ಕಲಬುರ್ಗಿ: ಜಿಲ್ಲೆಯಲ್ಲಿ ಜಮೀನಿನ ವಿಚಾರಕ್ಕೆ ಆರಂಭವಾದಂತ ದಾಯಾದಿಗಳ ಜಗಳವು ಕೊಲೆಯಲ್ಲಿ ಅಂತ್ಯವಾಗಿರುವಂತ ಘಟನೆ ಸೇಡಂ ತಾಲ್ಲೂಕಿನ ಹಂಗನಹಳ್ಳಿಯಲ್ಲಿ ನಡೆದಿದೆ.
ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಹಂಗನಹಳ್ಳಿ ಗ್ರಾಮದಲ್ಲಿ ಜಮೀನಿನ ವಿಚಾರಕ್ಕೆ ದಾಯಾದಿಗಳ ನಡುವೆ ಜಗಳ ಉಂಟಾಗಿತ್ತು. ಈ ಜಗಳವು ತಾರಕಕ್ಕೇರಿದಂತ ಸಂದರ್ಭದಲ್ಲಿ ಬಸವರಾಜ್ ತಳವಾರ(34) ಎಂಬುವರ ಕೊಲೆಯಲ್ಲಿ ಅಂತ್ಯಗೊಂಡಿದೆ.
ನಿನ್ನೆ ತಡರಾತ್ರಿ ಸಹೋದರ ಸಂಬಂಧಿಗಳಾದಂತ ಬಸವರಾಜ್ ತಳವಾರ್ ಮತ್ತು ಘೋಳೇಶ್ ನಡುವೆ ಜಮೀನಿನ ವಿಚಾರಕ್ಕೆ ಗಲಾಟೆಯಾಗಿತ್ತು. ಈ ಗಲಾಟೆಯು ತಾರಕ್ಕೇರಿದಂತ ಸಂದರ್ಭದಲ್ಲಿ ಬಸವರಾಜ್ ಗೆ ಚಾಕುವಿನಿಂದ ಇರಿದು ಘೋಳೇಶ್ ಹತ್ಯೆ ಮಾಡಿರೋದಾಗಿ ಹೇಳಲಾಗುತ್ತಿದೆ.
ಚಾಕು ಇರಿತಕ್ಕೆ ಒಳಗಾಗಿದ್ದಂತ ಬಸವರಾಜ್ ನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೇ ಚಿಕಿತ್ಸೆ ಫಲಿಸದೇ ಅವರು ಸಾವನ್ನಪ್ಪಿದ್ದಾರೆ. ಈ ಸಂಬಂಧ ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರಿನ ಮೆಟ್ರೋ ಪ್ರಯಾಣಿಕರ ಗಮನಕ್ಕೆ: ಈಗ ಮೆಟ್ರೋ ರೈಲಿನಲ್ಲಿ ಈ ಎಲ್ಲವೂ ನಿಷೇಧ, ತಪ್ಪಿದ್ರೆ ಕೇಸ್, ದಂಡ ಫಿಕ್ಸ್
ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ ಮುಖ್ಯ ಕಾರ್ಯಾಚರಣಾ ಅಧಿಕಾರಿ ಉಜಿರೆಯ ರುಡ್ ಸೆಟ್ ಸಂಸ್ಥೆಗೆ ಭೇಟಿ








