Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot
vidhana soudha

ರಾಜ್ಯದ ಜನತೆಗೆ ಗುಡ್ ನ್ಯೂಸ್ : ಫೆ. 14ರಂದು 1.10 ಲಕ್ಷ ಹಕ್ಕುಪತ್ರ ವಿತರಣೆ: ಮನೆ ಬಾಗಿಲಿಗೆ ಕಂದಾಯ ಇಲಾಖೆ ಸೇವೆ.!

07/02/2026 6:24 AM

ದಶಕಗಳ ಭೂ ವಿವಾದಗಳಿಗೆ ಇತಿಶ್ರೀ : ಕಂದಾಯ ಇಲಾಖೆಯಿಂದ ಕ್ರಾಂತಿಕಾರಿ ‘ನನ್ನ ಭೂಮಿ’ ಅಭಿಯಾನ

07/02/2026 6:19 AM

JOB ALERT : ಡಿಗ್ರಿ ಪಾಸಾದವರಿಗೆ ಸರ್ಕಾರಿ ಹುದ್ದೆ : `BSNL’ನಲ್ಲಿ ಸೀನಿಯರ್ ಎಕ್ಸಿಕ್ಯುಟಿವ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

07/02/2026 6:02 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ದಶಕಗಳ ಭೂ ವಿವಾದಗಳಿಗೆ ಇತಿಶ್ರೀ : ಕಂದಾಯ ಇಲಾಖೆಯಿಂದ ಕ್ರಾಂತಿಕಾರಿ ‘ನನ್ನ ಭೂಮಿ’ ಅಭಿಯಾನ
KARNATAKA

ದಶಕಗಳ ಭೂ ವಿವಾದಗಳಿಗೆ ಇತಿಶ್ರೀ : ಕಂದಾಯ ಇಲಾಖೆಯಿಂದ ಕ್ರಾಂತಿಕಾರಿ ‘ನನ್ನ ಭೂಮಿ’ ಅಭಿಯಾನ

By kannadanewsnow5707/02/2026 6:19 AM

ದಾವಣಗೆರೆ : ರೈತರು ಮತ್ತು ಸಾರ್ವಜನಿಕರು ಕಂದಾಯ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಿ, ಅವರ ಮನೆ ಬಾಗಿಲಿಗೇ ಸೇವೆ ತಲುಪಿಸುವ ನಿಟ್ಟಿನಲ್ಲಿ ಕಂದಾಯ ಇಲಾಖೆ ಹಲವು ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.

ದಾವಣಗೆರೆಯಲ್ಲಿ ಕಂದಾಯ ಇಲಾಖೆ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಲಾಖೆಯಲ್ಲಿ ಆಗಿರುವ ಪ್ರಮುಖ ಸುಧಾರಣೆಗಳನ್ನು ಹಂಚಿಕೊಂಡರು.

‘ನನ್ನ ಭೂಮಿ’ ಮತ್ತು ಪೋಡಿ ಮುಕ್ತ ಅಭಿಯಾನದಡಿ ಕಳೆದ ಒಂದು ವರ್ಷದಲ್ಲಿ ರಾಜ್ಯಾದ್ಯಂತ 1,89,300 ರೈತರ ಜಮೀನುಗಳ ಪೋಡಿ ದುರಸ್ತನ್ನು ಮಾಡಿಕೊಡಲಾಗಿದೆ. ಮುಂದಿನ 3-4 ತಿಂಗಳಲ್ಲಿ ಈ ಸಂಖ್ಯೆಯನ್ನು 2.5 ರಿಂದ 3 ಲಕ್ಷಕ್ಕೆ ಹೆಚ್ಚಿಸುವ ಗುರಿ ಇದೆ. ಜಿಲ್ಲೆಯಲ್ಲಿ ಮೃತಪಟ್ಟವರ ಹೆಸರಿನಲ್ಲಿದ್ದ ಸುಮಾರು 90,000 ಜಮೀನುಗಳ ಪೈಕಿ, ಮಾರ್ಚ್ ಅಂತ್ಯದೊಳಗೆ ಕನಿಷ್ಠ 50% ರಷ್ಟು ಪೌತಿ ಖಾತೆ ಆಂದೋಲನ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ, ಇದಕ್ಕಾಗಿ ರೈತರು ಅರ್ಜಿ ಹಾಕುವಂತಿಲ್ಲ, ಅಧಿಕಾರಿಗಳೇ ರೈತರ ಮನೆ ಬಾಗಿಲಿಗೆ ಹೋಗಿ ಕನಿಷ್ಠ ದಾಖಲಾತಿಗಳನ್ನು ಪಡೆದು ಪೋಡಿ ಖಾತೆ ದುರಸ್ತನ್ನು ಮಾಡಿಕೊಡಲಾಗುತ್ತಿದೆ.
ಈ ಹಿಂದೆ 2013 ರಿಂದ 2018 ರವರೆಗೆ 5840 ಪ್ರಕರಣಗಳು ಹಾಗೂ 2018 ರಿಂದ 2022 ರವರೆಗೆ 8500 ಪ್ರಕರಣ ಪೋಡಿ ಖಾತೆ ದುರಸ್ತನ್ನು ಮಾಡಲಾಗಿದೆ, ನನ್ನ ಅವಧಿಯಲ್ಲಿ ಕೇವಲ ಒಂದೇ ವರ್ಷದಲ್ಲಿ 1,89,300 ರೈತರ ಜಮೀನುಗಳ ಪೋಡಿ ದುರಸ್ತನ್ನು ಮಾಡಲಾಗಿದೆ ಎಂದು ತಿಳಿಸಿದರು.

ತಾಂಡಾ, ಹಟ್ಟಿ ಮತ್ತು ಆಡಿಗಳ ನಿವಾಸಿಗಳು ಸೇರಿದಂತೆ ಕೆಲವು ವಸತಿ ಪ್ರದೇಶಗಳಲ್ಲಿ ಜನರ ಬಳಿ ದಾಖಲೆಗಳು ಇಲ್ಲದೆ ವಾಸಿಸುತ್ತಿದ್ದರು, ಅವುಗಳನ್ನು ಗುರುತಿಸಿ ಹೊಸ ಕಂದಾಯ ಗ್ರಾಮಗಳೆಂದು ಘೋಷಿಸಿ ಅವರಿಗೆಲ್ಲ ಹಕ್ಕುಪತ್ರ ನೀಡಲಾಗುತ್ತಿದೆ. ಕಳೆದ ಎರಡೂವರೆ ವರ್ಷಗಳಲ್ಲಿ ಒಟ್ಟು 2,70,000 ಹಕ್ಕು ಪತ್ರಗಳನ್ನು ಸಿದ್ಧಪಡಿಸಲಾಗಿದೆ. ಹೊಸಪೇಟೆಯಲ್ಲಿ ಸುಮಾರು 1,11,000 ಕಂದಾಯ ಗ್ರಾಮಗಳ ಹಕ್ಕು ಪತ್ರಗಳನ್ನು ವಿತರಿಸಲಾಗಿತ್ತು. ಫೆಬ್ರವರಿ 14 ರಂದು ಹಾವೇರಿಯಲ್ಲಿ ಸುಮಾರು 1,10,000 ಹಕ್ಕುಪತ್ರಗಳನ್ನು ವಿತರಿಸಲಾಗುವುದು. ರಾಜ್ಯದಲ್ಲಿ 49 ಲಕ್ಷ ಜಮೀನುಗಳು ಮೃತರ ಹೆಸರಿನಲ್ಲಿವೆ, ಅವುಗಳನ್ನು ಗುರುತಿಸಿ ವಾರಸುದಾರ ಖಾತೆಗೆ ವರ್ಗಾವಣೆ ಮಾಡಲು ಕ್ರಮವಹಿಸಲಾಗಿದೆ, ಅದರಲ್ಲಿ 11 ಲಕ್ಷ ಜಮೀನನ್ನು ಇ-ಪೌತಿ ಅಭಿಯಾನದಡಿ ವಾರಸುದಾರರ ಹೆಸರಿಗೆ ಖಾತೆ ಮಾಡಲು ಕ್ರಮವಹಿಸಲಾಗಿದೆ ಎಂದರು.

ದಾವಣಗೆರೆ ಜಿಲ್ಲೆಯ ‘ ಪ್ರಕರಣಗಳಂತಹ ದೀರ್ಘಕಾಲದ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. 1960 ಮತ್ತು 70 ರ ದಶಕದಿಂದ ಬಾಕಿ ಇರುವ 8,000 ಪೆÇೀಡಿ ಪ್ರಕರಣಗಳಲ್ಲಿ ಈಗಾಗಲೇ 4,300 ಪೂರ್ಣಗೊಂಡಿದ್ದು, ಉಳಿದ ಪ್ರಕರಣಗಳನ್ನು ಮುಂದಿನ ಎರಡು ತಿಂಗಳಲ್ಲಿ ಮುಗಿಸಲು ಗುರಿ ಹೊಂದಲಾಗಿದೆ. ಭೂಮಿಗೆ ಸಂಬಂಧಿಸಿದ ಗೊಂದಲಗಳನ್ನು ನಿವಾರಿಸಿ ಜನರಿಗೆ ಭೂ ಗ್ಯಾರಂಟಿ ನೀಡಲು ಸರ್ಕಾರ ಶ್ರಮಿಸುತ್ತಿದೆ, ಇಲಾಖೆಯಲ್ಲಿ ಇನ್ನೂ ಮಾಡಬೇಕಾದ ಕೆಲಸಗಳು ಸಾಕಷ್ಟಿದ್ದು, ಆದ್ಯತೆಯ ಮೇರೆಗೆ ಅವುಗಳನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲಾಗುತ್ತಿದೆ ಎಂದು ತಿಳಿಸಿದರು.
ಇಲಾಖೆಯ ಎಲ್ಲಾ ಮೂಲ ಕಡತ, ದಾಖಲೆಗಳನ್ನು ಸ್ಕ್ಯಾನ್ ಮಾಡುವ ‘ಭೂ ಸುರಕ್ಷಾ’ ಯೋಜನೆ ಅಡಿ ಇದುವರೆಗೆ 63 ಕೋಟಿ ಪುಟಗಳನ್ನು ಸ್ಕ್ಯಾನಿಂಗ್ ಮಾಡಲಾಗಿದೆ. ಇದರಿಂದ ಸಾರ್ವಜನಿಕರು ಕಚೇರಿಗೆ ಅಲೆಯುವುದು ತಪ್ಪುತ್ತದೆ ಅಲ್ಲದೆ ಕಡತಗಳು ಕಾಣೆಯಾಗುವುದು, ತಿದ್ದುಪಡಿ ಮಾಡುವುದು ತಪ್ಪಿಹೋಗುತ್ತದೆ. ಇವುಗಳನ್ನು ಸಂರಕ್ಷಿಸಿದಂತೆ ಆಗುತ್ತದೆ, ಇನ್ನು ಮುಂದೆ ಆನ್‍ಲೈನ್‍ನಲ್ಲಿ ಪ್ರಮಾಣೀಕೃತ ನಕಲುಗಳನ್ನು ಪಡೆಯಬಹುದು ಎಂದು ತಿಳಿಸಿದರು.

ಸರ್ವೆ ಇಲಾಖೆಯಲ್ಲಿ ‘ರೋವರ್ಸ್’ ನಂತಹ ಆಧುನಿಕ ಉಪಕರಣಗಳನ್ನು ಬಳಸಲಾಗುತ್ತಿದೆ. ಚೈನ್ ಹಿಡಿದು ಅಳೆಯುವುದಕ್ಕಿಂತ ಈ ತಂತ್ರಜ್ಞಾನದ ಬಳಕೆಯಿಂದ ಕೇವಲ 10% ಶ್ರಮದಲ್ಲಿ ಕೆಲಸ ಮುಗಿಸಬಹುದು. ಈಗಾಗಲೇ 600 ರೋವರ್ಸ್‍ಗಳನ್ನು ಖರೀದಿಸಲಾಗಿದ್ದು, ಇನ್ನೂ 1,000 ರೋವರ್ಸ್‍ಗಳನ್ನು ಖರೀದಿಸಲಾಗುತ್ತಿದೆ. ಇದು ಸರ್ವೇಯರ್‍ಗಳ ಒತ್ತಡವನ್ನು ಕಡಿಮೆ ಮಾಡಿ, ಅವರ ಕೆಲಸದ ವೇಗವನ್ನು ಹೆಚ್ಚಿಸುತ್ತದೆ ಎಂದರು.

ಉತ್ತಮವಾಗಿ ಕೆಲಸ ಮಾಡುವ ಗ್ರಾಮ ಆಡಳಿತ ಅಧಿಕಾರಿಗಳು, ಗ್ರಾಮ ಸಹಾಯಕರುಗಳಿಗೆ ಸರ್ಕಾರದಿಂದಲೇ 7 ರಿಂದ 8 ಕೋಟಿ ರೂ. ಗಳಷ್ಟು ಪೆÇ್ರೀತ್ಸಾಹಧನ ನೀಡಲು ನಿರ್ಧರಿಸಲಾಗಿದೆ. ಆದರೆ, ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ವಿರುದ್ಧ ಕಠಿಣ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಎಚ್ಚರಿಸಿದರು.

ಮಾರ್ಚ್ ತಿಂಗಳ ವೇಳೆಗೆ ಗ್ರಾಮ ಲೆಕ್ಕಿಗರಿಂದ ಹಿಡಿದು ಮಂತ್ರಿಗಳವರೆಗೆ ಎಲ್ಲರೂ ಶೇ. 100 ರಷ್ಟು ಇ-ಆಫೀಸ್ ಮೂಲಕವೇ ಕೆಲಸ ಮಾಡಬೇಕು. ಈ ವ್ಯವಸ್ಥೆಯ ಮೂಲಕ ಯಾವ ಕಡತ ಯಾರ ಬಳಿ ಎಷ್ಟು ದಿನಗಳಿಂದ ಬಾಕಿ ಇದೆ ಎಂಬುದನ್ನು ಪತ್ತೆಹಚ್ಚಲು ಸಾಧ್ಯವಾಗುತ್ತದೆ. ಇ-ಆಫೀಸ್ ವ್ಯವಸ್ಥೆಯಿಂದ ಇ-ಆಫೀಸ್‍ನಲ್ಲಿ ಫೈಲ್‍ಗಳನ್ನು ಕಳೆದುಹಾಕಲು ಸಾಧ್ಯವಿಲ್ಲ. ಹಿಂದೆ ಒಂದು ಮೇಜಿನಿಂದ ಇನ್ನೊಂದು ಮೇಜಿಗೆ ಹೋಗಲು ತಿಂಗಳುಗಟ್ಟಲೆ ಸಮಯ ತೆಗೆದುಕೊಳ್ಳುತ್ತಿದ್ದ ಕಡತಗಳು ಈಗ ಒಂದು ಕ್ಷಣದಲ್ಲಿ ವರ್ಗಾವಣೆಯಾಗುತ್ತವೆ. ಈ ವ್ಯವಸ್ಥೆಯು ಕೆಲಸದಲ್ಲಿ ವೇಗವನ್ನು ತರುತ್ತದೆ, ಕಡತಗಳನ್ನು ಮುಚ್ಚಿಡಲು ಬರುವುದಿಲ್ಲ ಮತ್ತು ಪಾರದರ್ಶಕತೆಯಿಂದ ಕೆಲಸಗಳು ಆಗುತ್ತವೆ ಎಂದರು.

ಭೂಮಿಯ ಮಾಲೀಕತ್ವವು ಆರ್ಥಿಕ ಶಕ್ತಿಯನ್ನು ನೀಡುವ ಬದಲು, ಇಂದು ಅನೇಕರಿಗೆ ಗೊಂದಲ ಮತ್ತು ವ್ಯಾಜ್ಯದ ಮೂಲವಾಗಿದೆ. ವ್ಯವಸ್ಥೆಯಲ್ಲಿನ ಗೊಂದಲಗಳಿಗೆ ಕಾರಣಗಳನ್ನು ಹುಡುಕಿ ಅವುಗಳನ್ನು ಸರಿಪಡಿಸುವ ಮೂಲಕ “ಭೂ ಗ್ಯಾರಂಟಿ” ನೀಡುವತ್ತ ಸರ್ಕಾರ ಸಂಕಲ್ಪ ಮಾಡಿದೆ ಎಂದು ತಿಳಿಸಿದರು.
ಕಳೆದ ವರ್ಷ 1,000 ಗ್ರಾಮ ಲೆಕ್ಕಿಗರನ್ನು ನೇಮಕ ಮಾಡಿಕೊಳ್ಳಲಾಗಿದ್ದು, ಪ್ರಸ್ತುತ 750 ಸರ್ವೇಯರ್‍ಗಳ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. 5,000 ಗ್ರಾಮ ಲೆಕ್ಕಿಗರಿಗೆ ಲ್ಯಾಪ್‍ಟಾಪ್ ನೀಡಲಾಗಿದ್ದು, ಮಾರ್ಚ್ ಅಂತ್ಯದೊಳಗೆ ಉಳಿದ 2,000 ಜನರಿಗೂ ವಿತರಿಸಲಾಗುವುದು. ಇದು ಹೊಸ ತಂತ್ರಜ್ಞಾನ ಬಳಸಿ ಕೆಲಸ ಮಾಡಲು ಸಹಕಾರಿಯಾಗಿದೆ. ಹಿಂದೆ 8,345 ಗ್ರಾಮ ಲೆಕ್ಕಿಗರಲ್ಲಿ ಕೇವಲ 2,000 ಜನರಿಗೆ ಮಾತ್ರ ಕಚೇರಿಗಳಿದ್ದವು ನಾನು ಇಲಾಖೆಯ ಜವಾಬ್ದಾರಿ ವಹಿಸಿಕೊಂಡ ನಂತರ, ಗ್ರಾಮ ಪಂಚಾಯಿತಿಗಳಲ್ಲೇ 7,850 ಗ್ರಾಮ ಲೆಕ್ಕಿಗರಿಗೆ ಕಚೇರಿ ವ್ಯವಸ್ಥೆ ಮಾಡಿಕೊಡಲಾಗಿದೆ. ಇದರಿಂದ ಜನರಿಗೆ ಗ್ರಾಮ ಲೆಕ್ಕಿಗರು ಸುಲಭವಾಗಿ ಲಭ್ಯವಾಗುತ್ತಾರೆ ಎಂದರು.

ಜಿಲ್ಲಾಧಿಕಾರಿಗಳು, ಉಪ ವಿಭಾಗಾಧಿಕಾರಿಗಳು ಮತ್ತು ತಹಶೀಲ್ದಾರ ನ್ಯಾಯಾಲಯಗಳಲ್ಲಿ ಹೆಚ್ಚು ಸುಧಾರಣೆಯನ್ನು ತಂದು ತಹಶೀಲ್ದಾರರ ನ್ಯಾಯಾಲಯದಲ್ಲಿ ಬಾಕಿ ಇದ್ದ 10774 ಪ್ರಕರಣಗಳಲ್ಲಿ ಈಗ 480 ಪ್ರಕರಣಗಳು ಮಾತ್ರ ಬಾಕಿ ಉಳಿದಿವೆ. ಮತ್ತು ಉಪ ವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ 73624 ಪ್ರಕರಣಗಳಲ್ಲಿ 10800 ಮಾತ್ರ ಬಾಕಿ ಇದ್ದು ಇವುಗಳನ್ನು ಸಹ ತ್ವರಿತವಾಗಿ ವಿಲೇವಾರಿ ಮಾಡಲು ಸೂಚನೆ ನೀಡಲಾಗಿದೆ ಎಂದರು.

ಈ ವೇಳೆ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಸಿಇಓ ಗಿತ್ತೆ ಮಾಧವ ವಿಠಲ್ ರಾವ್, ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Revenue Department launches revolutionary 'Nanna Bhoomi' campaign to resolve decades of land disputes
Share. Facebook Twitter LinkedIn WhatsApp Email

Related Posts

vidhana soudha

ರಾಜ್ಯದ ಜನತೆಗೆ ಗುಡ್ ನ್ಯೂಸ್ : ಫೆ. 14ರಂದು 1.10 ಲಕ್ಷ ಹಕ್ಕುಪತ್ರ ವಿತರಣೆ: ಮನೆ ಬಾಗಿಲಿಗೆ ಕಂದಾಯ ಇಲಾಖೆ ಸೇವೆ.!

07/02/2026 6:24 AM3 Mins Read

ಹೆಲಿಕಾಪ್ಟರ್, ವಿಮಾನ ಪ್ರಯಾಣಕ್ಕೂ ವ್ಯತ್ಯಾಸವೇನು? ಸಾಗರದ ಜನತೆ ಈ ಸುದ್ದಿ ಓದಿ!

06/02/2026 10:18 PM3 Mins Read

ಟಿ20 ವಿಶ್ವಕಪ್: ಭಾರತ ತಂಡದಿಂದ ಹರ್ಷಿತ್ ರಾಣಾ ಔಟ್, ಮೊಹಮ್ಮದ್ ಸಿರಾಜ್ ಇನ್

06/02/2026 9:38 PM2 Mins Read
Recent News
vidhana soudha

ರಾಜ್ಯದ ಜನತೆಗೆ ಗುಡ್ ನ್ಯೂಸ್ : ಫೆ. 14ರಂದು 1.10 ಲಕ್ಷ ಹಕ್ಕುಪತ್ರ ವಿತರಣೆ: ಮನೆ ಬಾಗಿಲಿಗೆ ಕಂದಾಯ ಇಲಾಖೆ ಸೇವೆ.!

07/02/2026 6:24 AM

ದಶಕಗಳ ಭೂ ವಿವಾದಗಳಿಗೆ ಇತಿಶ್ರೀ : ಕಂದಾಯ ಇಲಾಖೆಯಿಂದ ಕ್ರಾಂತಿಕಾರಿ ‘ನನ್ನ ಭೂಮಿ’ ಅಭಿಯಾನ

07/02/2026 6:19 AM

JOB ALERT : ಡಿಗ್ರಿ ಪಾಸಾದವರಿಗೆ ಸರ್ಕಾರಿ ಹುದ್ದೆ : `BSNL’ನಲ್ಲಿ ಸೀನಿಯರ್ ಎಕ್ಸಿಕ್ಯುಟಿವ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

07/02/2026 6:02 AM

Good News ; ಸಣ್ಣ ವ್ಯವಹಾರಗಳಿಗೆ ‘RBI’ ಭರ್ಜರಿ ಗುಡ್ ನ್ಯೂಸ್ ; ಯಾವುದೇ ಗ್ಯಾರೆಂಟಿ ಇಲ್ಲದೇ 20 ಲಕ್ಷ ರೂ. ಸಾಲ ಲಭ್ಯ!

07/02/2026 5:59 AM
State News
vidhana soudha KARNATAKA

ರಾಜ್ಯದ ಜನತೆಗೆ ಗುಡ್ ನ್ಯೂಸ್ : ಫೆ. 14ರಂದು 1.10 ಲಕ್ಷ ಹಕ್ಕುಪತ್ರ ವಿತರಣೆ: ಮನೆ ಬಾಗಿಲಿಗೆ ಕಂದಾಯ ಇಲಾಖೆ ಸೇವೆ.!

By kannadanewsnow5707/02/2026 6:24 AM KARNATAKA 3 Mins Read

ದಾವಣಗೆರೆ : ಜಿಲ್ಲೆಯ ವಿವಿಧ ತಾಲೂಕಿನಲ್ಲಿ ಇ-ಪೌತಿ ಖಾತೆ ಅಭಿಯಾನ ಆಮೆಗತಿಯಲ್ಲಿ ಸಾಗುತ್ತಿರುವುದಕ್ಕೆ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ತೀವ್ರ…

ದಶಕಗಳ ಭೂ ವಿವಾದಗಳಿಗೆ ಇತಿಶ್ರೀ : ಕಂದಾಯ ಇಲಾಖೆಯಿಂದ ಕ್ರಾಂತಿಕಾರಿ ‘ನನ್ನ ಭೂಮಿ’ ಅಭಿಯಾನ

07/02/2026 6:19 AM

ಹೆಲಿಕಾಪ್ಟರ್, ವಿಮಾನ ಪ್ರಯಾಣಕ್ಕೂ ವ್ಯತ್ಯಾಸವೇನು? ಸಾಗರದ ಜನತೆ ಈ ಸುದ್ದಿ ಓದಿ!

06/02/2026 10:18 PM

ಟಿ20 ವಿಶ್ವಕಪ್: ಭಾರತ ತಂಡದಿಂದ ಹರ್ಷಿತ್ ರಾಣಾ ಔಟ್, ಮೊಹಮ್ಮದ್ ಸಿರಾಜ್ ಇನ್

06/02/2026 9:38 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.