ಚಿಕ್ಕಬಳ್ಳಾಪುರ: ಜಿಲ್ಲೆಯ ಶಿಡ್ಲಘಟ್ಟದ ನಗರಸಭೆ ಪೌರಾಯುಕ್ತೆಗೆ ರಾಜೀವ್ ಗೌಡ ಧಮ್ಕಿ ಹಾಕಿದ್ದಂತ ಆಡಿಯೋ ವೈರಲ್ ಆಗಿತ್ತು. ಈ ಬೆನ್ನಲ್ಲೇ ಮತ್ತೊಂದು ಕಾಂಗ್ರೆಸ್ ನಾಯಕನ ಆಡಿಯೋ ವೈರಲ್ ಆಗಿದೆ. ಅದರಲ್ಲಿ ಬಿಎಲ್ಓ ಅಧಿಕಾರಿಗೆ ಧಮ್ಕಿ ಹಾಕಿರುವುದು ಕೇಳಿ ಬಂದಿದೆ.
ಈ ಆಡಿಯೋವನ್ನು ಸಂಸದ ಡಾ.ಕೆ.ಸುಧಾಕರ್ ಎಕ್ಸ್ ನಲ್ಲಿ ಶೇರ್ ಮಾಡಿದ್ದು, ಕಾಂಗ್ರೆಸ್ಸಿನ ಗೂಂಡಾಗಿರಿ ಮುಂದುವರೆದಿದೆ. ಬಿಎಲ್ಓ ಅಧಿಕಾರಿಗಳೆ ಮನಬಂದಂಧೆ ನಿಂದನೆಯನ್ನು ಮಾಡಿದ್ದಾನೆ. ಕಾಂಗ್ರೆಸ್ ಬಂದಿದೆ. ಕರ್ನಾಟಕದಲ್ಲಿ ಗೂಂಡಾರಾಜ್ ತಂದಿದೆ ಎಂಬುದಾಗಿ ಕಿಡಿಕಾರಿದ್ದಾರೆ.
ಶಿಡ್ಲಘಟ್ಟದಲ್ಲಿ ಮಹಿಳಾ ಪುರಾಯುಕ್ತೆ ಮೇಲೆ ಕಾಂಗ್ರೆಸ್ ಮುಖಂಡ ನಿಂದನೆ ಮಾಡಿದ ಪ್ರಕರಣದ ಬೆನ್ನಲ್ಲೇ ಈಗ ಚಿಕ್ಕಬಳ್ಳಾಪುರದಲ್ಲಿ ಕರ್ತವ್ಯ ನಿರತ ಅಧಿಕಾರಿ ಶಿವಶಂಕರ್ ಅವರಿಗೆ ಕಾಂಗ್ರೆಸ್ ಕಾರ್ಯಕರ್ತ ನಾಗೇಶ್ ರೆಡ್ಡಿ ಮನಬಂದಂತೆ ನಿಂದಿಸಿರುವ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ ಎಂದಿದ್ದಾರೆ.
ನಾವೇನು ಪ್ರಜಾಪ್ರಭುತ್ವದಲ್ಲಿ ಇದ್ದೀವೋ ಅಥವಾ ಕಾಂಗ್ರೆಸ್ ಪಕ್ಷದ ಪಾಳೆಗಾರಿಕೆಯಲ್ಲಿ ಇದ್ದೀವೋ? ಕಾಂಗ್ರೆಸ್ ಪುಡಾರಿಗಳಿಗೆ ಅಧಿಕಾರಿಗಳನ್ನು ನಿಂದಿಸಲು ಅಧಿಕಾರ ಕೊಟ್ಟವರಾರು..?? ಈ ಕೂಡಲೇ ನಾಗೇಶ್ ರೆಡ್ಡಿಯನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಸರ್ಕಾರವನ್ನ ಒತ್ತಾಯಿಸಿದ್ದಾರೆ.
ಅಂದಹಾಗೇ ವೈರಲ್ ಆಗಿರುವಂತ ಆಡಿಯೋದಲ್ಲಿ ಬಿಎಲ್ಓ, ಶಿಕ್ಷಕ ಶಿವಶಂಕರ್ ಗೆ ಚಿಕ್ಕಬಳ್ಳಾಪುರ ಯುವ ಕಾಂಗ್ರೆಸ್ ಅಧ್ಯಕ್ಷ ನಾಗೇಶ್ ರೆಡ್ಡಿ ಧಮ್ಕಿ ಹಾಕಿರೋದನ್ನು ಕೇಳಬಹುದಾಗಿದೆ. ಆ ಆಡಿಯೋ ಕೆಳಗಿದೆ ನೀವು ಕೇಳಿ..
ಕಾಂಗ್ರೆಸ್ ಬಂದಿದೆ – ಕರ್ನಾಟಕದಲ್ಲಿ ಗುಂಡಾರಾಜ್ ತಂದಿದೆ!
ಶಿಡ್ಲಘಟ್ಟದಲ್ಲಿ ಮಹಿಳಾ ಪುರಾಯುಕ್ತೆ ಮೇಲೆ ಕಾಂಗ್ರೆಸ್ ಮುಖಂಡ ನಿಂದನೆ ಮಾಡಿದ ಪ್ರಕರಣದ ಬೆನ್ನಲ್ಲೇ ಈಗ ಚಿಕ್ಕಬಳ್ಳಾಪುರದಲ್ಲಿ ಕರ್ತವ್ಯ ನಿರತ ಅಧಿಕಾರಿ ಶಿವಶಂಕರ್ ಅವರಿಗೆ @INCKarnataka ಕಾರ್ಯಕರ್ತ ನಾಗೇಶ್ ರೆಡ್ಡಿ ಮನಬಂದಂತೆ ನಿಂದಿಸಿರುವ ಆಘಾತಕಾರಿ ಪ್ರಕರಣ ಬೆಳಕಿಗೆ… pic.twitter.com/8LvUXl9eBZ
— Dr Sudhakar K (@DrSudhakar_) February 6, 2026
ಇನ್ಮುಂದೆ MSIL ಎಲ್ಲಾ ಸೇವೆಗಳು ಬೆರಳ ತುದಿಯಲ್ಲೇ: ನಾಳೆ ಹೊಸ ಸಾಫ್ಟ್ ವೇರ್, ಮೊಬೈಲ್ ಆಪ್ ಬಿಡುಗಡೆ
ಬೆಂಗಳೂರಲ್ಲಿ ಅಗಲಿದ ಪತ್ರಕರ್ತರುಗಳಿಗೆ ಕೆಯುಡಬ್ಲ್ಯೂಜೆ ಶ್ರದ್ಧಾಂಜಲಿ ಸಲ್ಲಿಕೆ








