ಬೆಂಗಳೂರು : ಕೆ ಎಸ್ ಆರ್ ಟಿ ಸಿ ಬಸ್ಸಿನಲ್ಲಿ 30 ಕೆಜಿ ವರೆಗೆ ಲಗೇಜ್ ಉಚಿತವಾಗಿದೆ. ಅದರ ನಂತರದ ಲಗೇಜಿಗೆ ದರ ವಿಧಿಸುವುದಾಗಿ ನಿಗಮ ಸ್ಪಷ್ಟ ಪಡಿಸಿದೆ.
ಈ ಬಗ್ಗೆ ಪತ್ರಿಕಾ ಹೇಳಿಕೆಯನ್ನು ಕೆ ಎಸ್ ಆರ್ ಟಿ ಸಿ ಬಿಡುಗಡೆ ಮಾಡಿದ್ದು, ಪ್ರತಿ ಬಾರಿಯೂ ಲಗೇಜು ದರ ಏರಿಕೆ ಬಸ್ ಪ್ರಯಾಣ ದರ ಏರಿಕೆಯೊಂದಿಗೆ ಆಗುತ್ತದೆ. ಕಳೆದ ವರ್ಷ ಜನವರಿ 2025 ರಂದು ಬಸ್ ಪ್ರಯಾಣ ದರ ಏರಿಕೆಯಾಗಿತ್ತು, ಆದರೆ ಲಗೇಜು ದರ ಏರಿಕೆ ಮಾಡಿರಲಿಲ್ಲ. ಆ ಸಂಬಂದ ನಾಳೆಯಿಂದ ಜಾರಿಗೆ ಬರುವಂತೆ ಲಗೇಜು ದರ ಏರಿಕೆಯಾಗಿದೆ ಎಂದಿದೆಮ
30 kg ವರೆಗೂ ಉಚಿತ,ನಂತರ ದರ ಅನ್ವಯಿಸುತ್ತದೆ
ಈ ಹಿಂದೆ ಲಗೇಜು ದರ ಡಿಸೆಂಬರ್ 2021 ರಲ್ಲಿ ಏರಿಕೆಯಾಗಿತ್ತು. ಈಗ ಏರಿಕೆ ಮಾಡಲಾಗಿದೆ. 30 ಕೆಜಿ ವರೆಗೆ ಲಗೇಜ್ ಉಚಿತವಾಗಿದೆ. ಆ ಬಳಿಕದ ಲಗೇಜ್ ಗೆ ಮಾತ್ರ ನಾಳೆಯಿಂದ ಜಾರಿಯಾಗುವ ಲಗೇಜ್ ದರ ಅನ್ವಹಿಸಲಿದೆ ಎಂದು ತಿಳಿಸಿದೆ.
ಯಾವಾಗಲೂ ಟಿಕೆಟ್ ದರದ ಜೊತೆಗೆ ಲಗೇಜ್ ದರ ಹೆಚ್ಚಾಗುತ್ತಿತ್ತು
ಯಾವಾಗಲೂ ಬಸ್ ಪ್ರಯಾಣ ದರ ಎಷ್ಟು ಹೆಚ್ಚಾಗಿರುತ್ತದೆಯೋ ಅಷ್ಟೇ ಲಗೇಜು ದರವೂ ಹೆಚ್ಚಾಗುತ್ತದೆ ಅಂದರೆ 15% ಬಸ್ ಪ್ರಯಾಣ ದರ ಹೆಚ್ಚಾಗಿತ್ತು, ಲಗೇಜು ದರವು 15% ಹೆಚ್ಚಾಗಿದೆ. ಅದರಲ್ಲಿ ಹೊಸದೇನು ಹೆಚ್ಚಳವಿಲ್ಲ ಎಂಬುದಾಗಿ ಹೇಳಿದೆ.
ಶಾಸಕ ಭೈರತಿ ಬಸವರಾಜ್ ಮನೆಗೆ ವಿಜಯೇಂದ್ರ ಭೇಟಿ, ಕುಟುಂಬಸ್ಥರಿಗೆ ಧೈರ್ಯ ತುಂಬಿದ ಬಿಜೆಪಿ ರಾಜ್ಯಾಧ್ಯಕ್ಷ
ಒಳ ಮೀಸಲಾತಿ ವಿಚಾರದಲ್ಲಿ ಯಾವುದೇ ಸಮುದಾಯಕ್ಕೆ ಅನ್ಯಾಯವಾಗಲ್ಲ: ಸಚಿವ ಶಿವರಾಜ್ ತಂಗಡಗಿ








