Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಒಮಾನ್ ನಲ್ಲಿ ಮಾತುಕತೆ ನಡೆಸಿದ ಕೆಲವೇ ಕ್ಷಣಗಳಲ್ಲಿ ಇರಾನ್ ಮೇಲೆ ಹೊಸ ತೈಲ ನಿರ್ಬಂಧಗಳನ್ನು ಘೋಷಿಸಿದ ಅಮೇರಿಕಾ

07/02/2026 6:40 AM

ಪೋಷಕರೇ ಗಮನಿಸಿ : ತಪ್ಪದೇ ನಿಮ್ಮ ಮಕ್ಕಳಿಗೆ `ದಡಾರ-ರುಬೆಲ್ಲಾ ಲಸಿಕೆ ಹಾಕಿಸಿ.!

07/02/2026 6:37 AM

ಮೇಘಾಲಯದ ಅಕ್ರಮ ಕಲ್ಲಿದ್ದಲು ಗಣಿ ಸ್ಫೋಟ : ಸಾವಿನ ಸಂಖ್ಯೆ 25ಕ್ಕೆ ಏರಿಕೆ, ಇಬ್ಬರ ಬಂಧನ | Coal mine blast

07/02/2026 6:35 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಪೋಷಕರೇ ಗಮನಿಸಿ : ತಪ್ಪದೇ ನಿಮ್ಮ ಮಕ್ಕಳಿಗೆ `ದಡಾರ-ರುಬೆಲ್ಲಾ ಲಸಿಕೆ ಹಾಕಿಸಿ.!
KARNATAKA

ಪೋಷಕರೇ ಗಮನಿಸಿ : ತಪ್ಪದೇ ನಿಮ್ಮ ಮಕ್ಕಳಿಗೆ `ದಡಾರ-ರುಬೆಲ್ಲಾ ಲಸಿಕೆ ಹಾಕಿಸಿ.!

By kannadanewsnow5707/02/2026 6:37 AM

ಬೇಸಿಗೆ ಪ್ರಾರಂಭವಾಗುತ್ತಿದ್ದು, ಮಕ್ಕಳಲ್ಲಿ ದಡಾರ ಪ್ರಕರಣಗಳು ಕಂಡುಬರುವ ಸಾಧ್ಯತೆ ಹೆಚ್ಚು. 12 ಮಾರಕ ಕಾಯಿಲೆಗಳ ವಿರುದ್ಧ ನಿಯಮಿತವಾಗಿ ಲಸಿಕೆ ಪಡೆಯಲು ಪೋಷಕರು ಮಕ್ಕಳಿಗೆ ತಪ್ಪದೇ ದಡಾರ ರುಬೆಲ್ಲಾ ಲಸಿಕೆ ಹಾಕಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ಲಕ್ಷಣಗಳು

ದಡಾರದಲ್ಲಿ ತೀವ್ರ ಜ್ವರ, ಮೂಗು ಸೋರುವಿಕೆ, ಕೆಮ್ಮು, ಕಣ್ಣು ಕೆಂಪಾಗುವುದು ಮತ್ತು ಮುಖದಿಂದ ಆರಂಭವಾಗಿ ದೇಹದಾದ್ಯಂತ ಹರಡುವ ಕೆಂಪು ದದ್ದುಗಳು ಕಂಡುಬರುತ್ತವೆ. ರುಬೆಲ್ಲಾದಲ್ಲಿ ಸೌಮ್ಯ ಜ್ವರ, ದದ್ದುಗಳು, ತಲೆನೋವು, ಕಣ್ಣಿನ ಉರಿ ಲಕ್ಷಣ ಕಂಡುಬರುತ್ತವೆ.

ದಡಾರ-ರುಬೆಲ್ಲಾ ಲಸಿಕೆಯು ದಡಾರ ಮತ್ತು ರುಬೆಲ್ಲಾ ಕಾಯಿಲೆಗಳಿಂದ ಮಕ್ಕಳನ್ನು ರಕ್ಷಿಸುವ ಒಂದು ಪರಿಣಾಮಕಾರಿ ಲಸಿಕೆಯಾಗಿದೆ. ಇದು ಮಕ್ಕಳಲ್ಲಿ ಜ್ವರ, ದದ್ದು, ನ್ಯುಮೋನಿಯಾ, ಮತ್ತು ಮೆದುಳಿನ ಸೋಂಕನ್ನು ತಡೆಯುತ್ತದೆ. ಈ ಲಸಿಕೆ, ಗರ್ಭಾವಸ್ಥೆಯಲ್ಲಿ ರುಬೆಲ್ಲಾದಿಂದ ಉಂಟಾಗುವ ಜನ್ಮಜಾತ ದೋಷಗಳನ್ನು ತಡೆಗಟ್ಟಲು ಸಹಕಾರಿಯಾಗಿದೆ.

ಲಸಿಕೆ ವಿಧಾನ

ಇದು ಲೈವ್ ಅಟೆನ್ಯೂಯೇಟೆಡ್ ಲಸಿಕೆಯಾಗಿದ್ದು, ಇದನ್ನು ಇಂಜೆಕ್ಷನ್ ಮೂಲಕ ಸಾಮಾನ್ಯವಾಗಿ ಮೇಲಿನ ತೋಳಿನಲ್ಲಿ ನೀಡಲಾಗುತ್ತದೆ. 9 ತಿಂಗಳಿAದ 12 ತಿಂಗಳ ನಡುವೆ ಮೊದಲನೇ ಡೋಸ್, ಎರಡನೇ ಡೋಸ್ 16 ತಿಂಗಳಿನಿAದ 24 ತಿಂಗಳ ವರಗೆ ಮಕ್ಕಳಿಗೆ ನೀಡಲಾಗುವುದು. ಎರಡು ಡೋಸ್ಗಳ ನಂತರ ಈ ಲಸಿಕೆಯು ದಡಾರ ಮತ್ತು ರುಬೆಲ್ಲಾ ವಿರುದ್ಧ ಸುಮಾರು ಶೇ.97 ಕ್ಕಿಂತ ಹೆಚ್ಚು ಪರಿಣಾಮಕಾರಿಯಾಗಿದೆ. ಕೆಲವೊಮ್ಮೆ ಲಸಿಕೆ ಹಾಕಿದ ಸ್ಥಳಗಳಲ್ಲಿ ನೋವು ಜ್ವರ ಅಥವಾ ಸೌಮ್ಯವಾದ ದದ್ದುಗಳು ಕಂಡು ಬರಬಹುದು. ಇವು ಕೆಲವೇ ದಿನಗಳಲ್ಲಿ ಕಡಿಮೆಯಾಗುತ್ತವೆ.

ಲಸಿಕೆಯ ಪ್ರಯೋಜನ

ದಡಾರ ಲಸಿಕೆ ತೀವ್ರ ಜ್ವರ, ಕೆಮ್ಮು, ದದ್ದು ಮತ್ತು ಸಂಭಾವ್ಯ ನ್ಯುಮೋನಿಯಾ ಅಥವಾ ಮೆದುಳಿನ ಸೋಂಕನ್ನು ತಡೆಯುತ್ತದೆ. ರುಬೆಲ್ಲಾ ಲಸಿಕೆಯು ಗರ್ಭಿಣಿಯರಿಗೆ ರುಬೆಲ್ಲಾ ಸೋಂಕು ತಗುಲಿದರೆ, ಹುಟ್ಟುವ ಮಗುವಿನಲ್ಲಿ ಜನ್ಮಜಾತ ರುಬೆಲ್ಲಾ ಸಿಂಡ್ರೋಮ್ ಉಂಟಾಗಬಹುದು. ಲಸಿಕೆಯು ಇದನ್ನು ಪರಿಣಾಮಕಾರಿಯಾಗಿ ತಡೆಯುತ್ತದೆ.

ರಾಷ್ಟ್ರೀಯ ಲಸಿಕೆ ಕಾರ್ಯಕ್ರಮದಡಿ ಸಾಮಾನ್ಯವಾಗಿ ಮೊದಲ ಡೋಸ್ 9-12 ತಿಂಗಳುಗಳ ನಡುವೆ ಮತ್ತು ಎರಡನೇ ಡೋಸ್ 16-24 ತಿಂಗಳುಗಳ ನಡುವೆ ನೀಡಲಾಗುತ್ತದೆ. ಇದು ಅತ್ಯಂತ ಸುರಕ್ಷಿತ ಲಸಿಕೆಯಾಗಿದ್ದು, ಲಸಿಕೆ ನೀಡಿದ ನಂತರ ಸೌಮ್ಯವಾದ ಜ್ವರ ಅಥವಾ ಇಂಜೆಕ್ಷನ್ ಜಾಗದಲ್ಲಿ ನೋವು ಕಂಡುಬರಬಹುದು, ಆದರೆ ಇದು ಸಾಮಾನ್ಯವಾಗಿದೆ. ದಡಾರ-ರುಬೆಲ್ಲಾ ಲಸಿಕೆಯು ಮಕ್ಕಳ ಆರೋಗ್ಯ ಮತ್ತು ಸಮುದಾಯದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಅತ್ಯಗತ್ಯವಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Parents take note: Make sure to vaccinate your children against measles and rubella!
Share. Facebook Twitter LinkedIn WhatsApp Email

Related Posts

ರಾಜ್ಯದ ರೈತರಿಗೆ ಗುಡ್ ನ್ಯೂಸ್: ವಾರಸುದಾರರ ಹೆಸರಿಗೆ `ಪೌತಿ ಖಾತೆ’ ಮಾಡಿಕೊಡಲು ಮನೆ ಬಾಗಿಲಿಗೇ ಬರಲಿದ್ದಾರೆ ಅಧಿಕಾರಿಗಳು.!

07/02/2026 6:33 AM3 Mins Read
vidhana soudha

ರಾಜ್ಯದ ಜನತೆಗೆ ಗುಡ್ ನ್ಯೂಸ್ : ಫೆ. 14ರಂದು 1.10 ಲಕ್ಷ ಹಕ್ಕುಪತ್ರ ವಿತರಣೆ: ಮನೆ ಬಾಗಿಲಿಗೆ ಕಂದಾಯ ಇಲಾಖೆ ಸೇವೆ.!

07/02/2026 6:24 AM3 Mins Read

ದಶಕಗಳ ಭೂ ವಿವಾದಗಳಿಗೆ ಇತಿಶ್ರೀ : ಕಂದಾಯ ಇಲಾಖೆಯಿಂದ ಕ್ರಾಂತಿಕಾರಿ ‘ನನ್ನ ಭೂಮಿ’ ಅಭಿಯಾನ

07/02/2026 6:19 AM3 Mins Read
Recent News

ಒಮಾನ್ ನಲ್ಲಿ ಮಾತುಕತೆ ನಡೆಸಿದ ಕೆಲವೇ ಕ್ಷಣಗಳಲ್ಲಿ ಇರಾನ್ ಮೇಲೆ ಹೊಸ ತೈಲ ನಿರ್ಬಂಧಗಳನ್ನು ಘೋಷಿಸಿದ ಅಮೇರಿಕಾ

07/02/2026 6:40 AM

ಪೋಷಕರೇ ಗಮನಿಸಿ : ತಪ್ಪದೇ ನಿಮ್ಮ ಮಕ್ಕಳಿಗೆ `ದಡಾರ-ರುಬೆಲ್ಲಾ ಲಸಿಕೆ ಹಾಕಿಸಿ.!

07/02/2026 6:37 AM

ಮೇಘಾಲಯದ ಅಕ್ರಮ ಕಲ್ಲಿದ್ದಲು ಗಣಿ ಸ್ಫೋಟ : ಸಾವಿನ ಸಂಖ್ಯೆ 25ಕ್ಕೆ ಏರಿಕೆ, ಇಬ್ಬರ ಬಂಧನ | Coal mine blast

07/02/2026 6:35 AM

ರಾಜ್ಯದ ರೈತರಿಗೆ ಗುಡ್ ನ್ಯೂಸ್: ವಾರಸುದಾರರ ಹೆಸರಿಗೆ `ಪೌತಿ ಖಾತೆ’ ಮಾಡಿಕೊಡಲು ಮನೆ ಬಾಗಿಲಿಗೇ ಬರಲಿದ್ದಾರೆ ಅಧಿಕಾರಿಗಳು.!

07/02/2026 6:33 AM
State News
KARNATAKA

ಪೋಷಕರೇ ಗಮನಿಸಿ : ತಪ್ಪದೇ ನಿಮ್ಮ ಮಕ್ಕಳಿಗೆ `ದಡಾರ-ರುಬೆಲ್ಲಾ ಲಸಿಕೆ ಹಾಕಿಸಿ.!

By kannadanewsnow5707/02/2026 6:37 AM KARNATAKA 2 Mins Read

ಬೇಸಿಗೆ ಪ್ರಾರಂಭವಾಗುತ್ತಿದ್ದು, ಮಕ್ಕಳಲ್ಲಿ ದಡಾರ ಪ್ರಕರಣಗಳು ಕಂಡುಬರುವ ಸಾಧ್ಯತೆ ಹೆಚ್ಚು. 12 ಮಾರಕ ಕಾಯಿಲೆಗಳ ವಿರುದ್ಧ ನಿಯಮಿತವಾಗಿ ಲಸಿಕೆ ಪಡೆಯಲು…

ರಾಜ್ಯದ ರೈತರಿಗೆ ಗುಡ್ ನ್ಯೂಸ್: ವಾರಸುದಾರರ ಹೆಸರಿಗೆ `ಪೌತಿ ಖಾತೆ’ ಮಾಡಿಕೊಡಲು ಮನೆ ಬಾಗಿಲಿಗೇ ಬರಲಿದ್ದಾರೆ ಅಧಿಕಾರಿಗಳು.!

07/02/2026 6:33 AM
vidhana soudha

ರಾಜ್ಯದ ಜನತೆಗೆ ಗುಡ್ ನ್ಯೂಸ್ : ಫೆ. 14ರಂದು 1.10 ಲಕ್ಷ ಹಕ್ಕುಪತ್ರ ವಿತರಣೆ: ಮನೆ ಬಾಗಿಲಿಗೆ ಕಂದಾಯ ಇಲಾಖೆ ಸೇವೆ.!

07/02/2026 6:24 AM

ದಶಕಗಳ ಭೂ ವಿವಾದಗಳಿಗೆ ಇತಿಶ್ರೀ : ಕಂದಾಯ ಇಲಾಖೆಯಿಂದ ಕ್ರಾಂತಿಕಾರಿ ‘ನನ್ನ ಭೂಮಿ’ ಅಭಿಯಾನ

07/02/2026 6:19 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.