ಹಾಸನ: ಜಿಲ್ಲೆಯಲ್ಲಿ ನಟ ಯಶ್ ಅವರ ತಾಯಿ ಪುಷ್ಪಾ ಖರೀದಿಸಿದ್ದಂತ ನಿವೇಶನಕ್ಕೆ ಜಟಾಪಟಿಗೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಅಧಿಕಾರಿಗಳಿಂದಲೇ ಗೋಲ್ಮಾಲ್ ನಡೆದ ಆರೋಪ ಕೇಳಿ ಬಂದಿದೆ. ಒಂದೇ ಸೈಟ್ ಅನ್ನು ಇಬ್ಬರ ಹೆಸರಿಗೆ ಅಧಿಕಾರಿಗಳು ದಾಖಲೆ ಸೃಷ್ಠಿಸಿ ಮಾಡಿಕೊಟ್ಟಿದ್ದಾರೆ ಎನ್ನಲಾಗುತ್ತಿದೆ.
ಹಾಸನದ ವಿದ್ಯಾನಗರದಲ್ಲಿ ನಟ ಯಶ್ ಅವರ ತಾಯಿ ಪುಷ್ಪಾ ಸೈಟ್ ಒಂದನ್ನು ಖರೀದಿಸಿದ್ದರು. ಅವರು ಖರೀದಿಸಿದ್ದಂತ ಸೈಟ್ ಮತ್ತೊಬ್ಬರಿಗೂ ಮಾಡಿಕೊಟ್ಟಿರುವಂತ ಆರೋಪ ಕೇಳಿ ಬಂದಿತ್ತು. ಹೀಗಾಗಿ ನಟ ಯಶ್ ಅವರ ತಾಯಿ ಪುಷ್ಪಾ ಹಾಗೂ ದೇವರಾಜ್ ನಡುವೆ ಸೈಟ್ ವಿಚಾರಕ್ಕಾಗಿ ಜಟಾವಟಿ ನಡೆದಿತ್ತು.
ಈ ಸೈಟ್ ಕಿತ್ತಾಟಕ್ಕೆ ಬಿಗ್ ಟ್ವಿಸ್ಟ್ ಎನ್ನುವಂತೆ ಅಧಿಕಾರಿಗಳೇ ಗೋಲ್ಮಾಲ್ ಮಾಡಿರೋ ಆರೋಪ ಕೇಳಿ ಬಂದಿದೆ. ಅಧಿಕಾರಿಗಳಿಂದಲೇ ಒಂದೇ ಸೈಟ್ ಇಬ್ಬರ ಹೆಸರಿಗೆ ದಾಖಲೆ ಸೃಷ್ಠಿ ಮಾಡಿ ಮಾರಾಟ ಮಾಡಿರುವಂತ ಆರೋಪ ಕೇಳಿ ಬಂದಿದೆ.
ಈ ಬಗ್ಗೆ ಯಶ್ ತಾಯಿ ಪುಷ್ಪಾ ಮಾತನಾಡಿದ್ದು, 2020ರಲ್ಲಿ ನಾನು ಸೈಟ್ ಖರೀದಿ ಮಾಡಿದ್ದೇನೆ. ನನ್ನ ಹೆಸರಿನಲ್ಲಿರೋ ಸೈಟ್ ನನಗೆ ಕೊಡಲೇ ಬೇಕು. ನನಗೆ ಸ್ವತ್ತು ಸಿಗಲೇ ಬೇಕು. ಮೋಸ ಮಾಡಿದ ಅಧಿಕಾರಿಗಳನ್ನ ಇಂಡಿಯಾಕ್ಕೆ ತೋರಿಸುತ್ತೇನೆ. ಯಶ್ ಹೆಸರನ್ನು ಹಾಳು ಮಾಡೋದಕ್ಕಾಗಿ ಮಾಡಿರೋ ಕಿತ್ತಾಟ ಇದಾಗಿದೆ ಎಂಬುದಾಗಿ ತಿಳಿಸಿದ್ದಾರೆ.








