ಪಾಟ್ನ: ಸಂಸದ ಪಪ್ಪು ಯಾದವ್ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿರುವುದಾಗಿ ತಿಳಿದು ಬಂದಿದೆ.
ಇಂದು ಸಂಸದ ಪಪ್ಪು ಯಾದವ್ ಅವರು ಎರಡು ದಿನ ನ್ಯಾಯಾಂಗ ಬಂಧನವನ್ನು ಕೋರ್ಟ್ ವಿಧಿಸಿತ್ತು. ಈ ಬೆನ್ನಲ್ಲೇ ಅವರು ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಪಾಟ್ನಾದ ಪಿಎಂಸಿಹೆಚ್ ಆಸ್ಪತ್ರೆಗೆ ಸಂಸದ ಪಪ್ಪು ಯಾದವ್ ದಾಖಲಾಗಿದ್ದಾರೆ. ಸೋಮವಾರ ಪಪ್ಪು ಯಾದವ್ ಅವರ ಜಾಮೀನು ಅರ್ಜಿಯ ವಿಚಾರಣೆ ನಡೆಯಲಿದೆ.
1995ರ ಪೋರ್ಜರಿ ಕೇಸಲ್ಲಿ ಸಂಸದ ಪಪ್ಪು ಯಾದವ್ ಅರೆಸ್ಟ್ ಆಗಿದ್ದರು. ಶುಕ್ರವಾರ ರಾತ್ರಿ ಸಂಸದ ಪಪ್ಪು ಯಾದವ್ ಅವರನ್ನು ಪೊಲೀಸರು ಬಂಧಿಸಿದ್ದರು. ಪಪ್ಪು ಯಾದವ್ ಬಿಹಾರದ ಪೂರ್ಣಿಯಾ ಪಕ್ಷೇತರ ಸಂಸದರಾಗಿದ್ದಾರೆ.








