಆದೇಶ ಹೊರಡಿಸಲು ಕೋರಿರುತ್ತಾರೆ.

ಪುಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ 108-ಆರೋಗ್ಯ ಸೇವೆಯಡಿಯಲ್ಲಿ ನೇಮಕಗೊಳ್ಳಲಿರುವ ಇ.ಎಂ.ಟಿ ಮತ್ತು ಪೈಲೆಟ್‌ಗಳಿಗೆ ಮೂಲ ವೇತನವನ್ನು ಚಾಲ್ತಿಯಲ್ಲಿರುವ ಕನಿಷ್ಟ ವೇತನ ದರದಲ್ಲಿ ಹಾಗೂ ಹಿಂದಿನ ಸೇವಾ ಅನುಭವಗಾಗಿ ಪ್ರತಿ ವರ್ಷಕ್ಕೆ ಶೇಕಡಾ 2 ರಷ್ಟು ದರದಲ್ಲಿ 15 ವರ್ಷಗಳಿಗೆ ಗರಿಷ್ಠ ಶೇಕಡಾ 30 ರಷ್ಟು ಅನುಭವ ಬೋನಸ್ (Experience Bonus) ನ್ನು ಹಾಗೂ ಕಾರ್ಯಕ್ಷಮತೆ ಆಧಾರಿತ ಪ್ರೋತ್ಸಾಹ ಧನವನ್ನು ಶೇ. 10% ರವರೆಗೆ ಆರೋಗ್ಯ ಇಲಾಖೆಯು ನಿರ್ಧರಿಸುವ ಮಾನದಂಡಗಳನ್ವಯ ನೀಡಲು ಆಡಳಿತಾತ್ಮಕ ಅನುಮೋದನೆ ನೀಡಿ ಆದೇಶಿಸಲಾಗಿದೆ.

ಸದರಿ ಆದೇಶವನ್ನು ಸಚಿವ ಸಂಪುಟದ ನಿರ್ಣಯ ಸಂಖ್ಯೆ: ಸಿ 1019/2025, ದಿನಾಂಕ: 04.12.2025ರಲ್ಲಿನ ಅನುಮೋದನೆ ಹಾಗೂ ಆರ್ಥಿಕ ಇಲಾಖೆಯ ಹಿಂಬರಹ ಸಂಖ್ಯೆ: FD 438 EXP- 5/2025, ದಿನಾಂಕ: 01.12.2025ರಲ್ಲಿನ ಸಹಮತಿಯ ಮೇರೆಗೆ ಹೊರಡಿಸಲಾಗಿರುತ್ತದೆ ಎಂದು ಹೇಳಿದ್ದಾರೆ.

ವರದಿ: ವಸಂತ ಬಿ ಈಶ್ವರಗೆರೆ.., ಸಂಪಾದಕರು…

BREAKING: ಸ್ಯಾಂಡಲ್ ವುಡ್ ಖ್ಯಾತ ಕಿರುತೆರೆ ನಟಿ ರಶ್ಮಿ ಲೀಲಾ ಇನ್ನಿಲ್ಲ | Actress Rashmi Leela No More

BE Alert: ಸಾರ್ವಜನಿಕ ಸ್ಥಳದಲ್ಲಿ ರೀಲ್ಸ್ ಮಾಡೋರೇ ಹುಷಾರ್: ಯುವಕ ಅರೆಸ್ಟ್, ಯಾಕೆ ಅಂತ ಈ ಸುದ್ದಿ ಓದಿ

Share. Facebook Twitter LinkedIn WhatsApp Email

Related Posts

ಕಾರ್ಯನಿರ್ವಹಣಾ ವರದಿ ನಾಪತ್ತೆ ತನಿಖೆಗೆ ಸಮಿತಿ ರಚನೆ: ಕರ್ನಾಟಕ ಮಾಹಿತಿ ಆಯೋಗದ ಸೂಚನೆಗೆ ಸರ್ಕಾರದ ನಿರ್ಧಾರ

16/02/2026 6:08 PM2 Mins Read

ನಟಿ ರಚಿತಾ ರಾಮ್ ಕಾರು ಚಾಲಕನಿಂದ ಅಧಿಕಾರಿ ಮೇಲೆ ಹಲ್ಲೆ

16/02/2026 6:05 PM1 Min Read

BREAKING: ಸ್ಯಾಂಡಲ್ ವುಡ್ ಖ್ಯಾತ ಕಿರುತೆರೆ ನಟಿ ರಶ್ಮಿ ಲೀಲಾ ಇನ್ನಿಲ್ಲ | Actress Rashmi Leela No More

16/02/2026 5:51 PM1 Min Read
Recent News

BREAKING : ಜೆಇಇ ಮುಖ್ಯ ಪರೀಕ್ಷೆ ಫಲಿತಾಂಶ ಬಿಡುಗಡೆ ; ರಿಸಲ್ಟ್ ನೋಡಲು ನೇರ ಲಿಂಕ್ ಇಲ್ಲಿದೆ! JEE Main results

16/02/2026 6:37 PM

GOOD NEWS: ರಾಜ್ಯದ 108 ಆಂಬುಲೆನ್ಸ್ ಸಿಬ್ಬಂದಿಗಳಿಗೆ ಭರ್ಜರಿ ಸಿಹಿಸುದ್ದಿ: ಬೋನಸ್, ಪ್ರೋತ್ಸಾಹಧನಕ್ಕೆ ಸರ್ಕಾರ ಗ್ರೀನ್ ಸಿಗ್ನಲ್

16/02/2026 6:27 PM

CBSE 10,12ನೇ ತರಗತಿ ಪರೀಕ್ಷೆಗಳಿಗೆ ಮುನ್ನ ನಕಲಿ ಸುದ್ದಿ, ವದಂತಿಗಳ ವಿರುದ್ಧ ಮಂಡಳಿ ಎಚ್ಚರಿಕೆ!

16/02/2026 6:21 PM

‘ಮದುವೆಗೆ ಮುನ್ನ ಯಾವುದನ್ನೂ ನಂಬಬೇಡಿ’ : ವಿವಾಹಪೂರ್ವ ಲೈಂಗಿಕತೆ ವಿರುದ್ಧ ಸುಪ್ರೀಂ ಕೋರ್ಟ್ ಎಚ್ಚರಿಕೆ

16/02/2026 6:10 PM
State News
KARNATAKA

GOOD NEWS: ರಾಜ್ಯದ 108 ಆಂಬುಲೆನ್ಸ್ ಸಿಬ್ಬಂದಿಗಳಿಗೆ ಭರ್ಜರಿ ಸಿಹಿಸುದ್ದಿ: ಬೋನಸ್, ಪ್ರೋತ್ಸಾಹಧನಕ್ಕೆ ಸರ್ಕಾರ ಗ್ರೀನ್ ಸಿಗ್ನಲ್

By kannadanewsnow0916/02/2026 6:27 PM KARNATAKA 4 Mins Read

ಬೆಂಗಳೂರು: ರಾಜ್ಯದ 108 ಆರೋಗ್ಯ ಕವಚ ಸೇವೆಯಡಿಯಲ್ಲಿ ನೇಮಕಗೊಳ್ಳಲಿರುವ ಇಎಂಟಿ ಮತ್ತು ಪೈಲೆಟ್ ಗಳಿಗೆ ಮೂಲ ವೇತನವನ್ನು ಚಾಲ್ತಿಯಲ್ಲಿರುವ ಕನಿಷ್ಠ…

ಕಾರ್ಯನಿರ್ವಹಣಾ ವರದಿ ನಾಪತ್ತೆ ತನಿಖೆಗೆ ಸಮಿತಿ ರಚನೆ: ಕರ್ನಾಟಕ ಮಾಹಿತಿ ಆಯೋಗದ ಸೂಚನೆಗೆ ಸರ್ಕಾರದ ನಿರ್ಧಾರ

16/02/2026 6:08 PM

ನಟಿ ರಚಿತಾ ರಾಮ್ ಕಾರು ಚಾಲಕನಿಂದ ಅಧಿಕಾರಿ ಮೇಲೆ ಹಲ್ಲೆ

16/02/2026 6:05 PM

BREAKING: ಸ್ಯಾಂಡಲ್ ವುಡ್ ಖ್ಯಾತ ಕಿರುತೆರೆ ನಟಿ ರಶ್ಮಿ ಲೀಲಾ ಇನ್ನಿಲ್ಲ | Actress Rashmi Leela No More

16/02/2026 5:51 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.