ಬೆಂಗಳೂರು: ನಾಟಕ&ಚಿತ್ರ ಕಲಾವಿದ ದೇವನಾಗೇಶ್ (62)ಅವರು ಬೆಂಗಳೂರಿನಲ್ಲಿ ನಿಧನರಾದರು. ಅವರು ಕಲಾವಿದೆಯಾಗಿದ್ದ ಪತ್ನಿ ರತ್ನನಾಗೇಶ್, ಒಬ್ಬ ಪುತ್ರನನ್ನು ಮತ್ತು ಬಂಧು ಬಳಗವನ್ನು ಅಗಲಿದ್ದಾರೆ. ದೇವನಾಗೇಶ್ ಅಂತ್ಯಕ್ರಿಯೆ ಅವರ ಹುಟ್ಟೂರಾದ ಚನ್ನರಾಯಪಟ್ಟಣ ತಾಲೂಕು ನುಗ್ಗೇಹಳ್ಳಿ ಹೋಬಳಿ ಕಲ್ಕೆರೆ ಬಳಿ ದೇವಿಹಳ್ಳಿಯಲ್ಲಿ ಇಂದು ಸಂಜೆ ನಡೆಯಲಿದೆ.
ದೇವನಾಗೇಶ್ ನಿಧನಕ್ಕೆ ಚಿತ್ರರಂಗ ಮತ್ತು ಹಾಸನದ ರಂಗಸಿರಿ ಬಳಗ ತೀವ್ರ ಸಂತಾಪ ವ್ಯಕ್ತಪಡಿಸಿದೆ. ನಾಗೇಶ್ ಪ್ರತಿಭಾವಂತ ಕಲಾವಿದರಾಗಿದ್ದರು.
ಬೆಂಗಳೂರಿನಿಂದ ತಮ್ಮ ನಾಟಕ ತಂಡವನ್ನು ಕರೆತಂದು ತಗಡೂರಿನಲ್ಲಿ ನಾಟಕ ಮಾಡಿಸಿದ್ದನ್ನು ಮರೆಯುವಂತಿಲ್ಲ ಎಂದು ಹಳೆ ನೆನಪು ಮೆಲುಕು ಹಾಕಿ, ಶೋಕಿಸಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರು, ನಾಗೇಶ್ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ದೇವರು ಕರುಣಿಸಲೆಂದು ಪ್ರಾರ್ಥಿಸಿದ್ದಾರೆ.
ಸಾಗರ ತಾಲ್ಲೂಕು ಜನತೆಗೆ ಗುಡ್ ನ್ಯೂಸ್: ನಾಳೆ ‘ಸಾಗರ ನಗರ ಸಾರಿಗೆ’ಗೆ ಶಾಸಕ ಗೋಪಾಲಕೃಷ್ಣ ಬೇಳೂರು ಉದ್ಘಾಟನೆ
Budget 2026 : `ಬೈಕ್ ಅಪಘಾತ ಪರಿಹಾರ ವಿಮೆ’ ಹಣಕ್ಕಿಲ್ಲ ತೆರಿಗೆ : ಕೇಂದ್ರ ಸರ್ಕಾರ ಮಹತ್ವದ ಘೋಷಣೆ








